“ದೇಶ ಸಂಕಷ್ಟದಲ್ಲಿದ್ದಾಗ ನೀನೇನ್ ಮಾಡ್ದೆ?” ಎಂದವರಿಗೆ ತಾನು ಮಾಡಿದ ಕಾರ್ಯಗಳ ಪಟ್ಟಿ ಬಿಡುಗಡೆ ಮಾಡಿದ ಅಮಿತಾಭ್ ಬಚ್ಚನ್

in FILM NEWS/Helath-Arogya/Kannada News/News 459 views

ಮುಂಬೈ: ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಹಾರ ಕಾರ್ಯಕ್ಕಾಗಿ ಈವರೆಗೂ ಸುಮಾರು 15 ಕೋಟಿ ರೂ. ದೇಣಿಗೆ ನೀಡಿರುವುದಾಗಿ ತಿಳಿಸಿರುವ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್., ಅಗತ್ಯಬಿದ್ದರೆ ತನ್ನ ವೈಯಕಿಕ್ತ ನಿಧಿಯಿಂದ ಮತ್ತಷ್ಟು ಹಣ ನೀಡಲು ಹಿಂಜರಿಯುವುದಿಲ್ಲ ಎಂದಿದ್ದಾರೆ.

Advertisement

ದೇಶದಲ್ಲಿ ಆರೋಗ್ಯ ಬಿಕ್ಕಟ್ಟು ಉಲ್ಬಣಿಸಿದ್ದರೂ ಸೆಲೆಬ್ರೆಟಿಗಳು ಜನರಿಗೆ ಸಹಾಯ ಮಾಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಫೋಸ್ಟ್ ಗಳಿಗೆ ಪ್ರತಿಕ್ರಿಯಿಸಿರುವ ಅಮಿತಾಭ್, ಸಾಂಕ್ರಾಮಿಕ ಸಂದರ್ಭದಲ್ಲಿ ತಾವು ನೀಡಿರುವ ನೆರವಿನ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾರೆ.

ನವದೆಹಲಿಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಗುರುದ್ವಾರ ರಕಾಬ್ ಗಂಜಿ ಸಾಹಿಬ್ ನ ಶ್ರೀ ಗುರು ತೇಜ್ ಬಹದ್ದೂರ್ ಕೋವಿಡ್ ಆರೈಕೆ ಕೇಂದ್ರಕ್ಕೆ   ಅಮಿತಾಭ್ ಬಚ್ಚನ್ 2 ಕೋಟಿ ದೇಣಿಗೆ ನೀಡಿದ್ದಾರೆ ಎಂದು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಂಜಿದರ್ ಸಿಂಗ್ ಸಿರ್ಸಾ  ಭಾನುವಾರ ರಾತ್ರಿ ಟ್ವೀಟ್ ಮಾಡಿದ್ದರು.

ಈ ವೈರಸ್ ವಿರುದ್ಧದ ಹೋರಾಟಕ್ಕಾಗಿ ಅನೇಕ ಜನರು ದೇಣಿಕೆ ನೀಡಿದ್ದು, ದೆಹಲಿಯ ಕೇರ್ ಸೆಂಟರ್ ಗೆ 2 ಕೋಟಿಯನ್ನು ನೀಡಿದ್ದೇನೆ ಆದರೆ, ದಿನ ಕಳೆದಂತೆ ಇದು 15 ಕೋಟಿ ರೂ.ಗೂ ಮೀರಿದೆ. ನನ್ನ ಸಂಪಾದನೆಯ ಹಣವನ್ನು ಅಗತ್ಯವಿರುವವರಿಗೆ ವಿನಿಯೋಗಿಸುತ್ತೇನೆ. ದೇವರ ದಯೆಯಿಂದ ಇಷ್ಟು ಹಣ ನೀಡಲು ಸಾಧ್ಯವಾಯಿತು ಎಂದು ಅವರು  ಹೇಳಿದ್ದಾರೆ.

ಸ್ಯಾಂಡಲ್‌ವುಡ್ ಕಲಾವಿದರಿಂದಲೂ ನೆರವಿನ ಹಸ್ತ

ದೇಶದಲ್ಲಿ ಕರೋನಾ ರಣಕೇಕೆ ಹಾಕುತ್ತಿದೆ, ಪ್ರತಿ ನಿತ್ಯ ಆಸ್ಪತ್ರೆಗಳಿಗೆ ದೌಡಾಯಿಸುತ್ತಿರುವ ರೋಗಿಗಳನ್ನು ಮನೆ ಮಠ ಬಿಟ್ಟು ವೈದ್ಯರು ಜೀವ ಪಣಕ್ಕಿಟ್ಟು ಆರೈಕೆ ಮಾಡುತ್ತಿದ್ದಾರೆ. ಹಗಲು ರಾತ್ರಿ ಬಿಡುವಿಲ್ಲದೆ ಶ್ರ‍ಮಿಸುತ್ತಿದ್ದಾರೆ. ಕರೋನಾ ವಾರಿಯರ್ಸ್ ಗಳಾದ ವೈದ್ಯಕೀಯ ಸಿಬ್ಬಂದಿಗಳು ದಿನವಿಡೀ ಪಿಪಿಇ ಕಿಟ್ ಧರಿಸಿ ಉಸಿರು ಗಟ್ಟವಂತೆ ಇದ್ದರೂ ರೋಗಿಗಳ ಪ್ರಾಣರಕ್ಷಣೆ ಮಾಡುತ್ತಿದ್ದಾರೆ. ಇಂತಹ ಕರೋನಾ ವಾರಿಯರ್ಸ್ ಗಳಾದ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಸರಿಯಾಗಿ ಊಟ ಮಾಡಲು ಕೂಡ ಕಷ್ಟ ಪಡುತ್ತಿದ್ದಾರೆ. ಅದ್ರಲ್ಲೂ ಸರ್ಕಾರಿ ಆಸ್ಪತ್ರೆಗಳ ವೈದ್ಯರ, ಅದೇ ರೀತಿ ಸಿಬ್ಬಂದಿಗಳ ಕಷ್ಟ ಹೇಳತೀರದ್ದಾಗಿದೆ.

ಹೀಗಾಗಿ ಸ್ಯಾಂಡಲ್ ವುಡ್ ನಟ ಶ್ರೀ ಮುರಳಿ ಈ ಸರ್ಕಾರಿ ಆಸ್ಪತ್ರೆಗಳ ವೈದ್ಯರುಗಳಿಗೆ, ವೈದ್ಯಕೀಯ ಸಿಬ್ಬಂದಿಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿರುವ ಬೆಂಗಳೂರಿನ ೫ ಸರ್ಕಾರಿ ಆಸ್ಪತ್ರೆಗಳಿಗೆ ಶ್ರೀ ಮುರಳಿಯವರು ಊಟದ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಕರೋನಾ ರೋಗಿಗಳ ಪ್ರಾಣ ರಕ್ಷಣೆ ಮಾಡುವ ಕರೋನಾ ವಾರಿಯರ್ಸ್ ಗಳಾದ ವೈದ್ಯರು, ನರ್ಸ್ ಗಳು, ಆಯಾಗಳು, ಬೇರೆ ಬೇರೆ ವೈದ್ಯಕೀಯ ಸಿಬ್ಬಂದಿಗಳು ಚೆನ್ನಾಗಿದ್ದರೆ ಮಾತ್ರ ರೋಗಿಗಳು ಬದುಕ್ತಾರೆ. ಹಾಗಾಗಿ ವೈದ್ಯರಿಗೆ, ಆಸ್ಪತ್ರೆ ಸಿಬ್ಬಂದಿಗಳ ಕಾಳಜಿ ಬಹಳ ಮುಖ್ಯ ಎಂದು ನಟ ಶ್ರೀ ಮುರಳಿ ಇದೀಗ ಪ್ರಮುಖ ೫ ಸರ್ಕಾರಿ ಆಸ್ಪತ್ರೆಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲು ಹೊರಟಿದ್ದಾರೆ.

ಬೆಂಗಳೂರಿನ ಕೆ ಸಿ ಜನರಲ್ ಆಸ್ಪತ್ರೆ, ರಾಜಾಜಿನಗರದ ಇಎಸ್ ಐ, ಜಯನಗರ ಜನರಲ್ ಆಸ್ಪತ್ರೆ , ಸಿವಿ ರಾಮನ್ ಜನರಲ್ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ವೈದ್ಯರಿಗೆ ಊಟ ನೀಡಲಿದ್ದಾರೆ. ಈಗಾಗಲೇ ಅನೇಕರು ಕರೋನಾ ವಾರಿಯರ್ಸ್ ಗಳಾಗಿ ತಮ್ಮಿಂದಾಗುವ ಸಹಾಯ ಮಾಡುತ್ತಿದ್ದಾರೆ, ಅನೇಕ ನಟ- ನಟಿಯರು ಈ ಸಂಕಷ್ಟ ಕಾಲದಲ್ಲಿ ನೆರವಿನ ಹಸ್ತ ಚಾಚಿದ್ದಾರೆ. ಇದೇ ರೀತಿ ಇದೀಗ ನಟ ಶ್ರೀ ಮುರಳಿಯವರು ಕೂಡ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆಯನ್ನು ಮನಗಂಡು ಸಮಾಜ ಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ನ ಕಲಾವಿದರು ಕೊರೋನಾ ಸೋಂಕಿತರ ಪಾಲಿಗೆ ಯಾರ‌್ಯಾರು ಏನೇನು ಮಾಡುತ್ತಿದ್ದಾರೆ ನೋಡಿ

ಕಿರಣ್ ರಾಜ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತವೆ ಹಾಗೂ ಹಲವಾರು ಕಲಾವಿದರು ನಟಿಸುತ್ತಾರೆ. ಅವರಲ್ಲಿ ಕೆಲವರು ಬಹಳ ಜನಪ್ರಿಯತೆ ಗಳಿಸುತ್ತಾರೆ. ಕೆಲವು ಧಾರಾವಾಹಿಗಳು ವೀಕ್ಷಕರ ಮನಗೆಲ್ಲುತ್ತವೆ. ಅವುಗಳಲ್ಲಿ ಒಂದು ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ. ಈ ಧಾರಾವಾಹಿ ಕಿರುತೆರೆಯ ಸೆನ್ಸೇಷನ್ ಆಗಿರುವುದು ಎಲ್ಲರಿಗು ಗೊತ್ತು. ಕಿನ್ನರಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಹರ್ಷ ಪಾತ್ರದಲ್ಲಿ ನಟಿಸಿದ್ದಾರೆ. ನಿಮಗೆ ಗೊತ್ತಿರೋ ಹಾಗೆ ಸದ್ಯ ರಾಜ್ಯದಲ್ಲಿ ಕ-ರೋನ ಅ’ಟ್ಟಹಾಸ ಮೆರೆದಿದ್ದು, ಇಂತಹ ಕ-ಷ್ಟದ ಸಮಯದಲ್ಲಿ ಕನ್ನಡತಿ ಧಾರಾವಾಹಿಯ ನಟ ಕಿರಣ್ ರಾಜ್ ಅವರು ಸಾಕಷ್ಟು ಜನರಿಗೆ ಬಹಳ ಕಷ್ಟ ಪಟ್ಟು ಸಹಾಯ ಮಾಡಿದ್ದಾರೆ! ಇದರ ಬಗ್ಗೆ ಕಿರಣ್ ರಾಜ್ ಹೇಳಿದ್ದೇನು ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ

ಕೊರೋನಾ ರೋಗಿಗಳಾಗಿ ಆ್ಯಂಬುಲೆನ್ಸ್ ಡ್ರೈವರ್ ಆದ ನಟ ಅರ್ಜುನ್ ಗೌಡ

ಕನ್ನಡದ ಖ್ಯಾತ ಕಿರುತೆರೆ ಹಾಗು ಸಿನಿಮಾ ನಟರಾದ ಅರ್ಜುನ್ ಗೌಡ ಅವರು ತಮ್ಮ ಕೆಲಸಗಳನ್ನು ಬಿಟ್ಟು ಆo’ಬುಲೆನ್ಸ್ ಡ್ರೈವರ್ ಆಗಿ, ಕ-ರೋನ ರೋ-ಗಿಗಳಿಗೆ ಸಹಾಯ ಆಗಲಿ ಎಂದು ಇದನ್ನು ಮಾಡಿದ್ದಾರೆ! ಇದರ ಬಗ್ಗೆ ಸಂಪೂರ್ಣ ಮಾಹಿತಿ ಗಾಗಿ ಈ ಕೆಳಗಿನ ವಿಡಿಯೋ ನೋಡಿ.

ಕೊರೋನಾ ಸೋಂಕಿತರ ಅಂತಿಮ ಸಂಸ್ಕಾರ ಮಾಡುತ್ತಿರುವ ಜಿಮ್ ರವಿ

ಕನ್ನಡದ ಸಾಕಷ್ಟು ನಟರ ಫೇಮಸ್ ಜಿಮ್ ಟ್ರೈನರ್ ಆದ ಜಿಮ್ ರವಿ ಅವರು ಇವತ್ತು ಮ ಸ ಣ ಕ್ಕೆ ಹೋಗಿ, ಸಾಲು ಸಾಲು ಸು ಡು ತ್ತಿ ರುವ ದೇ-ಹಗಳ ನಡುವೆ ವಿಡಿಯೋ ಮಾಡಿದ್ದಾರೆ, ಜಿಮ್ ರವಿ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋ ನೋಡಿ

 

Advertisement
Share this on...