2020 ರಲ್ಲಿ, ಗಾಲ್ವಾನ್ ಎಂಬ ಸ್ಥಳದಲ್ಲಿ ಭಾರತ ಮತ್ತು ಚೀನಾ ನಡುವೆ ಘರ್ಷಣೆ ನಡೆದಿತ್ತು, ಅಲ್ಲಿ ಭಾರತೀಯ ಸೇನೆಯ 20 ಸೈನಿಕರು ಹುತಾತ್ಮರಾಗಿದ್ದರು. ಈ ಯುದ್ಧದಲ್ಲಿ ಭಾರತದ ಸೈನಿಕರೊಂದಿಗೆ ನೂರಾರು ಚೀನಿ ಸೈನಿಕರು ಹತರಾಗಿದ್ದರು.
ನವದೆಹಲಿ: Prakash Raj On Richa Chadha Galwan Comment: ಗಾಲ್ವಾನ್ ಘರ್ಷಣೆಯ ಕುರಿತಾಗಿ ಅಸಂಬದ್ಧ ಹೇಳಿಕೆ ನೀಡಿದ ನತರ ಬಾಲಿವುಡ್ ನಟಿ ರಿಚಾ ಚಡ್ಡಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಟ್ರೋಲ್ ಆಗುತ್ತಿದ್ದಾರೆ. ರಿಚಾ ಚಡ್ಡಾ ಟ್ವೀಟ್ ನ್ನು ಜನ ತೀವ್ರವಾಗಿ ಖಂಡಿಸುತ್ತಿದ್ದಾರೆ. ಈ ಬಗ್ಗೆ ಸ್ಟಾರ್ ಗಳ ಪ್ರತಿಕ್ರಿಯೆಗಳು ನಿರಂತರವಾಗಿ ಬರುತ್ತಲೇ ಇವೆ. ವಿಷಯ ಉಲ್ಬಣಗೊಳ್ಳುತ್ತಿರುವುದನ್ನು ನೋಡಿದ ರಿಚಾ ತಮ್ಮ ಗಾಲ್ವಾನ್ ಬಗೆಗಿನ ಟ್ವೀಟ್‌ಗೆ ಕ್ಷಮೆಯಾಚಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ರಿಚಾ ಬಗ್ಗೆ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದರೆ, ಅನೇಕರು ಅವರ ಪರವಾಗಿ ಮಾತನಾಡುತ್ತಿದ್ದಾರೆ. ಇತ್ತೀಚೆಗಷ್ಟೇ ರಿಚಾ ಟ್ವೀಟ್ ಅನ್ನು ನಟ ಅಕ್ಷಯ್ ಕುಮಾರ್ ತೀವ್ರವಾಗಿ ಖಂಡಿಸಿದ್ದರು. ಆದರೆ ಈಗ ಪ್ರಕಾಶ್ ರಾಜ್ ಅಕ್ಷಯ್ ಕುಮಾರ್ ಟ್ವೀಟ್ ನ ಬಗ್ಗೆ ಪ್ರತಿಕ್ರಿಯೆಯನ್ನು ನೀಡುತ್ತ ಟ್ವೀಟ್ ಮಾಡಿದ್ದಾರೆ.
ಅಕ್ಷಯ್ ಕುಮಾರ್ ವಿರುದ್ಧ ಹರಿಹಾಯ್ದ ಪ್ರಕಾಶ್ ರಾಜ್
ನಟ ಪ್ರಕಾಶ್ ರಾಜ್ ಪ್ರತಿ ವಿಷಯದ ಬಗ್ಗೆ ಮಾತನಾಡುವುದನ್ನು ಹೆಚ್ಚಾಗಿ ಕಾಣಬಹುದು. ಇದೇ ವೇಳೆ ಅಕ್ಷಯ್ ಕುಮಾರ್ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಅವರು, “ಅಕ್ಷಯ್ ಕುಮಾರ್ ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ… ಹೀಗೆ ಹೇಳುವ ಮೂಲಕ ರಿಚಾ ಚಡ್ಡಾ ಅವರು ನಿಮಗಿಂತ ನಮ್ಮ ದೇಶಕ್ಕೆ ಹೆಚ್ಚು ಪ್ರಸ್ತುತರಾಗಿದ್ದಾರೆ ಸರ್” ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ರಿಚಾ ಜೊತೆಗಿರುವ ಬಗ್ಗೆ ಪ್ರಕಾಶ್ ಮತ್ತೊಂದು ಟ್ವೀಟ್ ಮಾಡಿದ್ದಾರೆ. ರಿಚಾ ಅವರ ಗಾಲ್ವಾನ್ ಟ್ವೀಟ್‌ನ್ನ ರೀಟ್ವೀಟ್ ಮಾಡಿದ್ದ ಪ್ರಕಾಶ್ ರಾಜ್- “ನಾವು ನಿಮ್ಮೊಂದಿಗೆ ಇದ್ದೇವೆ ರಿಚಾ ಚಡ್ಡಾ. ನೀವು ಏನು ಹೇಳಲು ಬಯಸಿದ್ದೀರಿ ಎಂಬುದು ನಮಗೆ ತಿಳಿದಿದೆ” ಎಂದಿದ್ದರು.
ರಿಚಾ ಚಡ್ಡಾ ಟ್ವೀಟ್ ಗೆ ಪ್ರತಿಕ್ರಿಯಿಸುತ್ತ ಟ್ವೀಟ್ ಮಾಡಿದ್ದ ಅಕ್ಷಯ್ ಕುಮಾರ್
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಇತ್ತೀಚೆಗೆ, ರಿಚಾ ಚಡ್ಡಾ ಅವರ ವೈರಲ್ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಅಕ್ಷಯ್ ಕುಮಾರ್ ರಿಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಅವರು, ‘ಇದನ್ನು ನೋಡಿ ನನಗೆ ಬೇಸರವಾಗಿದೆ. ನಮ್ಮ ಭಾರತೀಯ ಸೇನೆಗೆ ನಾವು ಕೃತಜ್ಞರಾಗದೇ ಇರಲು ಸಾಧ್ಯವಿಲ್ಲ. ಅವರು ಇರೋದಕ್ಕೇ ಇಂದು ನಾವು ಇರೋದು” ಎಂದಿದ್ದರು. ಇದರೊಂದಿಗೆ ಅಕ್ಷಯ್ ಕೈ ಜೋಡಿಸಿದ ಎಮೋಜಿಯನ್ನು ಸಹ ಹಾಕಿದ್ದರು. ಅಕ್ಷಯ್ ಕುಮಾರ್ ಅವರ ಪ್ರತಿಕ್ರಿಯೆಯ ಬಳಿಕ ಇದೀಗ ಪ್ರಕಾಶ್ ರಾಜ್ ಕೂಡ ಪ್ರತಿಕ್ರಿಯಿಸಿದ್ದಾರೆ.
ಸಂಸದ ಹಾಗು ಭೋಜಪುರಿ ನಟ ರವಿ ಕಿಶನ್ ರವರದ್ದೂ ಬಂತು ಪ್ರತಿಕ್ರಿಯೆ
ಅಕ್ಷಯ್ ಕುಮಾರ್ ಮಾತ್ರವಲ್ಲದೆ, ಭೋಜ್‌ಪುರಿ ಸೂಪರ್‌ಸ್ಟಾರ್ ಹಾಗು ಸಂಸದ ರವಿ ಕಿಶನ್ ಕೂಡ ರಿಚಾ ಚಡ್ಡಾ ಅವರ ಡಿಲೀಟ್ ಮಾಡಿದ ಟ್ವೀಟ್‌ನ ಸ್ಕ್ರೀನ್ ಶಾಟ್‌ನ್ನ ಹಂಚಿಕೊಂಡು, “ನೀವು ದೇಶದಲ್ಲಿ ವಾಸಿಸುವ ಮತ್ತು ಇಲ್ಲಿ ತಿನ್ನುವ ಮೂಲಕ ದೇಶದ ಸೈನ್ಯದ ಹುತಾತ್ಮತೆ ಮತ್ತು ತ್ಯಾಗವನ್ನು ಗೇಲಿ ಮಾಡುತ್ತಿದ್ದೀರಿ. ನಿಮ್ಮಂತಹವರ ಆಲೋಚನೆಗೆ ಏನು ಹೇಳಬೇಕು?” ಎಂದು ಟ್ವೀಟ್ ಮಾಡಿದ್ದಾರೆ.