ಶನಿವಾರದಂದು ಜನರಲ್ ಬಿಪಿನ್ ರಾವತ್ ಅವರೊಂದಿಗೆ ಹುತಾತ್ಮರಾದ ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮದಲ್ಲಿ ನಡೆಸಲಾಯಿತು. ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರ ಅಂತಿಮ ಸಂಸ್ಕಾರಕ್ಕೆ ಇಡೀ ಗ್ರಾಮದ ಜನರು ಜಮಾಯಿಸಿದ್ದರು. ಈ ವೇಳೆ ವಿವೇಕ್ ಕುಮಾರ್ ಅವರ ಇಡೀ ಕುಟುಂಬ ತುಂಬಾ ದುಃಖಿತವಾಗಿತ್ತು. ಅಲ್ಲಿನ ಇಡೀ ವಾತಾವರಣವನ್ನು ನೋಡಿ ಎಲ್ಲರ ಕಣ್ಣುಗಳು ತೇವವಾಗಿದ್ದವು. ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಅವರ ಸ್ಥಳೀಯ ಗ್ರಾಮವಾದ ಕಾಂಗ್ರಾದ ಜೈಸಿಂಗ್ ನಗರದಲ್ಲಿ ನೆರವೇರಿಸಲಾಯಿತು.
ಅಂತಿಮ ಯಾತ್ರೆಯಲ್ಲಿ ಹರಿದುಬಂತು ಜನಸಾಗರ
ಲ್ಯಾನ್ಸ್ ನಾಯ್ಕ್ ವಿವೇಕ್ ಕುಮಾರ್ ಅವರ ಮೃತದೇಹವನ್ನು ನೋಡಿದ ಅವರ ಪತ್ನಿ ಒಂದು ಕ್ಷಣ ಸ್ಥಳಲದಲ್ಲೇ ಕುಸಿದು ಬಿಟ್ಟರು. ತನ್ನ ಪತಿಯನ್ನು ಕಳುಹಿಸಿ ಕೊಡಲು ಪತ್ನಿ ನವವಿವಾಹಿತೆಯ ಉಡುಗೆ ತೊಟ್ಟು ಬಂದಿದ್ದರು. ಅವರು ತನ್ನ ಪತಿಯ ಮನೆಯಿಂದ ಸ್ಮಶಾನಕ್ಕೆ ಶವ ಕಳಿಸಿಕೊಡುವ ಮಾರ್ಗದುದ್ದಕ್ಕೂ ಜೊತೆಗೇ ಇದ್ದರು. ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರ ಅಂತಿಮ ಯಾತ್ರೆಯಲ್ಲಿ ಜನರು ಭಾರತ್ ಮಾತಾ ಕೀ ಜೈ ಮತ್ತು ವಂದೇ ಮಾತರಂ ಜೊತೆಗೆ ವಿವೇಕ್ ಕುಮಾರ್ ಅಮರ್ ರಹೇ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಈ ವೇಳೆ ವಿವೇಕ್‌ಕುಮಾರ್ ಅವರ ಪತ್ನಿಯೂ ಕೂಡ ಒಂದು ಘೋಷಣೆ ಕೂಗಿದ್ದು, ಅದನ್ನ ಕೇಳಿ ಎಲ್ಲರ ಕಣ್ಣಲ್ಲಿ ನೀರು ತುಂಬಿತ್ತು.
ವಿವೇಕ್ ಕುಮಾರ್ ಪತ್ನಿ ಕೂಗಿದರು ಈ ಘೋಷಣೆ
ಪತಿಯ ಅಂತಿಮ ಯಾತ್ರೆಯಲ್ಲಿ ಪತ್ನಿ ಎಲ್ಲರನ್ನು 2 ನಿಮಿಷ ಸುಮ್ಮನಿರಲು ಹೇಳಿ ನಾನು ಘೋಷಣೆಗಳನ್ನು ಕೂಗುತ್ತೇನೆ ಎಂದು ಹೇಳಿದರು. ಇದಾದ ನಂತರ ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರ ಪತ್ನಿ ‘ಮೇರಾ ಫೌಜಿ ಅಮರ್ ರಹೇ…’ ಅಂದರೆ ‘ನನ್ನ ಯೋಧ ಅಮರರಾಗಿರಲಿ..’ ಎಂಬ ಘೋಷಣೆಗಳನ್ನು ಕೂಗಿದರು ಮತ್ತು ಅವರು ಬಿಕ್ಕಿ ಬಿಕ್ಕಿ ಅಳುವುದು ಕಂಡುಬಂದಿತು. ಲ್ಯಾನ್ಸ್ ನಾಯಲ್ ವಿವೇಕ್ ಕುಮಾರ್ ಎಂಬ ವೀರಯೋಧ ಜನಿಸದ್ದು 1993 ರಲ್ಲಿ ಮತ್ತಿ ಅವರು 2012 ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು.
Himachal Pradesh: Last rites of L/Naik Vivek Kumar performed at his hometown Jaisinghpur in Kangra. His wife & other family members mourn the loss as they bid him a final goodbye
Kumar lost his life in #TamilNaduChopperCrash on Dec 8 with 12 others including CDS Gen Bipin Rawat. pic.twitter.com/I8nhlII6Ep
— ANI (@ANI) December 11, 2021
ವಿವೇಕ್ ಕುಟುಂಬಕ್ಕೆ ಸಹಾಯ ಮಾಡಿದ ಹಿಮಾಚಲ್ ಪ್ರದೇಶ ಮುಖ್ಯಮಂತ್ರಿ
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಕೂಡ ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ್ದರು. ಜೈ ರಾಮ್ ಠಾಕೂರ್ ಅವರು ಲ್ಯಾನ್ಸ್ ನಾಯ್ಕ್ ವಿವೇಕ್ ಕುಮಾರ್ ಅವರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂಪಾಯಿಗಳನ್ನು ಘೋಷಿಸಿದ್ದರು ಮತ್ತು ನಂತರ ಹಿಮಾಚಲ ಮುಖ್ಯಮಂತ್ರಿ ತಮ್ಮ ಪರವಾಗಿ ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ಹೆಚ್ಚುವರಿ 5 ಲಕ್ಷಗಳನ್ನು ಘೋಷಿಸಿದರು.