“ನಿನ್ ಯೋಗ್ಯತೆಗಿಷ್ಟು ಬೆಂಕಿ ಹಾಕಾ, ಸುಳ್ಯಾಕೆ ಬೊಗಳ್ತೀಯಾ, ವಯಸ್ಸಾಗಿದೆ ಮಾನ ಮರ್ಯಾದೆ ಇಲ್ವಾ?”‌ಪರಸ್ಪರ ಕಿತ್ತಾಡಿಕೊಂಡ ಶಾಸಕ ಹಾಗು ಸಂಸದ

in Kannada News/News 156 views

ತುಮಕೂರು, ಆಗಸ್ಟ್ 14:

Advertisement
ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಹಾಗೂ ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಸಾರ್ವಜನಿಕ ವೇದಕೆಯಲ್ಲೇ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ‌. ನಂದಿಹಳ್ಳಿಯಲ್ಲಿ ಶನಿವಾರ ಬೆಸ್ಕಾಂ ವಿದ್ಯುತ್ ಎಂಎಸ್ಎಸ್ ಸ್ಟೇಷನ್ ಉದ್ಘಾಟನೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಇಬ್ಬರು ಪರಸ್ಪರ ಕೈ ಕೈ ತೋರಿಸಿಕೊಂಡು ಬೈದಾಡಿಕೊಂಡಿದಿದ್ದಾರೆ.

ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ 500 ಕೋಟಿ ರೂ. ಮೀಸಲಿಟ್ಟಿದೆ ಎಂದು ಕಾರ್ಯಕ್ರಮದಲ್ಲಿ ತುಮಕೂರು ಸಂಸದ ಜಿ.ಎಸ್. ಬಸವರಾಜು ಹೇಳಿದ್ದಾರೆ. ಈ ವೇಳೆ ಅಲ್ಲೇ ಇದ್ದ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್, “ರೈತರಿಗೆ ಯಾಕೆ ಸುಳ್ಳು ಹೇಳ್ತೀಯಾ, ನಿನ್ ಯೋಗ್ಯತೆಗಿಷ್ಟು ಬೆಂಕಿ ಹಾಕಾ. ಸುಳ್ಯಾಕೆ ಬೊಗಳ್ತೀಯಾ, ವಯಸ್ಸಾಗಿದೆ ಈಗಲಾದರೂ ಸುಳ್ಳು ಹೇಳುವುದನ್ನು ನಿಲ್ಲಿಸು,” ಎಂದು ಸಂಸದ ಬಸವರಾಜು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಇಲ್ಲದ ವಿಚಾರವನ್ನು ಮಾತನಾಡಬೇಡ ನೀನು, ಅಯೋಗ್ಯ ನನ್ಮಗ,” ಎಂದು ಶಾಸಕ ಹಾಗೂ ಸಂಸದರು ಪರಸ್ಪರ ಜಗಳವಾಡಿಕೊಂಡಿದ್ದಾರೆ.

ಬೆಸ್ಕಾಂ ವಿದ್ಯುತ್ ಎಂಎಸ್ಎಸ್ ಸ್ಟೇಷನ್ ಉದ್ಘಾಟನೆ ವೇಳೆ ಸಂಸದ ಜಿ.ಎಸ್. ಬಸವರಾಜು, “ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರ 550 ಕೋಟಿ ರೂಪಾಯಿ ತಂದಿದ್ದೀವಿ ಎಂದು ಹೇಳಿದ್ದಕ್ಕೆ, ಶಾಸಕ ಎಸ್.ಆರ್.ಶ್ರೀನಿವಾಸ್ 550 ಕೋಟಿ ನಿನ್ನ ತಾತ ತಂದಿದ್ದಾನಾ. 550 ಕೋಟಿ ರೂಪಾಯಿ ಎಲ್ಲಿ ತಂದಿದ್ದೀರಿ ತೋರಿಸಿ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಬ್ಬಿ ತಾಲೂಕಿನ ಸಿ. ನಂದಿಹಳ್ಳಿಯಲ್ಲಿ ಬೆಸ್ಕಾಂ ವಿದ್ಯುತ್ ಎಂಎಸ್ ಎಸ್ ಘಟಕ ಉದ್ಘಾಟನಾ ಸಮಾರಂಭದ ವೇಳೆ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಹಾಗೂ ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ನಡುವೆ ಜಟಾಪಟಿ ನಡೆದಿದ್ದು, ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ.

ಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರದಿಂದ 550 ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ಎಂದು ಸಂಸದ ಬಸವರಾಜು ಹೇಳುತ್ತಿದ್ದಂತೆ ಸಿಡಿದೆದ್ದ ಶಾಸಕ ಶ್ರೀನಿವಾಸ್, ರೈತರಿಗೆ ಸುಳ್ಳು ಯಾಕೆ ಹೇಳ್ತೀರಾ? ವಯಸ್ಸಾಗಿದೆ ಈಗಲಾದರೂ ಸುಳ್ಳು ಹೇಳೋದನ್ನು ನಿಲ್ಲಿಸಿ ಎಂದು ಗುಡುಗಿದ್ದಾರೆ.

ಶಾಸಕರ ಮಾತಿಗೆ ಕೋಪಗೊಂಡ ಸಂಸದ ನಾನು ಜೀವನದಲ್ಲಿ ಸುಳ್ಳು ಹೇಳಿಲ್ಲ. ಇವರ ಮಾತು ನಂಬಬೇಡಿ ನಾನು ಹಲವು ಯೋಜನೆಗಳನ್ನು ತಂದಿದ್ದೇನೆ. 550 ಕೋಟಿ ಅನುದಾನ ತಂದಿದ್ದೇನೆ ಎಂದು ಹೇಳಿದರು.

ಇದರಿಂದ ಕೆಂಡಾಮಂಡಲರಾದ ಶಾಸಕ ಶ್ರೀನಿವಾಸ್, ನಿನ್ನ ಯೋಗ್ಯತೆಗೆ ಇಷ್ಟು ಬೆಂಕಿ ಹಾಕಾ… ಬರಿ ಸುಳ್ಳು ಹೇಳಿಕೊಂಡೇ ಕಾಲ ಕಳೆಯುತ್ತಿದ್ದೀರಾ. ವಯಸ್ಸಾಗಿದೆ ಈಗಲಾದರೂ ಮಾನ ಮರ್ಯಾದೆಯಿಂದ ಇರಬಾರದೇ ? 550 ಕೋಟಿ ಯಾರು ನಿಮ್ಮ ತಾತ ತಂದಿದ್ನಾ ? 550 ಕೋಟಿ ಎಲ್ಲಿ ತಂದಿದ್ದೀರಿ ತೋರಿಸಿ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಇಬ್ಬರು ಜನಪ್ರತಿನಿಧಿಗಳು ಪರಸ್ಪರ ಕೈ ಕೈ ಮಿಲಾಸಿಕೊಳ್ಳುವ ಹಂತಕ್ಕೂ ತಲುಪಿದ್ದು, ತಕ್ಷಣ ಎಚ್ಚೆತ್ತ ಅಧಿಕಾರಿಗಳು ಇಬ್ಬರು ನಾಯಕರನ್ನು ಸಮಾಧಾನ ಪಡಿಸಿದ ಘಟನೆ ನಡೆದಿದೆ.

Advertisement
Share this on...