ಹುಬ್ಬಳ್ಳಿ:
ಈ ಕುರಿತು ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎಲ್ಲ ಜಾತಿಯ ದೇವರುಗಳನ್ನ ಗೌರವದಿಂದ ಕಾಣುತ್ತೇವೆ. ಶ್ರೀರಾಮನನ್ನ ಸಹಗೌರವ,ಪ್ರೀತಿಯಿಂದ ಗೌರವಿಸುತ್ತೇವೆ ಭಕ್ತಿಯಿಂದ ಪೂಜೆ ಮಾಡುತ್ತವೆ ಹಿಂದುಗಳಲ್ಲಿ ಒಂದು ಸ್ಥಾನವಿದೆ ಎಂದ ಅವರು ರಾಮ ಬಿಜೆಪಿಯಿಂದ ಹುಟ್ಟಿದ್ದಾನೇ ಏನೋ ತರಾ ವರ್ತನೆ ಮಾಡುತ್ತಾರೆ. ಇದರಿಂದ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ ಎಂದರು.
ಕಾಳವ್ವ, ಹನುಮಂತ, ದುರ್ಗವ್ವ ಇವೆಲ್ಲ ದೇವರು ಅಲ್ವಾ?, ರಾಮಮಂದಿರಕ್ಕೆ ಹೋದ್ರೆ ಅಷ್ಟೇ ಹಿಂದೂಗಳಾ..?, ಇಂತಹ ಸಾವಿರ ಗುಡಿ ನಾವು ಕಟ್ಟಿದ್ದೇವೆ, ನಮ್ಮೂರಲ್ಲಿ ಇರೋ ದೇವರು ದೇವರಲ್ವಾ?, ಹಳ್ಳಿಯಲ್ಲಿ ಇರೋ ದೇವರು ಬಿಜೆಪಿಯವರಿಗೆ ಕಾಣುತಿಲ್ವಾ.? ರಾಮ ಒಬ್ಬನೇ ದೇವರಾ ಎಂದು ಪ್ರಶ್ನಿಸಿದರು.
ರಾಮನ ಹೆಸರಲ್ಲಿ ಬಿಜೆಪಿಯವರು ಚುನಾವಣೆಗೆ ಹೊರಟಿದ್ದಾರೆ, ನಮ್ಮ ಜನ ಬುದ್ದಿಗೇಡಿಗಳಲ್ಲ, ಬಿಜೆಪಿಯವರಿಗೆ ಮೋದಿ ಅವರೇ ದೇವರು, ಪ್ರಧಾನಿಗಳ ಕೆಲಸ ಕಸ ಹೊಡೆಯೋದಾ..?, ಪ್ರಧಾನಿ ಮೋದಿ ರಾಮಮಂದಿರದಲ್ಲಿ ಕೂತಿದ್ದಾರೆ. ಜನ ಯಾಕೆ ಇವರಿಗೆ ವೋಟ್ ಹಾಕಿದ್ದಾರೆ, ರಾಮ ಮಂದಿರದಲ್ಲಿ ಕೂರೋಕಾ ಎಂದು ಪ್ರಶ್ನಿಸಿದರು.
ಜನರಿಗೆ ಉದ್ಯೋಗ ಇಲ್ಲ, ನಾನು ದುರ್ಗವ್ವನ ಭಕ್ತ, ಹಿಂದೂಗಳಿಗೆ ರಾಮ ಒಬ್ಬನೇ ದೇವರಾ?, ಸಾವಿರಾರು ದೇವರುಗಳಿವೆ, ಕಾಂಗ್ರೆಸ್‌ನವರು ಅಲ್ಪಸಂಖ್ಯಾತರ ಪರ ಎಂದು ಹಣೆಪಟ್ಟಿ ಕಟ್ಟಿದ್ದಾರೆ. ನಾವೇನು ಇವರಿಗೆ ಮಾರಿ ಕೊಂಡಿದ್ದೀವಾ? ಎಂದು ಕಿಡಿಕಾರಿದರು.
ರಾಜಕೀಯಕ್ಕಾಗಿ ರಾಮಮಂದಿರ ಉಪಯೋಗ ಮಾಡ್ತಿದ್ದಾರೆ, ಲೋಕಸಭೆ ಚುನಾವಣೆ ಬಂದಿದೆ ಎಂದು ರಾಮಮಂದಿರದ ಬಗ್ಗೆ ಮಾತಾಡ್ತಿದ್ದಾರೆ, ನಮ್ಮ ಹಳ್ಳಿಯಲ್ಲಿನ ಜನ ಅಯೋಧ್ಯೆಗೆ ಹೋಗೋಕೆ ಆಗುತ್ತಾ?, ಅಯೋಧ್ಯೆಯಲ್ಲಿರೋ ರಾಮ ಒಬ್ಬನೇ ದೇವರಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಲೋಕಸಭಾ ಚುನಾವಣೆಗೆ ತಯಾರಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ನಾವು ಸಹ ತಯಾರಿ ನಡೆದ್ದೇವೆ. ಕಾಂಗ್ರೆಸ್ ಬಿಜೆಪಿಯಲ್ಲಿ ಸಹ ಬಿರುಸಿನಿಂದ ಚಟುವಟಿಕೆ ಆರಂಭ ಆಗಿಲ್ಲ. ಪಕ್ಷದ ಹಿರಿಯರು ಕೊಟ್ಟ ಸಲಹೆ ಪಾಲುಸುತ್ತೇವೆ. ಸಚಿವರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಸಹಜವಾಗಿಯೇ ಅವರು ಜನರ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ಆದ್ದರಿಂದ ಪಕ್ಷದ ಹಿರಿಯರು ಹೆಚ್ಚಿನ ಜವಾಬ್ದಾರಿ ಕೊಡುತ್ತಾರೆ. ಹೆಚ್ಚು ಸ್ಥಾನ ಪಡೆಯುವುದು ನಮ್ಮ ಜವಾಬ್ದಾರಿ ಎಂದರು.
ಭಾರತ ಜೋಡೋ ಯಾತ್ರೆಯಿಂದ ಬಿಜೆಪಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಬಿಜೆಪಿಯವರು ಯಾವಾಗಲೂ ಹಾಗೇ ಪ್ರಜಾಪ್ರಭುತ್ವ ವ್ಯವಸ್ಥೆ ಹದೆಗೆಡುಸುವುದು ಇನ್ನೊಂದು ಪಕ್ಷವನ್ನು ಹತ್ತಿಕ್ಕುವ ಹುನ್ನಾರ ಮಾಡುತ್ತಿದ್ದಾರೆ. ಇಡಿ ಐಟಿ, ಸಿಬಿಐ ಹೆದರಿಸುವುದು. ಸರ್ಕಾರಿ ಕಚೇರಿ ದುರುಪಯೋಗ ಪಡಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತುರ್ತು ಪರಿಸ್ಥಿತಿಕ್ಕಿಂತ ಕೆಟ್ಟ ಪರಿಸ್ಥಿತಿ ನಿರ್ಮಾಣ ಆಗಿದೆ. ಹೆದರಿಸಿ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದು. ಚುನಾವಣೆ ನಡೆಸಲಾರದಂತೆ ಹೆದರಿಕೆ ಬೆದರಿಕೆ ಹಾಕುವುದು, ಪ್ರಜಾಪ್ರಭುತ್ವ ಹಾಳಾಗುವಂತೆ ಮಾಡಿದ್ದಾರೆ. ಸಣ್ಣ ಪುಟ್ಟ ಪ್ರಕರಣಳಿಗೆ ಸಹ ಕೇಸ್ ಹಾಕುವುದು, ಹೆದರಿಕೆ ಬೆದರಿಕೆಯಿಂದ ನಿಯಂತ್ರಣ ಮಾಡುವುದು. ನೋಡು ನೀನು ಕಾಂಗ್ರೆಸ್ ಜೊತೆಗೆ ಇದ್ದರೆ ಇಡಿ ಐಟಿ ದಾಳಿ ಮಾಡಿಸುತ್ತೇವೆ ಅಂತಾ ಭಯ ಪಡಿಸುತ್ತಾರೆ. ಇದರಿಂದಾಗಿ ಯಾರು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ಭಯದ ವಾತಾವರಣ ನಿರ್ಮಾಣ ಮಾಡಿ ಮತ ಕೇಳುವ ಹುನ್ನಾರ ಆಗಿದೆ ಎಂದರು.