“ನಾನು ಬಿಜೆಪಿ ಸೇರ್ಪಡೆಯಾಗುತ್ತೇನೆ ಆದರೆ ಕಾಶ್ಮೀರದಲ್ಲಿ….”: ಗುಲಾಂ ನಬಿ ಆಜಾದ್

in Kannada News/News 831 views

ಕಾಂಗ್ರೆಸ್ ಹಿರಿಯ ಗುಲಾಮ್ ನಬಿ ಆಜಾದ್ ಅವರ ರಾಜ್ಯಸಭೆಯ ತಮ್ಮ ಅಧಿಕಾರಾವಧಿ ಪೂರ್ಣಗೊಂಡಿದೆ. ಅದೇ ಸಮಯದಲ್ಲಿ, ಅವರ ಬಗ್ಗೆ ಊಹಾಪೋಹಗಳ ಸುದ್ದಿಗಳೂ ಸಾಕಷ್ಟು ಹರಿದಾಡುತ್ತಿವೆ. ಇತ್ತೀಚೆಗೆ, ರಾಜ್ಯಸಭೆಯಲ್ಲಿ ನಡೆದ ಬೆಳವಣಿಗೆಗಳ ಬಳಿಕ ಅವರು ಬಿಜೆಪಿಗೆ ಸೇರಬಹುದು ಎಂಬ ಸುದ್ದಿಗಳು ಹರಿದಾಡಿದ್ದವು. ಈಗ ಗುಲಾಂ ನಬಿ ಆಜಾದ್ ಈ ಬಗ್ಗೆ ಮೌನ ಮುರಿದಿದ್ದಾರೆ.

Advertisement

ಹಿಂದೂಸ್ತಾನ್ ಟೈಮ್ಸ್ ಜೊತೆಗಿನ ಸಂಭಾಷಣೆಯಲ್ಲಿ, ಗುಲಾಮ್ ನಬಿ ಆಜಾದ್ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರುವ ಬಗ್ಗೆ ಊಹಾಪೋಹಗಳ ಬಗ್ಗೆ ಮಾತನಾಡುತ್ತಾ, ಕಾಶ್ಮೀರದಲ್ಲಿ ಕಪ್ಪು ಹಿಮ ಬಿದ್ದಾಗ ನಾನು ಬಿಜೆಪಿಗೆ ಸೇರುತ್ತೇನೆ. ಬಿಜೆಪಿ ಪಕ್ಷವಂತೇ ಅಲ್ಲ ಕಾಶ್ಮೀರದಲ್ಲಿ ಕಪ್ಪು ಹಿಮ ಬಿದ್ದಾಗ ಅಂದು ನಾನು ಬೇರೆ ಯಾವುದೇ ಪಕ್ಷಕ್ಕೂ ಸೇರುತ್ತೇನೆ. ನಾನು ಬಿಜೆಪಿ ಪಕ್ಷಕ್ಕೆ ಸೇರುತ್ತೇನೆ ಅಂತ ಊಹಾಪೋಹಗಳನ್ನ ಹಬ್ಬಿಸುವವರಿಗೆ ಬಹುಶಃ ನನ್ನ ಬಗ್ಗೆ ಗೊತ್ತಿರಲಿಕ್ಕಿಲ್ಲ ಅವರು ಹೇಳಿದರು.

ಒಂದು ಘಟನೆಯನ್ನು ಹಂಚಿಕೊಂಡ ಆಜಾದ್, ರಾಜಮಾತಾ ಸಿಂಧಿಯಾ ಅವರು ವಿರೋಧ ಪಕ್ಷದ ಉಪನಾಯಕನಾಗಿದ್ದಾಗ, ಅವರು ಎದ್ದುನಿಂತು ನನ್ನ ಬಗ್ಗೆ ಕೆಲವು ಆರೋಪಗಳನ್ನು ಮಾಡಿದರು. ನಾನು ಎದ್ದು ನಿಂತು ನನ್ನ ಮೇಲಿನ ಆರೋಪಗಳನ್ನ ಬಹಳ ಗಂಭೀರವಾಗಿ ಪರಿಗಣಿಸುತ್ತೇನೆ ಮತ್ತು ಸರ್ಕಾರದ ಪರವಾಗಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಮಿತಿಯನ್ನು ಸೂಚಿಸಿದೆ ಮತ್ತು ರಾಜಮಾತಾ ಸಿಂಧಿಯಾ ಮತ್ತು ಎಲ್.ಕೆ.ಅಡ್ವಾಣಿ ಅವರನ್ನೂ ಸದಸ್ಯರನ್ನಾಗಿ ಮಾಡಿ ಅವರು 15 ದಿನಗಳಲ್ಲಿ ವರದಿಯನ್ನು ನೀಡಬೇಕು‌. ಅದರಲ್ಲಿ ನಾನು‌ ತಪ್ಪಿತಸ್ಥನೆಂದು ಸಾಬೀತಾದರೆ ಯಾವುದೇ ಶಿಕ್ಷೆಯನ್ನು ಸೂಚಿಸಿದರೂ ಅದನ್ನು ಸ್ವೀಕರಿಸುತ್ತೇನೆ ಎಂದು ನಾನು ಹೇಳಿದ್ದೆ ಎಂದರು.

ನನ್ನ ಹೆಸರನ್ನು ಕೇಳಿದ ಕೂಡಲೇ ವಾಜಪೇಯಿ ನನ್ನ ಬಳಿಗೆ ಬಂದು ಯಾಕೆ ಎಂದು ಕೇಳಿದರು ಎಂದು ಆಜಾದ್ ಹೇಳಿದರು. ಆಗ ನಾನು ಅವರಿಗೆ ಹೇಳಿದಾಗ, ಅವರು ಎದ್ದುನಿಂತು – ನಾನು ಸದನ ಮತ್ತು ಗುಲಾಮ್ ನಬಿ ಆಜಾದ್ ಅವರಿಗೆ ಕ್ಷಮೆಯಾಚಿಸಲು ಬಯಸುತ್ತೇನೆ. ಬಹುಶಃ ರಾಜಮಾತಾ ಸಿಂಧಿಯಾ ಅವರಿಗೆ ಆಜಾದ್ ಗೊತ್ತಿಲ್ಲ, ಆದರೆ ನನಗೆ ಅವರೇನೆಂದು ಗೊತ್ತು ಎಂದಿದ್ದರು.

ರಾಜ್ಯಸಭೆಯಲ್ಲಿ ತಮ್ಮ ಬಗ್ಗೆ ಮತ್ತು ಪ್ರಧಾನ ಮಂತ್ರಿ ಮೋದಿ ಭಾವುಕರಾದ ಬಗ್ಗೆ ಮಾತನಾಡಿದ ಅವರು, ನಾವು ಒಬ್ಬರಿಗೊಬ್ಬರು ಚೆನ್ನಾಗಿ ಅರಿತಿರಲಿಲ್ಲ ಎಂಬ ಕಾರಣಕ್ಕೆ ನಾವಿಬ್ಬರೂ ಅತ್ತಿರಲಿಲ್ಲ, ಆದರೆ ಅದಕ್ಕೆ ಕಾರಣ 2006 ರಲ್ಲಿ ಕಾಶ್ಮೀರದಲ್ಲಿ ಗುಜರಾತಿ ಪ್ರವಾಸಿ ಬಸ್ ಮೇಲೆ ದಾ-ಳಿ ನಡೆದಿತ್ತು ಮತ್ತು ನಾನು ಅವರೊಂದಿಗೆ ಭಾವನಾತ್ಮಕವಾಗಿ ಮಾತನಾಡಿದ್ದೆ ಹಾಗು ಅತ್ತಿದ್ದೆ ಎಂದರು.

ಒಬ್ಬ ವ್ಯಕ್ತಿಯು ಇಲ್ಲಿ ನಿವೃತ್ತಿ ಹೊಂದುತ್ತಿದ್ದಾನೆ ಎಂದು ಪ್ರಧಾನಿ ಹೇಳುತ್ತಿದ್ದರು, ಅವರು ಸಹ ಒಳ್ಳೆಯ ವ್ಯಕ್ತಿ. ಅವರು ಭಾವುಕರಾದ ಕಾರಣ ಕಥೆಯನ್ನು ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗಲಿಲ್ಲ ಮತ್ತು ನಾನು ಕಥೆಯನ್ನು ಪೂರ್ಣಗೊಳಿಸಲು ಬಯಸಿದಾಗ, 14 ವರ್ಷಗಳ ಹಿಂದೆ, ದಾ-ಳಿ ನಡೆದಾಗ ನಾನು ಆ ಕ್ಷಣಕ್ಕೆ ಮರಳಿದ್ದೇನೆ ಎಂದು ಭಾವಿಸಿದ್ದರಿಂದ ನನಗೆ ಸಾಧ್ಯವಾಗಲಿಲ್ಲ ಎಂದರು.

Advertisement
Share this on...