“ನಮ್ಮ ರಾಜ ಶ್ರೀರಾಮನ ಭವ್ಯ ಮಂದಿರ ಸಿದ್ಧವಾಗಿದೆ, 8 ದಿನವಷ್ಟೇ ಬಾಕಿ, ಬೋಲೋ ಜೈ ರಾಮ್🚩”: ದಾನಿಶ್ ಕನೇರಿಯಾ, ಪಾಕಿಸ್ತಾನ ಕ್ರಿಕೆಟಿಗ

in Uncategorized 59 views

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಹಿಂದೂ ಧರ್ಮೀಯ ಆಗಿರುವ ದಾನಿಶ್ ಕನೇರಿಯಾ, ಭಾನುವಾರ ಕೇಸರಿ ಧ್ವಜ ಹಿಡಿದು ಅಯೋಧ್ಯೆ ರಾಮಮಂದಿರ ನಿರ್ಮಾಣವನ್ನು ಶ್ಲಾಘಿಸಿದ್ದಾರೆ. ‘ನಮ್ಮ ರಾಜ ಶ್ರೀರಾಮನ ಭವ್ಯ ಮಂದಿರ ಸಿದ್ದವಾಗಿ ನಿಂತಿದೆ. ಪ್ರಾಣಪ್ರತಿಷ್ಠಾಪನೆಗೆ ಇನ್ನು ಕೇವಲ 8 ದಿನ ಬಾಕಿ ಇದೆ. ಬೋಲೋಜೈ ಶ್ರೀರಾಂ’ ಎಂದು ಅವರು ಟ್ವಿಟ್ ಮಾಡಿದ್ದಾರೆ.

Advertisement

ರಾಮನ ಪ್ರತಿಷ್ಠಾಪನೆಗೆ ಎಲ್ಲ ಶಂಕರಾಚಾರ್ಯರ ವಿರೋಧವಿಲ್ಲ

ಅಯೋಧ್ಯೆ: ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಎಲ್ಲ ಚತುರಾಮ್ನಾಯ ಶಂಕರಾಚಾರ್ಯ ಪೀಠಗಳು ವಿರೋಧ ವ್ಯಕ್ತಪಡಿಸಿವೆ ಎಂಬುದು ಸರಿಯಲ್ಲ ಎಂದು ವಿಶ್ವ ಹಿಂದೂ ಪರಿಷತ್ ಭಾನುವಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಶೃಂಗೇರಿ ಶ್ರೀಗಳು ಹಾಗೂ ದ್ವಾರಕಾ ಶ್ರೀಗಳು ನೀಡಿದ ಪತ್ರಿಕಾ ಹೇಳಿಕೆ ಲಗತ್ತಿಸಿರುವ ವಿಎಚ್‌ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ‘ಶೃಂಗೇರಿ ಶ್ರೀಗಳು, ದ್ವಾರಕಾ ಶ್ರೀಗಳು ಪ್ರಾಣಪ್ರತಿಷ್ಠಾಪನೆ ಸ್ವಾಗತಿಸಿದ್ದಾರೆ. ಆದರೂ ಎಲ್ಲ ಶಂಕರಾಚಾರ್ಯರ ವಿರೋಧವಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇದು ಸರಿ ಅಲ್ಲ’ ಎಂದಿದ್ದಾರೆ. 4 ಪೀಠಗಳ ಪೈಕಿ 2 ಪೀಠಗಳ (ಪುರಿ, ಜ್ಯೋತಿರ್ಪೀಠ) ಯತಿಗಳು ಪ್ರಾಣ ಪ್ರತಿಷ್ಠಾಪನೆಗೆ ಅಪಸ್ವರ ಎತ್ತಿದ್ದರು.

“ಅಯೋಧ್ಯೆಯಲ್ಲಿ ಮಸ್ಜಿದ್ ನಿರ್ಮಾಣದ ಅಗತ್ಯವೇ ಇಲ್ಲ, ಆ 5 ಎಕರೆ ಜಾಗದಲ್ಲಿ ಕೃಷಿ ಮಾಡಿ ಬದುಕು ಸಾಗಿಸಬೇಕು”: ಇಕ್ಬಾಲ್ ಅನ್ಸಾರಿ, ಬಾಬ್ರಿ ಪರ ದಾವೇದಾರ

ಅಯೋಧ್ಯೆ: ರಾಮ ಜನ್ಮಭೂಮಿ ತೀರ್ಪಿನ ಬಳಿಕ ಮಸೀದಿ ನಿರ್ಮಾಣಕ್ಕೆ ನಿಗದಿಪಡಿಸಿರುವ ಧನ್ನಿಪುರದಲ್ಲಿ ಮಸೀದಿ ನಿರ್ಮಾಣ ಮಾಡುವ ಅಗತ್ಯವೇ ಇಲ್ಲ ಎಂದು ಅಯೋಧ್ಯೆ ವಿವಾದದಲ್ಲಿ ಬಾಬ್ರಿ ಮಸೀದಿ ಪರ ದಾವೆದಾರ ಇಕ್ಸಾಲ್ ಅನ್ಸಾರಿ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣದ ಕುರಿತಾಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ‘ಧನ್ನಿಪುರದಲ್ಲಿ ಮಸೀದಿ ನಿರ್ಮಾಣ ಮಾಡುವ ಅಗತ್ಯವೇ ಇಲ್ಲ. ಈ ಜಾಗದಲ್ಲಿ ಕೃಷಿ ಮಾಡಿ, ಬಂದ ಬೆಳೆಯನ್ನು ಹಿಂದು ಮತ್ತು ಮುಸ್ಲಿಮರು ಸಮನಾಗಿ ಹಂಚಿಕೊಳ್ಳಬೇಕು. ಇದನ್ನೇ ನಾನು ಮುಸ್ಲಿಂ ಬಾಂಧವರಿಗೆ ಹೇಳುತ್ತೇನೆ. ಮಸೀದಿ ನಿರ್ಮಾಣಕ್ಕೆ 5 ಎಕರೆಗಳ ಜಾಗವನ್ನು ನೀಡಲಾಗಿದೆ.

ಇದರ ಅವಶ್ಯಕತೆ ಝಾಫರ್ ಭಾಯ್ ಗೆ (ಭೂಮಿ ನೀಡಿದ ವ್ಯಕ್ತಿ) ಇದೆ. ಇದರಲ್ಲಿ ಕೃಷಿ ಮಾಡಲು ಅವರಿಗೆ ಬಿಡಬೇಕು ಎಂದು ಹೇಳಿದ್ದಾರೆ. ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದರ ವಿರುದ್ಧ ದೂರು ನೀಡಿದವರಲ್ಲಿ ಇಕ್ಬಾಲ್ ಅನ್ಸಾರಿ ಅವರು ಸಹ ಒಬ್ಬರಾಗಿದ್ದರು. ಆದರೆ 2019ರ ನ.2ರಂದು ರಾಮ ಜನ್ಮಭೂಮಿ ತೀರ್ಪು ಬಂದ ಬಳಿಕ, ತೀರ್ಪನ್ನು ಸ್ವಾಗತಿಸಿದ್ದಲ್ಲದೇ, ರಾಮಮಂದಿರ ನಿರ್ಮಾಣಕ್ಕೆ ಸಂತಸ ವ್ಯಕ್ತಪಡಿಸಿದ್ದರು. ಪ್ರಾಣ ಪ್ರತಿಷ್ಠಾಪನೆಗೆ ಹೋಗುವುದಾಗಿಯೂ ಅವರು ಹೇಳಿದ್ದರು.

Advertisement
Share this on...