“ಕುತುಬ್ ಮಿನಾರ್ ಕೂಡ ಹಿಂದೂ ಮಂದಿರವಾಗಿತ್ತು, ಕಾಶಿ ಮಥುರಾವನ್ನೂ ಮಸ್ಲಿಮರು ಹಿಂದುಳಿಗೆ ಬಿಟ್ಟುಕೊಡಬೇಕು”: ಕೆಕೆ ಮೊಹಮ್ಮದ್, ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕ

in Uncategorized 14,824 views

ವಾರಣಾಸಿ, ಮಥುರಾವನ್ನೂ ಕೂಡ ಹಿಂದೂಗಳಿಗೆ ಸ್ವಇಚ್ಛೆಯಿಂದ ಹಸ್ತಾಂತರಿಸಲು ಮುಸ್ಲಿಂ ಸಮುದಾಯ ಸಿದ್ಧರಾಗಿರಬೇಕು ಎಂದು ಪುರಾತತ್ವಶಾಸ್ತ್ರಜ್ಞ ಕೆಕೆ ಮಹಮ್ಮದ್ ಕೆಕೆ. ಮುಹಮ್ಮದ್ ಅವರು ಹೇಳಿದ್ದಾರೆ.

Advertisement

ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ದೇವಸ್ಥಾನವಿತ್ತು ಎಂದು ಬಲವಾಗಿ ಪ್ರತಿಪಾದಿಸಿದ್ದವರಲ್ಲಿ ಕೆ.ಕೆ. ಮುಹಮ್ಮದ್ ಪ್ರಮುಖರಾಗಿದ್ದು, ಇವರು ಬಾಬ್ರಿ ಮಸೀದಿ ಸ್ಥಳವನ್ನು ಉತ್ಖನನ ಮಾಡಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ತಂಡದ ಭಾಗವಾಗಿದ್ದರು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮುಸ್ಲಿಮರು ಜ್ಞಾನವಾಪಿ ಮತ್ತು ಮಥುರಾ ಮಸೀದಿಗಳನ್ನು ಹಿಂದೂಗಳಿಗೆ ಸ್ವಇಚ್ಛೆಯಿಂದ ಹಸ್ತಾಂತರಿಸಬೇಕು. ಇದರಿಂದ ಈಗಾಗಲೇ ಆಗಿರುವ ಗಾಯಗಳೂ ಮಾಸಿ ಹೋಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೀವು 1976 ರಲ್ಲಿ ಬಾಬರಿ ಮಸೀದಿ/ರಾಮ ಜನ್ಮಭೂಮಿಯನ್ನು ಉತ್ಖನನ ಮಾಡಿದ ASI ತಂಡದ ಭಾಗವಾಗಿದ್ದೀರಿ. ನಿಮ್ಮ ಸಂಶೋಧನೆಗಳ ಫಲಿತಾಂಶವೇನು?

ಪ್ರೊಫೆಸರ್ ಬಿ ಬಿ ಲಾಲ್ ನೇತೃತ್ವದ ತಂಡವು ಉತ್ಖನನವನ್ನು ನಡೆಸಿತ್ತು. ನಾನೂ ಕೂಡ ಅದರ ಭಾಗವಾಗಿದ್ದೆ. ಸ್ಥಳದಲ್ಲಿ ಹಿಂದೂ ದೇವಾಲಯದ ಕಂಬಗಳು ಕಂಡು ಬಂದಿದ್ದೆವು, ಅವುಗಳ ಮೇಲೆ ಕೆತ್ತನೆಗಳೂ ಕಂಡು ಬಂದಿದ್ದೆವು. ವಿರೂಪಗೊಂಡ ದೇವರು ಮತ್ತು ದೇವತೆಗಳ ಮೂರ್ತಿಗಳೂ ಕೂಡ ಕಂಡು ಬಂದಿತ್ತು. ದೇವಾಲಯಗಳಿಗೆ ಸಂಬಂಧಿಸಿದ ಪ್ರತಿಮೆಗಳನ್ನು ಕೂಡ ಕಂಡು ಬಂದಿತ್ತು. ಮಾನವನ ರೂಪದ ಪ್ರತಿಮೆಗಳನ್ನು ಮುಸ್ಲಿಮರು ಹರಾಮ್ ಎಂದೇ ಪರಿಗಣಿಸುತ್ತಾರೆ. ಹೀಗಾಗಿ ಮಸೀದಿಗಳಲ್ಲಿ ಮಾನವನ ರೂಪದ ಪ್ರತಿಮೆಗಳು ಕಂಡು ಬರುವುದಿಲ್ಲ. ಇದರಿಂದಾಗಿ ಮಸೀದಿಯನ್ನು ಕಟ್ಟುವ ಮೊದಲು ಅಲ್ಲಿ ದೇವಸ್ಥಾನವಿತ್ತು ಎಂದು ನಮಗೆ ಖಚಿತವಾಗಿತ್ತು.

ಆದರೆ AMU ನ ಪ್ರೊಫೆಸರ್ ಸೈಯದ್ ಅಲಿ ರಿಜ್ವಿಯಂತಹ ಕೆಲವರು ನೀವು ಉತ್ಖನನ ತಂಡದ ಭಾಗವಾಗಿರಲಿಲ್ಲ ಎಂದು ಆರೋಪಿಸಿದ್ದಾರೆ?
ನಾನು ಆಗ ASI ಸ್ಕೂಲ್ ಆಫ್ ಆರ್ಕಿಯಾಲಜಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದೆ. ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ಪತ್ನಿ ಜೈಶ್ರೀ ರಾಮನಾಥನ್ ಸೇರಿದಂತೆ ನಾವು ಹತ್ತು ಮಂದಿ ತಂಡವಾಗಿ ಹೋಗಿದ್ದೆವು. ನಾನು ಬಿ ಕಂದಕದ ಉತ್ಖನನದಲ್ಲಿ ತೊಡಗಿದ್ದೆ.

ಈ ಅಧ್ಯಯನಗಳ ಸಂಶೋಧನೆಗಳು ಯಾವುದಾದರೂ ಶೈಕ್ಷಣಿಕ ಜರ್ನಲ್‌ನಲ್ಲಿ ಪ್ರಕಟವಾಗಿದೆಯೇ?

ಹೌದು. ಇದು ಭಾರತೀಯ ಪುರಾತತ್ವ ಸರ್ವೇಕ್ಷಣಾದ ಪುಸ್ತಕದಲ್ಲಿದೆ. ಇದು ಶೈಕ್ಷಣಿಕ ಸ್ವರೂಪವಾಗಿತ್ತು. ಹೀಗಾಗಿ ಎಎಸ್‌ಐ, ವಿಶೇಷವಾಗಿ ಪ್ರೊಫೆಸರ್ ಲಾಲ್, ಇದನ್ನು ಎಂದಿಗೂ ದೊಡ್ಡದು ಮಾಡಲು ಬಯಸಲಿಲ್ಲ.

ASI ಉತ್ಖನನದಲ್ಲಿ ದೇವಾಲಯವಿದೆ ಎಂದು ಸಾಬೀತುಪಡಿಸಲು ರಚನೆಗಳು ಕಂಡುಬಂದಿದ್ದವು. ಆದರೆ ಅದು ರಾಮಮಂದಿರವೇ ಎಂಬುದಕ್ಕೆ ಯಾವುದೇ ಪುರಾವೆ ಸಿಕ್ಕಿದ್ದವೇ?

ಹೌದು. 1992 ರಲ್ಲಿ ಮಸೀದಿಯನ್ನು ಕೆಡವಿದ ನಂತರ ಅವರಿಗೆ ಒಂದು ಶಾಸನ ಸಿಕ್ಕಿತ್ತು. ಅದರಲ್ಲಿ ವಿಷ್ಣುಹರಿಸಿಲ ಫಲಕಮ್ ಎಂದು ಬರೆದಿರುವುದು ಕಂಡು ಬಂದಿತ್ತು. ಈ ದೇವಾಲಯವು ಬಲಿಯನ್ನು ಕೊಂದ ಮಹಾವಿಷ್ಣುವಿಗೆ ಸಮರ್ಪಿಸಲಾಗಿತ್ತು.

ಈ ಪುರಾವೆಗಳು ಬಾಬ್ರಿ ಮಸೀದಿಯನ್ನು ಕೆಡುವ ಸಂದರ್ಭದಲ್ಲಿ ಪತ್ತೆ ಮಾಡಲಾಗಿತ್ತು. ಉತ್ಖನನದ ಸಮಯದಲ್ಲಿ ಅಲ್ಲ…?

ಹೌದು. ಅವರಿಗೆ ಈ ಪುರಾವೆ ಸಿಕ್ಕಿದ್ದು, ಮಸೀದಿ ಧ್ವಂಸದ ನಂತರವೇ ಹೊರತು ಉತ್ಖನನದ ಸಮಯದಲ್ಲಿ ಅಲ್ಲ. ವಿಮರ್ಶಕರು ಮೊದಲು ಇದು 18 ನೇ ಶತಮಾನದ ಶಾಸನ ಎಂದು ಹೇಳಿದ್ದರು. ನಂತರ ಈ ಹೇಳಿಕೆಯಿಂದ ಹಿಂದೆ ಸರಿದಿದ್ದರು. ವಾಸ್ತವವಾಗಿ ಇದು 12 ನೇ ಶತಮಾನದ ಶಾಸನವಾಗಿದೆ. ಸಾಕ್ಷ್ಯಗಳನ್ನು ಸ್ವತಃ ಇಡಲಾಗಿತ್ತು ಎಂಬ ಆರೋಪಗಳೂ ಕೇಳಿಬಂದಿದ್ದವು. ಆದ್ದರಿಂದ, ಲಖನೌನಲ್ಲಿ ಪರೀಶೀಲನೆಗೆ ರವಾನಿಸಲಾಗಿತ್ತು. ಇಂತಹ ಶಾಸನ ತಮ್ಮ ಬಳಿಯಿರುವುದನ್ನು ಅಲ್ಲಿನ ಅಧಿಕಾರಿಗಳೂ ಹೇಳಿದ್ದರು.

ಬಾಬರ್ ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ್ಜ ಎಂಬುದು ಜನಪ್ರಿಯ ಕಥೆಯಾಗಿದೆ. ಆದರೆ ಬಾಬರ್ ದೇವಾಲಯವನ್ನು ಕೆಡವಿದ್ದನೆಂದು ಸಾಬೀತುಪಡಿಸಲು ನಮ್ಮ ಬಳಿ ಸಾಕ್ಷ್ಯವಿದೆಯೇ?

ಬಾಬರ್‌ನ ಸೇನಾ ಕಮಾಂಡರ್ ಮೀರ್ ಬಕ್ಷಿ ದೇವಾಲಯದ ಧ್ವಂಸದ ನೇತೃತ್ವ ವಹಿಸಿದ್ದ. ಮೀರ್ ಬಕ್ಷಿ ದೇವಾಲಯವನ್ನು ಕೆಡವಿದ ಎಂದು ಪರ್ಷಿಯನ್ ಭಾಷೆಯಲ್ಲಿ ಒಂದು ಶಾಸನವೂ ಪತ್ತೆಯಾಗಿದೆ.

ಆದರೆ ಮಸೀದಿ ನಿರ್ಮಿಸಲು ದೇವಾಲಯವನ್ನು ಕೆಡವುವುದಕ್ಕೂ ಶಿಥಿಲಗೊಂಡ ದೇವಾಲಯದ ಅವಶೇಷಗಳ ಮೇಲೆ ಮಸೀದಿ ನಿರ್ಮಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ…?

ಮಧ್ಯಕಾಲೀನ ಭಾರತದಲ್ಲಿ ಅನೇಕ ದೇವಾಲಯಗಳನ್ನು ಕೆಡವಲಾಯಿತು. ದೆಹಲಿಗೆ ಭೇಟಿ ನೀಡಿದರೆ ಕುತುಬ್ ಮಿನಾರ್ ಬಳಿ ಕುವ್ವಾತ್-ಉಲ್-ಇಸ್ಲಾಂ ಮಸೀದಿಯನ್ನು ನೋಡಬಹುದು (ಮಸೀದಿಯನ್ನು ದೇವಾಲಯದ ಸ್ಥಳದಲ್ಲಿ ನಿರ್ಮಿಸಲಾಗಿದೆ). ಬಾಬರ್ ನಾಮದ ಕೆಲವು ಪುಟಗಳೂ ಅಲ್ಲಿ ಕಾಣೆಯಾಗಿವೆ.

ಮೂರು ತಿಂಗಳ ಚಟುವಟಿಕೆಗಳನ್ನು ವಿವರಿಸುವ ಪುಟಗಳು ಕಾಣೆಯಾಗಿವೆ. ಮೀರ್ ಬಕ್ಷಿ ಮಸೀದಿಯನ್ನು ನಿರ್ಮಿಸಿದ ಎಂಬ ಶಾಸನವಿತ್ತು. ಧ್ವಂಸವು ಯುದ್ಧದ ಭಾಗವಾಗಿತ್ತು. ಇಂದಿನ ಪೀಳಿಗೆಯ ಮುಸ್ಲಿಮರು ಈ ಕೃತ್ಯದ ಯಾವುದೇ ರೀತಿಯಲ್ಲಿ ಜವಾಬ್ದಾರರಲ್ಲ. ಆದರೆ, ಕೆಲವು ಆಕ್ರಮಣಕಾರರು ದೇವಾಲಯಗಳನ್ನು ಕೆಡವಿರುವುದನ್ನು ಮುಸ್ಲಿಮರು ಸಮರ್ಥಿಸಿಕೊಳ್ಳಬಾರದು. ಗೋವಾದಲ್ಲಿ ಪೋರ್ಚುಗೀಸರು ಮಾಡಿದ್ದನ್ನು ಕ್ರೈಸ್ತರು ಸಮರ್ಥಿಸುವುದಿಲ್ಲ.

ನೀವು ಹೇಳುವ ಪ್ರಕಾರ, 12 ನೇ ಶತಮಾನದ ದೇವಾಲಯವಿತ್ತು. 16 ನೇ ಶತಮಾನದಲ್ಲಿ ಅದರ ಮೇಲೆ ಮಸೀದಿಯನ್ನು ನಿರ್ಮಿಸಲಾಯಿತು ಎನ್ನಲಾಗಿದೆ. ಪುರಾತತ್ತ್ವ ಶಾಸ್ತ್ರಜ್ಞರಾಗಿ ನೀವು ಮಸೀದಿ/ದೇವಾಲಯ ರಚನೆಯನ್ನು ಕೆಡವುವುದನ್ನು ಒಪ್ಪುತ್ತೀರಾ?

ಯಾವುದೇ ಪುರಾತತ್ತ್ವಜ್ಞರು ಯಾವುದೇ ಐತಿಹಾಸಿಕ ರಚನೆಯನ್ನು ಕೆಡವಲು ಒಪ್ಪುವುದಿಲ್ಲ. ಆದರೆ, ಮಸೀದಿಯನ್ನು ಈಗಾಗಲೇ ಕೆಡವಲಾಗಿತ್ತು. ಹೀಗಾಗಿ ನಾವು ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಬೇಕಾಗಿತ್ತು.

1992ರಲ್ಲಿ ಬಾಬರಿ ಮಸೀದಿಯನ್ನು ಕೆಡವಲಾಯಿತು. ಪುರಾತತ್ವಶಾಸ್ತ್ರಜ್ಞರಾಗಿ ನಿಮಗೆ ಏನನಿಸಿತು?

ನಾವೆಲ್ಲ ತತ್ತರಿಸಿ ಹೋದೆವು. ಶತಮಾನಗಳ ಹಿಂದೆ ನಡೆದ ಐತಿಹಾಸಿಕ ತಪ್ಪನ್ನು ಸರಿಪಡಿಸಲು ತಪ್ಪು ಮಾಡಬಾರದು ಎಂದು ಹಿರಿಯ ಐಎಎಸ್ ಅಧಿಕಾರಿ ಐ ಮಹದೇವನ್ ಹೇಳಿಕೆ ನೀಡಿದ್ದರು. ನಾವೆಲ್ಲರೂ ಧ್ವಂಸವನ್ನು ವಿರೋಧಿಸಿದ್ದೇವೆ. ಇದು ಆಗಬಾರದಿತ್ತು.

ಭಾರತೀಯ ಮುಸಲ್ಮಾನನಾಗಿ ನಿಮ್ಮ ಆಲೋಚನೆ ಹೇಗಿತ್ತು…?

ಪುರಾತತ್ವಶಾಸ್ತ್ರಜ್ಞನು ಎಂದಿಗೂ ಮುಸ್ಲಿಂ ಅಥವಾ ಹಿಂದೂ ಆಗಲು ಸಾಧ್ಯವಿಲ್ಲ. ಇಂತಹ ವಿಷಯಗಳನ್ನು ವಸ್ತುನಿಷ್ಠವಾಗಿ ನೋಡುತ್ತೇವೆ. ನಾನು ವಿವಿಧ ಸಂದರ್ಭಗಳಲ್ಲಿ ಮುಸ್ಲಿಂ ಸಮುದಾಯ ಮತ್ತು ಹಿಂದೂ ಗುಂಪುಗಳಿಂದ ತೀವ್ರ ವಿರೋಧವನ್ನೂ ಎದುರಿಸಿದ್ದೇನೆ.

ಜ್ಞಾನವಾಪಿ ಮತ್ತು ಮಥುರಾ ಬಗ್ಗೆ ಈಗ ಇದೇ ರೀತಿಯ ಬೇಡಿಕೆಗಳನ್ನು ಇಡಲಾಗುತ್ತಿದೆ…?

ಮುಸ್ಲಿಮರು ಜ್ಞಾನವಾಪಿ ಮತ್ತು ಮಥುರಾ ಮಸೀದಿಗಳನ್ನು ಹಿಂದೂಗಳಿಗೆ ಸ್ವಇಚ್ಛೆಯಿಂದ ಹಸ್ತಾಂತರಿಸಬೇಕು. ಈ ವಿಚಾರದಲ್ಲಿ ಉದ್ನಿಗ್ನ ಪರಿಸ್ಥಿತಿ ಎದುರಾಗುವುದಂತೂ ಖಂಡಿತ. ಆದರೆ ಐತಿಹಾಸಿಕ ದೃಷ್ಟಿಕೋನದಿಂದ ನೋಡುವುದಾದರೆ, ಈ ಎರಡನ್ನೂ ಹಸ್ತಾಂತರಿಸದೆ ಇಡೀ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯುವುದು ಸಾಧ್ಯವಿಲ್ಲ. ವಿಭಜನೆಯ ನಂತರವೂ ಭಾರತವು ಜಾತ್ಯತೀತ ರಾಷ್ಟ್ರವಾಗಿ ಉಳಿದಿರುವುದು ಅದರ ಹಿಂದೂ ಬಹುಸಂಖ್ಯಾತರಿಂದ ಎಂದು ನಾನು ಮುಸ್ಲಿಮರಿಗೆ ಯಾವಾಗಲೂ ಹೇಳುತ್ತೇನೆ,

ಆದರೆ ಇದು ಹೆಚ್ಚು ಉದ್ವಿಗ್ನಕ್ಕೆ ಕಾರಣವಾಗುವುದಿಲ್ಲವೇ?

ಹಿಂದೂಗಳಿಗೆ ಅಯೋಧ್ಯೆ, ಕಾಶಿ, ಮಥುರಾ ಎಷ್ಟು ಮುಖ್ಯವೋ ಮುಸ್ಲಿಮರಿಗೆ ಮೆಕ್ಕಾ, ಮದೀನಾ ಕೂಡ ಅಷ್ಟೇ ಮುಖ್ಯ. ಆದ್ದರಿಂದ, ಮುಸ್ಲಿಮರು ಈ ಸ್ಥಳಗಳನ್ನು ಸ್ವಇಚ್ಛೆಯಿಂದ ಹಸ್ತಾಂತರಿಸಲು ಸಿದ್ಧರಾಗಿರಬೇಕು.

ಜ್ಞಾನವಾಪಿಯಲ್ಲಿ ಹಿಂದೂ ದೇವಾಲಯ ಇರುವ ಕುರಿತು ಪುರಾವೆಗಳು ಸಿಕ್ಕಿವೆಯೇ?

ಹೌದು. ಇಸ್ಲಾಮಿಕ್ ಶಾಸನಗಳು ಪತ್ತೆಯಾಗಿರಬಹುದು, ಆದರೆ ಒಟ್ಟಾರೆಯಾಗಿ, ಇದು ಹಿಂದೂ ರಚನೆಯಾಗಿದೆ. ಅಲ್ಲದೆ, ಇದನ್ನು ಬೆಂಬಲಿಸುವ ಅನೇಕ ಸಾಹಿತ್ಯಗಳಿವೆ. ಈ ವಿಷಯವು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದೊಡ್ಡ ಒಡಕನ್ನು ಸೃಷ್ಟಿಸಿದೆ. ಹಾಗಾಗಿ ಅದನ್ನು ಹಿಂದೂಗಳಿಗೆ ಒಪ್ಪಿಸುವುದೊಂದೇ ಶಾಶ್ವತ ಪರಿಹಾರ.

ಆರ್‌ಎಸ್‌ಎಸ್-ವಿಎಚ್‌ಪಿ ಮಸೀದಿಗಳನ್ನು ನಿರ್ಮಿಸಲು ಕೆಡವಲಾದ ಸುಮಾರು 2,000 ದೇವಾಲಯಗಳ ಪಟ್ಟಿಯನ್ನು ಇಟ್ಟುಕೊಂಡಿದೆ ಎಂದು ವರದಿಯಾಗಿದೆ?

ಹೀಗೆ ಮುಂದುವರಿದರೆ ಅಂತ್ಯವೇ ಇರುವುದಿಲ್ಲ. ಆದರೆ, ಆಕ್ರಮಣಶೀಲತೆಯ ಮನಸ್ಸನ್ನು ಹಿಂದೂಗಳು ಎಂದಿಗೂ ಒಪ್ಪುವುದಿಲ್ಲ. ರಾಮಮಂದಿರ ವಿಚಾರದ ಹೋರಾಟದಲ್ಲಿ ಅನೇಕ ಹಿಂದೂಗಳು ಮುಸ್ಲಿಮರೊಂದಿಗೆ ನಿಂತಿದ್ದರು ಎಂಬುದನ್ನು ನಾವು ಇಲ್ಲಿ ಸ್ಮರಿಸಬೇಕು. ಆದರೆ, ಮುಸ್ಲಿಮರು ಹಿಂದೂಗಳ ಪರವಾಗಿ ನಿಂತ ಒಂದು ಉದಾಹರಣೆ ನಿಮಗೆ ನೆನಪಿದೆಯೇ?

ಅಯೋಧ್ಯೆಯು ಪುರಾತತ್ವ ಅಥವಾ ಐತಿಹಾಸಿಕ ಸಮಸ್ಯೆಗಿಂತ ಹೆಚ್ಚಾಗಿ ರಾಜಕೀಯ ವಿಷಯವಾಗಿತ್ತು ಎನಿಸುವುದಿಲ್ಲವೇ?

ಹೌದು. ಇದು ರಾಜಕೀಯ ವಿಚಾರವಾಗಿ ಪರಿವರ್ತನೆಯಾಗಿದೆ. ಬಿಜೆಪಿ ಮತ್ತು ಆರೆಸ್ಸೆಸ್ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಇದನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಸತ್ಯ. ಅದೇ ಸಮಯದಲ್ಲಿ, ಲಕ್ಷಾಂತರ ಸಾಮಾನ್ಯ ಹಿಂದೂ ಭಕ್ತರ ನೋವನ್ನು ನಾವು ಅರ್ಥಮಾಡಿಕೊಳ್ಳಬೇಕು. ಹಿಂದೂಗಳ ನೋವು ಮುಸಲ್ಮಾನರಿಗೆ ಅರ್ಥವಾಗಿದ್ದಿದ್ದರೆ ಉತ್ತಮವಾಗಿರುತ್ತಿತ್ತು.

ಆದರೆ ಈ ಭಾವನೆಗಳನ್ನು ರಾಜಕಾರಣಿಗಳು ಸೃಷ್ಟಿಸಿದ್ದಲ್ಲವೇ?

ಭಾವನೆಗಳನ್ನು ಕೆರಳಿಸುವ ಪ್ರಯತ್ನಗಳು ನಡೆದಿವೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ 1976-77ರಲ್ಲಿ ನಾನು ಅಯೋಧ್ಯೆಗೆ ಭೇಟಿ ನೀಡಿದಾಗಲೂ, ಬಡ ಹಿಂದೂಗಳ ಹೃದಯ ವಿದ್ರಾವಕ ಸಂಕಟವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಮೆಕ್ಕಾ ಅಥವಾ ಮದೀನಾ ಆಗಿದ್ದರೆ ಇಷ್ಟೊತ್ತಿಗೆ ಎಷ್ಟು ಬಾಂಬ್‌ಗಳು ಸ್ಫೋಟಗೊಳ್ಳುತ್ತಿದ್ದವು? ಆದರೆ, ಹಿಂದೂಗಳು ಮಸೀದಿಯನ್ನು 500 ವರ್ಷಗಳ ಕಾಲ ಅಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟರು. ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಈ ಉದಾತ್ತತೆಯನ್ನು ನಾವು ಅರ್ಥಮಾಡಿಕೊಳ್ಳಬೇಕು.

16ನೇ ಶತಮಾನದ ಕಟ್ಟಡವನ್ನು ಕೆಡವಿ ಆಧುನಿಕ ತಂತ್ರಜ್ಞಾನ ಬಳಸಿ ಬೃಹತ್ ಕಟ್ಟಡ ನಿರ್ಮಿಸಲಾಗಿದೆ. ನ್ಯಾಯ ದೊರಕಿದೆ ಎಂದು ನೀವು ಭಾವಿಸುತ್ತೀರಾ?

ಈ ಕಾಯ್ದೆ ಸಮರ್ಥನೆಯೋ ಇಲ್ಲವೋ ಎಂಬುದಲ್ಲ. ರಚನೆಯನ್ನು ಕೆಡವಲಾಗಿದೆ. ಅದನ್ನು ಕೆಡವದಿದ್ದರೆ, ಎಎಸ್ಐ ರಚನೆಯಿಂದ 300 ಮೀಟರ್ ಒಳಗೆ ಮತ್ತೊಂದು ರಚನೆಯನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ. ವಿವಾದಿತ ಕಟ್ಟಡ ಧ್ವಂಸಗೊಂಡಿದ್ದು, ಪ್ರಸ್ತುತ ಕಾಲದ ಅವಶ್ಯಕತೆಗಳನ್ನು ಪರಿಗಣಿಸಿ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ. ಇದು ನಂಬಿಕೆಯ ವಿಷಯವಾಗಿದೆ. ಈ ವಿಚಾರದಲ್ಲಿ ನಾವು ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು.

ಹಿಂದೂಗಳು ದಯಾನುಭಾವವುಳ್ಳವರು ಎಂದು ಹೇಳುತ್ತೀರಿ. ಅಂತಹ ದೊಡ್ಡ ಹೃದಯದ ಹಿಂದೂಗಳನ್ನು ಈಗ ನಾವು ಎಲ್ಲಿ ನೋಡಬಹುದು?

ಇತರ ಧರ್ಮಗಳಿಗೆ (ಅನುಯಾಯಿಗಳಿಗೆ) ಹೋಲಿಸಿದರೆ, ಹಿಂದೂಗಳು ಈಗಲೂ ಉತ್ತಮರಾಗಿದ್ದಾರೆ. ಅವರು ಅಜಾಗರೂಕತೆಯಿಂದ ಪ್ರತಿಕ್ರಿಯಿಸಬಹುದು, ಭಾವನೆಗಳೊಂದಿಗೆ ಆಟವಾಡಬಹುದು, ಆದರೆ, ನಂತರ ಯೋಚಿಸುತ್ತಾರೆ, ಸಮಸ್ಯೆಯನ್ನು ಸರಿಪಡಿಸುತ್ತಾರೆ.

Advertisement
Share this on...