ನವದೆಹಲಿ: ವಿವಾದಗಳು ಮತ್ತು ಬಾಯ್ಕಾಟ್ ನ ನಡುವೆ, ಇಂದು ದಕ್ಷಿಣದ ಸೂಪರ್ಸ್ಟಾರ್ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅವರ ಚಿತ್ರ LIGER ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಅನನ್ಯಾ ಜೊತೆಗೆ ರಮ್ಯಾ ಕೃಷ್ಣನ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಪೂರಿ ಜಗನ್ನಾಥ್ ನಿರ್ದೇಶಿಸಿದ್ದಾರೆ. ಚಿತ್ರದ ಘೋಷಣೆಯನ್ನು 2019 ರಲ್ಲಿ ಮಾಡಲಾಗಿತ್ತು, ಅದರ ನಂತರ ಇಂದು ಚಿತ್ರವು ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಅಲ್ಲದೇ 2500ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ನಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಸೂಪರ್ಸ್ಟಾರ್ಗಳಾದ ವಿಜಯ್ ದೇವರಕೊಂಡ ಮತ್ತು ಅನನ್ಯಾ ಅವರೊಂದಿಗಿನ ಅವರ ಕೆಮಿಸ್ಟ್ರಿ ಚೆನ್ನಾಗಿ ಇಷ್ಟಪಟ್ಟಿದ್ದರೂ ಅಭಿಮಾನಿಗಳು ಚಿತ್ರವನ್ನು ಹೆಚ್ಚು ಇಷ್ಟಪಡಲಿಲ್ಲ.
ಫ್ಯಾನ್ಸ್ ಗಳಿಗೆ ಇಷ್ಟವಾಗಲಿಲ್ಲ ಚಿತ್ರ
ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ವಿಮರ್ಶೆಗಳು ಬರಲಾರಂಭಿಸಿವೆ. ಅಭಿಮಾನಿಗಳು ಚಿತ್ರದ ಕಥೆಯಲ್ಲಿ ಯಾವುದೇ ಧಮ್ ಇಲ್ಲ ಅಥವಾ ಬದಲಿಗೆ ಪ್ರೇಕ್ಷಕರು ಚಿತ್ರವನ್ನು ನೋಡುವಂತೆ ಒತ್ತಾಯಿಸುವ ಯಾವುದೇ ಹೊಸತನವಿಲ್ಲ ಎಂದು ಹೇಳುತ್ತಾರೆ. ಆದರೂ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವು ಯೂಸರ್ಗಳು ಚಿತ್ರವನ್ನ ಡಿಸಾಸ್ಟರ್ ಎಂದು ಹೇಳುತ್ತಿದ್ದಾರೆ. ಒಬ್ಬ ಯೂಸರ್ ಕಾಮೆಂಟ್ ಮಾಡುತ್ತ ಹೀಗೆ ಬರೆದಿದ್ದಾರೆ – “ತುಂಬಾ ಕಳಪೆಯಾಗಿ ಬರೆದಿರುವ ಮತ್ತು ಕಾರ್ಯಗತಗೊಳಿಸಿದ ಚಲನಚಿತ್ರ, ಇದರಲ್ಲಿ ವಿಶೇಷವಾದ ಏನೂ ಇಲ್ಲ, ಈ ಚಿತ್ರದಲ್ಲಿ ಶ್ಲಾಘಿಸಲು ಯೋಗ್ಯವಾದ ಒಂದೇ ಒಂದು ವಿಷಯವಿಲ್ಲ. ರೇಟಿಂಗ್- 1/5… ಈ ಸಿನಿಮಾ ಡಿಸಾಸ್ಟರ್ ಆಗಿದೆ”. ಈ ಚಿತ್ರವನ್ನು ಅನನ್ಯಾ ಪಾಂಡೆ ಗಿಂತ ಮೊದಲು ಜಾನ್ವಿ ಕಪೂರ್ಗೆ ಮಾಡುವವರಿದ್ದರು. ಆದರೆ ಜಾನ್ವಿ ಈ ಸಿನಿಮಾ ಮಾಡಲು ನಿರಾಕರಿಸಿದ್ದರು.
Nothing like everyone's saying that it's a disaster…. looking like a Bollywood movie dubbed in telugu and no puri's mark… Can't understand whether it's directed by Puri or Karan Johar
Advertisement— All Might ! (@jonsnoww608) August 25, 2022
#Liger (2.75/5🌟)
Below Average Movie.
Negative:- Story, screenplay, #PuriJagannadh Failed In Direction.@ananyapandayy cringe acting.
Postive:- #VijayDeverakonda justice his role and good production value.#LigerHuntBegins #ligerreview pic.twitter.com/scD8NkAOoo— Cinema A to Z 🎬 (@CinemaA2Z) August 25, 2022
Us review not good review #LigerHuntBegins #liger #WaatLagaDenge #VijayDeverakonda #PuriJagannadh #LIGER pic.twitter.com/B6iivhtf4X
— Subash jedla (@SJedla) August 25, 2022
#Liger #ligerreview Quick Review – Very Poorly written and executed. Cringe level performances and scenes. Nothing special in this, not even a single thing to praise in this movie. Rating would be – 1/5. In Simple words, Liger = Disaster. pic.twitter.com/tFUVsjISgS
— Bhuvan’s Journey (@bhuvans_journey) August 25, 2022
A Mass commercial entertainer with proper blend of emotions and heroism, routine story presented in engaging manner with Puri mark elevations.2nd half could have been better.. overall a Hit movie 3/5 #LigerHuntBegins #ligerreview
— Guddu pandit 🥚 (@vkholic18) August 25, 2022
#Liger #ligerreview Disasterous movie bakwas scenes need a Balm #LigerMovie #VijayDeverakonda s Arrogance kills the Movie #BoycottLiger #BoycottLigerMovie Vijay should learn first then come to Bollywood Be Humble nahi to #wattlagadenge ab #wattlaggaye #purijagannath Disaster pic.twitter.com/NVYmlHmotx
— Sunil Kumar Choudhury (@SunilKu46231252) August 25, 2022
#LigerReview : Below Average FILM ⭐⭐/5
Cons:
1) No Newness in the Story😴
2) Worst Screen Play👎
3) Precimax & Climax🥴🥴
4) Worst Song's & BGM 🥲
Pro's:
1) #VijayDevarakonda Acting 🔥
Average 1st Half & Flop 2nd Half#Liger Finally verdict : ROD LAGAA DENGEE…
— Siddarth Naidu (@SiddarthDHF_AA) August 25, 2022
ಅನನ್ಯ ಪಾಂಡೆ ಆ್ಯಕ್ಟಿಂಗ್ ಬಗ್ಗೆ ಅಸಮಾಧಾನ
ಅನನ್ಯಾ ಪಾಂಡೆ ಅವರ ಆ್ಯಕ್ಟಿಂಗ್ ಸ್ಕಿಲ್ಸ್ ಬಗ್ಗೆ ಯೂಸರ್ಗಳು ಪ್ರಶ್ನೆಗಳನ್ನು ಎತ್ತಿದ್ದಾರೆ. ಅನನ್ಯ ಅವರ ನಟನೆ ಅಳುವ ಮಗುವಿನಂತೆ ಇದೆ ಎಂದು ಯೂಸರ್ ಗಳು ಬರೆದಿದ್ದಾರೆ. ಇನ್ನೊಬ್ಬ ಯೂಸರ್, ‘#LigerReview ಒಂದು average ಚಿತ್ರ.. ಕಥೆಯಲ್ಲಿ ಯಾವುದೇ ಹೊಸತನವಿಲ್ಲ’. ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪ್ರತಿಕ್ರಿಯೆಗಳೇ ವ್ಯಕ್ತವಾಗುತ್ತಿವೆ.
“ಯಾವನ್ ತಡೀತಾನೆ, ಬಾಯ್ಕಾಟ್ ಮಾಡ್ತಾನೆ ನೋಡೇ ಬಿಡ್ತೀನಿ, ಇವರಾರಿಗೂ ನಾನು ಹೆದರೋಲ್ಲ, ನೋಡೋರ್ ನೋಡೇ ನೋಡ್ತಾರೆ”: #BoycttLiger ಬಗ್ಗೆ ಮತ್ತೆ ನಾಲಿಗೆ ಹರಿಬಿಟ್ಟಿದ್ದ ವಿಜಯ್ ದೇವರಕೊಂಡ
ನಟ ವಿಜಯ್ ದೇವರಕೊಂಡ ಅವರ ಮುಂಬರುವ ಚಿತ್ರ ‘LIGER’ ಬಗ್ಗೆ ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. #BoycottLigerMovie ಬಿಡುಗಡೆಗೂ ಮುನ್ನವೇ Twitter ನಲ್ಲಿ ಟ್ರೆಂಡಿಂಗ್ ಆಗಿದೆ. ಈ ಕುರಿತು ಮಾತನಾಡಿದ ವಿಜಯ್ ದೇವರಕೊಂಡ ಸುದ್ದಿ ಸಂಸ್ಥೆ ANI ಜೊತೆ ಮಾತನಾಡುತ್ತ, “ನಾವು LIGER ಚಿತ್ರದೊಂದಿಗೆ ಇಂಥಾ ನಾಟಕ ನಡೆದೇ ನಡೆಯುತ್ತೇಂತ ನಿರೀಕ್ಷಿಸಿದ್ದೇವು, ಆದರೆ ನಾವು ಅದನ್ನು ಎದುರಿಸುತ್ತೇವೆ. ರಕ್ತ ಮತ್ತು ಬೆವರು ಸೇರಿ ಸಿನಿಮಾ ಮಾಡಿದ್ದೇವೆ. ನಾನು ಸರಿ ಎಂದು ಭಾವಿಸುತ್ತೇನೆ. ಇಲ್ಲಿ ಭಯಕ್ಕೆ ಅವಕಾಶವಿಲ್ಲ” ಎಂದರು.
ಕಳೆದ ಕೆಲವು ದಿನಗಳಿಂದ ವಿಜಯ್ ಅವರ ಸಣ್ಣ ವಿಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಅನನ್ಯಾ ಪಾಂಡೆ ಜೊತೆ ಕಾಣಿಸಿಕೊಂಡಿದ್ದಾರೆ. ಕ್ಲಿಪ್ನಲ್ಲಿ, ಅವರು ತನ್ನನ್ನು ತಾನು ಕೂಲ್ ಆಗಿ ತೋರಿಸಿಕೊಳ್ಳುತ್ತ, “ನಾವು ಈ ಜನರಿಗೆ (ಬಾಯ್ಕಾಟ್ ಟ್ರೆಂಡ್ ಮಾಡುವವರಿಗೆ) ಸ್ವಲ್ಪ ಹೆಚ್ಚೇ ಮಹತ್ವ ನೀಡುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಮಗೇನಿದೆ? ನಾವು ಚಿತ್ರವನ್ನು ಮಾಡುತ್ತೇವೆ. ನೋಡಬಯಸುವವರು ನೋಡುತ್ತಾರೆ. ನೋಡಲು ಇಷ್ಟವಿಲ್ಲದವರು ಟಿವಿಯಲ್ಲಿ ಅಥವಾ ಫೋನ್ನಲ್ಲಿ ನೋಡುತ್ತಾರೆ. ನಾವೇನ್ ಮಾಡೋಕಾಗತ್ತೆ?” ಎಂದಿದ್ದರು. ಈ ಹೇಳಿಕೆಯನ್ನು ಕೇಳಿದ ನಂತರ ಜನರು – “ಈಗ ನೀವೂ ಬಾಯ್ಕಾಟ್ ಶಕ್ತಿಯನ್ನು ನೋಡುತ್ತೀರಿ” ಎಂದಿದ್ದರು.
ವಿಜಯ್ ದೇವರಕೊಂಡ ಅವರ ಈ ಮಾತನ್ನ ಕೇಳಿದ ನಂತರ, ಜನರು – ಈಗ ನೀವು ಬಾಯ್ಕಾಟ್ನ ಪವರ್ ಏನು ಅನ್ನೋದನ್ನ ನೋಡುತ್ತೀರಿ ಎಂದಿದ್ದಾರೆ. ಯೂಸರ್ ಗಳು ಬಳಕೆದಾರರು ವಿಜಯ್ ದೇವರಕೊಂಡಗೆ, “ಅಣ್ಣ ನೀವು ಒಳ್ಳೆಯ ನಟ ಆದರೆ ನೀವು ಈ ರೀತಿ ಬಾಲಿವುಡ್ಗೆ ಹತ್ತಿರವಾಗುವುದರಿಂದ ನಿಮ್ಮನ್ನು ನೀವು ತೊಂದರೆಗೆ ಸಿಲುಕಿಕೊಳ್ಳುತ್ತಿದ್ದೀರಿ. ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ಅವರನ್ನು ಅನುಸರಿಸಿ” ಎಂದು ಹೇಳಿದ್ದಾರೆ.
@TheDeverakonda ….Brother u r a good actor but u are putting urself in trouble by getting close to bollywood..pls follow Allu Arjun and Mahesh Babu
— Sagar Gajare (@Sagar03737875) August 20, 2022
ಮಲ್ಲಿಕಾರ್ಜುನ ಪತ್ತಾರ್ ಎಂಬುವವರು ಕಮೆಂಟ್ ಮಾಡುತ್ತ, “ನೀನು ಈ ಪ್ರಶ್ನೆಗೆ ಉತ್ತರಿಸೋದ್ರಿಂದ ಬಚಾವ್ ಆಗಬಹುದಿತ್ತು (ಉತ್ತರ ಕೊಡದೇ ಇದ್ರೂ ನಡೀತಿತ್ತು). ಆದರೆ ಈಗ ಸಂಕಷ್ಟಕ್ಕೆ ಸಿಲುಕಿದೆ” ಎಂದಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಚಿತ್ರದ ಬಾಯ್ಕಾಟ್ ಸುದ್ದಿ ಕುರಿತು ಮಾತನಾಡಿದ ವಿಜಯ್, “ನನ್ನ ಬಳಿ ಏನೂ ಇಲ್ಲದಿದ್ದಾಗಲೂ ನಾನು ಹೆದರಲಿಲ್ಲ ಮತ್ತು ಇಂದು ನಾನು ಸ್ವಲ್ಪ ಸಾಧಿಸಿದ್ದೇನೆ, ನಾನು ಯಾರಿಗೂ ಭಯಪಡಬೇಕಾಗಿಲ್ಲ ಎಂದು ನಾನು ಭಾವಿಸುತ್ತೇನೆ. . ತಾಯಿಯ ಆಶೀರ್ವಾದ, ಜನರ ಪ್ರೀತಿ, ದೇವರ ಕೈ, ಒಳಗೆ ಕಿಚ್ಚು ಇದೆ, ಯಾರು ತಡೆಯುತ್ತಾರೋ ನೋಡೇ ಬಿಡುತ್ತೇನೆ” ಎಂದರು. ತಮ್ಮ ಹೋರಾಟದ ದಿನಗಳನ್ನು ನೆನಪಿಸಿಕೊಂಡ ‘ಅರ್ಜುನ್ ರೆಡ್ಡಿ’ ನಟ ವಿಜಯ್, “ಜೀವನ ನನಗೆ ಹೋರಾಟವನ್ನು ಕಲಿಸಿದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
https://twitter.com/SiddarthDHF_AA/status/1561535215134117888?t=vAmLrr3BmYdGCLyCkhHc5Q&s=19
ಅವರು ಮುಂದೆ ಮಾತನಾಡುತ್ತ, “ಮೊದಲು ನಾನು ಗೌರವ ಮತ್ತು ಹಣಕ್ಕಾಗಿ ಹೋರಾಡಬೇಕಾಗಿತ್ತು, ನಂತರ ನಾನು ನನ್ನ ಸ್ಥಾನಕ್ಕಾಗಿ ಮತ್ತು ಉದ್ಯಮದಲ್ಲಿ ಕೆಲಸಕ್ಕಾಗಿ ಹೋರಾಡಬೇಕಾಗಿತ್ತು. ಪ್ರತಿ ಚಿತ್ರವೂ ನನಗೆ ಹೋರಾಟಕ್ಕಿಂತ ಕಡಿಮೆ ಇರಲಿಲ್ಲ. ನಾನು ನನ್ನ ಮೊದಲ ಸಿನಿಮಾ ಮಾಡುವಾಗ ಅದಕ್ಕೆ ನಿರ್ಮಾಪಕರು ಸಿಗುತ್ತಿರಲಿಲ್ಲ. ಆದರೆ ಈಗ ಅವೆಲ್ಲವನ್ನೂ ಮೆಟ್ಟಿ ನಿಂತಿದ್ದೇನೆ” ಎಂದರು.
ಸ್ಪೋರ್ಟ್ಸ್ ಡ್ರಾಮಾ ಆಧಾರಿತ ‘LIGER’ ಚಿತ್ರ ಆಗಸ್ಟ್ 25 ರಂದು ಅಂದರೆ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ವಿಜಯ್ ಹಿಂದಿ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಲಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ‘ಲೈಗರ್’ ಅನ್ನು ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್ ಮತ್ತು ಅಪೂರ್ವ ಮೆಹ್ತಾ ಜಂಟಿಯಾಗಿ ನಿರ್ಮಿಸಿದ್ದಾರೆ.
#BoycottLiger ,respect, they too humans sitting infront of you pic.twitter.com/46jYCGtcUG
— బాబొస్తాడు బాగుచేస్తాడు (@myself4AP) August 19, 2022
ಇದಕ್ಕೂ ಮೊದಲು ಕರಣ್ ಜೋಹರ್ ಅವರ ಪ್ರೊಡಕ್ಷನ್ ಹೆಸರೂ LIGER ನೊಂದಿಗೆ ತಳುಕು ಹಾಕಿಕೊಂಡಿರುವುದೂ LIGER ಬಾಯ್ಕಾಟ್ ಗೆ ಕಾರಣವಾಗಿತ್ತು. ಆದರೆ ದೇವರಕೊಂಡ ಪದೇ ಪದೇ ಹೇಳಿಕೆ ನೀಡುತ್ತಿರುವುದು ಪ್ರೇಕ್ಷಕರನ್ನು ಅವರ ವಿರುದ್ಧ ನಿಲ್ಲುವಂತೆ ಮಾಡಿದೆ. ಈತ ದುರಹಂಕಾರಿ ಎಂದು ಕರೆದಿರುವ ಜನರು ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳುತ್ತಿದ್ದಾರೆ.