VIDEO| ಬೀದಿಬೀದಿಗಳಲ್ಲಿ ಪಾಕಿಸ್ತಾನಿಗಳನ್ನ ಅಟ್ಟಾಡಿಸಿ ಹೊಡೆದ ಅಫ್ಘನ್ ಪ್ರಜೆಗಳು: ಪಾಕ್-ಅಫ್ಘಾನಿಸ್ತಾನ ಮ್ಯಾಚ್‌ನಲ್ಲಿ ಅಫ್ಫನ್ ಆಟಗಾರನ ಜೊತೆ ಅಸಭ್ಯವಾಗಿ ವರ್ತಿಸಿದ್ದ ಪಾಕ್ ಆಟಗಾರ

in Uncategorized 53,795 views

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಬುಧವಾರ (7 ಸೆಪ್ಟೆಂಬರ್ 2022) ದಂದು ನಡೆದ ಏಷ್ಯಾ ಕಪ್ 2022 ಪಂದ್ಯದಲ್ಲಿ ಎರಡೂ ದೇಶಗಳ ಆಟಗಾರರು ಘರ್ಷಣೆ ನಡೆಸಿದರು. ಇದು ಎಷ್ಟರ ಮಟ್ಟಿಗೆ ತಲುಪಿತೆಂದರೆ ಅಂಪೈರ್‌ಗಳು ಮತ್ತು ಇತರ ಆಟಗಾರರೂ ಜಗಳ ಬಿಡಿಸಲು ಬರಬೇಕಾಯಿತು.

130 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡದ ಇನಿಂಗ್ಸ್‌ನ 19ನೇ ಓವರ್‌ನ 5ನೇ ಎಸೆತದಲ್ಲಿ ಈ ಘರ್ಷಣೆ ಉಂಟಾಯಿತು. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ಆಸಿಫ್ ಅಲಿ ಸಿಕ್ಸರ್ ಬಾರಿಸಿದರು. ಇದರ ನಂತರ, ಫರೀದ್ ಅಹ್ಮದ್ ಮುಂದಿನ ಎಸೆತದಲ್ಲಿ ಆಸಿಫ್ ಅಲಿಯನ್ನು ಔಟ್ ಮಾಡಿದರು. ಪೆವಿಲಿಯನ್ ಗೆ ಮರಳುವ ಮುನ್ನ ಫರೀದ್ ಹಾಗೂ ಆಸಿಫ್ ನಡುವೆ ಮಾರಾಮಾರಿ ನಡೆದಿದೆ.

ಇಬ್ಬರ ನಡುವಿನ ಘರ್ಷಣೆ ಅದ್ಯಾವ ಮಟ್ಟಕ್ಕೆ ಹೋಯಿತೆಂದರೆ ಪಾಕಿಸ್ತಾನದ ಆಸಿಫ್ ಅಫ್ಘಾನಿಸ್ತಾನದ ಫರೀದ್ ಮೇಲೆ ಕೈ ಎತ್ತಿದ್ದು ಕಂಡುಬಂತು. ಇದಾದ ಬಳಿಕ ಪೆವಿಲಿಯನ್‌ಗೆ ಮರಳುತ್ತಿದ್ದಾಗ ಅವರಿಗೆ ತಮ್ಮ ಬ್ಯಾಟ್‌ ತೋರಿಸಿದರು. ಇಂತಹ ಪರಿಸ್ಥಿತಿಯಲ್ಲಿ ಫರೀದ್ ಅಹ್ಮದ್ ಎದೆಗೆ ತಳ್ಳಲು ಆರಂಭಿಸಿದಾಗ ಅಫ್ಘಾನಿಸ್ತಾನದ ಇತರ ಆಟಗಾರರು ಹಾಗು ಅಂಪೈರ್ ಕೂಡ ಮಧ್ಯಪ್ರವೇಶಿಸಬೇಕಾಯಿತು.

ಅಫ್ಘಾನಿಸ್ತಾನ ತಂಡದ ಅಂತಾರಾಷ್ಟ್ರೀಯ ಕ್ರಿಕೆಟಿಗ ಅಫ್ತಾಬ್ ಆಲಂ, ಪಾಕಿಸ್ತಾನಿ ಕ್ರಿಕೆಟಿಗ ಆಸಿಫ್ ಅಲಿ ಅವರನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಐಸಿಸಿಗೆ ಪತ್ರ ಬರೆದಿದ್ದಾರೆ. ಅಫ್ತಾಬ್ ಆಲಮ್ ಪ್ರಕಾರ, ಆಸಿಫ್ ಅಲಿ ಎದುರಾಳಿ ತಂಡದ ಆಟಗಾರನಿಗೆ ಬ್ಯಾಟ್ ಎತ್ತಿ ಹೊಡೆಯುವುದಾಗಿ ಬೆದರಿಕೆ ಹಾಕುವ ಕೃತ್ಯವನ್ನು ಒಂದಲ್ಲ ಎರಡು ಬಾರಿ ಮಾಡಿದ್ದಾನೆ, ಆದ್ದರಿಂದ ಅವನನ್ನು ಆಜೀವ ನಿಷೇಧ ಮಾಡಬೇಕು ಎಂದು ಪತ್ರ ಬರೆದಿದ್ದಾರೆ.

ಆಟಗಾರರ ಕಾಳಗ ನಿಂತರೂ ಪಂದ್ಯ ಮುಗಿದ ಬಳಿಕ ಉಭಯ ದೇಶಗಳ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕಿತ್ತಾಡಿಕೊಂಡರು. ಈ ಘಟನೆಯ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಗೆಲುವಿನ ನಂತರ, ಪಾಕಿಸ್ತಾನದ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕುರ್ಚಿಗಳನ್ನು ಎಸೆದು, ಆಫ್ಘನ್ನರನ್ನು ಗೇಲಿ ಮಾಡುತ್ತಿದ್ದರು.

ಪತ್ರಕರ್ತ ಆದಿತ್ಯ ರಾಜ್ ಕೌಲ್ ಅವರು ವೀಡಿಯೊವನ್ನು ಹಂಚಿಕೊಂಡಿದ್ದು, “ಪಾಕಿಸ್ತಾನಿ ಅಭಿಮಾನಿಗಳು ಶಾರ್ಜಾದಲ್ಲಿ ಆಫ್ಘನ್ ಅಭಿಮಾನಿಗಳ ಮೇಲೆ ವಾಗ್ವಾದದ ನಂತರ ದಾಳಿ ಮಾಡಿದ್ದಾರೆ ಎಂಬ ವರದಿಗಳಿವೆ. ಇದಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನದ ಅಭಿಮಾನಿಗಳು ಪಾಕಿಸ್ತಾನಿ ಅಭಿಮಾನಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಯೂಸರ್ ಒಬ್ಬರು ಈ ಘಟನೆಯನ್ನು ಗೇಲಿ ಮಾಡುತ್ತ “ಪಂದ್ಯದ ನಂತರ ಅಫ್ಘಾನಿಸ್ತಾನ ಗೆದ್ದಿತು” ಎಂದು ಬರೆದಿದ್ದಾರೆ.

ಮತ್ತೊಬ್ಬ ಯೂಸರ್, “ಪಾಕಿಸ್ತಾನದ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕುರ್ಚಿಗಳನ್ನು ಕಿತ್ತುಹಾಕುವ ಮೂಲಕ ಹಾನಿಯನ್ನುಂಟುಮಾಡಿದ್ದಾರೆ” ಎಂದು ಬರೆದಿದ್ದಾರೆ.

ಕ್ರಿಕೆಟ್ ಹಾಗು ಪಾಕ್-ಅಫ್ಘಾನಿಸ್ತಾನ ಅಭಿಮಾನಿಗಳ ನಡುವೆ ಮಾರಾಮಾರಿ

ಅದು 2019 ರ ವರ್ಷ. ಐಸಿಸಿ ವಿಶ್ವಕಪ್ ನಡೆಯುತ್ತಿತ್ತು. ಆ ಸ್ಥಳ ಇಂಗ್ಲೆಂಡಿನ ಲೀಡ್ಸ್ ಆಗಿತ್ತು. ನಂತರ ವಿಮಾನವೊಂದು ಕ್ರೀಡಾಂಗಣದ ಮೇಲೆ ಹಾದುಹೋಯಿತು. ಅದರ ಮೇಲೆ ‘ಜಸ್ಟಿಸ್ ಫಾರ್ ಬಲೂಚಿಸ್ತಾನ್ (Justice for Balochistan)’ ಎಂಬ ಘೋಷಣೆಯನ್ನು ಬರೆಯಲಾಗಿತ್ತು.

ಇದಾದ ಬಳಿಕ ಸ್ಟೇಡಿಯಂನ ಹೊರಗೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಿ ಅಭಿಮಾನಿಗಳ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಉಭಯ ದೇಶಗಳ ಬೆಂಬಲಿಗರ ನಡುವಿನ ಕಾಳಗ ಆಗಲೂ ಹಾಗು ಈಗಲೂ ಆಶ್ಚರ್ಯಚಕಿತವನ್ನಾಗಿ ಮಾಡಿಲ್ಲ. ಅಫ್ಘಾನಿಸ್ತಾನವು ಪಾಕಿಸ್ತಾನದ ಕಾರಣ ಭಯೋತ್ಪಾದನೆಯೊಂದಿಗೆ ಹೋರಾಡುತ್ತಿದೆ. ಈ ಕಾರಣಕ್ಕಾಗಿ, ಎರಡೂ ದೇಶದ ಜನರು ಮುಖಾಮುಖಿಯಾದಾಗ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ.

ಏಷ್ಯಾ ಕಪ್‌ನ ಎರಡನೇ ರೌಂಡದ್‌ನ ಅಂದರೆ ಸೂಪರ್ ಫೋರ್‌ನ ನಾಲ್ಕನೇ ಪಂದ್ಯದಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನವನ್ನು 1 ವಿಕೆಟ್‌ನಿಂದ ಸೋಲಿಸಿತು. ಈ ಸೋಲಿನೊಂದಿಗೆ ಅಫ್ಘಾನಿಸ್ತಾನದ ಜತೆಗೆ ಭಾರತದ ಫೈನಲ್‌ಗೆ ತಲುಪುವ ಆಸೆಯೂ ಅಂತ್ಯಗೊಂಡಿದೆ.

Advertisement
Share this on...