ಕಿಸಾನ್ ಆಂದೋಲನ್ ಅಂತ್ಯ ಮಾಡೋದರ ಹಿಂದಿದೆ ಅಮಿತ್ ಶಾಹ್ ಗುಪ್ತಚರ ರಣತಂತ್ರ: ಪರದೆಯ ಹಿಂದೆಯಿದ್ದೆ ಮಾಡಿ ಮುಗಿಸಿದರು ಈ ಕೆಲಸ

in Kannada News/News 451 views

ಹರಿಯಾಣ ಮತ್ತು ಪಂಜಾಬ್‌ನ ರೈತರು ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಪಡೆಯಲು ಸುಮಾರು 1 ವರ್ಷದಿಂದ ದೆಹಲಿಯ ಗಡಿಯಲ್ಲಿ ಕುಳಿತಿದ್ದರು. ಸರ್ಕಾರ ಮತ್ತು ರೈತರ ನಡುವೆ ಹಲವು ಸುತ್ತಿನ ಮಾತುಕತೆಯೂ ನಡೆದಿತ್ತು, ಆದರೆ ಮಾತುಕತೆಯ ನಂತರವೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಿರಲಿಲ್ಲ. ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೂರೂ ಕೃಷಿ ಕಾನೂನುಗಳನ್ನು ಹಿಂಪಡೆಯಲು ನಿರ್ಧರಿಸಿದ್ದರು. ಮೂರು ಕೃಷಿ ಕಾನೂನುಗಳನ್ನು ಹಿಂಪಡೆದ ನಂತರವೂ ಅನೇಕ ಜನರು ಈಗ ಬಿಜೆಪಿ ಮತ್ತು ಅಮಿತ್ ಶಾ ಬಗ್ಗೆ ವಿಭಿನ್ನವಾಗಿ ಮಾತನಾಡುತ್ತಿದ್ದಾರೆ. ಬನ್ನಿ ಈ ಬಗೆಗಿನ ಸಂಪೂರ್ಣ ಸುದ್ದಿಯನ್ನು ವಿವರವಾಗಿ ನಿಮಗೆ ತಿಳಿಸುತ್ತೇವೆ.

Advertisement

ಮೋದಿ ಸರ್ಕಾರ ಮೂರು ಕೃಷಿ ಕಾನೂನುಗಳನ್ನ ವಾಪಸ್ ಪಡೆದದ್ಯಾಕೆ?

ಹರಿಯಾಣ, ಪಂಜಾಬ್ ರೈತರು ತಮ್ಮ ಬೇಡಿಕೆಗಳಿಗಾಗಿ 378 ದಿನಗಳ ಕಾಲ ದೆಹಲಿಯ ಗಡಿಯಲ್ಲಿ ಧರಣಿ ಕುಳಿತಿರುವುದು ನಿಮಗೆ ಗೊತ್ತೇ ಇದೆ. ಒಂದೆಡೆ ರಾಕೇಶ್ ಟಿಕಾಯತ್ ಸರ್ಕಾರದೊಂದಿಗೆ ಮಾತನಾಡಲು ಬಯಸಿದ್ದರೆ, ಮತ್ತೊಂದೆಡೆ ಸರ್ಕಾರಿ ಅಧಿಕಾರಿಗಳು ರಾಜ್ಯದ ಹಲವು ರೈತರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದರು. ಈ ವಿಚಾರ ರಾಕೇಶ್ ಟಿಕಾಯತ್ ಅವರಿಗಾಗಲಿ ಅಥವಾ ಅವರ ಕಿಸಾನ್ ಸಂಘಟನೆಗಳಿಗಾಗಿ ಗೊತ್ತಿರಲಿಲ್ಲ. ಕೇಂದ್ರದ ಪ್ರಧಾನಿ ಮೋದಿ ಸರ್ಕಾರವು ಹೇಗಾದರೂ ಮಾಡಿ ರೈತರನ್ನು ಮನೆಗೆ ಕಳುಹಿಸಲು ಬಯಸಿತ್ತು.

ಪರದೆಯ ಹಿಂದೆ ನಡೆದಿತ್ತು ಮಾತುಕತೆ

ಸರ್ಕಾರದ ಹಲವು ಮಂದಿ ದೆಹಲಿಯ ಗಡಿಯಲ್ಲಿ ಕುಳಿತಿದ್ದವರ ಆಪ್ತರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಹೇಗಾದರೂ ಮಾಡಿ ಆ ರೈತರನ್ನು ಮನೆಗೆ ವಾಪಸ್ ಕಳುಹಿಸಬೇಕೆಂದು ಅಮಿತ್ ಶಾ ಬಯಸಿದ್ದರು. ಪಂಜಾಬ್ ಮತ್ತು ಹರಿಯಾಣದ ಅಸಲಿ ರೈತರೊಂದಿಗೆ ತೆರೆಮರೆಯಲ್ಲಿ ಮಾತುಕತೆ ನಡೆದಿತ್ತು. ಅಮಿತ್ ಶಾ ಜಾಟ್ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಯುದ್ವೀರ್ ಸಿಂಗ್ ಮೂಲಕ ಸರ್ಕಾರದ ಜನರು ನಿರಂತರವಾಗಿ ಮಾತನಾಡುತ್ತಿದ್ದರು. ಸಂಯುಕ್ತ ಕಿಸಾನ್ ಮೋರ್ಚಾದ ಅನೇಕ ನಾಯಕರು ಯುದ್ವೀರ್ ಸಿಂಗ್ ಅವರೊಂದಿಗೆ ಸಂಬಂಧ ಹೊಂದಿದ್ದರು.

1 ತಿಂಗಳೊಳಗೆ ನಡೆದಿತ್ತು ಮಾತುಕತೆ

ಲಖೀಂಪುರ ಖೇರಿ ಪ್ರಕರಣದ ನಂತರ, ಸರ್ಕಾರದ ಅನೇಕ ಜನರು ದೆಹಲಿಯ ಗಡಿಯಲ್ಲಿ ಕುಳಿತಿದ್ದ ಅನೇಕರೊಂದಿಗೆ ಮಾತನಾಡುತ್ತಿದ್ದರು. ಒಂದು ತಿಂಗಳೊಳಗೆ ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ರೈತರ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ. ಈಗ ರೈತರೆಲ್ಲ ನೆಮ್ಮದಿಯಿಂದ ಮನೆಗೆ ತೆರಳುತ್ತಿದ್ದಾರೆ. ಮತ್ತೊಂದೆಡೆ ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ನಡೆಯಲಿರುವ ಚುನಾವಣೆಯ ಹಾದಿ ಸುಗಮವಾಗಿದೆ. ಅಮಿತ್ ಶಾ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದೂ ಹೇಳಲಾಗುತ್ತಿದೆ.

378 ದಿನಗಳ ಬಳಿಕ ಮನೆಗೆ ಹೊರಡಲು ಸಿದ್ಧರಾದ ‘ರೈತರು

ತಮಗೆ ಎಂಎಸ್‌ಪಿ ಸಿಗಲಿದೆ ಎಂದು ಸರ್ಕಾರ ಲಿಖಿತವಾಗಿ ತಿಳಿಸಬೇಕು ಎಂದು ದೆಹಲಿಯ ಗಡಿಯಲ್ಲಿ ಕುಳಿತ ರೈತರು ಸರ್ಕಾರವನ್ನು ಪದೇ ಪದೇ ಒತ್ತಾಯಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆದಿದ್ದಾರೆ. ಇದಾದ ಬಳಿಕವೂ ದೆಹಲಿಯ ಗಡಿಯಲ್ಲಿ ಕುಳಿತ ರೈತರು ತಮ್ಮ ಮನೆಗಳಿಗೆ ಹೋಗಿರಲಿಲ್ಲ. ಆದರೆ ಇದೀಗ ರೈತರು ಮನೆಗೆ ತೆರಳಲು ನಿರ್ಧರಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಕೈ ಮುಗಿದು, ನಮ್ಮಿಂದಾಗಿ ಜನರಿಗೆ ತೊಂದರೆಯಾಗಿದೆ ಎಂದು ಹೇಳಿದರು. ನಾವು ಆ ಜನರ ಕ್ಷಮೆಯಾಚಿಸುತ್ತೇವೆ ಮತ್ತು ಆಂದೋಲನ್‌ನ್ನ ಕೊನೆಗೊಳಿಸುತ್ತೇವೆ ಎಂದಿದ್ದಾರೆ.

ರೈತರಿಗೆ ಲಿಖಿತ ರೂಪದಲ್ಲಿ ಸಿಕ್ಕಿತ್ತು ಸರ್ಕಾರದಿಂದ ಪತ್ರ

ದೆಹಲಿಯ ಗಡಿಯಲ್ಲಿ ಧರಣಿ ಕುಳಿತಿದ್ದ ರೈತರು ಕಳೆದ ಒಂದು ವರ್ಷದಿಂದ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದ ಎಲ್ಲ ಬೇಡಿಕೆಗಳನ್ನ ಪರಿಗಣಿಸುವುದಾಗಿ ಸರಕಾರದಿಂದ ರೈತರಿಗೆ ಲಿಖಿತ ಪತ್ರ ಬಂದಿದೆ. ಈಗ ದೆಹಲಿಯ ಗಡಿಯಲ್ಲಿ ಕುಳಿತಿರುವ ರೈತರೂ ತಮ್ಮ ಮನೆಗಳಿಗೆ ಮರಳಲು ಒಪ್ಪಿಕೊಂಡಿದ್ದಾರೆ. ಕೆಲವು ರೈತರು ತಮ್ಮ ಟೆಂಟ್‌ಗಳನ್ನು ವಾಪಸ್ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ಕೆಲ ರೈತರೂ ಮೊದಲು ಸ್ವರ್ಣ ಮಂದಿರ (Golden Temple) ಹೋಗುವುದಾಗಿ ಹೇಳುತ್ತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ANI

ಇದೀಗ ದೆಹಲಿಯ ಗಡಿಯಲ್ಲಿ ಕುಳಿತಿರುವ ರೈತರು ವಾಪಸಾಗಲು ಒಪ್ಪಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ AnI ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ರೈತರಿಗೆ ಭಾರತ ಸರ್ಕಾರದಿಂದ ಪತ್ರ ಬಂದಿದೆ ಎಂದು ಸುದ್ದಿ ಸಂಸ್ಥೆ ANI ಟ್ವೀಟ್ ಮಾಡಿದ್ದು, ಇದರಲ್ಲಿ ಎಂಎಸ್‌ಪಿ ಕುರಿತು ಸಮಿತಿ ರಚಿಸಿ ರೈತರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯುವಂತೆ ಹೇಳಲಾಗಿದೆ. ಮತ್ತೊಂದೆಡೆ, ನಾವು ಪರಿಹಾರದ ಬಗ್ಗೆ ಮಾತನಾಡುವುದಾದರೆ ಅದರ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕಿದೆ.

Advertisement
Share this on...