ಹಾವೇರಿ: ಮಹಾಮಾರಿ ಕರೊನಾ ಮರಣಮೃದಂಗ ಬಾರಿಸುತ್ತಿದ್ದು, ಸಾ ವು – ನೋ ವಿನ ಪ್ರಮಾಣ ದಿನದಿಂದ ದಿನಕ್ಕೇ ಶರವೇಗದಲ್ಲಿ ಏರುತ್ತಲೇ ಇದೆ. ಇದೀಗ ಈ ಸೋಂಕಿಗೆ ಒಂದೇ ದಿನ ತಾಯಿ-ಮಗ ಬ ಲಿ ಯಾಗಿದ್ದು, ಒಂದೇ ಚಿಬತೆ ಯಲ್ಲಿ ಇವರಿಬ್ಬರ ಅಂತ್ಯಸಂಸ್ಕಾರ ನೆರವೇರಿಸಿದ ಹೃದಯ ವಿಬದ್ರಾ ವಕ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ಇಂದು ಸಂಭವಿಸಿದೆ.
ನಾಗರಾಜ್ ಬನ್ನಿಹಟ್ಟಿ ಮತ್ತು ಇವರ ತಾಯಿ ಲಲಿತವ್ವ ಬನ್ನಿಹಟ್ಟಿ ಮೃತ ದುರ್ದೈವಿಗಳು. ನಾಗರಾಜ್ ಅವರು ಚಿಕ್ಕಣಜಿ ಗ್ರಾಮದ ಹೆಸ್ಕಾಂ ನೌಕರನಾಗಿದ್ದ. ಇವರಿಬ್ಬರಿಗೂ ಇತ್ತೀಚಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ತಾಯಿಯನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾವಣಗೇರಿ ಆಸ್ಪತ್ರೆಯಲ್ಲಿ ಮಗ ಚಿಕಿತ್ಸೆ ಪಡೆಯುತ್ತಿದ್ದ.
ಚಿಕಿತ್ಸೆ ಫಲಿಸದೆ ತಾಯಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಇತ್ತ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಗನೂ ಡಾವಣಗೇರಿ ಆಸ್ಪತ್ರೆಯಲ್ಲಿ ಮೃ ತ ಪಟ್ಟಿದ್ದ. ಇಂದು(ಶನಿವಾರ) ಬೆಳಗ್ಗೆ ಇವರಿಬ್ಬರ ಮೃ ತ ದೇ ಹ ವನ್ನು ಸ್ವಗ್ರಾಮದಲ್ಲಿ ಒಂದೇ ಚಿ ತೆ ಯಲ್ಲಿ ಇಟ್ಟು ಅಂತ್ಯಸಂಸ್ಕಾರ ಮಾಡಲಾಗಿದೆ. ಆ ಮೂಲಕ ತಾಯಿ-ಮಗ ಸಾ ವ ಲ್ಲೂ ಒಂದಾಗಿದ್ದಾರೆ.
ತಾಯಿ-ಮಗ ಇಬ್ಬರೂ ಒಳ್ಳೆತನದಿಂದಲೇ ಗ್ರಾಮದಲ್ಲಿ ಚಿರಪರಿಚಿತರಾಗಿದ್ದರು. ಇವರಿಬ್ಬರ ಸಾ ವಿ ನ ಸುದ್ದಿ ಕೇಳಿ ಗ್ರಾಮಕ್ಕೆ ಗ್ರಾಮವೇ ಶೋಕದಲ್ಲಿ ಮುಳುಗಿದಂತಿದೆ.
ಇದನ್ನೂ ಓದಿ: ಕಂದನ ಮುಖ ನೋಡುವ ಮುನ್ನವೇ ತಂದೆಗೆ ಈ ಸ್ಥಿತಿ ಬರುತ್ತೇಂತ ಯಾರೂ ಊಹಿಸಿರಲಿಲ್ಲ, ಮಗು ಜನಿಸುವ ಮುನ್ನವೇ ಹೆಂಡತಿ…. ಕಣ್ಣೀರು ತರಿಸುತ್ತೆ ಈ ಕಥೆ
ದಾವಣಗೆರೆ: ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ… ಎಂದು ಪದೇಪದೆ ಹಿಡಿಶಾಪ ಹಾಕಬೇಕೆನ್ನಿಸುತ್ತೆ ಈ ಕರುಣಾಜನಕ ಸ್ಟೋರಿ ಕೇಳಿದ್ರೆ…
ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದ ನಿವಾಸಿ ರೋಜಾ ತುಂಬು ಗರ್ಭಿಣಿ. ನಾಲ್ಕೈದು ದಿನದಲ್ಲಿ ಹೆರಿಗೆ ಆಗಲಿದ್ದು, ಇಡೀ ಕುಟುಂಬ ಪುಟ್ಟ ಕಂದನ ಸ್ವಾಗತಿಸಲು ಕಾಯುತಿತ್ತು. ರೋಜಾಳ ಗಂಡ ಸುರೇಶ್ ನಾಯ್ಕ ತನ್ನ ಮಗುವನ್ನ ಕಣ್ತುಂಬಿಕೊಳ್ಳಲು ಚಾತಕಪಕ್ಷಿಯಂತೆ ಕಾಯುತ್ತಿದ್ದ.
ಇಡೀ ಕುಟುಂಬ ಮಗು ಬರುವ ಸಂಭ್ರಮದಲ್ಲಿ ಮಿಂದೇಳಲು ತವಕಿಸುತ್ತಿತ್ತು. ಅಷ್ಟರಲ್ಲಿ ಎಂಟ್ರಿ ಕೊಟ್ಟ ಮಹಾಮಾರಿ ಕರೊನಾ ಸುರೇಶ್ ನಾಯ್ಕನ ಪ್ರಾಣ ತೆಗೆದಿದೆ! ಮೂಲತಃ ಹೊಳಲ್ಕೆರೆ ತಾಲೂಕಿನ ಐನಹಳ್ಳಿ ಗ್ರಾಮದ ಸುರೇಶ್ ನಾಯ್ಕ, ಸಂತೆಬೆನ್ನೂರು ಬೆಸ್ಕಾಂ ಲೈನ್ ಮನ್ ಆಗಿ ಕೆಲಸ ಮಾಡುತ್ತಿದ್ದ. ಕರೊನಾ ಸೋಂಕು ತಗುಲಿದ್ದರಿಂದ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ 10 ದಿನಗಳಿಂದ ಸುರೇಶ್ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.
ಗಂಡ ಗುಣಮುಖವಾಗಿ ಮನೆಗೆ ಬಂದೇ ಬರುತ್ತಾನೆ ಎಂದು ಬರುವ ದಾರಿಯನ್ನೇ ಕಾಯುತ್ತಿದ್ದ ಪತ್ನಿಗೆ ಗಂಡನ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಜೂನ್ 3ರಂದು ರೋಜಾಗೆ ಹೆರಿಗೆ ದಿನಾಂಕವನ್ನ ವೈದ್ಯರು ಕೊಟ್ಟಿದ್ದಾರೆ.
ಇದನ್ನೂ ಓದಿ: ಒಂದೇ ದಿನ ತಾಯಿ-ತಂದೆ ಕೊರೋನಾಗೆ ಬಲಿ, ಅನಾಥವಾದ ಮಗು
ಚಾಮರಾಜನಗರದ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಕೊರೊನಾ ಸೋಂಕಿಗೆ ಪತಿ, ಪತ್ನಿ ಇಬ್ಬರೂ ಮೃತಪಟ್ಟಿರುವ ಘಟನೆ ನಡೆದಿದ್ದು, ಅವರ 5 ವರ್ಷದ ಮಗು ಅನಾಥವಾಗಿದೆ.
ಮೃತಪಟ್ಟವರನ್ನು ಆಟೋ ಚಾಲಕರಾಗಿದ್ದ ಗುರುಪ್ರಸಾದ್ (35) ಅವರ ಪತ್ನಿ ರಶ್ಮಿ (30) ಎಂದು ಗುರುತಿಸಲಾಗಿದೆ.
10 ದಿನಗಳ ಹಿಂದೆ ಗುರುಪ್ರಸಾದ್‌ಗೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲಾ ಕೊರೊನಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ನಾಲ್ಕೂ ದಿನಗಳ ಹಿಂದೆ ಮೃತಪಟ್ಟವರು. ಅವರ ಪತ್ನಿ ರಶ್ಮಿಗೂ ಸೋಂಕು ತಗುಲಿ ಹೋಂ ಐಸೋಲೇಷನ್ ಆಗಿದ್ದು, ಅವರು ರವಿವಾರ ಉಸಿರಾಟದ ಸಮಸ್ಯೆಯಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಇಬ್ಬರಿಗೂ ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಮಗುವನ್ನು ರಶ್ಮಿ ತಂಗಿಯ ಮನೆಯಲ್ಲಿ ಇರಿಸಿದ್ದರು. ರಶ್ಮಿ ಹೋಂ ಐಸೋಲೇಷನ್‌ನಲ್ಲಿದ್ದರಿಂದ ಅವರ ತಂದೆ ತಾಯಿ ಕೊತ್ತಲವಾಡಿಯ ಮಗಳ ಮನೆಗೆ ಬಂದು ಆರೈಕೆ ಮಾಡುತ್ತಿದ್ದರು.