“ನಿಮ್ಮಂಥವರಿಂದಲೇ ದೇಶದ ಪರಿಸ್ಥಿತಿ ಹಿಂಗಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ ಕ್ರಿಕೆಟಿಗ ಹನುಮ್ ವಿಹಾರಿ

in Kannada News/News/ಮನರಂಜನೆ 413 views

ಟೀಮ್ ಇಂಡಿಯಾ ಆಟಗಾರ ಹನುಮ ವಿಹಾರಿ ಶನಿವಾರ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ವೊಂದಕ್ಕೆ ಇನ್ಸ್ಟಾಗ್ರಾಂ ಬಳಕೆದಾರ ಮಾಡಿದ ಕಾಮೆಂಟ್ ವಿರುದ್ಧ ಕಿಡಿಕಾರಿದ್ದಾರೆ.

Advertisement

ಕಳೆದ ಹಲವಾರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕೊರೊನಾಸೋಂಕಿತರಿಗೆ ಹನುಮ ವಿಹಾರಿ ಸಹಾಯವನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ‘ಯಾರು ಸಂಕಷ್ಟದಲ್ಲಿದ್ದಾರೆ ಅಂಥವರಿಗೆ ಸಹಾಯ ಮಾಡಲು ನಾನು ತಯಾರಿದ್ದೇನೆ, ಯಾರಿಗೆ ಸಹಾಯದ ಅಗತ್ಯತೆ ಇದೆಯೋ ಅವರು ನನಗೆ ವೈಯಕ್ತಿಕವಾಗಿ ಸಂದೇಶವನ್ನು ಕಳುಹಿಸಿ ನಾನು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತೇನೆ. ಇಂತಹ ಸಮಯದಲ್ಲಿ ಕಷ್ಟದಲ್ಲಿರುವವರಿಗೆ ನಾವು ಸಹಾಯ ಮಾಡಬೇಕಿದೆ’ ಎಂದು ಬರೆದುಕೊಳ್ಳುವುದರ ಮೂಲಕ ನೆರವು ನೀಡಲು ಮುಂದಾಗಿದ್ದರು.

ಹೀಗೆ ಶನಿವಾರ ಅನುಷಾ ಎಂಬ ಯುವತಿಯ ತಂದೆ ಮತ್ತು ಆಕೆಯ ಸಹೋದರ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು ವೆಂಟಿಲೇಟರ್‌ನಲ್ಲಿದ್ದಾರೆ, ಹೀಗಾಗಿ ಅವರ ಚಿಕಿತ್ಸೆಗೆ ದಿನಕ್ಕೆ 1.5 ಲಕ್ಷ ರೂಪಾಯಿಗಳು ಖರ್ಚಾಗುತ್ತಿದ್ದು ಇಚ್ಛೆ ಇದ್ದವರು ಸಹಾಯ ಮಾಡಿ ಎಂದು ಹನುಮ ವಿಹಾರಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಈ ಪೋಸ್ಟ್‌ಗೆ ಇನ್ಸ್ಟಾಗ್ರಾಂ ಬಳಕೆದಾರನೊಬ್ಬ ‘ನೀವೊಬ್ಬ ಕ್ರೀಡಾಪಟು ಅಲ್ಲವೇ, ನೀವೇ ದೇಣಿಗೆ ನೀಡಿ’ ಎಂದು ವಿಹಾರಿಗೆ ಕಾಮೆಂಟ್ ಮಾಡಿದ್ದ. ಬಳಕೆದಾರನ ಈ ಕಾಮೆಂಟ್‌ಗೆ ಆಕ್ರೋಶ ವ್ಯಕ್ತಪಡಿಸಿದ ಹನುಮ ವಿಹಾರಿ ‘ನಿಮ್ಮಂಥ ಜನ ಈ ದೇಶದಲ್ಲಿರುವುದರಿಂದಲೇ ಭಾರತ ಈ ರೀತಿಯ ಪರಿಸ್ಥಿತಿಯಲ್ಲಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ’ ಎಂದು ಮರು ಉತ್ತರ ನೀಡಿದ್ದಾರೆ. ಸದ್ಯ ಹನುಮವಿಹಾರಿ ನೀಡಿರುವ ಈ ಮರು ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಭಾರತದ ಪರ ಭಾವನಾತ್ಮಕ ಸಂದೇಶ ಕೊಟ್ಟ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್

ಭಾರತದಲ್ಲಿ ಮಾರಕ ಕೊರೋನಾ ಅಟ್ಟಹಾಸ ಮಿತಿಮೀರಿರುವಂತೆಯೇ ಇತ್ತ ಭಾರತದ ಪರಿಸ್ಥಿತಿಗೆ ಹಲವು ಆಸಿಸ್ ಕ್ರಿಕೆಟಿಗರು ಮರುಗುತ್ತಿದ್ದಾರೆ. ಇದೀಗ ಈ ಪಟ್ಟಿಗೆ ಆಸಿಸ್ ಕ್ರಿಕೆಟ್ ದೈತ್ಯ ಹೇಡನ್ ಸೇರ್ಪಡೆಯಾಗಿದ್ದಾರೆ.

ಕೊರೊನಾವೈರಸ್ ಸಾಂಕ್ರಾಮಿಕದ ಎರಡನೇ ಅಲೆಯಿಂದ ಭಾರತ ತತ್ತರಿಸಿ ಹೋಗಿದ್ದು, ನಿತ್ಯ ಸರಾಸರಿ 3ಲಕ್ಷಕ್ಕಿಂತ ಹೆಚ್ಚಿನ ಕೊವಿಡ್ ಪ್ರಕರಣಗಳು ವರದಿಯಾಗುತ್ತಿದೆ. ಬೆಡ್ ಗಳು ಸಿಗದೆ ಒಂದೆಡೆ ಜನ ಸಾಯುತ್ತಿದ್ದರೆ ಆಸ್ಪತ್ರೆಗಳಲ್ಲಿ ಬೆಡ್ ಸಿಕ್ಕರೂ ಆಕ್ಸಿಜನ್ ಸಿಗದೆ ಜನ ಸಾಯುತ್ತಿದ್ದಾರೆ. ಭಾರತದ ಈ ಸಂಕಷ್ಟ  ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಅನೇಕ ವಲಯಗಳ ಗಣ್ಯರು ಭಾರತ ಪರಿಸ್ಥಿತಿಗೆ ನೆರವಾಗುವಂತೆ ಕೋರಿದ್ದರು.

ಇದೀಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಭಾರತದ ಕುರಿತು ಭಾವುಕ ಪತ್ರವೊಂದನ್ನು ಬರೆದಿದ್ದು, ಈ ಪತ್ರ ಇದೀಗ ವೈರಲ್ ಆಗುತ್ತಿದೆ.

ಅಷ್ಟಕ್ಕೂ ಹೇಡನ್ ಬರೆದ ಪತ್ರದಲ್ಲೇನಿದೆ…

‘ಹಿಂದೆಂದೂ ನೋಡಿರದಂತೆ ಭಾರತವು ಸಾಂಕ್ರಾಮಿಕ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿದೆ. 140 ಕೋಟಿ ಜನರಿರುವ ಈ ದೇಶ ವೈರಸ್ ಸೋಂಕು ವಿರುದ್ಧ ಹೋರಾಡುತ್ತಿರುವಾಗ, ವಿಶ್ವ ಮಾಧ್ಯಮಗಳು ದೇಶದ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಿಲ್ಲ. ಅಲ್ಲಿ ಯಾವುದೇ ಸಾರ್ವಜನಿಕ ಯೋಜನೆಯ ಅನುಷ್ಠಾನ  ಮತ್ತು ಅದರ ಯಶಸ್ಸು ದೊಡ್ಡ ಸವಾಲಾಗಿರುತ್ತದೆ. ನಾನು ಒಂದು ದಶಕದಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ ಮತ್ತು ದೇಶಾದ್ಯಂತ ಪ್ರವಾಸ ಮಾಡಿದ್ದೇನೆ. ವಿಶೇಷವಾಗಿ ತಮಿಳುನಾಡು ನನ್ನ ಆಧ್ಯಾತ್ಮಿಕ ನೆಲೆ ಎಂದು ನಾನು ಪರಿಗಣಿಸುತ್ತೇನೆ. ಅಂತಹ ವೈವಿಧ್ಯಮಯ ಮತ್ತು ವಿಶಾಲವಾದ ದೇಶವನ್ನು ನಡೆಸುವ  ಕಾರ್ಯವನ್ನು ವಹಿಸಿಕೊಂಡಿರುವ ನಾಯಕರು ಮತ್ತು ಸಾರ್ವಜನಿಕ ಅಧಿಕಾರಿಗಳ ಬಗ್ಗೆ ನನಗೆ ಯಾವಾಗಲೂ ಹೆಚ್ಚಿನ ಗೌರವವಿದೆ.

ನಾನು ಹೋದಲ್ಲೆಲ್ಲಾ ಜನರು ನನ್ನನ್ನು ಪ್ರೀತಿಯಿಂದ ಮತ್ತು ವಾತ್ಸಲ್ಯದಿದ ಸ್ವಾಗತಿಸಿದರು, ಅದಕ್ಕಾಗಿ ನಾನು ಅವರಿಗೆ ಆಭಾರಿ. ನಾನು ಹಲವಾರು ವರ್ಷಗಳಿಂದ ಭಾರತನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆದ್ದರಿಂದಲೇ ಈ ಕ್ಷಣದಲ್ಲಿ ನೋವಿಗೆ ನನ್ನ ಹೃದಯ  ಮಿಡಿಯುತ್ತಿದೆ. ಈ ಹೊತ್ತಲ್ಲಿ ಕೆಟ್ಟ ಮಾಧ್ಯಮಗಳು ಸಹ ಭಾರತದ ಜನರ ಮತ್ತು ಅವರ ಅಸಂಖ್ಯಾತ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವ್ಯಾಪ್ತಿಗೆ ಭಾರತಕ್ಕೆ ಬರಲು ಅವಕಾಶ ಮಾಡಿಕೊಟ್ಟ ಕ್ರಿಕೆಟಿಗ ಮತ್ತು ಕ್ರೀಡಾ ಪ್ರೇಮಿಯಾಗಿ ನಾನು  ಕ್ರೀಡೆಯೊಂದಿಗಿನ ನನ್ನ ಒಡನಾಟವನ್ನು ಉಳಿಸಿಕೊಂಡಿದ್ದೇನೆ. ನನ್ನ ಸಹವರ್ತಿ ದೇಶವಾಸಿಗಳು ಅನೇಕ ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಪಂಚವು ಭಾರತದತ್ತ ಬಾಗಿಲು ಮುಚ್ಚುವ ಮತ್ತು ಸರ್ಕಾರವನ್ನು ದೂಷಿಸುತ್ತಿರುವಾಗ ಸಾವಿರಾರು ಮೈಲುಗಳಷ್ಟು ದೂರದಲ್ಲಿರುವವರಿಗೆ  ಲಭ್ಯವಿಲ್ಲದ ದೃಷ್ಟಿಕೋನವನ್ನು ನೀಡುವುದಕ್ಕಾಗಿ ಭಾರತದಲ್ಲಿದ್ದಾಗ ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಯೋಚಿಸಿದೆ ಎಂದು ಹೇಡನ್ ಬರೆದಿದ್ದಾರೆ.

ಹೇಡನ್ ಪತ್ರಕ್ಕೆ ಆನಂದ್ ಮಹಿಂದ್ರಾ ಬೆಂಬಲ

ಇನ್ನು ಮಾಥ್ಯೂ ಹೇಡನ್ ಬರೆದ ಪತ್ರಕ್ಕೆ ಖ್ಯಾತ ಉದ್ಯಮಿ ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಬೆಂಬಲ ಸೂಚಿಸಿದ್ದು, ಹೇಡನ್ ಅವರ ಭಾವನಾತ್ಮಕ ಪೋಸ್ಟ್ ಟ್ವೀಟ್ ಕ್ರಿಕೆಟಿಗನ ಹೃದಯವು ಅವನ ದೇಹಕ್ಕಿಂತ ದೊಡ್ಡದಾಗಿದೆ ಎಂದು ತೋರಿಸುತ್ತದೆ. ಸಹಾನುಭೂತಿ ಮತ್ತು ನಿಮ್ಮ ಪ್ರೀತಿಗೆ  ಧನ್ಯವಾದಗಳು ಎಂದು ಬರೆದಿದ್ದಾರೆ.

Advertisement
Share this on...