ಹಮಾಸ್ ದಾ-ಳಿ ಯಲ್ಲಿ ಪ್ರಾಣ ಕಳೆದುಕೊಂಡ ಕೇರಳ ಮೂಲದ ಸೌಮ್ಯ ಕುಟುಂಬದ ಜೊತೆ ಏಕಾಏಕಿ ರಾತ್ರಿ 1 ಗಂಟೆಗೆ ಕರೆ ಮಾಡಿ ಮಾತನಾಡಿದ ಇಸ್ರೇಲ್ ಅಧ್ಯಕ್ಷ: ಅವರು ಕೊಟ್ಟ ಮಾತೇನು ಗೊತ್ತಾ?

in Kannada News/News 609 views

ತಿರುವನಂತಪುರಂ: ಇಸ್ರೇಲ್​ ಮೇ-ಲೆ ನಡೆದ ಪ್ಯಾಲೇಸ್ಟಿನಿಯನ್ ರಾ ಕೆಟ್​ ದಾ#ಳಿ ವೇಳೆ ದು ರಂ ತ ಸಾ#ವಿ-ಗೀ-ಡಾದ ಕೇರಳ ಮೂಲದ ಸೌಮ್ಯ ಸಂತೋಷ್​ ಕುಟುಂಬಕ್ಕೆ ಮಂಗಳವಾರ ಕರೆ ಮಾಡಿದ ಇಸ್ರೇಲ್​ ಅಧ್ಯಕ್ಷ ರುವೆನ್ ರಿವ್ಲಿನ್, ದುಃಖದ ಸಮಯದಲ್ಲಿ ಇಡೀ ರಾಷ್ಟ್ರ ನಿಮ್ಮ ಜತೆ ನಿಲ್ಲುವುದಾಗಿ ಧೈರ್ಯ ತುಂಬಿದರು.

Advertisement

ಸೌಮ್ಯ ಪತಿ ಸಂತೋಷ್​ ಅವರಿಗೆ ಫೋನಾಯಿಸಿದ ರಿವ್ಲಿನ್​, ಇಸ್ರೇಲ್​ ಸರ್ಕಾರ ಮತ್ತು ದೇಶದ ಜನರ ಪರವಾಗಿ ಸೌಮ್ಯ ಸಾ-ವಿ-ಗೆ ಸಂತಾಪ ಸೂಚಿಸಿದರು. ಅಲ್ಲದೆ, ಸರ್ಕಾರದಿಂದ ಅಗತ್ಯವಾದ ನೆರವು ನೀಡುವುದಾಗಿ ಇದೇ ವೇಳೆ ಸೌಮ್ಯ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಂತೋಷ್​, ಅಧ್ಯಕ್ಷರೊಂದಿಗೆ ಮಾತನಾಡುವಾಗ ನನ್ನ ಪತ್ನಿ ಮೃ-ತ-ಳಾದ ಸ್ಥಳವನ್ನು ಒಮ್ಮೆ ನೋಡಬೇಕೆಂದು ಬಯಸಿರುವುದಾಗಿ ಕೇಳಿಕೊಂಡೆ. ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಅಧ್ಯಕ್ಷರು ಸಕಲ ವ್ಯವಸ್ಥೆ ಮಾಡಿ ಕರೆಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ನಾನು ಮತ್ತು ನನ್ನ ಮಗ ಇಸ್ರೇಲ್​ಗೆ ಭೇಟಿ ನೀಡಿದಾಗ ಸ್ವತಃ ಅವರೇ ನಮ್ಮನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ರಾತ್ರಿ 1 ಗಂಟೆ ಸುಮಾರಿಗೆ ಕರೆ ಮಾಡಿದ್ದಾಗಿ ಸಂತೋಷ್​ ಸಹೋದರಿ ಸೋಫಿ ಮಾಹಿತಿ ನೀಡಿದರು. ಸುಮಾರು 20 ನಿಮಿಷಗಳ ಕಾಲ ಮಾತನಾಡಿದ್ದಾಗಿ ಹೇಳಿದರು. ಭಾಷಾ ಅನುವಾದಕರ ಸಹಾಯದಿಂದ ಮಾತನಾಡಿದೆವು ಎಂದು ತಿಳಿಸಿದರು.

ಸೌಮ್ಯ (31) ಆ್ಯಶ್​ಕೆಲೊನ್​ ನಗರದಲ್ಲಿ ವಾಸವಿದ್ದರು. ಮೇ 11ರ ಮಂಗಳವಾರ ಸಂಜೆ ತನ್ನ ಪತಿ ಸಂತೋಷ್​ರೊಂದಿಗೆ ವಿಡಿಯೋ ಕಾಲ್​ ಮೂಲಕ ಮಾತನಾಡುತ್ತಿದ್ದರು. ಇದರ ಮಧ್ಯೆಯೇ ಪ್ಯಾಲೇಸ್ಟಿನಿಯನ್ ಇ-ಸ್ಲಾ-ಮಿ-ಕ್​ ಗ್ರೂಪ್​ ನಡೆಸಿದ ರಾ ಕೆಟ್ ದಾ#ಳಿ-ಯ ವೇಳೆ ರಾ ಕೆಟ್​​ ನೇರವಾಗಿ ಸೌಮ್ಯ ಮನೆಯ ಮೇಲೇಯೇ ದಾ#ಳಿ ಮಾಡಿತ್ತು. ಕೇರಳದ ಇಡುಕ್ಕಿ ಜಿಲ್ಲೆಯ ಕೀರಿಥೋಡು ಮೂಲದ ಸೌಮ್ಯ, ಕಳೆದ 7 ವರ್ಷಗಳಿಂದ ಇಸ್ರೇಲ್​ನಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದರು.

ಸಂತೋಷ್​ ಸಹೋದರಿ ಸೋಫಿ ಸಹ ಕಳೆದ 13 ವರ್ಷಗಳಿಂದ ದಾದಿಯಾಗಿ ಕೆಲಸ ಮಾಡುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಕೇರಳಕ್ಕೆ ಮರಳಿದ್ದರು. ಫೋನ್​ ಕರೆಯ ಬಗ್ಗೆ ಮಾತನಾಡಿರುವ ಸೋಫಿ, ಇಸ್ರೇಲ್​ ಜನ ಹಾಗೂ ಸರ್ಕಾರದ ಪರವಾಗಿ ಸೌಮ್ಯ ಸಾ-ವಿ-ಗೆ ಸಂತಾಪ ಸೂಚಿಸಲು ಅಧ್ಯಕ್ಷರು ಕರೆ ಮಾಡಿದ್ದರು. ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.

ಇನ್ನು ದಕ್ಷಿಣ ಭಾರತದ ಇಸ್ರೇಲ್ ಕಾನ್ಸುಲ್ ಜನರಲ್ ಜೊನಾಥನ್ ಜಡ್ಕಾ ಅವರು ಸೌಮ್ಯಾ ಅವರ ಕುಟುಂಬವನ್ನು ಭೇಟಿಯಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ಜನರ ಮೇ-ಲೆ ನಡೆದ ಭ-ಯೋ#ತ್ಪಾ-ದ-ಕ ದಾ#ಳಿ-ಯಲ್ಲಿ ಕೊ#ಲ್ಲ-ಲ್ಪ-ಟ್ಟ ಸೌಮ್ಯಾ ಓರ್ವ ದೇವತೆ ಎಂದು ಅವರು ಜಡ್ಕಾ ಅವರು ಮಾಧ್ಯಮಗಳಿಗೆ ತಿಳಿಸಿದ್ದರು.

Advertisement
Share this on...