ಮಲಯಾಳಂನ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಅವರು ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ದುರಂತ ಸಾವನ್ನು ಆಚರಿಸಿದವರ ವಿರುದ್ಧ ಪ್ರತಿಭಟಿಸಿ ಇಸ್ಲಾಂ ಮತವನ್ನ ತೊರೆಯುವುದಾಗಿ ಘೋಷಿಸಿದ್ದಾರೆ. ಈ ವಿಷಯವನ್ನು ಅಲಿ ಅಕ್ಬರ್ ತಮ್ಮ ಫೇಸ್‌ಬುಕ್ ಮೂಲಕ ಪ್ರಕಟಿಸಿದ್ದು, ಇನ್ನು ಮುಂದೆ ತನಗೆ ಮತ್ತು ತನ್ನ ಕುಟುಂಬಕ್ಕೆ ಯಾವುದೇ ಧರ್ಮವಿಲ್ಲ ಎಂದು ಹೇಳಿದ್ದಾರೆ.
ಇನ್ನು ಮುಂದೆ ಅವರನ್ನು ರಾಮ್ ಸಿಂಗ್ ಎಂದು ಕರೆಯಲಾಗುವುದು ಎಂದು ಅಲಿ ಅಕ್ಬರ್ ಹೇಳಿದ್ದಾರೆ. “ರಾಮಸಿಂಹನ್ ಕೇರಳದ ಸಂಸ್ಕೃತಿಯನ್ನ ರಕ್ಷಿಸುತ್ತ ಹ ತ್ಯೆ ಗೀಡಾದ ವ್ಯಕ್ತಿ. ನಾಳೆಯಿಂದ ಅಲಿ ಅಕ್ಬರ್ ರಾಮ್ ಸಿಂಗ್ ಎಂದು ಕರೆಯಲ್ಪಡುತ್ತಾನೆ. ಇದು ಅತ್ಯುತ್ತಮ ಹೆಸರು” ಎಂದು ಅವರು ಹೇಳಿದರು. 1947 ರಲ್ಲಿ ಇ ಸ್ಲಾಂ ಮತದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಕ್ಕಾಗಿ ರಾಮಸಿಂಹನ್ ಮತ್ತು ಅವರ ಕುಟುಂಬವನ್ನು ಜಿ ಹಾದಿಗಳು ಕೊಂ ದು ಹಾಕಿದ್ದರು. ರಾಮಸಿಂಹನ್, ಅವರ ಸಹೋದರ ದಯಾಸಿಂಹನ್, ದಯಾಸಿಂಹನ್ ಅವರ ಪತ್ನಿ ಕಮಲ, ಅವರ ಅಡುಗೆಯವರಾದ ರಾಜು ಅಯ್ಯರ್ ಮತ್ತು ಕುಟುಂಬದ ಇತರ ಸದಸ್ಯರನ್ನು ಮಲಪ್ಪುರಂ ಜಿಲ್ಲೆಯ ಮಲಪರಂಬದಲ್ಲಿ ಇ ಸ್ಲಾ ಮಿಕ್ ಜಿ ಹಾ ದಿಗಳು ಕ್ರೂ ರ ವಾಗಿ ಕೊಂ ದು ಹಾಕಿದರು. ಆಗಸ್ಟ್ 1947, ಸ್ವಾತಂತ್ರ್ಯಕ್ಕೆ ಕೇವಲ ಎರಡು ವಾರಗಳ ಮೊದಲು ಈ ಘಟನೆ ನಡೆದಿತ್ತು.
ಈ ಬಗ್ಗೆ ಪತ್ನಿಯೊಂದಿಗೆ ಚರ್ಚಿಸಿದ ಬಳಿಕ ಇಸ್ಲಾಂ ತ್ಯಜಿಸುವ ನಿರ್ಧಾರ ಕೈಗೊಂಡಿರುವುದಾಗಿ ಅಲಿ ಅಕ್ಬರ್ ತಿಳಿಸಿದ್ದಾರೆ. ‘ಹುಟ್ಟಿದ ಉಡುಪನ್ನು ಬಿಸಾಡುತ್ತಿದ್ದೇನೆ’ ಎಂದರು.
ಸಿಡಿಎಸ್ ಬಿಪಿನ್ ರಾವತ್ ಅವರ ನಿಧನವನ್ನು ಅಪಹಾಸ್ಯ ಮಾಡಿದ ವ್ಯಕ್ತಿಗಳ ಹೆಸರನ್ನು ಹೊಂದಿರುವ ಚಿತ್ರವನ್ನು ಅಕ್ಬರ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದರು.
ಅಲಿ ಅಕ್ಬರ್ ಅವರು ಜನಮ್ ಟಿವಿಯೊಂದಿಗೆ ಮಾತನಾಡಿದ್ದಾರೆ ಮತ್ತು ದೇಶ ವಿರೋಧಿ ಅಂಶಗಳ ವಿರುದ್ಧ ತಮ್ಮ ಪ್ರತಿಭಟನೆ ಮತ್ತು ಇಸ್ಲಾಂ ಧರ್ಮವನ್ನು ತ್ಯಜಿಸುವ ನಿರ್ಧಾರವನ್ನು ವಿವರಿಸಿದ್ದಾರೆ.
ಗಮನಾರ್ಹವಾಗಿ, ಆನ್‌ಲೈನ್‌ನಲ್ಲಿ ಇಸ್ಲಾಮಿಸ್ಟ್‌ಗಳ ಆಚರಣೆಯನ್ನು ನೋಡಿದ ಬಳಿಕ ಅಲಿ ಅಕ್ಬರ್ ಫೇಸ್‌ಬುಕ್ ವೀಡಿಯೊ ಮೂಲಕ ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ನಂತರ ಇಸ್ಲಾಂ ಮತದಿಂದ ನಿರ್ಗಮಿಸುವುದಾಗಿ ಘೋಷಿಸಿದರು.