ವೈದ್ಯಲೋಕದಲ್ಲಿ ಚಮತ್ಕಾರ: ಮೆದುಳಿನ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರೂ ಸತತವಾಗಿ ಗಾಯತ್ರಿ ಮಂತ್ರ ಪಠಿಸಿದ ವೃದ್ಧ ಮಹಿಳೆ

in Kannada News/News 171 views

ಮೆದುಳಿನಲ್ಲಿ ಟ್ಯೂಮರ್   ಬೆಳವಣಿಗೆಯಾಗಿರುವುದನ್ನು ಕೆಲವೊಂದು ಪರೀಕ್ಷೆಗಳು ದೃಢಪಡಿಸಿದ್ದು ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು. ಶಸ್ತ್ರಚಿಕಿತ್ಸೆ ವೇಳೆ ರೋಗಿ ಎಚ್ಚರವಾಗಿರುವ ಅಗತ್ಯವಿತ್ತು. ರಿಧಮಲ್ ಶಸ್ತ್ರಚಿಕಿತ್ಸೆ ನಡೆಸುವಾಗ ಗಾಯಂತ್ರಿ ಮಂತ್ರವನ್ನು ಪಠಿಸುತ್ತಿದ್ದರು.

Advertisement

57 ವರ್ಷದ ರಿಧಿಮಲ್ ರಾಮ್ ಎಂಬುವವರು ಶಸ್ತ್ರಕ್ರಿಯೆ ನಡೆಸುವ ಸಮಯದಲ್ಲಿ ಗಾಯತ್ರಿ ಮಂತ್ರವನ್ನು ಪಠಿಸುವ ಮೂಲಕ ಎಚ್ಚರವಾಗಿದ್ದರು ಎಂಬುವುದು ನಿಜಕ್ಕೂ ಇದು ಅಚ್ಚರಿಯ ಸಂಗತಿಯಾಗಿದೆ. ನಾಲ್ಕು ಗಂಟೆಗಳ ಶಸ್ತ್ರಕ್ರಿಯೆಯು ಮೈಕ್ರೋಸ್ಕೋಪ್‌ನ ಬಳಕೆಯನ್ನು ಒಳಗೊಂಡಿದ್ದು ಇದೊಂದು ಉನ್ನತ ಮಟ್ಟದ ಆಪರೇಶನ್ ಎಂದೇ ಹೇಳಬಹುದಾಗಿದೆ. ಮೆದುಳಿನ ಶಸ್ತ್ರಕ್ರಿಯೆ ಮಾಡುವ ಸಮಯದಲ್ಲಿ ಎಚ್ಚರವಾಗಿದ್ದು ದೃಷ್ಟಿ, ಧ್ವನಿ ಹಾಗೂ ದೇಹದ ಮುಖ್ಯ ಚಲನೆಗಳನ್ನು ನಿಯಂತ್ರಿಸುವ ಸ್ಥಳಗಳ ಸುತ್ತ ಬೆಳೆದಿರುವ ಟ್ಯೂಮರ್‌ಗಳನ್ನು ನಿವಾರಿಸುವುದಾಗಿದೆ.

ಜೈಪುರ್‌ನ ನಾರಾಯಣ ಆಸ್ಪತ್ರೆಯ ಹಿರಿಯ ನರಶಸ್ತ್ರಚಿಕಿತ್ಸಕ ಡಾ. ಕೆ.ಕೆ ಬನ್ಸಾಲ್ ನಿವೃತ್ತ ಸೇನಾ ಅಧಿಕಾರಿಯ ಮೆದುಳಿನ ಗಡ್ಡೆಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ರೀತಿಯ ಶಸ್ತ್ರಚಿಕಿತ್ಸೆಯನ್ನು ದೇಶಾದ್ಯಂತ ಕೆಲವೇ ವೈದ್ಯಕೀಯ ಕೇಂದ್ರಗಳಲ್ಲಿ ನಡೆಸಲಾಗುತ್ತದೆ ಹಾಗೂ ಈ ಶಸ್ತ್ರಚಿಕಿತ್ಸೆಯನ್ನು ಮಾಡಲು ಉನ್ನತ ಮಟ್ಟದ ನರ-ಶಸ್ತ್ರಚಿಕಿತ್ಸಾ ಪರಿಣಿತಿಯ ಅಗತ್ಯವಿರುತ್ತದೆ ಎಂಬುದು ಜೈಪುರದ ನಾರಾಯಣ ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಮಾಲಾ ಅಭಿಪ್ರಾಯವಾಗಿದೆ.

57 ರ ಹರೆಯದ ಚುರು ನಿವಾಸಿಯಾಗಿರುವ ರಿಧಮಲ್ ರಾಮ್ ಹಲವಾರು ಆರೋಗ್ಯ ಸಮಸ್ಯೆ ಹಾಗೂ ಮಾತನಾಡಲಾರದೆ ಬಳಲುತ್ತಿದ್ದರು. ಮೆದುಳಿನಲ್ಲಿ ಟ್ಯೂಮರ್   ಬೆಳವಣಿಗೆಯಾಗಿರುವುದನ್ನು ಕೆಲವೊಂದು ಪರೀಕ್ಷೆಗಳು ದೃಢಪಡಿಸಿದ್ದು ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು. ಆದರೆ ರಿಧಮಲ್ ಶಸ್ತ್ರಚಿಕಿತ್ಸೆ ನಡೆಸುವಾಗ ಗಾಯಂತ್ರಿ ಮಂತ್ರವನ್ನು ಪಠಿಸುತ್ತಿದ್ದರು.ಇದೇ ರೀತಿಯ ಪ್ರಕರಣವೊಂದನ್ನು 2018 ರಲ್ಲಿ ನಡೆಸಲಾಗಿದ್ದು 30 ರ ಹರೆಯದ ಕಂಪ್ಯೂಟರ್ ಅಕೌಂಟೆಂಟ್ ಒಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸುವಾಗ ಹನುಮಾನ್ ಚಾಲೀಸವನ್ನು ಪಠಿಸಿದ್ದರು ಆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯಿತು. ಇಂತಹ ಒಂದು ವಿಶಿಷ್ಟವಾದ ನರ-ಶಸ್ತ್ರಚಿಕಿತ್ಸಾ ಪ್ರಕ್ರಿಯೆಯನ್ನು “ಅವೇಕ್ ಕ್ರಾನಿಯೊಟೊಮಿ” ಅಥವಾ “ಅವೇಕ್ ಬ್ರೈನ್ ಸರ್ಜರಿ” ಎಂದು ಕರೆಯಲಾಗುತ್ತದೆ ಮತ್ತು ದೇಶದಲ್ಲಿ ಇದುವರೆಗೆ ಕೆಲವೇ ಕೆಲವು ಶಸ್ತ್ರಚಿಕಿತ್ಸೆಗಳು ವರದಿಯಾಗಿವೆ.

ಅವೇಕ್-ಮೆದುಳಿನ ಶಸ್ತ್ರಚಿಕಿತ್ಸೆಯು ದೃಷ್ಟಿ, ಮಾತು ಮತ್ತು ದೇಹದ ಪ್ರಮುಖ ಚಲನೆಗಳನ್ನು ನಿಯಂತ್ರಿಸುವ ಸ್ಥಳಗಳಿಗೆ ಹತ್ತಿರವಿರುವ ಗೆಡ್ಡೆಗಳನ್ನು ತೆಗೆದುಹಾಕಲು ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಈ ಸಮಯದಲ್ಲಿ ಗಡ್ಡೆಯು ಮೆದುಳಿನ ಧ್ವನಿ ನಿಯಂತ್ರಿಸುವ ಭಾಗದಲ್ಲಿದ್ದು ಅದು ಮಾತನ್ನು ನಿಯಂತ್ರಿಸುತ್ತದೆ. ಶಸ್ತ್ರಚಿಕಿತ್ಸೆ ಸಮಯದಲ್ಲಿ ಉಂಟಾಗುವ ಸಣ್ಣ ದೋಷದಿಂದ ಜೀವನ ಪರ್ಯಂತ ಮಾತು ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇರುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಆಸ್ಪತ್ರೆಯ ನರವಿಜ್ಞಾನ ತಂಡದ ಪೃಥ್ವಿ ಗಿರಿ ಮತ್ತು ಡಾ.ಮಧುಪರ್ಣ ಪೌಲ್ ಅವರು ರೋಗಿಗಳಿಗೆ ಕಾಲು ಕೈಗಳನ್ನು ಸರಿಸಲು, ಆಜ್ಞೆಯನ್ನು ಸರಿಯಾಗಿ ಕೇಳಲು, ಅರ್ಥಮಾಡಿಕೊಳ್ಳಲು ಮತ್ತು ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡುತ್ತಿದ್ದರು.

ರೋಗಿಯು ಈ ಸಮಯದಲ್ಲಿ ನಿದ್ರಾಸ್ಥಿತಿಯಲ್ಲಿರುವುದರಿಂದ ಸಾಂಪ್ರದಾಯಿಕ ಮೆದುಳಿನ ಶಸ್ತ್ರಚಿಕಿತ್ಸೆ ಸಾಧ್ಯವಿರುವುದಿಲ್ಲ. ಎಚ್ಚರವಿರುವ ಮೆದುಳಿನ ಶಸ್ತ್ರಕ್ರಿಯೆಯಲ್ಲಿ ರೋಗಿಯ ಪ್ರತಿಕ್ರಿಯೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬಹುದು, ಆದರೆ ಈ ಸಂದರ್ಭದಲ್ಲಿ ಗಾಯಂತ್ರಿ ಮಂತ್ರವನ್ನು ನಿರಂತರವಾಗಿ ಪಠಿಸುವಂತೆ ರೋಗಿಯನ್ನು ಕೇಳಲಾಯಿತು ಹೀಗಾಗಿ ದೇಹದ ಅಂಗಾಗಂಗಳು ಚಲನೆಯಲ್ಲಿರುತ್ತವೆ. ರೋಗಿಯ ಸ್ಪಂದನೆಯಿಂದಾಗಿ ನಮಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂಬುದಾಗಿ ನಾರಾಯಣ ಆಸ್ಪತ್ರೆಯ ನ್ಯೂರೋ ಸರ್ಜನ್ ಕೆ.ಕೆ ಬನ್ಸಾಲ್ ತಿಳಿಸಿದ್ದಾರೆ.

Advertisement
Share this on...