‘ಭಾರತ ಸಿಂಧೂರಿ’ಯಾಗಿ ರೋಹಿಣಿ ಸಿಂಧೂರಿ.. ಖಡಕ್ ಅಧಿಕಾರಿಯ ಜೀವನಚಿತ್ರಣ ಇದೀಗ ಬೆಳ್ಳಿಪರದೆಯ ಮೇಲೆ

in FILM NEWS/Kannada News/News 591 views

ಬೆಂಗಳೂರು:

Advertisement
ಆಪೀಸರ್ಸ್ ವಾರ್ ವಿಚಾರದಿಂದಾಗಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ನಿಜ. ಆದರೆ ಅವರು ನೇರ ಹಾಗೂ ನಿಷ್ಟೂರ ನಡೆಯಿಂದಾಗಿ ಸಾಮಾಜಿಕ ವಲಯದಲ್ಲಿ ಹೀರೋಯಿನ್ ಎಂಬುದೂ ಅಷ್ಟೇ ಸತ್ಯ.

ವಕೀಲರ ಮಗಳು ಐಎಎಸ್ ಬರೆದು, ಅಧಿಕಾರಿಯಾಗಿ, ಸಕ್ಕರೆ ಜಿಲ್ಲೆ ಮಂಡ್ಯದ ಚಿತ್ರಣವನ್ನೇ ಬದಲಾಯಿಸಿದ ಪ್ರಬುದ್ಧ ವನಿತೆ ಎಂಬುದು ಇದೀಗ ಜನರಿಂದ ಜನರಿಗೆ ಹರಿದಾಡುತ್ತಿರುವ ಸಂಗತಿ. ಈ ಸಂಗತಿಗಳೇ ಇದೀಗ ಸಿನಿಮಾವಾಗುವ ಪ್ರಕ್ರಿಯೆಯಲ್ಲಿದೆ.

ಐಎಎಸ್ ಅಧಿಕಾರಿ ಜೀವನಗಾಥೆ ಆದರಿಸಿ ಸದ್ಯವೇ ಸಿನಿಮಾವೊಂದು ಸೆಟ್ಟೇರಲಿದೆ. ಅದಕ್ಕಾಗಿ ಪುರ್ವ ತಯಾರಿ ನಡೆಸಿರುವ ಮಂಡ್ಯದ ಸಾಹಿತಿ ಕೃಷ್ಣಸಂದ್ರ ಅವರು ಟೈಟಲ್ ರಿಜಿಸ್ಟರ್ ಮಾಡಿದ್ದಾರೆ. ಶ್ರೀ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್ ಅಡಿಯಲ್ಲಿ ಫಿಲಂ ಚೇಂಬರ್‌ನಲ್ಲಿ ಅವರು ‘ಭಾರತ ಸಿಂಧೂರಿ’ ಎಂಬ ಹೆಸರಿನ ಸಿನಿಮಾಗಾಗಿ ಟೈಟಲ್ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಅಂದ ಹಾಗೆ ಈ ಚಿತ್ರದಲ್ಲಿ ರೋಹಿಣಿ ಸಿಂಧೂರಿ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಅವರು ನಟಿಸಲಿದ್ದಾರಂತೆ.

ಆಡಳಿತಾತ್ಮಕ ವಿಚಾರದಲ್ಲಿ ರೋಹಿಣಿ ಸಿಂಧೂರಿಯವರು ರಾಜಕಾರಣಿಗಳ ಪಾಲಿಗೆ ವಿಲನ್ ರೀತಿ ಗೋಚರಿಸಿದರೆ ಸಾಮಾಜಿಕ ವಲಯದಲ್ಲಿ ಅವರು ಹೀರೋಯಿನ್ ಆಗಿ ಕಂಡುಬರುತ್ತಿದ್ದಾರೆ. ಹಾಗಾಗಿಯೇ ರೋಹಿಣಿ ನಡೆಯ ಸನ್ನಿವೇಶಗಳನ್ನೇ ಕಥೆಯಾಗಿಸಿ ‘ಭಾರತ ಸಿಂಧೂರಿ’ ಸಿನಿಮಾ ಮಾಡಲು ಕೃಷ್ಣ ಅವರು ಮುಂದಾಗಿದ್ದಾರಂತೆ.

ಹೌದು ಪ್ರಸ್ತುತ ಕರ್ನಾಟಕದಲ್ಲಿ ಚರ್ಚೆಯಲ್ಲಿರುವ ಐಎಎಸ್ ಅಧಿಕಾರಿ ಹಾಗೂ ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜೀವನ ಕಥೆ ಸಿನಿಮಾವಾಗಲಿದೆ.

ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಸಾಹಿತಿ ಕೃಷ್ಣ ಸ್ವರ್ಣಸಂದ್ರ ಅವರು ರೋಹಿಣಿ ಸಿಂಧೂರಿ ಅವರ ಬಯೋಪಿಕ್‍ನ್ನು ಸಿನಿಮಾ ಮಾಡಲು ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್ ಅಡಿ 2020 ಜೂನ್ 15 ರಂದು ಭಾರತ ಸಿಂಧೂರಿ ಎಂಬ ಟೈಟಲ್‍ನ್ನು ರಿಜಿಸ್ಟರ್ ಮಾಡಿಸಿದ್ದಾರೆ.

ಈ ಸಿನಿಮಾದಲ್ಲಿ ರೋಹಿಣಿ ಸಿಂಧೂರಿ ಅವರು ಆರಂಭದಲ್ಲಿ ಮಂಡ್ಯದ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಮಾಡಿದ್ದ ಕೆಲಸ ಹಾಗೂ ಸಾಧನೆ ಮತ್ತು ಹಾಸನ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭಗಳು ಅಲ್ಲದೇ, ಸದ್ಯ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ನಡೆದ ಬೆಳವಣಿಗೆಗಳನ್ನು ಈ ಚಿತ್ರ ಕಥೆಯಲ್ಲಿ ಹೆಣೆಯಲಾಗಿದೆ. ಅಲ್ಲದೇ ಅವರು ಬೆಳೆದು ಬಂದ ಹಾದಿಯನ್ನು ಸಹ ಚಿತ್ರಕಥೆಯಲ್ಲಿ ಸೇರಿಸಲಾಗಿದೆ.

2020ರಲ್ಲೇ ಈ ಸಿನಿಮಾದ ಹೆಸರನ್ನು ರಿಜಿಸ್ಟರ್ ಮಾಡಿಸಲಾಗಿದ್ದು ಕಥೆ, ಚಿತ್ರಕಥೆ, ಸಾಹಿತ್ಯ, ರಚನೆ, ನಿರ್ದೇಶನದ ಜವಾಬ್ದಾರಿಯನ್ನು ಕೃಷ್ಣ ಸ್ವರ್ಣಸಂದ್ರ ಅವರೇ ಹೊತ್ತಿದ್ದಾರೆ. ಇನ್ನೂ ನಟಿಯಾಗಿ ರಂಗಭೂಮಿ ಕಲಾವಿದೆ ಹಾಗೂ ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಅವರಿಗೆ ನೀಡಲಾಗಿದೆ. ಇನ್ನೂ ಎರಡು ಮೂರು ತಿಂಗಳಿನಲ್ಲಿ ಈ ಚಿತ್ರ ಸೆಟ್ಟರಲಿದೆ ಎಂದು ಕೃಷ್ಣ ಸ್ವರ್ಣಸಂದ್ರರವರು ಹೇಳಿದ್ದಾರೆ.

Advertisement
Share this on...