ರಾಮಮಂದಿರಕ್ಕೆ ಬರದ ನೆಹರೂ-ಗಾಂಧಿ ಕುಟುಂಬದ ಮೂರೂ ತಲೆಮಾರುಗಳು ಅಫ್ಘಾನಿಸ್ತಾನದಲ್ಲಿರೋ ಬಾಬರ್ ಸಮಾಧಿಗೆ ಭೇಟಿ ನೀಡಿದ್ದಾರೆ‌. ಇಲ್ಲಿದೆ ಸಂಪೂರ್ಣ ಮಾಹಿತಿ

in Uncategorized 137 views

ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ (Ram mandir) ರಾಮಲಲ್ಲಾ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನವನ್ನು ನಿರಾಕರಿಸಿದ ಕಾಂಗ್ರೆಸ್ (Congress) ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ಇಂದು (ಗುರುವಾರ) ಬಿಜೆಪಿ ನಾಯಕರು ಅಫ್ಘಾನಿಸ್ತಾನದ ಬಾಬರ್ ಸಮಾಧಿ ಬಳಿ ರಾಹುಲ್ ಗಾಂಧಿ (Rahul Gandhi) ನಿಂತಿರುವ ಹಳೇ ಫೋಟೊ ಶೇರ್ ಮಾಡಿದ್ದು, ಗಾಂಧಿಗಳ ಮೂರು ತಲೆಮಾರಿನವರು ಆ ಸ್ಥಳಕ್ಕೆ ಭೇಟಿ ನೀಡಿದ್ದು ಅವರ ದ್ವೇಷ ಹಿಂದೂಗಳಿಗೆ ಮಾತ್ರ ಮೀಸಲಾಗಿದೆ ಎಂದಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಫೋಟೊ ಟ್ವೀಟ್ ಮಾಡಿದ್ದು,2005 ರಲ್ಲಿ ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಮೂರು ತಲೆಮಾರುಗಳು , ಅಫ್ಘಾನಿಸ್ತಾನದ ಬಾಬರ್ ಸಮಾಧಿಗೆ ಭೇಟಿ ನೀಡಿದರು. ರಾಮ ಲಲ್ಲಾ ಮೇಲೆ ಏಕೆ ಇಷ್ಟೊಂದು ದ್ವೇಷ? ನೀವು ಹಿಂದೂಗಳನ್ನು ಏಕೆ ಇಷ್ಟು ದ್ವೇಷಿಸುತ್ತೀರಿ? ಎಂದು ಬರೆದಿದ್ದಾರೆ.

Advertisement

ಇದಕ್ಕಿಂತ ಮುಂಚೆ ಇನ್ನೊಂದು ಟ್ವೀಟ್​​ನಲ್ಲಿ ಶರ್ಮಾ ಅವರು, ಕಾಂಗ್ರೆಸ್ ತನ್ನ ಪಾಪಗಳನ್ನು ಕಡಿಮೆ ಮಾಡಿಕೊಳ್ಳುವ ಸುವರ್ಣಾವಕಾಶವನ್ನು ಕಳೆದುಕೊಂಡಿದೆ. ಅವರು ಕಾಂಗ್ರೆಸ್ ಆಹ್ವಾನಕ್ಕೆ ಅರ್ಹರಲ್ಲ ಎಂದಿದ್ದಾರೆ.ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ತಮ್ಮ ನಾಯಕತ್ವದ ಆಹ್ವಾನವನ್ನು ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ವಿಎಚ್‌ಪಿ ತನ್ನ ಪಾಪವನ್ನು ಕಡಿಮೆ ಮಾಡಲು ಸುವರ್ಣಾವಕಾಶವನ್ನು ನೀಡಿದೆ. ಆದಾಗ್ಯೂ, ಮೊದಲಿನಿಂದಲೂ ರಾಮಮಂದಿರದ ವಿರುದ್ಧ ತಮ್ಮ ಅಭಿಪ್ರಾಯಗಳಿಗಾಗಿ ಅವರು ಅಂತಹ ಆಹ್ವಾನಕ್ಕೆ ಅರ್ಹರಲ್ಲ ಎಂದಿದ್ದಾರೆ ಶರ್ಮಾ.

ಈ ಆಹ್ವಾನವನ್ನು ಸ್ವೀಕರಿಸುವ ಮೂಲಕ, ಅವರು ಹಿಂದೂ ಸಮಾಜಕ್ಕೆ ಸಾಂಕೇತಿಕವಾಗಿ ಕ್ಷಮೆಯಾಚಿಸಬಹುದಾಗಿತ್ತು ಎಂದಿದ್ದಾರೆ ಶರ್ಮಾ. ಸೋಮನಾಥ ದೇವಾಲಯದ ಪುನರ್ ನಿರ್ಮಾಣದ ವಿಷಯವನ್ನೂ ಪ್ರಸ್ತಾಪಿಸಿದ ಅಸ್ಸಾಂ ಸಿಎಂ, ಆದಾಗ್ಯೂ, ಪಂಡಿತ್ ನೆಹರು ಸೋಮನಾಥ ದೇಗುಲದಲ್ಲಿ ಮಾಡಿದಂತೆ, ಕಾಂಗ್ರೆಸ್ ನಾಯಕತ್ವವು ರಾಮ ಮಂದಿರದ ವಿಷಯದಲ್ಲಿಯೂ ಮಾಡಿದೆ. ಇತಿಹಾಸವು ಅವರನ್ನು ಹಿಂದೂ ವಿರೋಧಿ ಪಕ್ಷವೆಂದು ನಿರ್ಣಯಿಸುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿಯಷ್ಟೇ ಅಲ್ಲ ಬಾಬರ್ ಸಮಾಧಿಗೆ ಇಂದಿರಾ ಗಾಂಧಿಯೂ ಭೇಟಿ ನೀಡಿದ್ದರು

ಇಂದಿರಾ ಗಾಂಧಿಯ ವಿಚಾರಧಾರೆಗಳು ಹೇಗಿದ್ದವು ಅನ್ನೋದನ್ನ ಇಂದಿರಾ ಪ್ರಧಾನಮಂತ್ರಿಯಾಗಿದ್ದಾಗ ವಿದೇಶಾಂಗ ಸಚಿವರಾಗಿದ್ದ ಕುಂವರ್ ನಟವರ್ ಸಿಂಗ್ ಬಹಿರಂಗಪಡಿಸಿದ್ದರು.

ವಾಸ್ತವವಾಗಿ, ಆಗಸ್ಟ್ 1969 ರಲ್ಲಿ, ಇಂದಿರಾ ಗಾಂಧಿ ಅಫ್ಘಾನಿಸ್ತಾನದ ಕಾಬೂಲ್ ಗೆ ಭೇಟಿ ನೀಡಿದಾಗ, ಅವರ ಜೊತೆ ರಾಜೀವ್ ಗಾಂಧಿ ಕೂಡ ಉಪಸ್ಥಿತಿರಿದ್ದರು. ಅಲ್ಲಿ ಅವರು 1947 ರ ನಂತರ ಖಾನ್ ಅಬ್ದುಲ್ ಗಫಾರ್ ಖಾನ್ ಅವರನ್ನು ಭೇಟಿಯಾಗಿದ್ದರು. ಈ ಕಾಬೂಲ್ ಪ್ರವಾಸದಲ್ಲಿ ನಟ್ವರ್ ಸಿಂಗ್ ಕೂಡ ಹಾಜರಿದ್ದರು. ಊಟ ಮುಗಿದಿತ್ತು, ಮಧ್ಯಾಹ್ನದಲ್ಲಿ ಯಾವುದೇ ಕಾರ್ಯಕ್ರಮಗಳು ಇರದಿದ್ದರಿಂದ ಇಂದಿರಾ ಗಾಂಧಿ ತಮ್ಮ ಜೊತೆ ಕಾರಿನಲ್ಲಿ ಒಂದು ಜಾಗಕ್ಕೆ ಹೋಗಲು ನಿರ್ಧರಿಸಿದರು.

ಕಾಬುಲ್ ನಿಂದ ಕೆಲ ಮೈಲುಗಳಷ್ಟು ದೂರದಲ್ಲಿ ಒಂದು ಕಟ್ಟಡ ಕಂಡಿತು, ಆ ಕಟ್ಟಡ ಸಂಪೂರ್ಣವಾಗಿ ಪೊದೆಗಳಿಂದ ಆವೃತವಾಗಿತ್ತು. ಆಗ ಅಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಇದೇನು? ಅಂತ ಕೇಳಿದರು. ಆಗ ಉತ್ತರಿಸಿದ ಸಿಬ್ಬಂದಿಗಳು ಇದು ಬಾಗ್-ಎ-ಬಾಬರ್ ಅಂದರೆ ಬಾಬರ್‌ನ ಮಕಬರಾ ಅಂತ ಹೇಳಿದರು. ಅದು ಬಾಬರ್‌ನ ಸಮಾಧಿ ಅಂತ ಗೊತ್ತಾದ ಕೂಡಲೇ ಶ್ರೀಮತಿ ಇಂದಿರಾ ಗಾಂಧಿ ಬಾಬರ್‌ನ ಸಮಾಧಿಗೆ ಹೋಗಲು ನಿರ್ಧರಿಸದರು. ಆದರೆ ಅವರ ಈ ನಿರ್ಣಯ ಪ್ರೋಟೋಕಾಲ್ ವಿಭಾಗಕ್ಕೆ ತಲೆನೋವಾಗಿ ಪರಿಣಮಿಸಿತು. ಕಾರಣ ಆ ಜಾಗವಿರುವ ವ್ಯಾಪ್ತಿಯಲ್ಲಿ ಇಂದಿರಾ ಗಾಂಧಿಯವರಿಗೆ ಭದ್ರತೆ ಒದಗಿಸಿರಲಿಲ್ಲ.

ಆದರೂ ಇಂದಿರಾ ಗಾಂಧಿಯವರು ಬಾಬರ್‌ನ ಸಮಾಧಿಯ ಬಳಿ ತೆರಳಿದರು ಮತ್ತು ಬಾಬರ್‌ನ ಸಮಾಧಿಯ ಎದುರು ತಲೆ ಬಾಗಿಸಿ ನಿಂತರು. ನಾನು (ನಟವರ್ ಸಿಂಗ್) ಅವರ ಹಿಂದೆಯೇ ನಿಂತಿದ್ದೆ. ತಲೆ ಬಾಗಿಸಿ ನಿಂತ ಇಂದಿರಾ ಗಾಂಧಿಯವರು “ನಾನು ಇತಿಹಾಸವನ್ನ ಈಗ ನೆನಪು ಮಾಡಿಕೊಳ್ಳುತ್ತಿದ್ದೇನೆ. ನೀವು ಹಾಗು ನಮ್ಮ ಪೂರ್ವಜರು ಕಂಡ ಕನಸನ್ನ ನಾನು ಈಡೇರಿಸಿದ್ದೇನೆ” ಎಂದರು. ಆಗ ನಾನು “ನನಗೆ ಎರಡು ಇತಿಹಾಸ ನೆನಪು ಮಾಡಿಕೊಳ್ಳುತ್ತಿದ್ದೇನೆ” ಎಂದೆ. ಆಗ ಮಾತನಾಡಿದ ಇಂದಿರಾ ಗಾಂಧಿ, “ಬಾಬರ್‌ಗೆ ಶೃದ್ಧಾಂಜಲಿ ಸಲ್ಲಿಸಿದ್ದು ನನಗೆ ನಿಜಕ್ಕೂ ಗರ್ವದ ವಿಷಯ” ಎಂದು ಹೇಳಿದ್ದರು ಎಂದು ನಟ್ವರ್ ಸಿಂಗ್ ಈಗ ಬಹಿರಂಗಪಡಿಸಿದ್ದಾರೆ.

ಅಷ್ಟಕ್ಕೂ ಬಾಬರ್‌ಗೂ ನೆಹರೂ ಕುಟುಂಬಕ್ಕೂ ಸಂಬಂಧವಾದರೂ ಏನು? ಬಾಬರ್ ಸಮಾಧಿಯ ಎದುರು ನಿಂತು ಇಂದಿರಾ ಗಾಂಧಿ ನಿಮ್ಮ ಆಸೆಯನ್ನ ಈಡೇರಿಸಿದ್ದೇನೆ ಅಂತ ಹೇಳಿದ್ದಾದರೂ‌ ಯಾಕೆ? ಅಷ್ಟಕ್ಕೂ ಬಾಬರ್‌ನ ಆಸೆ ಏನಾಗಿತ್ತು? ಅದನ್ನ ಇಂದಿರಾ ಗಾಂಧಿ ಈಡೇರಿಸಿದ್ದಾದರೂ ಏನು? 

Advertisement
Share this on...