Heart Attack Warning Sign: ಹೃದಯಾಘಾತವು ವಿಶ್ವಾದ್ಯಂತ ಪ್ರತಿನಿತ್ಯ ಸಾವರಾರು ಜನರ ಸಾವಿಗೆ ಪ್ರಮುಖ ಕಾರಣವಾಗಿದೆ, ಭಾರತದಲ್ಲಿಯೂ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪುವ ಅನೇಕ ರೋಗಿಗಳನ್ನೂ ಹೊಂದಿದೆ. ನಮ್ಮ ದೇಶದಲ್ಲಿ ಎಣ್ಣೆಯುಕ್ತ ಆಹಾರ (Oily food) ಸೇವನೆಯ ಟ್ರೆಂಡ್ ಹೆಚ್ಚಾಗಿದ್ದು, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (Bad Cholesterol) ಶೇಖರಣೆಯಾಗಲು ಕಾರಣ ಆಗುತ್ತದೆ, ಅಪಧಮನಿಗಳಲ್ಲಿ ಅಡಚಣೆ ಉಂಟಾದಾಗ ಹೃದಯಕ್ಕೆ ರಕ್ತ ತಲುಪಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಇದರಿಂದಾಗಿ ರಕ್ತದೊತ್ತಡ ಹೆಚ್ಚಾಗುತ್ತದೆ ಮತ್ತು ನಂತರ ಹೃದಯಾಘಾತ (Heart Attack) ಮತ್ತು ಟ್ರಿಪಲ್ ನಾಳದ ಕಾಯಿಲೆಯ (triple vessel disease) ಅಪಾಯವು ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇದನ್ನು ತಪ್ಪಿಸುವುದು ಹೇಗೆ? ಬನ್ನಿ ತಿಳಿಯೋಣ.
ಹಾರ್ಟ್ ಅಟ್ಯಾಕ್ ಗೂ ಮುನ್ನ ಕೊಡುತ್ತೆ ಸಿಗ್ನಲ್
ಹೃದಯಾಘಾತವು ಹಠಾತ್ತಾಗಿ ಬರುವುದಿಲ್ಲ, ಆದರೆ ಇದಕ್ಕೂ ಮೊದಲು ನಮ್ಮ ಹೃದಯವು ಅನೇಕ ಸಮಸ್ಯೆಗಳನ್ನು ಎದುರಿಸುತ್ತದೆ, ಪರಿಸ್ಥಿತಿ ಕೈ ಮೀರಿದಾಗ ಅದು ದೊಡ್ಡ ಆಘಾತವಾಗಿ ಬಿಡುತ್ತದೆ. ಹೃದಯಾಘಾತದ ಮೊದಲು, ನಮ್ಮ ದೇಹವು ಅನೇಕ ಸಂಕೇತಗಳನ್ನು ನೀಡುತ್ತದೆ, ಅದನ್ನು ನಿರ್ಲಕ್ಷಿಸಿದರೆ ಅದು ಪ್ರಾಣಕ್ಕೇ ಕುತ್ತು ತರಬಹುದು. ಇತ್ತೀಚೆಗೆ, ಮಹಿಳೆಯರ ಮೇಲೆ ಸಂಶೋಧನೆ ನಡೆಸಲಾಯಿತು, ಅದರ ಪ್ರಕಾರ ನಮ್ಮ ದೇಹವು ಹೃದಯಾಘಾತಕ್ಕೆ 4 ವಾರಗಳ ಮೊದಲೇ ಅಪಾಯದ ಸೂಚನೆಯನ್ನು ನೀಡುತ್ತದೆ.
ಏನನ್ನುತ್ತೆ ರಿಸರ್ಚ್?
ಜರ್ನಲ್ ಸರ್ಕ್ಯುಲೇಷನ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹೃದಯಾಘಾತಕ್ಕೆ ಸುಮಾರು 1 ತಿಂಗಳ ಮೊದಲು ಅದರ ವಾರ್ನಿಂಗ್ ಸೈನ್ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈ ಅಧ್ಯಯನವನ್ನು 500 ಕ್ಕೂ ಹೆಚ್ಚು ಮಹಿಳೆಯರ ಮೇಲೆ ನಡೆಸಲಾಯಿತು ಮತ್ತು ಅವರು ಹೃದಯಾಘಾತದಿಂದ ರಕ್ಷಿಸಲ್ಪಟ್ಟರು. ಸುಮಾರು 95 ರಷ್ಟು ಮಹಿಳೆಯರು ಒಂದು ತಿಂಗಳ ಹಿಂದೆಯೇ ತಮ್ಮ ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು ಎಂದು ಹೇಳಿದ್ದರು. 71 ರಷ್ಟು ಜನರು ದಣಿದಿದ್ದರು, 48 ಪ್ರತಿಶತ ಜನರು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರು. ಇದಲ್ಲದೇ ಎದೆಯಲ್ಲಿ ಒತ್ತಡ, ಎದೆನೋವು ಮುಂತಾದ ಸಮಸ್ಯೆಗಳಿದ್ದವು.
ಹಾರ್ಟ್ ಅಟ್ಯಾಕ್‌ನ ವಾರ್ನಿಂಗ್ ಸೈನ್
ನಿಮ್ಮ ದೇಹದಲ್ಲಿ ಕೆಳಗೆ ತಿಳಿಸಲಾದ ಯಾವುದೇ ಸಮಸ್ಯೆಗಳನ್ನು ನೀವು ಹೊಂದಿದ್ದರೂ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಮತ್ತು ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ, ಏಕೆಂದರೆ ಇದು ಹೃದಯಾಘಾತದ ಸಂಕೇತವಾಗಿರಬಹುದು.
1. ಹೃದಯ ಬಡಿತ ಹೆಚ್ಚಾಗುವುದು
2. ಹಸಿವಾಗದಿರುವುದು
3. ಕೈ ಕಾಲುಗಳಲ್ಲಿ ಜುಮ್ಮೆನ್ನುವುದು
4. ರಾತ್ರಿಯಲ್ಲಿ ಉಸಿರಾಟದ ತೊಂದರೆ
5. ಕೈಯಲ್ಲಿ ದೌರ್ಬಲ್ಯ ಅಥವಾ ಭಾರ
6. ಆಯಾಸ
7. ನಿದ್ರೆಯ ಕೊರತೆ
8. ಬರ್ಪ್
9. ಖಿನ್ನತೆ
10. ಕಣ್ಣುಗಳ ದೌರ್ಬಲ್ಯ
ರಾತ್ರಿ ಮಲಗುವ ಮುನ್ನ ಈ ರೀತಿ ಮಾಡಿದರೆ ಹಾರ್ಟ್ ಅಟ್ಯಾಕ್ ಆಗುವುದಿಲ್ಲ; ಪ್ರತಿಯೊಬ್ಬರು ಈ ವಿಷಯ ತಿಳಿಯಲೆಬೇಕು
ಹೃದಯಾಘಾತಗಳ ಬಗ್ಗೆ ಅತ್ಯಂತ ಮುಖ್ಯ ಮಾಹಿತಿಗಳನ್ನು ಪ್ರತಿಯೊಬ್ಬರೂ ತಿಳಿದಿರಬೇಕೆಂಬುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ಜೀವಮಾನದ ಅವದಿಯಲ್ಲಿ ನಿಮಗೆ ಅಥವಾ ನಿಮ್ಮ ಪ್ರೀತಿಪಾತ್ರರಾದ ಯಾರಿಗಾದರೂ ಹೃದಯಾಘಾತದ ಸಂಭವನೀಯತೆ ಹೆಚ್ಚಿಗಿರುತ್ತದೆ.
ಎರಡನೆಯದಾಗಿ, ನೀವು ಅಥವಾ ನಿಮ್ಮ ಪ್ರೀತಿಪಾತ್ರರು ಹೃದಯಾಘಾತದ ಅಪಾಯದಿಂದ ಪಾರಾಗಲು ನೀವು ಮತ್ತು ವೈದ್ಯರು ಮುಂಚಿನ ಕೆಲವು ಗಂಟೆಗಳಲ್ಲಿ ಏನು ಮಾಡುತ್ತೀರಿ ಎನ್ನುವುದರ ಮೇಲೆ ಅವಲಂಬಿಸಿದೆ. ಹೃದಯಾಘಾತವೆಂದರೇ ಕೊರೋನರಿ ರಕ್ತನಾಳದಲ್ಲಿ ರಕ್ತಪರಿಚಲನೆಗೆ ತಡೆಯುಂಟಾಗಿ ಹೃದಯದ ಸ್ನಾಯು ಸಾವಪ್ಪುವುದೇ ಹೃದಯಾಘಾತ.
ಕೋರೋನರಿ ರಕ್ತನಾಳದಲ್ಲಿ ಹರಳು ಶೇಖರಣೆಯಾಗಿ ರಕ್ತವು ಹೆಪ್ಪುಗಟ್ಟಿ (ಬ್ಲಡ್‌ಕ್ಲಾಟ್) ರಕ್ತದ ಸರಾಗ ಹರಿವು ನಿಲ್ಲುತ್ತದೆ. ಹೃದಯದ ಸ್ನಾಯುವಿಗೆ ರಕ್ತ ಸರಬರಾಜು ಆಗದಿದ್ದಾಗ ಅದಕ್ಕೆ ಆಮ್ಲಜನಕದ ಕೊರತೆ ಉಂಟಾಗುತ್ತದೆ. ರಕ್ತಚಲನೆ ಕೆಲವು ಗಂಟೆಗಳಲ್ಲಿ ಮರುಸ್ಥಾಪನೆ ಆಗದಿದ್ದರೆ ಹೃದಯದ ಸ್ನಾಯು ಸಾವನ್ನಪ್ಪುತ್ತದೆ.
ಹೃದಯಾಘಾತ ಸಂಭವಿಸಿದ ಮೊದಲ 3-6 ಗಂಟೆಗಳು ಅತೀ ಗಂಭೀರ. ಮೊದಲಿಗೆ ತೀವ್ರ ಹೃದಯಾಘಾತ ಸಂಭವಿಸುವ ಕೆಲವು ಗಂಟೆಗಳ ಮುಂಚೆ ಹೃದಯಬಡಿತದ ಏರುಪೇರು ಕಾಣಿಸಿಕೊಳ್ಳುತ್ತದೆ. ಹೃದಯಬಡಿತದ ಏರುಪೇರು ರೋಗಿಯು ವೈದ್ಯಕೀಯ ಆರೈಕೆಯಲ್ಲಿದ್ದಾಗ ಸಂಭವಿಸಿದರೆ ಸಕಾಲದಲ್ಲಿ ಅನಾಹುತ ತಪ್ಪಿಸಬಹುದು.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಹೆಚ್ಚಾಗಿ ಈ ಹೃದಯಾಘಾತವು ರಾತ್ರಿಯ ವೇಳೆಯಲ್ಲಿ ಸಂಭವಿಸುತ್ತದೆ. ಆದರೆ ಸಂಶೋಧನೆಯೊಂದರ ಪ್ರಕಾರ ರಾತ್ರಿ ಮಲಗುವಾಗ ಹೀಗೆ ಮಾಡಿದರೆ ಹೃದಯದ ಆರೋಗ್ಯ ಉತ್ತಮವಾಗುವುದಲ್ಲದೇ ಹೃದಯಾಘಾತ ಸಂಭವಿಸುವುದಿಲ್ಲ.
ಮಲಗುವುದಕ್ಕೂ ಮುನ್ನ ಹಿತವಾದ, ಧ್ಯಾನ, ಯೋಗ ಸಂಗೀತವನ್ನು ಆಲಿಸುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಭಾರತೀಯ ಸಂಶೋಧಕರು ಹೇಳಿದ್ದಾರೆ. ಈ ರೀತಿಯ ಮ್ಯೂಸಿಕ್ ಥೆರೆಪಿಯನ್ನು ಆಸ್ಪತ್ರೆಗಳಲ್ಲಿ ಪ್ರಯೋಗಿಸಲಾಗುತ್ತಿದ್ದು, ಯೋಗ ಸಂಗೀತವನ್ನು ಮಲಗುವುದಕ್ಕೂ ಮುನ್ನ ಆಲಿಸುವುದು ಹೃದಯ ಬಡಿತದ ವ್ಯತ್ಯಾಸಗಳ ಮೇಲೆ ಪರಿಣಾಮ ಬೀರಿದೆ ಎಂದು ವೈದ್ಯರು ಹೇಳಿದ್ದಾರೆ.
ಜರ್ಮನಿಯಲ್ಲಿರುವ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಆರೋಗ್ಯಕರವಾಗಿದ್ದ ಸುಮಾರು 149 ಜನರನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು. 149 ಜನರ ಪೈಕಿ ಕೆಲವರು ಮಲಗುವುದಕ್ಕೂ ಮುನ್ನ ಯೋಗ ಸಂಗೀತವನ್ನು ಆಲಿಸಿದರೆ, ಇನ್ನು ಕೆಲವರು ಪಾಪ್ ಮ್ಯೂಸಿಕ್ ಗೆ ಕಿವಿಕೊಟ್ಟಿದ್ದರು, ಮತ್ತೆ ಕೆಲವರು ಯಾವುದೇ ಸಂಗೀತವನ್ನೂ ಕೇಳದೇ ಹಾಗೆಯೇ ನಿದ್ದೆ ಮಾಡಿದ್ದರು. ಯೋಗ ಸಂಗೀತ ಕೇಳುವ ವೇಳೆಯಲ್ಲಿ ಹೃದಯ ಬಡಿತ ವ್ಯತ್ಯಾಸ ಹೆಚ್ಚಾಗಿದ್ದು, ಪಾಪ್ ಮ್ಯೂಸಿಕ್ ನ್ನು ಕೇಳುವ ವೇಳೆಯಲ್ಲಿ ಇಳಿಕೆಯಾಗಿತ್ತು, ನಿಶಬ್ದವಾಗಿದ್ದಾಗ ಯಾವುದೇ ಬದಲಾವಣೆಗಳೂ ಇರಲಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.