ಉತ್ತರ ಪ್ರದೇಶದ ಅಲಿಗಢ್ ನಿವಾಸಿಯಾದ ರೂಬಿ ಖಾನ್ ಎಂಬ ಮುಸ್ಲಿಂ ಮಹಿಳೆ ಬುಧವಾರ (ಸೆಪ್ಟೆಂಬರ್ 7, 2022) ಗಣಪತಿ ವಿಸರ್ಜನೆಯನ್ನ ವಿಧಿವತ್ತಾಗಿ ನೆರವೇರಿಸಿದರು. ಈ ಹಿಂದೆ ಗಣೇಶ ಚತುರ್ಥಿಯಂದು ಪೂಜೆ ಸಲ್ಲಿಸಿದ ಬಳಿಕ ರೂಬಿ ಖಾನ್ ವಿರುದ್ಧ ಮುಲ್ಲಾ ಮೌಲಾನರಿಂದ ಫತ್ವಾ ಕೂಡ ಹೊರಡಿಸಿದ್ದರು. ಇದರ ಹೊರತಾಗಿಯೂ, ಆಕೆ ನರೋರಾ ಘಾಟ್‌ನಲ್ಲಿ ಗಣಪತಿಯನ್ನು ವಿಧಿವತ್ತಾಗಿ ವಿಸರನೆ. ಮಾಡಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಆಕೆ ಇಂತಹ ಗೊಡ್ಡು ಬೆದರಿಕೆ, ಫತ್ವಾಗಳಿಗೆ ಹೆದರುವುದಿಲ್ಲ ಎಂದು ಎಲ್ಲಾ ಮೌಲಾನಾಗಳಿಗೆ ತಿರುಗೇಟು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರೂಬಿ ಖಾನ್, “ನಾವು ಗಣಪತಿಯನ್ನು ಪ್ರತಿಷ್ಠಾಪಿಸಿದ್ದೆವು, ಇಂದು ನಾವು ವಿಸರ್ಜಿಸಿದ್ದೇವೆ. 31ರಂದು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದೆ, ಅಂದಿನಿಂದ ಮೌಲಾನಾಗಳು ನನ್ನ ವಿರುದ್ಧ ಫತ್ವಾ ಹೊರಡಿಸಿ ಈಕೆ ಹಿಂದೂ ಆಗಿದ್ದಾಳೆ, ಈಕೆ ಇಲ್ಲಿ ವಿಗ್ರಹವನ್ನು ಇಟ್ಟಿದ್ದಾಳೆ. ಈಕೆಯನ್ನು ಇಸ್ಲಾಂನಿಂದ ಹೊರಹಾಕಿ ಮತ್ತು ಈಕೆಯ ಕುಟುಂಬವನ್ನು ಜೀವಂತವಾಗಿ ಸು.ಟ್ಟು ಕೊಂ.ದು ಹಾಕಿ – ಈ ರೀತಿಯ ಬೆದರಿಕೆಗಳು ಬರಲಾರಂಭಿಸಿದವು. ನಾನು ಹೊರಗೆ ಹೋದಾಗ ಅಸಭ್ಯವಾಗಿ ಮಾತನಾಡುತ್ತ, ನೋಡಲ್ಲಿ ಹಿಂದೂ ಹೋಗುತ್ತಿದ್ದಾಳೆ ಎಂದು ಕಾಮೆಂಟ್ ಮಾಡುತ್ತಾರೆ, ಆದರೆ ನಾನು ಈ ಫತ್ವಾಗಳಿಗಾಗಲಿ ಅಥವ ಈ ಮೌಲಾನಾಗಳಿಗೆ ಹೆದರುವುದಿಲ್ಲ. ಯಾವ ರೀತಿ ವಿಜೃಂಭಣೆಯಿಂದ ಗಣಪತಿಯನ್ನು ಪ್ರತಿಷ್ಠಾಪಿಸಿದ್ದೇನೋ ಅದೇ ವಿಜೃಂಭಣೆಯಿಂದ ವಿಸರ್ಜನೆ ಮಾಡಲಿದ್ದೇನೆ” ಎಂದರು.
ಗಣೇಶ್ ವಿಸರ್ಜನೆಯ ಸಮಯದಲ್ಲಿ ರೂಬಿ ಖಾನ್ ಅವರ ಪತಿ ಆಸಿಫ್ ಖಾನ್ ಮತ್ತು ಅವರ ಇಬ್ಬರು ಸಹೋದರಿಯರಾದ ಫರಾ ಮತ್ತು ನಿದಾ ಕೂಡ ಉಪಸ್ಥಿತರಿದ್ದರು ಎಂದು ಹೇಳಲಾಗುತ್ತಿದೆ. ಮಹಿಳೆಯ ಸುರಕ್ಷತೆಯ ಬಗ್ಗೆ ಮಾತನಾಡಿರುವ ಅಲಿಗಢ ಪೊಲೀಸರು ರೂಬಿ ಆಸಿಫ್ ಖಾನ್ ಜೊತೆಗೆ ಇಬ್ಬರು ಪೊಲೀಸರನ್ನು ನಿಯೋಜಿಸಿದ್ದಾರೆ. ಈ ಪೊಲೀಸರು ರೂಬಿ ಆಸಿಫ್ ಖಾನ್ ಜೊತೆ ಅಲಿಘರ್‌ನಿಂದ ಬುಲಂದ್‌ಶಹರ್‌ವರೆಗೆ ಇರಲಿದ್ದಾರೆ.
ಕೆಲವು ದಿನಗಳ ಹಿಂದೆ ರೂಬಿ ಖಾನ್ ತಮ್ಮ ಮನೆಯಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿದಾಗ, ಕೆಲವು ಮೌಲಾನಾಗಳು ಆಕೆಯ ವಿರುದ್ಧ ಫತ್ವಾ ಹೊರಡಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಈ ಫತ್ವಾದಲ್ಲಿ ಇಸ್ಲಾಂನಲ್ಲಿ ಮೂರ್ತಿ ಪೂಜೆ ನಿಷಿದ್ಧ, ಹಾಗಾಗಿ ಮನೆಯಲ್ಲಿ ಮೂರ್ತಿ ತಂದು ಪ್ರತಿಷ್ಠಾಪಿಸಿವುದು, ಪೂಜಿಸಿ ಇಸ್ಲಾಂ ವಿರುದ್ಧ ರೂಬಿ ಕೆಲಸ ಮಾಡಿದ್ದು ಆಕೆಯನ್ನು ಇಸ್ಲಾಂನಿಂದ ಹೊರಹಾಕಬೇಕು ಎಂದು ಹೇಳಿದ್ದರು. ಫತ್ವಾ ಹೊರಡಿಸಿದ ನಂತರ ರೂಬಿ ಖಾನ್ ಆ ಮೌಲಾನಾಗಳನ್ನ ಉಗ್ರಗಾಮಿಗಳೆಂದು ಕರೆದು ಹಿಗ್ಗಾಮುಗ್ಗಾ ಝಾಡಿಸಿದ್ದರು.
ಇದನ್ನೂ ಓದಿ: ಗಣೇಶನನ್ನ ಪ್ರತಿಷ್ಟಾಪನೆ ಮಾಡಿದ್ದಕ್ಕೆ ಶಾರುಖ್ ವಿರುದ್ಧ ಮುಗಿಬಿದ್ದ ಮುಸ್ಲಿಮರು
ಬಾಲಿವುಡ್ ನಟ ಶಾರುಖ್ ಖಾನ್ ಬುಧವಾರ (ಆಗಸ್ಟ್ 31, 2022) ಗಣೇಶ ಚತುರ್ಥಿಯ ಸಂದರ್ಭದಲ್ಲಿ ಚಿತ್ರವನ್ನು ಹಂಚಿಕೊಂಡಿದ್ದರು. ಇದು ಅವರ ಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದ ಚಿತ್ರವಾಗಿತ್ತು. ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ, ಅವರು ಗಣೇಶ ಚತುರ್ಥಿಯಂದು ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದ್ದರು. ಆದರೆ ಬಹುಶಃ ಅವರ ಸ್ವಂತ ಧರ್ಮದ ಕೆಲವರು ನಟನ ಬಗೆಗಿನ ಈ ವಿಷಯವನ್ನು ಇಷ್ಟಪಡಲಿಲ್ಲ. ಈ ಪೋಸ್ಟ್‌ಗಾಗಿ ಕೆಲವು ಮುಸ್ಲಿಮರು ಅವರನ್ನು ಸೋಶಿಯಲ್ ಮೀಡಿಯಾಗಳಲ್ಲಿ ನಿಂದಿಸಲು ಪ್ರಾರಂಭಿಸಿದರು.
ಈ ಪೋಸ್ಟ್ ಅನ್ನು ಹಂಚಿಕೊಂಡ ನಟ, “ನಾನು ಮತ್ತು ನನ್ನ ಕಿರಿಯ ಮಗ (ಅಬ್ರಾಮ್) ಗಣಪತಿಜೀ ಯನ್ನ ಮನೆಗೆ ಸ್ವಾಗತಿಸಿದ್ದೇವೆ. ಮೋದಕ ರುಚಿಕರವಾಗಿತ್ತು. ಕಠಿಣ ಪರಿಶ್ರಮ, ದೃಢತೆ ಮತ್ತು ದೇವರ ಮೇಲಿನ ನಂಬಿಕೆಯ ಮೂಲಕ ನೀವು ನಿಮ್ಮ ಕನಸುಗಳನ್ನು ಬದುಕಬಹುದು ಎಂಬುದು ಪಾಠ. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು” ಎಂದು ಬರೆದಿದ್ದರು.
Ganpatiji welcomed home by lil one and me….the modaks after were delicious…the learning is, through hard work, perseverance & faith in God, u can live your dreams. Happy Ganesh Chaturthi to all. pic.twitter.com/mnilEIA1tu
— Shah Rukh Khan (@iamsrk) August 31, 2022
ಶಾರುಖ್ ಖಾನ್ ಈ ಪೋಸ್ಟ್‌ನಿಂದ ಕೆಲವರು ಕೋಪಗೊಂಡರು ಮತ್ತು ಅವರ ವಿರುದ್ಧ ವಾಗ್ದಾಳಿ ನಡೆಸಲು ಮುಂದಾದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ತೈಮೂರ್ ಉಲ್ ಹಸನ್ ಎಂಬ ಯೂಸರ್, “ಮುಸ್ಲಿಮರಿಗೆ ಎಂತಹ ಅವಮಾನ ಸರ್. ನೀವು ಮುಸ್ಲಿಂ ಅಥವಾ ಹಿಂದೂವೋ? ಯಾವುದಾದರೂ ಒಂದು ಧರ್ಮವನ್ನು ಆರಿಸಿಕೊಳ್ಳಬೇಕು. ಮುಸ್ಲಿಮರು ಅಲ್ಲಾನನ್ನು ಮಾತ್ರ ಆರಾಧಿಸುತ್ತಾರೆ ಮತ್ತು ಪ್ರವಾದಿ ಮೊಹಮ್ಮದರ ಮಾನವೀಯತೆಯ ಜೀವನವನ್ನು ಬದಲಾಯಿಸಲು ಬಂದರು ಎಂದು ನೀವು ತಿಳಿದಿರಬೇಕು. ಪ್ರವಾದಿಯವರು ನಮಗೆ ಸುಂದರವಾದ ಧರ್ಮವನ್ನು ನೀಡಿದ್ದಾರೆ” ಎಂದು ಕಮೆಂಟ್ ಮಾಡಿದ್ದಾನೆ.
What a shame for Muslims sir you should choose one religion either to be a Muslim or https://t.co/hFo8Ri8ZmZ should know that Muslims only Worship Allah Almighty and Prophet Muhammad S.A.W came to change the Life of Humanity.Prophet S.A.W gave us the beautiful religion.
— M Taimour ul Hassan (@taimour_ul) August 31, 2022
ಜೀಶಾನ್ ಅಹ್ಮದ್ ಅನ್ಸಾರಿ ಎಂಬ ಯೂಸರ್, “ಎಲ್ಲಾ ಮುಸ್ಲಿಮರು ಶಾರುಖ್ ಖಾನ್ ಅವರ ಮುಂಬರುವ ಎಲ್ಲಾ ಚಲನಚಿತ್ರಗಳನ್ನು ಬಹಿಷ್ಕರಿಸಬೇಕು ಏಕೆಂದರೆ ಅಲ್ಲಾ ಹೊರತುಪಡಿಸಿ ಬೇರೆ ದೇವರು ಇಲ್ಲ ಮತ್ತು ಅವರು ಶಿರ್ಕ್ ನೌಜುಬಿಲ್ಲಾ ಮಾಡುತ್ತಿದ್ದಾರೆ. ಅಲ್ಲಾಹನು ಅವರನ್ನು ಸನ್ಮಾರ್ಗದಲ್ಲಿ ನಡೆಸಲಿ” ಎಂದು ಬರೆದಿದ್ದಾನೆ.
All muslims should boycott his all upcoming movies because there is no God but ALLAH and he's doing shirk nauzubillah.May ALLAH guide him to the right path.
— Zeeshan ahmed ansari (@Zeeshan141190) August 31, 2022
ಅದೇ ಅನುಕ್ರಮದಲ್ಲಿ, ಶಾರುಖ್‌ಗೆ ಉತ್ತರಿಸಿದ ಅನ್ಸರ್ ಖಾನ್, “ಮುಸ್ಲಿಮನಾಗಿದ್ದು ಈ ತಪ್ಪು ಮಾಡುತ್ತಿದ್ದೀರಿ, ನೀವು ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳುತ್ತೀರಿ. ಇಂತಹ ವಿಷಯಗಳಿಂದ ದೂರವಿರಿ. ಆದರೆ, ಯಾವುದೇ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ” ಎಂದಿದ್ದಾನೆ.
Being Muslim doing this is wrong
And you will lost your Emaan
Stay away from this type of things
Although don't say wrong about any religion— Ansar Khan (@AnsarKh555) August 31, 2022
ಮತ್ತೊಬ್ಬ ಯೂಸರ್ ಕಮೆಂಟ್ ಮಾಡಿ, “ನೀವು ಮುಸ್ಲಿಂ ಅಥವಾ ಹಿಂದೂ? ದಯವಿಟ್ಟು ದೃಢೀಕರಿಸಿ. ಇಸ್ಲಾಂನಲ್ಲಿ ನಾವು ಅಲ್ಲಾನನ್ನ ಮಾತ್ರ ನಂಬುತ್ತೇವೆ ಮತ್ತು ಪ್ರವಾದಿ ಮೊಹಮ್ಮದ್ ಅವರ ಸಂದೇಶವಾಹಕರು!” ಎಂದು ಬರೆದಿದ್ದಾನೆ.
You Muslim or Hindu ? Please confirm .
In islam we believe in Allah ONLY and prophet Muhammad is the messenger!— o0oo0o.eth | Mohemid.eth (@bosselahi) August 31, 2022
ಶಾರುಖ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಝೈನಾಬ್ ಖಾನ್ ಎಂಬ ಯೂಸರ್ ಹೀಗೆ ಬರೆದಿದ್ದಾರೆ, “ನಬಿ ಪಾಕ್‌ನ ಬಗ್ಗೆ ತಪ್ಪು ಮಾತುಗಳನ್ನಾಡುತ್ತಾರೆ, ಆಗ ನಿಮ್ಮ ಬಾಯಿಂದ ಒಂದೇ ಒಂದು ಪದವೂ ಬರುವುದಿಲ್ಲ. ಹೆಸರಿಗಾಗಿ ಏನು ಮಾಡಬಾರದು. ಒಂದು ವಿಷಯ ಹೇಳಲೇ? ಇಲ್ಲಿ ಇರಬೇಡ”.
नबी पाक sw पर ग़लत बयान बाज़ियाँ होती हें तब तो आपके मुँह से एक भी शब्द नहीं निकलता है
नाम के लिए क्या से क्या न कर जाओ
एक बात बोलूँ यहीं नहीं रहना है— Zainab_khan (@zainab131313) August 31, 2022
ಶಾರುಖ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮೌಲಾನಾ ಹಕೀಮುಲ್ಲಾ, “ಪಾಕಿಸ್ತಾನದ ಪ್ರವಾಹ ಪೀಡಿತ ಜನರು ಸೇರಿದಂತೆ ಎಲ್ಲಾ ಮುಸ್ಲಿಮರ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ನಿಮಗೆ ನಾಚಿಕೆಯಾಗಬೇಕು” ಎಂದು ಕಮೆಂಟ್ ಮಾಡಿದ್ದಾನೆ.
You should be ashamed of for hurting sentiments of Muslim including those who are under water in Pakistan.
— Urvashi Rautela (@satire1111) August 31, 2022
ಗಮನಿಸಬೇಕಾದ ಸಂಗತಿಯೆಂದರೆ, ಶಾರುಖ್ ಖಾನ್ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲೂ ಇದೇ ಪೋಸ್ಟ್ ಮಾಡಿದ್ದಾರೆ, ಆದರೆ ಅಲ್ಲಿಯೂ ಜನರು ಶಾರುಖ್ ಅವರನ್ನು ಸುತ್ತುವರೆದಿದ್ದಾರೆ. ಒಬ್ಬ ಯೂಸರ್ ಈ ಪೋಸ್ಟ್‌ನ್ನ ಮುಂಬರುವ ಚಿತ್ರ ‘ಪಠಾಣ್’ ಗೆ ಲಿಂಕ್ ಮಾಡಿದ್ದಾರೆ ಮತ್ತು ”ಪಠಾಣ್‌ನ್ನ ಬಾಯ್‌ಕಾಟ್ ಮಾಡುವ ಭಯ” ಎಂದು ಬರೆದಿದ್ದಾರೆ. ಇನ್ನೊಬ್ಬ ಯೂಸರ್, “ಯೇ ಶಿರ್ಕ್ ಹೈ. ನೀವು ಮುಸ್ಲಿಂ, ಸತ್ಯವನ್ನು ಬೆಂಬಲಿಸಿ” ಎಂದು ಬರೆದಿದ್ದಾನೆ.