ಯಾರಿಗೂ ಹೇಳದೆ 4 ವರ್ಷದ ಹಾಗು 4 ತಿಂಗಳ ಮಕ್ಕಳ ಜೊತೆ ಮನೆಯಿಂದ ಹೊರಟ ದಂಪತಿಯ ದು ರಂ ತ ಅಂತ್ಯ: ಜಲಾಶಯದಲ್ಲಿ ಆಗಿದ್ದೇನು ಗೊತ್ತಾ?

in Kannada News/News 1,455 views

ವಿಜಯವಾಡ:

Advertisement
ದಂಪತಿ ಮತ್ತು ಮಕ್ಕಳಿಬ್ಬರ ಮೃ ತ ದೇ ಹ ಪತ್ತೆಯಾಗಿರುವ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಬಿ. ಕುಡೂರು ವಲಯದಲ್ಲಿ ಬರುವ ಸಗಿಲೇರು ಜಲಾಶಯದಲ್ಲಿ ನಡೆದಿದೆ.

ಶುಕ್ರವಾರ ಬೆಳಗ್ಗೆ ಮೃ ತ ದೇ ಹ ಗಳು ಪತ್ತೆಯಾಗಿವೆ. ಹತ್ತಿರದ ಗ್ರಾಮಸ್ಥರು ಜಲಾಶಯದಲ್ಲಿ ಶ ವ ಗಳು ತೇಲುತ್ತಿದ್ದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಮೃ ತ ದೇ‌ ಹ ಗಳನ್ನು ವಶಕ್ಕೆ ಪಡೆದು, ಮ ರ ಣೋ ತ್ತರ ಪರೀಕ್ಷೆಗಾಗಿ ಪೊರುಮಾಮಿಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನೆಯ ಬಳಿಕ ಮೃ ತ ರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅವರನ್ನು ಬಳ್ಳಾರಿ ರಾಮಕೃಷ್ಣ (43), ಪತ್ನಿ ಅನುಷಾ (35) ಮತ್ತು ಮಕ್ಕಳಾದ ನಿಖಿಲ್​ (4) ಹಾಗೂ ಕಲ್ಯಾಣ್​ (4 ತಿಂಗಳು) ಎಂದು ಗುರುತಿಸಲಾಗಿದೆ. ಮೃ ತ ರು ಪೊರುಮಾಮಿಲಾದ ಶ್ರೀರಾಮನಗರ ಕಾಲನಿಯ ನಿವಾಸಿಗಳು. ರಾಮಕೃಷ್ಣ, ಪಾಲಕರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ ಕೆಲ ಮಹತ್ವದ ಮಾಹಿತಿಗಳು ಬಯಲಾಗಿವೆ.

ಗುರುವಾರ ಮಧ್ಯಾಹ್ನ ರಾಮಕೃಷ್ಣ ಮತ್ತು ಅನುಷಾ ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟರು ಎಂದು ರಾಮಕೃಷ್ಣ ತಂದೆ ಹೇಳಿಕೆ ನೀಡಿದ್ದಾರೆ. ಅದಾದ ಬಳಿಕ ಅವರ ಬಗ್ಗೆ ಯಾವುದೇ ಮಾಹಿತಿ ದೊರಕಲಿಲ್ಲ. ಫೋಟೋ ನೋಡಿದ ಮೇಲೆಯೇ ಅವರ ಬಗ್ಗೆ ಗೊತ್ತಾಗಿದ್ದು ಎಂದು ತಿಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ರಾಮಕೃಷ್ಣ ಫೈನಾನ್ಸ್​ ವ್ಯವಹಾರ ನಡೆಸುತ್ತಿದ್ದರು. ಅತ್ಯಧಿಕ ಸಾಲವಾಗಿದ್ದರಿಂದ ಹೆದರಿ ಮೃ ತ ಪ ಟ್ಟಿ ದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: ಪೈಲಟ್ ಆಗಬೇಕೆಂಬ ಕನಸು ಹೊತ್ತು ಇನ್ನೇನು ಕೆಲವೇ ದಿನಗಳಲ್ಲಿ ಪೈಲಟ್ ಆಗಬೇಕಿದ್ದ ಕರ್ನಾಟಕದ ಯುವಕನ‌ ದು ರಂ ತ ಅಂ ತ್ಯ

ಸುಂಟಿಕೊಪ್ಪ: ಭವಿಷ್ಯದಲ್ಲಿ ಪೈಲೆಟ್ ಆಗಬೇಕೆಂಬ ಕನಸು ಹೊತ್ತಿದ್ದ ಸುಂಟಿಕೊಪ್ಪ ಸಮೀಪದ ಮಾದಾಪುರದ ಜಂಬೂರುಬಾಣೆಯ ಯುವಕ ಗುಜರಾತಿನ ಅಹಮದಾಬಾದ್ ನಲ್ಲಿ ಜೂ.4ರಂದು ಆ ತ್ಮ ಹ ತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಸುಂಟಿಕೊಪ್ಪ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬೋಪಯ್ಯ ಮತ್ತು ಮಾದಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪೊನ್ನಮ್ಮ ಅವರ ಪುತ್ರ ಶಿಬಿ ಬೋಪಯ್ಯ(23) ಆ ತ್ಮ ಹ ತ್ಯೆ ಗೆ ಶರಣಾದ ಯುವಕ.

ಗುಜರಾತಿನ ಅಹಮದಾಬಾದ್ ನಲ್ಲಿ ಏರೋನಾಟಿಕ್ ಸೆಂಟರ್ ನಲ್ಲಿ ತರಬೇತಿ ಕೇಂದ್ರದಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ಶಿಬಿ ಬೋಪಯ್ಯ ಇನ್ನೇನು 3 ತಿಂಗಳಲ್ಲಿ ತರಬೇತಿ ಮುಗಿಸಿ ಭವಿಷ್ಯದ ಪೈಲಟ್ ಆಗುವ ಕನಸು ಹೊತ್ತಿದ್ದನು. ಆದರೆ ಶುಕ್ರವಾರ ಸೆಂಟರ್ ಸಮೀಪದ ಕಾಡಿನಲ್ಲಿ ಮರವೊಂದಕ್ಕೆ‌ ನೇ ಣು ಹಾಕಿಕೊಂಡು ಆ ತ್ಮ ಹ ತ್ಯೆ ಮಾಡಿಕೊಂಡಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಮೇ ತಿಂಗಳಲ್ಲೇ ತರಬೇತಿ ಅಂತ್ಯವಾಗಿ ಈತ ಪೈಲೆಟ್ ಆಗಿ ಹೊರ ಬರಬೇಕಿತ್ತು. ಆದರೆ ಲಾಕ್​ಡೌನ್​ ಕಾರಣದಿಂದಾಗಿ ತರಬೇತಿ ಅವಧಿಯೂ ಮುಂದೂಡಿಕೆಯಾಗಿತ್ತು. ಹಾಗಾಗಿ ತರಬೇತಿ ಮುಗಿಯಲೂ ಇನ್ನೂ ಎರಡು ತಿಂಗಳಷ್ಟೇ ಬಾಕಿ ಉಳಿದಿತ್ತು. ತರಬೇತಿ ಮುಗಿಸಿ ಆದಷ್ಟು ಬೇಗನೆ ಬರುವುದಾಗಿ ತಮ್ಮ ಪೋಷಕರ ಜೊತೆ ಹೇಳುತ್ತಿದ್ದನಂತೆ. ಪ್ರತಿದಿನ ರಾತ್ರಿ ಊಟದ ಬಳಿಕ ತಂದೆ ತಾಯಿ ಜೊತೆ ವೀಡಿಯೋಕಾಲ್ ಮಾಡಿ ಮಾತನಾಡಿಯೇ ಮಲಗುತ್ತಿದ್ದನಂತೆ.

ಈಗಾಗಲೇ ಮನೆಯವರು ಗುಜರಾತಿಗೆ ಪ್ರಯಾಣ ಬೆಳೆಸಿದ್ದಾರೆ.

ನೇ ಣು ಸ್ಥಿತಿಯಲ್ಲಿರುವ ಯುವಕನ ಕಿವಿಯಲ್ಲಿ ಇಯರ್ ಪೋನ್, ವಾಚ್, ಶೂ ಧರಿಸಿರುವುದು ಕಂಡು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

Advertisement
Share this on...