ಚೇತನ್ VS ರಕ್ಷಿತ್ ಶೆಟ್ಟಿ: ಚೇತನ್‌ನ್ನ ರಕ್ಷಿತ್ ಶೆಟ್ಟಿ ಹಿಗ್ಗಾಮುಗ್ಗಾ ಝಾಡಿಸಲು ಹುಟ್ಟಿಕೊಂಡ ಆ ‘ಕೆಟ್ಟ’ ಕಮೆಂಟ್ ಇಲ್ಲಿದೆ ನೋಡಿ

in FILM NEWS/Kannada News/News 593 views

ಬೆಂಗಳೂರು: ಸೋಶಿಯಲ್ ಮೀಡಿಯಾದಿಂದ ಪ್ರಕಟವಾಗುವ ಸುದ್ದಿಗಳು ಹಾಗೆ. ಎಲ್ಲಿಂದಲೋ ಎಲ್ಲಿಗೋ ಲಿಂಕ್ ಪಡೆದುಕೊಂಡುಬಿಡುತ್ತವೆ.

ಕ್ರಿಯೆ-ಅದಕ್ಕೆ ಕೊಟ್ಟ ಪ್ರತಿಕ್ರಿಯೆ, ನೂರಾರು ಕಮೆಂಟ್ ಗಳು ಮೂಲ ವಿಚಾರವನ್ನೇ ಬದಲಿಸಿಬಿಡುತ್ತವೆ. ಕನ್ನಡ ಚಿತ್ರರಂಗವನ್ನು ಡರ್ಟಿ ಪ್ಲೇಸ್ ಎಂದು ಕರೆದ ವ್ಯಕ್ತಿಯೊಬ್ಬ ನಟ ಚೇತನ್ ಕುಮಾರ್ ಅವರಿಂದ ಕೆಲವು ಬದಲಾವಣೆ ಆರಂಭವಾಗಿದೆ ಎಂದಿದ್ದ. ಕನ್ನಡ ಚಿತ್ರರಂಗದ ಮರುಭೂಮಿಯಲ್ಲಿ ಚೇತನ್ ಅಹಿಂಸಾ ಮಳೆಯಂತೆ ಎಂದು ಕೊಂಡಾಡಿದ್ದ.

ಸುದಿಪ್ಟೊ ಮೊಂಡಲ್ ಎಂಬುವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದ ನಿಮ್ಮ ಅಭಿಮಾನಕ್ಕೆ ಧನ್ಯವಾದ. ಕನ್ನಡ ಚಿತ್ರರಂಗದಲ್ಲಿ ನಾವು ಅತ್ಯುತ್ತಮ ಸಿನಿಮಾ ನಿರ್ಮಾಣ ಮಾಡಿದ್ದೇವೆ ಮತ್ತು ಮಾಡುತ್ತಿದ್ದೇವೆ ಎಂದು ಹೇಳಿದ್ದರು.

ಈ ಎಲ್ಲ ವಿಚಾರಗಳನ್ನು ಗಮನಿಸಿದ ನಟ ರಕ್ಷಿತ್ ಶೆಟ್ಟಿ ಟ್ವೀಟ್  ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.  ಚೇತನ್ ಅವರೇ ನಿಮ್ಮ ಉತ್ತಮ ಕೆಲಸಗಳಿಗಾಗಿ ನಿಮ್ಮನ್ನು ಗೌರವಿಸುತ್ತೇನೆ. ನಿಮ್ಮ ಆಲೋಚನೆ ವಿಧಾನ ಮೊದಲು ಸರಿ ಮಾಡಿಕೊಳ್ಳಿ.  ಅನೇಕ ದಿಗ್ಗಜರ ಹುಟ್ಟಿಗೆ ಕಾರಣವಾಗಿದ್ದು ಕನ್ನಡ ಚಿತ್ರರಂಗ.  ನಿಮಗೆ ಈ ವಿಚಾರ ಗೊತ್ತಿಲ್ಲದೆ ಏನೂ ಇಲ್ಲ. ಇವತ್ತು ನಾನು ಇಲ್ಲಿರುವ ಸ್ಥಿತಿಗೆ ಚಿತ್ರರಂಗವೇ  ಕಾರಣ ಎಂದು ಖಾರವಾಗಿಯೇ ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಮೂರನೇ ವ್ಯಕ್ತಿಯೊಬ್ಬ ಮಾಡಿದ ಟ್ವೀಟ್ ಚಿತ್ರರಂಗದ ಬಗ್ಗೆ ಇಷ್ಟೆಲ್ಲ ಮಾತನಾಡುವ ಕೆಲಸ ಮಾಡಿದೆ.

Advertisement

ಸುದೀಪ್ ಮೊಂಡಲ್ ಅಂದಿದ್ದೇನು?

ನಟ ಚೇತನ್ ಅವರು ಬರೆದ ಜಾತಿ ಬಗೆಗಿನ ಬರಹವೊಂದನ್ನು ಪತ್ರಕರ್ತ ಸುದಿಪ್ತೋ ಮೊಂಡಲ್ ಅವರು ಟ್ವೀಟ್ ಮಾಡಿ, ‘ದಕ್ಷಿಣ ಭಾರತದ ಅತೀ ಕೆಟ್ಟ ಚಲನಚಿತ್ರೋದ್ಯಮದಲ್ಲಿ ಅಂತಿಮವಾಗಿ ಸ್ವಲ್ಪ ಭರವಸೆ ಮೂಡಿದೆ. ಕನ್ನಡ ಸಿನೆಮಾ ಎಂದು ಕರೆಯಲ್ಪಡುವ ಈ ಒಣ ಭೂಮಿಯಲ್ಲಿ ಚೇತನ್ ಅಹಿಂಸಾ ಹೆಚ್ಚು ಅಗತ್ಯವಿರುವ ಮಳೆಗಾಲ’ ಎಂದು ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಚೇತನ್, ನನ್ನ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದ್ದಕ್ಕೆ ಧನ್ಯವಾದಗಳು. ನಾನು ಸಮಾನತೆಯ ಪತ್ರಿಕೋದ್ಯಮವನ್ನು ಗೌರವಿಸುತ್ತೇನೆ. ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ನಾವು ಈ ಹಿಂದೆ ಅನೇಕ ಉತ್ತಮ ಚಲನಚಿತ್ರಗಳನ್ನು ಮಾಡಿದ್ದೇವೆ. ಪ್ರಸಕ್ತ ಇತರ ಚಿತ್ರರಂಗಳಂತೆ ವಿಷಯ ಮತ್ತು ರಚನಾತ್ಮಕ ಸುಧಾರಣೆಗಳ ವಿಷಯದಲ್ಲಿ ವಿಕಸನಗೊಳ್ಳುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಈ ಲೇಖನಕ್ಕೆ ನಟ ರಕ್ಷಿತ್ ಶೆಟ್ಟಿ ಕೂಡಾ ಪ್ರತಿಕ್ರಿಯೆ ನೀಡಿದ್ದು, ‘ದಕ್ಷಿಣದ ಭಾರತದಲ್ಲಿ ಕನ್ನಡ ಚಿತ್ರರಂಗ ನನಗೆ ಮತ್ತು ಇನ್ನೂ ಅನೇಕರಿಗೆ ಪ್ರತಿಭೆ ವ್ಯಕ್ತಪಡಿಸಲು ವೇದಿಕೆಯನ್ನು ನೀಡಿದೆ. ನನಗಿಂತ ಮೊದಲು ಅನೇಕ ದಂತಕಥೆಗಳನ್ನು ಈ ಚಿತ್ರರಂಗ ನಿರ್ಮಿಸಿದೆ. ಅದರ ಬಗ್ಗೆ ನಿಮಗೆ ತಿಳಿದಿಲ್ಲವೆಂದು ನನಗೆ ಖಾತ್ರಿಯಿದೆ. ಏನೂ ಅಲ್ಲದಿದ್ದ ನನ್ನ ಜೀವನವನ್ನು ಚಿತ್ರರಂಗ ಇಂದು ಇಲ್ಲಿ ತನಕ ಬೆಳೆಸಿದೆ. ಇಲ್ಲಿ ಕೆಲಸ ಮಾಡುವ ಸಾವಿರಾರು ಜನರಿಗೆ ಚಿತ್ರರಂಗವೇ ಜೀವನ ಎಂದು ಬರೆದಿದ್ದಾರೆ.

ಜೊತೆಗೆ, ಗೌರವಾನ್ವಿತ ಚೇತನ್ ಅಹಿಂಸಾ ಅವರ ಕಾರ್ಯಗಳಿಗಾಗಿ ನಮಗೆ ಮೆಚ್ಚುಗೆಯಿದೆ. ಆದರೆ ಸರ್, ಕೆಟ್ಟ ಸುಳ್ಳುಗಳಿಂದ ಕೆಡುಕನ್ನು ಬಿತ್ತುತ್ತಿರುವ ನಿಮ್ಮ ಮನಸ್ಸನ್ನು ಪರಿಶುದ್ಧಗೊಳಿಸಬೇಕಾಗಿದೆ. ಶುಭಕಾಂಕ್ಷೆಗಳೊಂದಿಗೆ’ ಎಂದು ನಟ ರಕ್ಷಿತ್ ಶೆಟ್ಟಿ ಕಮೆಂಟ್ ಮಾಡಿದ್ದಾರೆ.

ಸಚಿವ ಶಿವರಾಮ್ ಹೆಬ್ಬಾರ್ ಕೂಡ ಚೇತನ್ ಬಗ್ಗೆ ಅಸಮಾಧಾನ ಹೊರಹಾಕಿದ್ದರು

ಕನ್ನಡ ಚಿತ್ರರಂಗಗಳಲ್ಲಿ ನಟಿಸುತ್ತಿರುವ ಚೇತನ್ ಎನ್ನುವ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ವಿರುದ್ಧವಾಗಿ ಅವಹೇಳನಕಾರಿಯಾಗಿ, ಪ್ರಚೋದನಕಾರಿಯಾಗಿ ಮಾತಾಡಿರುವುದು ಗಮನಕ್ಕೆ ಬಂದಿದ್ದು. ಮೊದಲಿಗೆ, ಆತನ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದುಕಾರ್ಮಿಕ ಖಾತೆ ಹಾಗೂ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ
ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

ಇನ್ನು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಂದು ಧರ್ಮ, ಜಾತಿಗಳಿಗೆ ಸ್ಥಾನಮಾನ ನೀಡಿದ್ದಾರೆ. ಈ ವ್ಯಕ್ತಿಯ ಹೇಳಿಕೆ ಸಂವಿಧಾನಕ್ಕೆ ವಿರೋಧವಾದುದು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡು ವಂತಹದು.

ಸಮಾಜದಲ್ಲಿ ತಾನು ಗುರುತಿಸಿಕೊಳ್ಳಬೇಕು ಅಂತಲೋ, ಗಂಜೀ ಕಾಸಿನ ಆಸೆಗೋ ಹೇಳಿಕೆ ಕೊಡೋ ಇಂತಹ ಸಮಾಜ ಕಂಟಕ ರನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕೆಂದು ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

Advertisement
Share this on...