ಕೋವಿಡ್ ಸಾಂಕ್ರಮಿಕದ ವಿರುದ್ಧ ಹೋರಾಟ ಮಾಡಲು ಪರಿಹಾರಗಳನ್ನು ಸೂಚಿಸುತ್ತಿರುವ ಇಬ್ಬರು ಪುಟಾಣಿ ಬಾಲಕರ ಕ್ಯೂಟ್ ವಿಡಿಯೋ ವೈರಲ್ ಆಗಿದೆ.
“ಕೊರೋನಾದಿಂದ ಉಳಿದುಕೊಳ್ಳಬೇಕಾದಲ್ಲಿ ನಮ್ಮ ಓದನ್ನು ತ್ಯಾಗ ಮಾಡಬೇಕಾಗಿ ಬಂದರೂ ನಾವು ಸಿದ್ಧರಿದ್ದೇವೆ ಮೋದಿಜೀ” ಎಂದು ಒಬ್ಬ ಪುಟಾಣಿ ಹೇಳಿದರೆ, “ಒಂದು ವೇಳೆ ಏಳು ವರ್ಷ ಶಾಲೆ ಮುಚ್ಚಬೇಕಾಗಿ ಬಂದರೂ ನಾವು ಆ ಬಲಿದಾನಕ್ಕೂ ಸಿದ್ಧರಿದ್ದೇವೆ” ಎಂದಿದ್ದಾನೆ ಮತ್ತೊಬ್ಬ.
ಒಟ್ಟಿನಲ್ಲಿ ಈ ಚೇಷ್ಟೆ ಬಾಲಕರು ತಮ್ಮ ಶೈಕ್ಷಣಿಕ ಹೊರೆಯನ್ನು ತ್ಯಾಗ ಮಾಡಲು ಅದೆಷ್ಟು ಉತ್ಸುಕರಿದ್ದಾರೆ ಎಂದು ಕಂಡ ನೆಟ್ಟಿಗರು ಬಿದ್ದು ಬಿದ್ದೂ ನಕ್ಕಿದ್ದಾರೆ.
😂😂😂😂😂 pic.twitter.com/McgoyyhEzc
— Bhaiyyaji (@bhaiyyajispeaks) June 4, 2021
ಇದನ್ನೂ ಓದಿ: ಅಖಿಲೇಶ್ ಯಾದವ್ಗೆ ಬಿಗ್ ಶಾಕ್ ಕೊಟ್ಟ ತಂದೆ ಮುಲಾಯಂ ಸಿಂಗ್ ಯಾದವ್
ಲಖನೌ: ಸಮಾಜವಾದಿ ಪಕ್ಷದ(ಎಸ್ಪಿ) ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ತಂದೆ, ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಈ ಕುರಿತು ಅಧಿಕೃತ ಟ್ವಿಟರ್ನಲ್ಲಿ ಅವರ ಫೋಟೋ ಶೇರ್ ಮಾಡಲಾಗಿದೆ.
ಇದು ಅಖಿಲೇಶ್ ಅವರನ್ನು ಮುಜುಗರಕ್ಕೆ ಸಿಲುಕಿಸಿದೆ. ಇದಕ್ಕೆ ಕಾರಣ, ಲಸಿಕೆ ಆರಂಭವಾದ ಮೊದಲ ದಿನದಿಂದಲೂ ಅಖಿಲೇಶ್, ಇದು ಬಿಜೆಪಿ ವ್ಯಾಕ್ಸಿನ್, ಇದರ ಮೇಲೆ ನನಗೆ ನಂಬಿಕೆ ಇಲ್ಲ, ನಾನು ಅದನ್ನು ಹಾಕಿಕೊಳ್ಳುವುದಿಲ್ಲ ಎಂದು ಕಂಡಕಂಡಲ್ಲಿ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಸದ್ಯಕ್ಕೆ ನಾನು ಲಸಿಕೆ ಹಾಕಲು ಹೋಗುತ್ತಿಲ್ಲ. ಬಿಜೆಪಿಯ ಲಸಿಕೆಯನ್ನು ನಾನು ಹೇಗೆ ನಂಬುವುದು ಎಂದು ಪ್ರಶ್ನಿಸಿದ್ದರು. ನಮ್ಮ ಸರ್ಕಾರ ರಚನೆಯಾದಾಗ ಎಲ್ಲರಿಗೂ ಉಚಿತ ಲಸಿಕೆ ಸಿಗುತ್ತದೆ. ನಾವು ಬಿಜೆಪಿಯ ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಈಗ ಅವರ ತಂದೆಯೇ ಲಸಿಕೆ ಹಾಕಿಸಿಕೊಂಡಿದ್ದೂ ಅಲ್ಲದೇ ಅದು ಟ್ವಿಟರ್ನಲ್ಲಿ ಶೇರ್ ಆಗಿರುವ ಕಾರಣ, ಅಖಿಲೇಶ್ ಬಿಜೆಪಿ ಮುಖಂಡ ಬಾಯಿಗೆ ಆಹಾರವಾಗಿದ್ದಾರೆ.
आज समाजवादी पार्टी के संस्थापक, पूर्व रक्षा मंत्री, पूर्व मुख्यमंत्री, आदरणीय नेताजी जी ने लगवाई कोरोना वैक्सीन। pic.twitter.com/DfZzcXMGAk
— Samajwadi Party (@samajwadiparty) June 7, 2021
81 ವರ್ಷದ ಯಾದವ್ ಮೇದಾಂತ ಆಸ್ಪತ್ರೆಯಲ್ಲಿ ಲಸಿಕೆ ಪಡೆದಿದ್ದಾರೆ. ಇದರ ಫೋಟೋ ಟ್ವಿಟರ್ನಲ್ಲಿ ಶೇರ್ ಆಗುತ್ತಿದ್ದಂತೆಯೇ, ತಂದೆಯಿಂದಾದರೂ ಮಗ ಪ್ರೇರಣೆ ಪಡೆಯಲಿ ಎಂದು ಬಿಜೆಪಿ ತಿರುಗೇಟು ನೀಡಿದೆ. ಮುಲಾಯಂ ಸಿಂಗ್ ಯಾದವ್ ಅವರು ಲಸಿಕೆ ಪಡೆಯುವ ಮೂಲಕ ಉತ್ತಮ ಸಂದೇಶ ರವಾನಿಸಿದ್ದಾರೆ. ಎಸ್ಪಿ ಅಧ್ಯಕ್ಷ ಹಾಗೂ ಕಾರ್ಯಕರ್ತರು ಇವರನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಹೇಳಿದೆ. ಇದೊಂದು ಉತ್ತಮ ಸಂದೇಶವಾಗಿದೆ, ಇವರು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಟ್ವೀಟ್ ಮೂಲಕ ತಿಳಿಸಿದ್ದಾರೆ.