ಶ್ರೀರಾಮ ನನ್ನ ಕನಸಿನಲ್ಲಿ ಪ್ರತ್ಯಕ್ಷಗೊಂಡಿದ್ದ. ಅವರು ಡ್ರಾಮಾ ಮಾಡುತ್ತಿದ್ದಾರೆ. ಜ.22ಕ್ಕೆ ನಾನು ಆಯೋಧ್ಯೆಗೆ ಹೋಗುವುದಿಲ್ಲ ಎಂದು ಭಗವಾನ್ ಶ್ರೀರಾಮ ನನ್ನ ಬಳಿ ಹೇಳಿದ್ದಾನೆ. ಬಿಹಾರದ ಸಚಿವ, ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ನೀಡಿದ ಈ ಹೇಳಿಕೆ ಭಾರಿ ವೈರಲ್ ಆಗಿದೆ.
ಪಾಟ್ನಾ: ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಕಾಂಗ್ರೆಸ್, ಕಮ್ಯೂನಿಸ್ಟ್ ಸೇರಿದಂತೆ ಹಲವು ವಿಪಕ್ಷಗಳು ಬಹಿಷ್ಕಾರ ಹಾಕಿದೆ. ಆಹ್ವಾನ ತಿರಸ್ಕರಿಸಿ ಇದು ಬಿಜೆಪಿ ರಾಜಕೀಯ ಎಂದಿದೆ. ಆದರೆ ಬಿಹಾರದ ಸಚಿವ, ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಊಹೆಗೂ ನಿಲುಕದ ಹೇಳಿಕೆ ನೀಡಿ ಟ್ರೋಲ್ ಆಗಿದ್ದಾರೆ. ಭಗವಾನ್ ಶ್ರೀರಾಮ ನನ್ನ ಕನಸಿನಲ್ಲಿ ಬಂದಿದ್ದ. ಅವರೆಲ್ಲಾ ನಾಟಕ ಮಾಡುತ್ತಿದ್ದಾರೆ. ಹೀಗಾಗಿ ಜನವರಿ 22ರಂದು ನಾನು ಆಯೋಧ್ಯೆಗೆ ತೆರಳುವುದಿಲ್ಲ ಎಂದು ಭಗವಾನ್ ಶ್ರೀರಾಮ ಕನಸಿನಲ್ಲಿ ಹೇಳಿದ್ದಾನೆ ಎಂದು ತೇಜ್ ಪ್ರತಾಪ್ ಯಾದವ್ ಹೇಳಿರುವ ವಿಡಿಯೋ ಭಾರಿ ವೈರಲ್ ಆಗಿದೆ.
ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ತೇಜ್ ಪ್ರತಾಪ್ ಯಾದವ್, ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಉದ್ಘಾಟನೆಯನ್ನು ಇಂಡಿಯಾ ಒಕ್ಕೂಟದ ಪಕ್ಷಗಳು ತಿರಸ್ಕರಿಸುವ ನಿರ್ದಾರವನ್ನು ಸಮರ್ಥಿಸಿಕೊಂಡು ಮಾತನಾಡಿದ್ದಾರೆ. ಈ ವೇಳೆ ಭಗವಾನ್ ಶ್ರೀರಾಮ ನನ್ನ ಕನಸಿನಲ್ಲಿ ಪ್ರತ್ಯಕ್ಷವಾಗಿ ಕೆಲ ಮಾಹಿತಿ ನೀಡಿದ್ದಾನೆ.
Ram ji has come in my and 4 Shankracharyas dream that he will not come on 22nd January- Tejpratap Yadav pic.twitter.com/N36HRqaAB3
— Megh Updates 🚨™ (@MeghUpdates) January 14, 2024
ಶ್ರೀರಾಮ ಮಂದಿರ ಕುರಿತು ಮಾತನಾಡಿದ ತೇಜ್ ಪ್ರತಾಪ್ ಯಾದವ್, ಬಿಜೆಪಿ ಲೋಕಸಭಾ ಚುನಾವಣೆಗಾಗಿ ರಾಮ ಮಂದಿರ ವಿಚಾರವನ್ನು ರಾಜಕೀಯ ಮಾಡುತ್ತಿದೆ. ಲೋಕಸಭೆ ಬಳಿಕ ರಾಮ ಮಂದಿರ ವಿಚಾರ ಮರೆಯಾಗಲಿದೆ ಎಂದಿದ್ದಾರೆ. ಇದೇ ವೇಳೆ ಜನವರಿ 22ರಂದು ಬಿಜೆಪಿ ಭಾರಿ ಸಂಭ್ರಮದ ದಿನವನ್ನಾಗಿ ಆಚರಿಸಲು ಮುಂದಾಗಿದೆ. ರಾಮ ಕೇವಲ ಜನವರಿ 22ರಂದು ಮಾತ್ರ ಆಯೋಧ್ಯೆಯಲ್ಲಿರುತ್ತಾನಾ? ನನ್ನ ಕನಸಿನಲ್ಲಿ ಬಂದ ಶ್ರೀರಾಮ, ಅವರು ನಾಟಕ ಮಾಡುತ್ತಿದ್ದಾರೆ. ಹೀಗಾಗಿ ನಾನು ಜನವರಿ 22ರಂದು ಆಯೋಧ್ಯೆಗೆ ಹೋಗುವುದಿಲ್ಲ ಎಂದಿದ್ದಾನೆ ಎಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ.
ತೇಜ್ ಪ್ರತಾಪ್ ಯಾದವ್ ನೀಡಿದ ಈ ಹೇಳಿಕೆ ಭಾರಿ ವೈರಲ್ ಆಗಿದೆ. ತೇಜ್ ಪ್ರತಾಪ್ ಯಾದವ್ ಈಗಲೂ ಸರಿ ಇದ್ದಾರಾ ಎಂದು ಹಲವರು ಪ್ರಶ್ನಿಸಿದ್ದಾರೆ. ಬಿಹಾರದಲ್ಲಿ ಶಿಕ್ಷಣದ ಅಗತ್ಯವಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ತೇಜ್ ಪ್ರತಾಪ್ ಯಾದವ್ ವಿಪಕ್ಷಗಳ ಗಂಭೀರ ವಿಚಾರವನ್ನು ಕಾಮಿಡಿ ಮಾಡಿದ್ದಾರೆ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.
ಇನ್ನು ಎಷ್ಟು ವರ್ಷ ಈ ರೀತಿಯ ಕತೆಗಳನ್ನು ಹೇಳಿ ಜನರನ್ನು ಮೋಸಗೊಳಿಸುತ್ತೀರಿ. ಕಾಲ ಮಾತ್ರ ಬದಲಾಗಿಲ್ಲ, ರಾಜಕೀಯವೂ ಬದಲಾಗಿದೆ. ಹಿಂದಿನ ಕಾಲದ ರಾಜಕೀಯದಲ್ಲಿ ಹೇಳಿಕೆ ನೀಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಕಾಲವಲ್ಲ. ಹೇಳಿಕೆ ನೀಡಿ ಟ್ರೋಲ್ ಆಗುವುದಕ್ಕಿಂತ ಸುಮ್ಮನಿದ್ದುಬಿಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.