ಒಂದಲ್ಲ ಎರಡಲ್ಲ ಭಾರತಕ್ಕೆ ಬರೋಬ್ಬರಿ 8.3 ಲಕ್ಷ ಕೋಟಿ ದೇಣಿಗೆ ನೀಡಿದ ಯುವಕ: ಯಾರೀತ? ಇಷ್ಟು ದೊಡ್ಡ ಮೊತ್ತದ ಹಣ ಕೊಟ್ಟಿದ್ದಾದರೂ ಯಾಕೆ?

in Kannada News/News 1,340 views

ಮಾರಕ ಕೊರೊನಾ ವೈರಸ್‌ನ ಎರಡನೇ ಅಲೆಯನ್ನು ಎದುರಿಸಲು ಹಲವಾರು ದೇಶಗಳು ಭಾರತಕ್ಕೆ ಸಹಾಯ ಮಾಡಿವೆ. ಕೆಲವು ದೊಡ್ಡ ಉದ್ಯಮಿಗಳೂ ದೊಡ್ಡ ಮಟ್ಟದ ಸಹಾಯ ಮಾಡಿದ್ದಾರೆ. ಇದರಲ್ಲಿ ಅನಿರೀಕ್ಷಿತವಾಗಿ ದೊಡ್ಡ ಮೊತ್ತದ ಕೊಡುಗೆ ಬಂದಿರುವುದು ರಷ್ಯದ ಒಬ್ಬ ಯುವ ಬಿಲಿಯನೇರ್ ಉದ್ಯಮಿಯಿಂದ.

Advertisement

ಈತ ನೀಡಿರುವ ದೇಣಿಗೆ ಎಷ್ಟು ಗೊತ್ತೆ? 1.4 ಶತಕೋಟಿ ಡಾಲರ್, ಅಂದರೆ ಸುಮಾರು 8.3 ಲಕ್ಷ ಕೋಟಿ ರೂಪಾಯಿ. ಇದು ನಮ್ಮ ಕರ್ನಾಟಕದ ಒಂದು ವರ್ಷದ ಬಜೆಟ್‌ನ ಮೂರು ಪಟ್ಟು ಗಾತ್ರವಾಯಿತು. ಅಂದ ಹಾಗೆ ಯಾರು ಈ ಬಿಲಿಯನೇರ್?

ಇವನ ಹೆಸರು ವಿತಾಲಿಕ್ ಬ್ಯುಟೆರಿನ್. ಇವನು ರಷ್ಯ ಮೂಲದ, ಕೆನಡಾದಲ್ಲಿ ನೆಲೆಸಿರುವ ಉದ್ಯಮಿ. ಅತ್ಯಂತ ಸಣ್ಣ ಪ್ರಾಯ ಕ್ರಿಪ್ಟೊ ಬಿಲಿಯನೇರ್ ಎಂದೇ ಹೆಸರಾದ ಇವನ ಪ್ರಾಯ ಇನ್ನೂ 27 ವರ್ಷ.

ಇಥೀರಿಯಮ್ ಎಂಬ ಕ್ರಿಪ್ಟೋಕರೆನ್ಸಿ (ಬಿಟ್‌ಕಾಯಿನ್ ಗೊತ್ತಿರಬೇಕಲ್ಲ, ಅದೊಂದು ಕ್ರಿಪ್ಟೋ ಕರೆನ್ಸಿ. ಇದೂ ಅದರಂತೆಯೇ, ವರ್ಚುವಲ್ ಹಣ) ಯನ್ನು ಹುಟ್ಟುಹಾಕಿ, ಅದಕ್ಕೆ ಸಂಬಂಧಿಸಿದ ಉದ್ಯಮ ಸಂಸ್ಥೆಯನ್ನೂ ಸೃಷ್ಟಿಸಿ ಮುನ್ನಡೆಸುತ್ತಿರುವ ಯಶಸ್ವಿ ಉದ್ಯಮಿಯೀತ. ಇಥೀರಿಯಮ್ ಹುಟ್ಟಿಕೊಂಡದ್ದು 2018ರಲ್ಲಿ.

ಇವನ ತಂದೆ ಡಿಮಿತ್ರಿ ಕೂಡ ಕಂಪ್ಯೂಟರ್ ಇಂಜಿನಿಯರ್. ತಂದೆ ತಾಯಿ, ವಿತಾಲಿಕ್ ಆರು ವರ್ಷದವನಿದ್ದಾಗಲೇ ರಷ್ಯದಿಂದ ಕೆನಡಾಗೆ ವಲಸೆ ಬಂದರು. ಈತ ಮೂರನೇ ಕ್ಲಾಸಿನಲ್ಲಿದ್ದಾಗ, ಇವನು ವಯಸ್ಸಿಗೂ ಮೀರಿದ ಪ್ರತಿಭೆ ಎಂಬುದನ್ನು ಹೆತ್ತವರು ಮತ್ತು ಶಿಕ್ಷಕರು ಅರ್ಥ ಮಾಡಿಕೊಂಡರು. ಈತನಿಗೆ ಕಂಪ್ಯೂಟರ್‌ಗೆ ಸಂಬಂಧಿಸಿದ ಇತರ ಹೊಸ ಕೋರ್ಸ್‌ಗಳನ್ನು ಮಾಡಲು ಪ್ರೇರಣೆ ಒದಗಿಸಿದರು. ಇವನು 17 ವರ್ಷದವನಿದ್ದಾಗ ಇವನ ತಂದೆ ಕ್ರಿಪ್ಟೋಕರೆನ್ಸಿಯನ್ನು ಈತನಿಗೆ ಪರಿಚಯಿಸಿದರು.  ಅಲ್ಲಿಂದಾಚೆಗೆ ಅವನ ಆಸಕ್ತಿ ಅದರಲ್ಲಿ ಬೆಳೆಯಿತು.

ಹೈಸ್ಕೂಲ್ ಮುಗಿದನಂತರ ಈತ ಕ್ರಿಪ್ಟೋಗ್ರಾಫರ್ ಇಯಾನ್ ಗೋಲ್ಡ್‌ಬರ್ಗ್ ಎಂಬಾತನಲ್ಲಿ ಅಸಿಸ್ಟೆಂಟ್ ಆಗಿ ಸೇರಿಕೊಂಡ. 2011ರಲ್ಲಿ ಬಿಟ್‌ಕಾಯಿನ್ ವೀಕ್ಲಿ ಎಂಬ ವಾರಪತ್ರಿಕೆಯಲ್ಲಿ ಸೇರಿಕೊಂಡ.  2014ರವರೆಗೆ ಅದಕ್ಕೆ ಬರಹ ನೀಡುತ್ತಿದ್ದ. 2012ರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮಾಹಿತಿ ವಿಜ್ಞಾನ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದ. ನಂತರ ಕ್ರಿಪ್ಟೋಕರೆನ್ಸಿಯ ಬಗ್ಗೆ ಸಂಶೋಧನೆ ಪಡೆಯಲು ಒಂದು ಲಕ್ಷ ಡಾಲರ್ ಫೇಲೋಶಿಪ್ ಪಡೆದು ಕಾಲೇಜು ಬಿಟ್ಟ. ಕ್ರಿಪ್ಟೋ ಸಂಶೋಧನೆಯಲ್ಲೇ ಪೂರ್ಣವಾಗಿ ತೊಡಗಿಕೊಂಡ. ನಂತರ ಇಥೀರಿಯಮ್ ಎಂಬ ಆನ್‌ಲೈನ್ ನಾಣ್ಯವನ್ನೇ ಹುಟ್ಟುಹಾಕಿದ.

ಪ್ರಸ್ತುತ ಬಿಟ್‌ಕಾಯಿನ್‌ ನಂತರ ಅತಿ ಹೆಚ್ಚು ವಹಿವಾಟು ನಡೆಸುತ್ತಿರುವ ಕ್ರಿಪ್ಟೋಕರೆನ್ಸಿ ಇದೇ ಆಗಿದೆ. ಕ್ರಿಪ್ಟೋಕರೆನ್ಸಿ ಎಂದರೇನು ಎಂದು ತಿಳಿಯದವರಿಗೆ ಇಲ್ಲೊಂದು ಪುಟ್ಟ ಮಾಹಿತಿ- ಇದೊಂದು ಡಿಜಿಟಲ್‌ ನಾಣ್ಯ. ಇದಕ್ಕೆ ಭೌತಿಕ ಲೋಕದಲ್ಲಿ ಯಾವುದೇ ಅಸ್ತಿತ್ವ ಇರುವುದಿಲ್ಲ. ಇದನ್ನು ಸೃಷ್ಟಿಸುವ ಪ್ರಕ್ರಿಯೆ ಅನೇಕ ಜಟಿಲವಾದ ಕಂಪ್ಯೂಟರ್‌ ಲೆಕ್ಕಾಚಾರಗಳಿಂದ ಕೂಡಿರುವಂಥದು. ನೂರಾರು ಸಾವಿರಾರು ಕಂಪ್ಯೂಟರ್ ಎಂಜಿನಿಯರ್‌ಗಳು ಈ ಕಾಯಿನ್‌ಗಳು ಅಂತರ್ಜಾಲದಲ್ಲಿ ಅಗೆದು ತೆಗೆಯುವ ಪ್ರಕ್ರಿಯೆಯಲ್ಲಿ ಹಗಲೂ ರಾತ್ರಿ ನಿರತರಾಗಿರುತ್ತಾರೆ. ಈಗ ಒಂದು ಕಾಲ್ಪನಿಕ ನಾಣ್ಯ, ಒಂದು ಬಿಟ್‌ಕಾಯಿನ್‌ನ ಬೆಲೆ ಈಗ ರೂಪಾಯಿಗಳಲ್ಲಿ ಎಷ್ಟು ಗೊತ್ತೆ? 35.75 ಲಕ್ಷ ರೂಪಾಯಿ. ಇದರ ನಂತರದ ಸ್ಥಾನದಲ್ಲಿರುವ ಇಥೀರಿಯಮ್‌ನ ಒಂದು ನಾಣ್ಯದ ಬೆಲೆ ರೂಪಾಯಿಗಳಲ್ಲಿ 2.78 ಲಕ್ಷ. ವಿತಾಲಿಕ್‌ನ ಇಥೀರಿಯಮ್‌ನ ಎಲ್ಲ ನಾಣ್ಯಗಳ ಮೌಲ್ಯ ಈಗ ಸುಮಾರು 2500 ಕೋಟಿ ಡಾಲರ್.

ಇವನು  2016ರ ಫಾರ್ಚೂನ್ ಪತ್ರಿಕೆಯ ಅಂಡರ್ 40 ಬಿಲಿಯನೇರ್‌ಗಳ ಪಟ್ಟಿಯಲ್ಲಿ, 2018ರ ಅಂಡರ್ 30 ಬಿಲಿಯನೇರ್‌ಗಳ ಲಿಸ್ಟಿನಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾನೆ. 2018ರ ಬಸೇಲ್‌ ಯೂನಿವರ್ಸಿಟಿ ಇವನಿಗೆ ಗೌರವ ಡಾಕ್ಟರೇಟ್ ನೀಡಿದೆ. ಸಮಾಜ ಸೇವೆಗೂ ಸಾಕಷ್ಟು ದೇಣಿಗೆ ಕೊಡುತ್ತಿದ್ದಾನೆ. ಇವನ ಐಕ್ಯೂ 250 ಇದೆ ಎಂಬ ಅಂದಾಜು. ಸ್ಟೀವ್ ಜಾಬ್ಸ್, ಬಿಲ್ ಗೇಟ್ಸ್, ಜುಕರ್‌ಬರ್ಗ್ ಮುಂತಾದವರ ಥರ ಇವನೂ ಕಾಲೇಜ್ ಡ್ರಾಪ್‌ಔಟ್.

Advertisement
Share this on...