ಚಿತ್ರನಟರು ಮತ್ತು ಕ್ರೀಡಾ ತಾರೆಯರನ್ನು ಅಭಿಮಾನಿಗಳು ಎಷ್ಟರಮಟ್ಟಿಗೆ ಫಾಲೋ ಮಾಡುತ್ತಾರೆ, ಅವರು ಮಾಡುವ ಕಾರ್ಯಗಳು (ಕೆಟ್ಟದ್ದು, ಒಳ್ಳೆಯದ್ದು ಎರಡೂ) ಅಭಿಮಾನಿಗಳ ಮೇಲೆ ಎಷ್ಟು ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದು ಈ ಘಟನೆ ತಾಜಾ ಉದಾಹರಣೆ.
ಪ್ರಸಿದ್ಧ ಫುಟ್ಬಾಲ್ ಆಟಗಾರನೊಬ್ಬ ನೀರು ಕುಡಿದ ಕಾರಣಕ್ಕೆ ಕೋಕಾಕೋಲಾ ಕಂಪೆನಿಗೆ 2 ಬಿಲಿಯನ್ ಡಾಲರ್ (ಸುಮಾರು 30 ಸಾವಿರ ಕೋಟಿ ರೂಪಾಯಿ) ನಷ್ಟವಾಗಿದೆ ಎಂದರೆ ನಂಬುವಿರಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಕಥೆ.
ಆಗಿದ್ದೇನೆಂದರೆ ಪೋರ್ಚುಗಲ್ ಹಾಗೂ ಹಂಗೇರಿ ನಡುವಿನ ಯೂರೊ ಕಪ್ ಫುಟ್‌ಬಾಲ್ ಪಂದ್ಯವು ಹಂಗೇರಿಯಲ್ಲಿ ನಡೆಯುತ್ತಿದೆ. ಫುಟ್‌ಬಾಲ್‌ನ ವಿಶ್ವಖ್ಯಾತಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಆ ಸಮಯದಲ್ಲಿ ಟೇಬಲ್‌ನಲ್ಲಿ ಕೊಕಾಕೊಲಾ ಬಾಟಲ್‌ಗಳನ್ನು ಜೋಡಿಸಿಡಲಾಗಿತ್ತು. ಆಗ ರೊನಾಲ್ಡ್ ಅವರು ಬಾಯಾರಿಕೆಯಾದಾಗ ಕೊಕಾಕೊಲಾ ಬಾಟಲಿಯನ್ನು ಬದಿಗಟ್ಟು ನೀರಿನ ಬಾಟಲನ್ನು ಕೈಯಲ್ಲಿ ಹಿಡಿದುಕೊಂಡು ನೀರು ಕುಡಿಯಿರಿ ಎಂದು ಹೇಳಿದರು ಅಷ್ಟೇ…
ಇಲ್ಲಿ ಇಷ್ಟು ಆಗುತ್ತಿದ್ದಂತೆಯೇ ಕೋಕಾಕೋಲಾ ಕಂಪೆನಿಯ ಶೇರು ಮಾರುಕಟ್ಟೆ ದಿಢೀರ್ ಕುಸಿದು ಹೋಗಿದೆ. ಒಂದಲ್ಲ… ಎರಡಲ್ಲ ಬರೋಬ್ಬರಿ 2 ಬಿಲಿಯನ್ ಡಾಲರ್ ನಷ್ಟ ಕಂಪೆನಿಗೆ ಆಗಿದೆ! ವಿಚಿತ್ರ ಎನಿಸಿದರೂ ಇದು ಸತ್ಯ. ಏಕೆಂದರೆ ಜನರನ್ನು ಮರಳು ಮಾಡಲು ಹಲವು ಕಂಪೆನಿಗಳು ಕ್ರೀಡಾ ತಾರೆಯರು, ಸಿನಿಮಾ ನಟ- ನಟಿಯರನ್ನು ಬಳಸುವುದು ಹೊಸತೇನಲ್ಲ. ಕೊಕಾಕೊಲಾ ಯೂರೊ ಕಪ್‌ನ ಅಧಿಕೃತ ಪ್ರಾಯೋಜಕರಲ್ಲೊಂದಾಗಿತ್ತು. ಅದರಿಂದಲೇ ಅದನ್ನು ಅಲ್ಲಿ ಇಡಲಾಗಿತ್ತು.
ಈಗ ಕಂಪೆನಿ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ ರೊನಾಲ್ಡೊ ವಿರುದ್ಧ ಸಂಘಟಕರು ಶಿಸ್ತುಕ್ರಮ ತೆಗೆದು ಕೊಳ್ಳಲು ಮುಂದಾಗಿದ್ದಾರೆ!
ಇಲ್ಲಿದೆ ನೋಡಿ ವಿಡಿಯೋ:
Do NOT put Coca Cola in front of Cristiano Ronaldo 😠
This is absolutely brilliant 🤣 pic.twitter.com/bw9FYlTOI4
— Goal (@goal) June 15, 2021
ಕೋಕೋ ಕೋಲಾದ ಕೋಲಾಹಲದ ಮಧ್ಯೆಯೇ ಇದೀಗ ಕ್ರಿಶ್ಚಿಯಾನೋ ರೋನಾಲ್ಡೋ ಮತ್ತೊಂದು ವಿಶ್ವದಾಖಲೆಯನ್ನ ಸೃಷ್ಟಿಸಿದ್ದಾರೆ: ಏನದು ಗೊತ್ತಾ?
ಪೋರ್ಚುಗಲ್ ಸೂಪರ್‌ಸ್ಟಾರ್ ಕ್ರಿಶ್ಚಿಯಾನೊ ರೊನಾಲ್ಡೊ ಅವರು ಗೋಲುಗಳ ಸರದಾರ. ಅಂತಾರಾಷ್ಟ್ರೀಯ ಫುಟ್‌ಬಾಲ್ ಮತ್ತು ಕ್ಲಬ್ ಫುಟ್‌ಬಾಲ್‌ಗಳಲ್ಲಿ ಕಳೆದ 20 ವರ್ಷಗಳಲ್ಲಿ 700ಕ್ಕೂ ಅಧಿಕ ಗೋಲು ಸಿಡಿಸಿದ್ದಾರೆ. ಅವರ ಈ ಒಂದೊಂದು ಗೋಲು ಕೂಡ ಆಕರ್ಷಕವಾದುದು. ಇದೀಗ ಯುರೋ ಕಪ್‌ನಲ್ಲಿ ಜರ್ಮನಿ ವಿರುದ್ಧದ ಪಂದ್ಯದಲ್ಲಿ ಅವರು ಸಿಡಿಸಿರುವ ಗೋಲೊಂದು ಎಲ್ಲರ ಗಮನಸೆಳೆದಿದೆ. 36ನೇ ವಯಸ್ಸಿನಲ್ಲೂ ಚಿರತೆಯಂತೆ ಎದುರಾಳಿ ಕೋಟೆಗೆ ನುಗ್ಗಿ ಗೋಲು ಬಾರಿಸುವ ಅವರ ಚಕಚಕ್ಯತೆ ಮಾಸಿಲ್ಲ ಎಂಬುದಕ್ಕೆ ಈ ಗೋಲು ಸಾಕ್ಷಿಯಾಗಿ ನಿಂತಿದೆ.
ಶನಿವಾರ ನಡೆದ ಜರ್ಮನಿ ವಿರುದ್ಧದ ಪಂದ್ಯದ 15ನೇ ನಿಮಿಷದಲ್ಲಿ ರೊನಾಲ್ಡೊ ಪೋರ್ಚುಗಲ್ ತಂಡದ ಗೋಲು ಪೆಟ್ಟಿಗೆಯ ಬಳಿ ಇದ್ದ ಚೆಂಡನ್ನು ಏಕಾಂಗಿಯಾಗಿ ತೆಗೆದುಕೊಂಡು ಹೋಗಿ ಎದುರಾಳಿಯ ಗೋಲು ಪೆಟ್ಟಿಗೆಯೊಳಗೆ ನುಗ್ಗಿಸಿದ್ದರು. ಇದಕ್ಕಾಗಿ ಅವರು 92 ಮೀಟರ್ ದೂರವನ್ನು ಕೇವಲ 14 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸಕ್ತಿದಾಯಕವೆಂದರೆ, ಮಾಜಿ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ ರೊನಾಲ್ಡೊ ವೃತ್ತಿಜೀವನದಲ್ಲಿ ಸಿಡಿಸಿದ ಮೊಟ್ಟಮೊದಲ ಗೋಲು ಇದಾಗಿದೆ. ಆದರೆ ಪಂದ್ಯದಲ್ಲಿ ರೊನಾಲ್ಡೊ ಅವರ ಈ ಸಾಹಸದ ಹೊರತಾಗಿಯೂ ತಮ್ಮ ತಂಡದ ಆಟಗಾರರು ಮಾಡಿದ 2 ಸ್ವಗೋಲಿನ ಪ್ರಮಾದದಿಂದಾಗಿ ಪೋರ್ಚುಗಲ್ ತಂಡ 2-4ರಿಂದ ಸೋಲು ಕಂಡಿತು.
CR isn't human! 🤯 🤯 🤯 pic.twitter.com/ApLvkueyfs
— Best of Football (@BestofFootball8) June 19, 2021
36-year-old Cristiano Ronaldo cleared the ball from his own box and sprinted ahead of everyone on the pitch to score the opening goal for Portugal in less than 15 seconds. 😳
The GOAT.pic.twitter.com/fP9pA5vDf6
— Mu. (@FutbolMuu) June 19, 2021