Ayodhya Ram Mandir: ಪ್ರಭು ಶ್ರೀ ರಾಮನ ಝೇಂಕಾರ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕೇಳಿಬರುತ್ತಿದೆ. ಈ ನಡುವೆ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲೂ ರಾಮನ ಜಪ ಶುರುವಾಗಿದ್ದು, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಕೂಡ ಕೇಸರಿ ಧ್ವಜ ಹಿಡಿದು ಜೈ ಶ್ರೀ ರಾಮ್ ಘೋಷಣೆಯೊಂದಿಗೆ ರಾಮ ಮಂದಿರಕ್ಕೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya) ಇದೇ ಜನವರಿ 22 ರಂದು ಭವ್ಯವಾದ ರಾಮ ಮಂದಿರ (Ram Mandir Inauguration) ಉದ್ಘಾಟನೆಯಾಗಲಿದೆ. ಸಾವಿರಾರು ಗಣ್ಯರ ಸಮ್ಮುಖದಲ್ಲಿ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಲಕ್ಷಾಂತರ ಭಕ್ತರು ಜನವರಿ 22 ರಂದು ಅಯೋಧ್ಯೆ ತಲುಪಲು ಸಿದ್ಧತೆ ನಡೆಸುತ್ತಿದ್ದಾರೆ. ಹೀಗಾಗಿ ಪ್ರಭು ಶ್ರೀ ರಾಮನ ಝೇಂಕಾರ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕೇಳಿಬರುತ್ತಿದೆ. ಈ ನಡುವೆ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲೂ ರಾಮನ ಜಪ ಶುರುವಾಗಿದ್ದು, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ (Danish Kaneria) ಕೂಡ ಕೇಸರಿ ಧ್ವಜ ಹಿಡಿದು ಜೈ ಶ್ರೀ ರಾಮ್ ಘೋಷಣೆಯೊಂದಿಗೆ ರಾಮ ಮಂದಿರಕ್ಕೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ.
ಡ್ಯಾನಿಶ್ ಕನೇರಿಯಾ ಪೋಸ್ಟ್
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಜನವರಿ 14 ರಂದು ರಾಮ ಮಂದಿರದ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ರಾಮನನ್ನು ಕಣ್ತುಂಬಿಕೊಳ್ಳುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ. ಕನೇರಿಯಾ ತಮ್ಮ ಕೈಯಲ್ಲಿ ಕೇಸರಿ ಬಣ್ಣದ ಧ್ವಜ ಹಿಡಿದಿರುವ ಫೋಟೋವನ್ನು ತನ್ನ ಎಕ್ಸ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ‘ನಮ್ಮ ರಾಜ ಶ್ರೀರಾಮನ ಭವ್ಯ ದೇವಾಲಯ ಸಿದ್ಧವಾಗಿದೆ. ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ಕೆ ಕೇವಲ 8 ದಿನಗಳು ಮಾತ್ರ ಬಾಕಿ ಉಳಿದಿದೆ. ಜೈ-ಜೈ ಶ್ರೀ ರಾಮ್’ ಎಂದು ಆ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
हमारे राजा श्रीराम का भव्य मंदिर है तैयार,
अब सिर्फ 8 दिन का है इंतजार!बोलो जय जय श्री राम। pic.twitter.com/poojMBb7U4
— Danish Kaneria (@DanishKaneria61) January 14, 2024
ಹಿಂದುತ್ವದ ಮೇಲೆ ಡ್ಯಾನಿಶ್ ಒಲವು
ಹಲವು ವರ್ಷಗಳ ಕಾಲ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡಿದ್ದ ಡ್ಯಾನಿಶ್ ಕನೇರಿಯಾ ಹಿಂದೂ ಧರ್ಮಕ್ಕೆ ಸೇರಿದವರು. ಅವರು ಹಲವು ಬಾರಿ ಪೂಜೆ ಪುನಸ್ಕಾರದಲ್ಲಿ ತೊಡಗಿರುವುದನ್ನು ನಾವು ನೋಡಿದ್ದೇವೆ. ವಾಸ್ತವವಾಗಿ ಡ್ಯಾನಿಶ್ ಜೈ ಶ್ರೀರಾಮ್ ಎಂದು ಹೇಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅವರು ಹಿಂದುತ್ವ ಪ್ರಚಾರಕ್ಕೆ ಹಲವು ಬಾರಿ ಪ್ರಯತ್ನಿಸಿದ್ದರು.
ಡ್ಯಾನಿಶ್ ವೃತ್ತಿಜೀವನ ಹೀಗಿತ್ತು
ಡ್ಯಾನಿಶ್ ಕನೇರಿಯಾ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಈ ಕ್ರಿಕೆಟಿಗ ಪಾಕಿಸ್ತಾನದ ಪರ 61 ಟೆಸ್ಟ್ ಮತ್ತು 18 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು ಟೆಸ್ಟ್ನಲ್ಲಿ 261 ಮತ್ತು ಏಕದಿನದಲ್ಲಿ 15 ವಿಕೆಟ್ಗಳನ್ನು ಪಡೆದಿದ್ದರು. ಡ್ಯಾನಿಶ್ ಅವರ ಏಕದಿನ ವೃತ್ತಿಜೀವನ ಅಷ್ಟು ಉತ್ತಮವಾಗಿಲ್ಲದಿದ್ದರೂ, ಟೆಸ್ಟ್ನಲ್ಲಿ ಮಾತ್ರ ಪಾಕಿಸ್ತಾನದ ಅತ್ಯುತ್ತಮ ಸ್ಪಿನ್ ಬೌಲರ್ಗಳಲ್ಲಿ ಒಬ್ಬರಾಗಿದ್ದರು. ಈ ಮಾದರಿಯಲ್ಲಿ ಅವರು 15 ಬಾರಿ ಐದು ವಿಕೆಟ್ ಕಬಳಿಸಿದ್ದು, ಎರಡು ಬಾರಿ ಒಂದು ಪಂದ್ಯದಲ್ಲಿ 10 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.