ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡರೆ ಖುದ್ದು ಸರ್ಕಾರವೇ ನೀಡಲಿದೆ 5000 ರೂ.: ಅದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ

in Helath-Arogya/Kannada News/News 1,109 views

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ ಆರಂಭಿಸಿದೆ. ಈಗ ಈ ಅಭಿಯಾನಕ್ಕೆ ಇನ್ನಷ್ಟು ಜೋರನ್ನು ನೀಡಲು, ಅದರ ವೇಗವನ್ನು ಹೆಚ್ಚಿಸಲು ಕೆಲವು ವಿಶೇಷ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಪ್ರಸ್ತುತ ಲಸಿಕೆಯ ಅಭಿಯಾನದಲ್ಲಿ ದೇಶದಲ್ಲಿ 18 ವರ್ಷ ದಾಟಿದ ಎಲ್ಲರಿಗೂ ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದೆ. ಆದರೆ ಇನ್ನೂ ಕೂಡಾ ಕೆಲವರಲ್ಲಿ ಲಸಿಕೆಯ ಕುರಿತಾಗಿ ಅನುಮಾನಗಳು ಹಾಗೂ ನೂರಾರು ಪ್ರಶ್ನೆಗಳು ಮನಸ್ಸಿನಲ್ಲಿ ಇರುವುದರಿಂದ ಲಸಿಕೆಯನ್ನು ಹಾಕಿಸಿಕೊಳ್ಳಲು ಮುಂದಾಗುತ್ತಿಲ್ಲ. ಆದರೆ ಇದೆಲ್ಲದರ ನಡುವೆ ಕೇಂದ್ರ ಸರ್ಕಾರವು ಲಸಿಕೆಯನ್ನು ಹಾಕಿಸಿಕೊಳ್ಳಲು ಜನರಿಗೆ ಸ್ಪೂರ್ತಿಯನ್ನು ನೀಡಲು ಮುಂದಾಗಿದೆ.

Advertisement

ಕೋವಿಡ್ ಲಸಿಕೆ ಅಭಿಯಾನ ದೇಶದಲ್ಲಿ ನಡೆಯುತ್ತಿರುವ ಈ ಸಂದರ್ಭದಲ್ಲಿ ದೇಶದ ನಾಗರಿಕರು ಮನೆಯಲ್ಲಿ ಕುಳಿತುಕೊಂಡು ಐದು ಸಾವಿರ ರೂಪಾಯಿಗಳನ್ನು ಗೆಲ್ಲುವ ಅವಕಾಶವನ್ನು ಸರ್ಕಾರವು ನೀಡಲು ಮುಂದಾಗಿದೆ. ಯಾವ ವ್ಯಕ್ತಿಯು ತಾನು ಕೋವಿಡ್ ಲಸಿಕೆಯನ್ನು ಪಡೆದಿರುವ ಒಂದು ಫೋಟೋವನ್ನು ಶೇರ್ ಮಾಡಿಕೊಂಡು, ಅದರ ಜೊತೆಗೆ ಒಂದು ಅರ್ಥಗರ್ಭಿತವಾದ ಹಾಗೂ ಆಕರ್ಷಕವಾದ ಟ್ಯಾಗ್ ಲೈನ್ ಹಾಕಿದರೆ ಅಂತಹವರಿಗೆ ಬಹುಮಾನವಾಗಿ ಸರ್ಕಾರದ ವತಿಯಿಂದ ₹5000 ಸಿಗಲಿದ್ದು, ಇದು ನಗದು ಬಹುಮಾನ ವಾಗಿರಲಿದೆ ಎನ್ನಲಾಗಿದೆ

ಮನೆಯಲ್ಲೇ ಕುಳಿತುಕೊಂಡು 5000 ರೂಪಾಯಿಗಳ ಬಹುಮಾನ ಗೆಲ್ಲುವುದು ಹೇಗೆ ಎನ್ನುವ ವಿಷಯವನ್ನು ತಿಳಿಯೋಣ ಬನ್ನಿ. Mygovtindia ದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಷಯದ ಕುರಿತಾಗಿ ಮಾಹಿತಿಯನ್ನು ನೀಡಲಾಗಿದೆ. ಟ್ವೀಟ್ ನಲ್ಲಿ,” ನೀವು ಇತ್ತೀಚಿಗಷ್ಟೇ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರೆ, ನೀವು ದೇಶದ ಲಕ್ಷಗಟ್ಟಲೆ ನಾಗರಿಕರಿಗೆ ವ್ಯಾಕ್ಸಿನ್ ಪಡೆಯಲು ಪ್ರೇರಣೆಯನ್ನು ನೀಡಬಹುದು. ನೀವು ಲಸಿಕೆಯನ್ನು ಪಡೆದಂತಹ ಫೋಟೋ ಹಾಗೂ ಅದರ ಜೊತೆಗೆ ಒಂದು ಆಕರ್ಷಕವಾದ ಟ್ಯಾಗ್ ಲೈನ್ ಹಾಕುವ ಮೂಲಕ ಐದು ಸಾವಿರ ರೂಪಾಯಿಗಳನ್ನು ಗೆಲ್ಲಬಹುದು” ಎಂದು ತಿಳಿಸಲಾಗಿದೆ.

ಮೈ ಗೌರ್ನಮೆಂಟ್ ಇಂಡಿಯಾ ಟ್ವಿಟರ್ನಲ್ಲಿ ಫೋಟೋ ಶೇರ್ ಮಾಡಿಕೊಳ್ಳುವುದಕ್ಕಾಗಿ ಒಂದು ಲಿಂಕ್ ಶೇರ್ ಮಾಡಿದ್ದು ಅದರಲ್ಲಿ ಲಸಿಕೆಯನ್ನು ಪಡೆದ ಫೋಟೋವನ್ನು ಶೇರ್ ಮಾಡಿಕೊಳ್ಳಬೇಕಿದೆ. ಪ್ರತಿ ತಿಂಗಳು ಆಕರ್ಷಕವಾಗಿರುವ ಟ್ಯಾಗ್ ಲೈನ್ ಗಳನ್ನು ಹೊಂದಿರುವ ಹತ್ತು ಜನರ ಫೋಟೋಗಳನ್ನು ಆಯ್ಕೆ ಮಾಡಿ, ಅವರಿಗೆ ತಲಾ 5000 ರೂಪಾಯಿಗಳ ಬಹುಮಾನವನ್ನು ನೀಡಲಾಗುವುದು. ಕೋವಿಡ್ ವ್ಯಾಕ್ಸಿನ್ ಪಡೆಯುವ ವಿಚಾರವಾಗಿ ಜನರಿಗೆ ಪ್ರೇರಣೆ ನೀಡುವಂತಹ ಟ್ಯಾಗ್ ಲೈನ್ ಹಾಕಿದ್ದರೆ ಖಂಡಿತ ಬಹುಮಾನ ಸಿಗುತ್ತದೆ ಎನ್ನಲಾಗಿದೆ. ಇದಕ್ಕಾಗಿ Mygovtindia ಪೋರ್ಟಲ್ ನಲ್ಲಿ ಎಲ್ಲಾ‌ ಮಾಹಿತಿಗಳು ಲಭ್ಯವಿದೆ.

Advertisement
Share this on...