ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದಗಳನ್ನ ಅರ್ಪಿಸಿದ ಬಳಿಕ ಪ್ರಧಾನಿ ಮೋದಿ ಮಾತನಾಡಿರು. ಈ ಸಂದರ್ಭದಲ್ಲಿ, ರಾಷ್ಟ್ರಪತಿಗಳ ಭಾಷಣವು ಭಾರತದ 130 ಕೋಟಿ ನಾಗರಿಕರ ಸಂಕಲ್ಪದ ಶಕ್ತಿಯ ಪರಿಚಯವಾಗಿದೆ ಎಂದು ಅವರು ಹೇಳಿದರು. ಕೊರೋನಾದಂತಹ ಇಂತಹ ಪರಿಸ್ಥಿತಿಯಲ್ಲಿ, ದೇಶವು ತನ್ನ ಮಾರ್ಗವನ್ನು ಹೇಗೆ ಆರಿಸಿಕೊಳ್ಳುತ್ತದೆ, ತನ್ನದೇ ಆದ ಹಾದಿಯನ್ನು ನಿರ್ಧರಿಸುತ್ತದೆ ಮತ್ತು ಅದು ಹೇಗೆ ಮುಂದುವರಿಯುತ್ತದೆ ಎಂಬುದನ್ನು ರಾಷ್ಟ್ರಪತಿಗಳು ಈ ಎಲ್ಲ ವಿಷಯಗಳ ಬಗ್ಗೆ ಹೇಳಿದ್ದಾರೆ. ಅವರ ಪ್ರತಿಯೊಂದು ಮಾತು ದೇಶದ ಜನರಲ್ಲಿ ಹೊಸ ನಂಬಿಕೆಯನ್ನು ಹುಟ್ಟುಹಾಕಲಿದೆ. ನಾವು ಅವರಿಗೆ ಧನ್ಯವಾದಗಳನ್ನ ಅರ್ಪಿಸುತ್ತೇವೆ. ಈ ಸಮಯದಲ್ಲಿ ರೈತರ ಬಗ್ಗೆಯೂ ಪ್ರಧಾನಿ ಮೋದಿ ಪ್ರಸ್ತಾಪಿಸಿದರು ಮತ್ತು ನಾವು ನಿರಂತರ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಹೇಳಿದರು.
ಕೃಷಿ ಸುಧಾರಣೆಗಾಗಿ ತರಲಾಗಿದೆ ನೂತನ ಕಾನೂನುಗಳು
ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಪ್ರಧಾನಿ ಮೋದಿ, ಮೂರು ಕೃಷಿ ಕಾನೂನುಗಳನ್ನು ತರಲಾಯಿತು, ಹಲವು ವರ್ಷಗಳಿಂದ ನಮ್ಮ ಕೃಷಿ ಕ್ಷೇತ್ರವು ಸವಾಲುಗಳನ್ನು ಎದುರಿಸುತ್ತಿದೆ, ನಾವು ಅವರಿಗಾಗಿ ಸುಧಾರಣಾ ನೀತಿಗಳನ್ನ ತರಬೇಕು. ನಾವು ಇದಕ್ಕಾಗಿ ಈಗಿನಿಂದಲೇ ಕೆಲಸ ಮಾಡಬೇಕು, ಇದಕ್ಕಾಗಿ ನಾವು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಕಾಂಗ್ರೆಸ್ ಸಹೋದ್ಯೋಗಿಗಳು ಕಾನೂನಿನ ಬಣ್ಣವನ್ನು ಕಪ್ಪು ಅಥವಾ ಬಿಳಿ ಎಂದು ಚರ್ಚಿಸುತ್ತಿದ್ದರು ಎಂದು ನಾನು ಗಮನಿಸುತ್ತಿದ್ದೆ. ಆದರೆ ಈ ಕಾನೂನುಗಳ ಕಂಟೆಂಟ್‌ನ ಮೇಲೆ ಚರ್ಚಿಸಬೇಕಿತ್ತು, ಅದರ ಉದ್ದೇಶವನ್ನು ಚರ್ಚಿಸುತ್ತಿದ್ದರೆ ಒಳ್ಳೆಯದಾಗಿರುತ್ತಿತ್ತು. ಇದರಿಂದ ದೇಶದ ರೈತರಿಗೆ ಸರಿಯಾದ ವಿಷಯ ತಲುಪಬಹುದು.
ಸರ್ಕಾರ ನಿರಂತರವಾಗಿ ಮಾತುಕತೆ ನಡೆಸುತ್ತಿದೆ, ಪಾಯಿಂಟ್ ಟು ಪಾಯಿಂಟ್ ಸಮಸ್ಯೆಗಳನ್ನ ರೈತ ಮುಖಂಡರು ತಿಳಿಸಲಿ
ದೆಹಲಿಯ ಹೊರವಲಯದಲ್ಲಿ ಆಂದೋಲನ ನಡೆಸುತ್ತಿರುವರನ್ನ ನಾವು ಗೌರವಿಸುತ್ತೇವೆ. ತಪ್ಪು ಗ್ರಹಿಕೆಗಳಿಗೆ ರೈತರು ಬಲಿಯಾಗಿದ್ದಾರೆ. ಸರ್ಕಾರದ ವರಿಷ್ಟ ಸಚಿವರು ಅವರ ಜೊತೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದಾರೆ. ಪಂಜಾಬ್ ನಲ್ಲಿ ಆಂದೋಲನ ನಡೆಯುತ್ತಿದ್ದ ಸಂದರ್ಭದಲ್ಲಿ ಆಗಲೇ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡಲಾಗುತ್ತಿತ್ತು. ಕೃಷಿ ಕಾನೂನುಗಳಲ್ಲಿ ಪಾಯಿಂಟ್ ಟು ಪಾಯಿಂಟ್ ಸಮಸ್ಯೆ ಏನಿವೆ ಅನ್ನೋದನ್ನ ತಿಳಿಸಲಿ, ತಪ್ಪಿದ್ದಲ್ಲಿ ಅದರಲ್ಲಿ ಬದಲಾವಣೆ ಅವಶ್ಯವಾಗಿ ತರುತ್ತೇವೆ. ನಾವು ಜಾರಿಗೆ ತಂದ ಕಾನೂನುಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದು ತಪ್ಪಿದ್ದರೆ ಅದನ್ನ ನಾವು ಬದಲಿಸಲು ಸಿದ್ಧರಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ಮೋದಿ ಅವರು ರೈತರ ಬಗ್ಗೆ ಮಾತನಾಡಿ, ಕಾನೂನು ಜಾರಿಗೆ ಬಂದ ನಂತರ ದೇಶದಲ್ಲಿ ಯಾವುದೇ ಮಾರುಕಟ್ಟೆ ಮುಚ್ಚಿಲ್ಲ, ಅಥವಾ ಎಂಎಸ್‌ಪಿ ಬಂದ್ ಆಗಿಲ್ಲ. ಇದೇ ಸತ್ಯ. ಅಷ್ಟೇ ಅಲ್ಲ, ಎಂಎಸ್‌ಪಿ ಖರೀದಿಯೂ ಹೆಚ್ಚಾಗಿದೆ ಮತ್ತು ಕಾನೂನು ಜಾರಿಗೆ ಬಂದ ನಂತರವೂ ಅದು ಹೆಚ್ಚಾಗಿದೆ ಎಂದರು.
ರೈತರ ವಿಚಾರವಾಗಿ ಸಂಸತ್ತಿನಲ್ಲಿ ಕೋಲಾಹಲ ಉಂಟಾದಾಗ, ಇದು ಉದ್ದೇಶಪೂರ್ವಕ ಕಾರ್ಯತಂತ್ರದ ಭಾಗವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಕಾರ್ಯತಂತ್ರದ ಮೂಲಕ ಸುಳ್ಳನ್ನ ಹರಡಲಾಗುತ್ತಿದ್ದು ಇದು ದೇಶದ ಜನರೆದುರು ಬಯಲಾಗಿದೆ. ಸತ್ಯವು ಜನರಿಗೆ ತಲುಪಿದರೆ, ಇವರ ಅಸ್ತಿತ್ವವೂ ಉಳಿಯಲು ಕಷ್ಟವಾಗುತ್ತದೆ.
ಪ್ರಧಾನಿ ಮೋದಿ ಮುಂದೆ ಮಾತನಾಡುತ್ತ, “ನಾನು ರೈತರಿಗೆ ಕೇಳಲು ಬಯಸುತ್ತೇನೆ, ಈ ಕೃಷಿ ಕಾನೂನುಗಳು ಬಂದ ಬಳಿಕ ನಿಮ್ಮಿಂದ ಏನಾದರೂ ಕಸಿದುಕೊಳ್ಳಲಾಯಿತಾ? ಇದರ ಉತ್ತರ ಮಾತ್ರ ಇದುವರೆಗೂ ಯಾರೂ ನೀಡಿಲ್ಲ. ಎಲ್ಲವೂ ಮೊದಲಿನಂತೆಯೇ ಇದೆ. ಹಾಗಾದರೆ ಇದರ ವಿರೋಧವಾಗುತ್ತಿರೋದಾದರೂ ಯಾಕೆ? ಎಲ್ಲಿ ಲಾಭವಿದೆಯೋ ಅಲ್ಲಿಗೆ ರೈತ ಹೋಗಬಹುದು. ಹಾಗಿದ್ದಮೇಲೆ ಇದರಲ್ಲಿ ವಿರೋಧದ ಮಾತೆಲ್ಲಿಂದ ಬರುತ್ತೆ?”
ಎಂದರು
ಈ ಆಂದೋಲನದ ಒಂದು ಹೊಸ ರೂಪವಿದೆ, ಈ ಆಂದೋನಲಕಾರಿಗಳ ಸ್ವರೂಪವೂ ಅಂದೋಲಜೀವಿಗಳ ರೀತಿಯಲ್ಲೇ ಇದೆ. ಯಾವುದು ಸಂಭವಿಸುವುದಿಲ್ಲವೋ ಅದೇ ಆಗುತ್ತೆ ಅಂತ ಭಯ ಬಿತ್ತಲಾಗುತ್ತಿದೆ. ಹಳೆಯ ಮಂಡಿಗಳಿಗೆ ಯಾವುದೇ ನಿರ್ಬಂಧವಿಲ್ಲ, ಆದರೆ ಅವುಗಳನ್ನು ಸುಧಾರಿಸಲು ಬಜೆಟ್ ಮಾಡಲಾಗಿದೆ. ಎಲ್ಲರ ಹಿತದೃಷ್ಟಿಯಿಂದ ನಮ್ಮ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ಮತ್ತು ಕೆಲವು ಪಕ್ಷಗಳು ಭಾರೀ ಜೋರಾಗಿ ಕೂಗಾಡಿದವು ಆದರೆ ಅವರು ಹೇಳಬೇಕಾದ ವಿಷಯಗಳನ್ನು ಅವರು ಮೊದಲು ಅಧ್ಯಯನ ಮಾಡಬೇಕಾಗಿತ್ತು. ನನಗೆ ಆಶ್ಚರ್ಯವಾಯಿತು, ಈ ಸದನದಲ್ಲಿ ಮೊದಲ ಬಾರಿಗೆ ವಿಪಕ್ಷಗಳು ನಾವು ಈ ಕಾನೂನನ್ನೇ ಕೇಳಿರಲಿಲ್ಲ ನೀವ್ಯಾಕೆ ಜಾರಿಗೆ ತಂದಿರಿ? ಅಂತ ಕೇಳುತ್ತವೆ. ಇದಕ್ಕೆ ಉತ್ತರವೂ ಇದೆ. ಇದೊಂದು ವ್ಯವಸ್ಥೆ, ಇದು ಅನಿವಾರ್ಯ ಅಲ್ಲ. ಯಾರಿಗೆ ಇದು ಬೇಕೋ ಅವರು ತಗೊಳ್ಳಿ ಯಾರಿಗೆ ಬೇಡವೋ ಅವರು ಇದನ್ನ ಸ್ವೀಕರಿಸಬೇಡಿ (ಇದರರ್ಥ ಈ ಕಾನೂನುಗಳನ್ನ ಯಾವ ರಾಜ್ಯಗಳ ಮೇಲೂ ಬಲವಂತವಾಗಿ ಹೇರಿಲ್ಲ, ಯಾವ ರಾಜ್ಯಗಳಿಗೆ ಈ ಕಾನೂನುಗಳು ಇಷ್ಟವಿದೆಯೋ ಪಾಲಿಸಲಿ ಇಲ್ಲದಿದ್ದರೆ ಜಾರಿಗೆ ತರೋದು ಬಿಡೋದು ಆಯಾ ರಾಜ್ಯಗಳಿಗೆ ಬಿಟ್ಟದ್ದು). ಟ್ರಿಪಲ್ ತಲಾಕ್ & ವರದಕ್ಷಿಣೆಯ ವಿರುದ್ಧದ ಕಾನೂನುಗಳನ್ನೂ ಯಾರೂ ಕೇಳಿರಲಿಲ್ಲ ಆದರೂ ನಾವು ಅದಕ್ಕಾಗಿ ಕಾನೂನು ರಚಿಸಿದೆವು. ಯಾಕಂದ್ರೆ ಪ್ರಗತಿಶೀಲ ಸಮಾಜಕ್ಕೆ ಇದು ಅನಿವಾರ್ಯವಾಗಿತ್ತು.
ನಿಮಗೆಲ್ಲಾ ಗೊತ್ತಿರುವಂತೆ ಹಿಂದೂಸ್ತಾನದ ಪುರಾತನ ಪಕ್ಷ ಕಾಂಗ್ರೆಸ್ ಪಕ್ಷವಾಗಿದ್ದು ಇದು 6 ದಶಕಗಳ ಕಾಲ ಅಧಿಕಾರ ನಡೆಸಿದೆ. ಆದರೆ ಈಗ ಪಕ್ಷದ ಸ್ಥಿತಿ ಹೇಗಾಗಿದೆಯೆಂದರೆ ಕನ್ಫ್ಯೂಸ್ ಮೋಡ್ ನಲ್ಲಿದೆ. ತನ್ನ ಪಕ್ಷಕ್ಕೀ ಒಳ್ಳೆಯದನ್ನ ಮಾಡೋಕೆ ಆಗ್ತಿಲ್ಲ ಹಾಗು ದೇಶದ ಬಗ್ಗೆಯೂ ಒಳ್ಳೆಯದನ್ನ ಯೋಚಿಸಲು ಸಾಧ್ಯವಾಗುತ್ತಿಲ್ಲ ಎಂದರು.