ಸೌದಿ ಅರೇಬಿಯಾ ಸರ್ಕಾರದಿಂದ ಮಹತ್ವದ ನಿರ್ಧಾರ: ಮಕ್ಕಾದಲ್ಲಿ ನಡೆಯಲಿದೆ ಯೋಗ ಕಾರ್ಯಕ್ರಮ

in Uncategorized 2,234 views

ಸೌದಿ ಅರೇಬಿಯಾ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮಕ್ಕಾ ಎರಡನೇ ಸೌದಿ ಮುಕ್ತ ಯೋಗ ಚಾಂಪಿಯನ್‌ಶಿಪ್ ಆಯೋಜಿಸಿತ್ತು. ಜನವರಿ 27ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವಾರು ಬಾಲಕಿಯರು ಹಾಗೂ 10ಕ್ಕೂ ಹೆಚ್ಚು ಬಾಲಕರು ಭಾಗವಹಿಸಿದ್ದರು.

ಯೋಗಕ್ಕೆ ಇಸ್ಲಾಂ ರಾಷ್ಟ್ರಗಳಲ್ಲಿ ಹೆಚ್ಚಿನ ಆದ್ಯತೆ ಇಲ್ಲ, ಇದನ್ನು ಮುಸ್ಲಿಂ ಸಮುದಾಯದಲ್ಲಿ ಪಾಲನೆ ಮಾಡುವುದಿಲ್ಲ ಎಂಬ ವಾದಗಳು ಇದೆ. ಆದರೆ ಇದೀಗ ಸೌದಿ ಅರೇಬಿಯಾ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮಕ್ಕಾ ಎರಡನೇ ಸೌದಿ ಮುಕ್ತ ಯೋಗ ಚಾಂಪಿಯನ್‌ಶಿಪ್ ಆಯೋಜಿಸಿತ್ತು. ಜನವರಿ 27ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವಾರು ಬಾಲಕಿಯರು ಹಾಗೂ 10ಕ್ಕೂ ಹೆಚ್ಚು ಬಾಲಕರು ಭಾಗವಹಿಸಿದರು.

ಈ ಯೋಗ ಕಾರ್ಯಕ್ರಮ ಸೌದಿ ಅರೇಬಿಯಾದಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಜೆಡ್ಡಾ, ಮಕ್ಕಾ, ಮದೀನಾ, ತೈಫ್ ಮತ್ತು ಇತರ ನಗರಗಳಿಂದ ಈ ಯೋಗ ಚಾಂಪಿಯನ್‌ಶಿಪ್​​ನಲ್ಲಿ ಭಾಗವಹಿಸುತ್ತಿದ್ದಾರೆ. ಇದು ಪ್ರಾಚೀನ ವೈವಿಧ್ಯಮಯ ವಿಚಾರಗಳಿಗೆ ಸಾಕ್ಷಿಯಾಗುತ್ತಿದೆ. ಈ ಯೋಗ ಚಾಂಪಿಯನ್‌ಶಿಪ್ ಕಾರ್ಯಕ್ರಮ ಸೌದಿ ಅರೇಬಿಯಾ ಒಲಿಂಪಿಕ್ ಸಮಿತಿ ಮತ್ತು ಕ್ರೀಡಾ ಸಚಿವಾಲಯದ ಆಶ್ರಯದಲ್ಲಿ ನಡೆಯಿತು.ಯೋಗವನ್ನು ಕಾನೂನುಬದ್ಧ ಕ್ರೀಡಾ ಚಟುವಟಿಕೆಯಾಗಿ ಅಧಿಕೃತವಾಗಿ ಗುರುತಿಸುವ ಸಂಕೇತವಾಗಿದೆ ಎಂದು ಹೇಳಿದೆ.

ಈ ಕಾರ್ಯಕ್ರಮದಲ್ಲಿ ಸೌದಿ ಯೋಗ ಸಮಿತಿಯ ಅಧ್ಯಕ್ಷರಾದ ನೌಫ್ ಅಲ್-ಮರ್ವಾಯಿ ಅವರು ಉಪಸ್ಥಿತರಿದ್ದರು. ಈ ಯೋಗ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸುವಲ್ಲಿ ಮಹತ್ವವನ್ನು ಪಡೆದಿದೆ ಎಂದು ಹೇಳಿದ್ದಾರೆ. ಭಾರತದ ಕಾನ್ಸುಲ್ ಜನರಲ್ ಮೊಹಮ್ಮದ್ ಶಾಹಿದ್ ಆಲಂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ರೀತಿಯ ಕಾರ್ಯಕ್ರಮಗಳು ಭಾರತ ಮತ್ತು ಸೌದಿ ನಡುವೆ ರಾಜತಾಂತ್ರಿಕ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಸಹಕಾರಿ ಎಂದು ಹೇಳಿದ್ದಾರೆ.

ಯೋಗದಿಂದ ಭಾರತದೊಂದಿಗಿನ ಸಂಬಂಧ ಮಾತ್ರವಲ್ಲ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನ ಕಾಪಾಡುತ್ತದೆ ಎಂದು ಹೇಳಿದ್ದಾರೆ. ಸೌದಿಯನ್ನು ನವೆಂಬರ್ 2017 ರಲ್ಲಿ ಅಧಿಕೃತವಾಗಿ ಯೋಗ ಅನುಮತಿಸಲಾಗಿತ್ತು. ಇದೀಗ ಈ ಯೋಗ ಸೌದಿಯಲ್ಲಿ ಹೆಚ್ಚು ಮಹತ್ವವನ್ನು ಪಡೆದಿದೆ. ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಯೋಗವನ್ನು ಪಾಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Advertisement
Share this on...