“ಇಷ್ಟು ವರ್ಷದಿಂದ RCB ಕ್ಯಾಪ್ಟನ್ ಇದೀರಲ್ಲ ನಿಮಗೆ ಕನ್ನಡ ಬರುತ್ತಾ?” ಎಂಬ ಪ್ರಶ್ನೆಗೆ ವಿರಾಟ್ ಕೊಹ್ಲಿ ಕೊಟ್ಟ ಉತ್ತರ ಏನಿತ್ತು ಗೊತ್ತಾ?

in Kannada News/News/ಕನ್ನಡ ಮಾಹಿತಿ/ಕ್ರೀಡೆ 280 views

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೊನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಐಪಿಎಲ್ ಮುಂದೂಡಲ್ಪಟ್ಟ ಬೆನ್ನಲ್ಲೇ ಎಲ್ಲರ ಚಿತ್ತ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಮೇಲಿದೆ.

Advertisement

ಜೂನ್ 18ರಿಂದ 22ರವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಟಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಜರುಗಲಿದೆ. ಈ ನಡುವೆ ಶನಿವಾರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಶ್ನೋತ್ತರವನ್ನು ಏರ್ಪಡಿಸಿದ್ದರು. ಕೊಹ್ಲಿ ತಮ್ಮ ಅಭಿಮಾನಿಗಳು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು.

ಹೀಗೆ ಕೊಹ್ಲಿ ಅಭಿಮಾನಿಯೊಬ್ಬರು ‘ನಿಮಗೆ ಕನ್ನಡ ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಬರುತ್ತಾ?’ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಅಭಿಮಾನಿ ಕೇಳಿದ ಈ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ ‘ಸ್ವಲ್ಪ ಸ್ವಲ್ಪ ಬರುತ್ತೆ ಸರ್, ಆದರೆ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ’ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ‘ಸ್ವಲ್ಪ ಸ್ವಲ್ಪ’ ಎಂದು ಕನ್ನಡ ಬಳಸಿದ್ದನ್ನು ಕಂಡ ಕನ್ನಡಿಗರು ಬಹಳ ಸಂತೋಷಕ್ಕೊಳಗಾಗಿದ್ದು ವಿರಾಟ್ ಕೊಹ್ಲಿಯ ಈ ಉತ್ತರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದರಲ್ಲಿಯೂ ಕೊಹ್ಲಿಯ ಈ ಉತ್ತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗಂತೂ ತುಸು ಹೆಚ್ಚೇ ಸಂತೋಷವನ್ನು ನೀಡಿದೆ.

ಇದನ್ನೂ ಓದಿ: 16 ಬಾರಿ WWE ಚಾಂಪಿಯನ್‌ಶಿಪ್ ಗೆಲ್ಲಲು ನನಗೆ ರಾಹುಲ್ ದ್ರಾವಿಡ್ ಸ್ಪೂರ್ತಿ ಎಂದ ಜಾನ್ ಸೀನಾ

ಭಾರತ ತಂಡದ ಮಾಜಿ ನಾಯಕ ರಾಹುಲ್​ ದ್ರಾವಿಡ್​, ಅದೆಷ್ಟೋ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ಇವರನ್ನು ಆದರ್ಶವಾಗಿ ಸ್ವೀಕರಿಸಿರುವ ಆಟಗಾರರಿಗೆ ಲೆಕ್ಕವಿಲ್ಲ. ವೃತ್ತಿಜೀವನಕ್ಕೆ ನಿವೃತ್ತಿ ಹೇಳಿ 9 ವರ್ಷಗಳ ಕಳೆದರೂ ದ್ರಾವಿಡ್​ ಅಭಿಮಾನಿಗಳ ಸಂಖ್ಯೆ ಮಾತ್ರ ಕುಂದಿಲ್ಲ. ಇದೀಗ ಕೋಚಿಂಗ್​ನತ್ತ ಗಮನಹರಿಸಿರುವ ದ್ರಾವಿಡ್​, ಯುವ ಕ್ರಿಕೆಟಿಗರಿಗೆ ತಮ್ಮ ತಂತ್ರಗಳನ್ನು ಹೇಳಿಕೊಡುತ್ತಿದ್ದಾರೆ. ದ್ರಾವಿಡ್​ ಮಾತು ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲ, ಇತರ ಕ್ರೀಡೆಯ ಕ್ರೀಡಾಪಟುಗಳು ಕೂಡ ಸ್ಫೂರ್ತಿಯಾಗಿ ಸ್ವೀಕರಿಸುತ್ತಾರೆ. ಅದೇ ರೀತಿ ವಲ್ಡ್​ ರೆಸ್ಲಿಂಗ್​ ಇಂಟರ್​ಟೈನ್ಮೆಂಟ್​ (WWE) ದಿಗ್ಗಜ ಜಾನ್​ ಸೀನಾಗೆ ದ್ರಾವಿಡ್​ ಅವರೇ ಸ್ಫೂತಿರ್ಯಂತೆ..

ಸೇ ಡಿ ಗಾಗಿ ಆಡಬಾರದು, ಗೌರವ ಹಾಗೂ ಹೆಮ್ಮೆಗಾಗಿ ಆಡಬೇಕು ಎಂದು ದ್ರಾವಿಡ್​ ಹೇಳಿದ ಮಾತೇ ಡಬ್ಲ್ಯುಡಬ್ಲ್ಯುಇ ದಿಗ್ಗಜನಿಗೆ ಸ್ಫೂರ್ತಿಯಾಗಿದೆ. 2017ರಲ್ಲಿ ಜಾನ್​ ಸೆನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದರೂ ಇಂದಿಗೂ ಈ ಪೋಸ್ಟ್​ ಚಾಲ್ತಿಯಲ್ಲಿರುವುದು ವಿಶೇಷ. ದ್ರಾವಿಡ್​ ಫೋಟೋ ಜತೆಗೆ ಕೋಟ್​ ಹಂಚಿಕೊಂಡಿದ್ದರು. ಬಹುತೇಕ ಮಾಧ್ಯಮಗಳಲ್ಲಿ ಈ ಮಾತು ಚರ್ಚೆಯಾಗಿರುವುದು ವಿಶೇಷ. ಇನ್​ಸ್ಟಾಗ್ರಾಂನಲ್ಲಿ ಸುಮಾರು 15.1 ಮಿಲಿಯನ್​ ಹಿಂಬಾಲಕರನ್ನು ಹೊಂದಿರುವ ಸೆನಾ, ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​, ಸ್ಟಾರ್​ ಅಮಿತಾಭ್​ ಬಚ್ಚನ್​, ರಣವೀರ್​ ಸಿಂಗ್​ ಪೋಸ್ಟ್​ಗಳನ್ನು ಶೇರ್​ ಮಾಡಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ ಮುಖ್ಯಸ್ಥರಾಗಿರುವ ಕನ್ನಡಿಗ ರಾಹುಲ್​ ದ್ರಾವಿಡ್​, ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಭಾರತ ಎರಡನೇ ಸ್ಥರದ ತಂಡಕ್ಕೆ ಕೋಚ್​ ಆಗುವ ಸಾಧ್ಯತೆಗಳಿವೆ. ದ್ರಾವಿಡ್​ 2014ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ತಂಡದೊಂದಿಗೆ ಕಾರ್ಯನಿರ್ವಹಿಸಿದ್ದರು.

 

Advertisement
Share this on...