ಮೊರಾದಾಬಾದ್ (ಯುಪಿ):
3 ವರ್ಷದ ಮಗುವಿನ ಜೀವ ಉಳಿಸುವ ವೇಳೆ ರೈಲು ಅಪಘಾತದಲ್ಲಿ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಬನ್ನಿ ಇಡೀ ಘಟನೆಯನ್ನ ನಿಮಗೆ ವಿವರವಾಗಿ ತಿಳಿಸುತ್ತೇವೆ.
ಹೌದು ಈ ಘಟನೆ ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದ್ದು, ಇದು ನಿಜಕ್ಕೂ ಬೆಚ್ಚಿಬೀಳಿಸುವಂತಹ ಘಟನೆಯಾಗಿದೆ ಮತ್ತು ಈ ರೈಲು ಅಪಘಾತದಲ್ಲಿ ಯುವತಿಯೊಬ್ಬಳು ತನ್ನ 3 ವರ್ಷದ (ಸೋದರಳಿಯ) ಮಗುವಿನ ಜೀವವನ್ನು ಉಳಿಸಿದ್ದಾಳೆ. ಈ ಘಟನೆಯು ಚಿಕ್ಕಮ್ಮ-ಸೋದರಳಿಯನ ಪ್ರೀತಿಯ ಉದಾಹರಣೆಯನ್ನು ಪ್ರಸ್ತುತಪಡಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಮೊರಾದಾಬಾದ್‌ನಲ್ಲಿ 3 ವರ್ಷದ ಮಗುವೊಂದು ರೈಲು ಹಳಿಯಲ್ಲಿ ಸಿಲುಕಿಕೊಂಡಿದ್ದು, ಅದೇ ಸಮಯದಲ್ಲಿ ಎದುರಿನಿಂದ ವೇಗವಾಗಿ ರೈಲು ಬರುತ್ತಿತ್ತು ಎಂದು ತಿಳಿದುಬಂದಿದೆ.
ಅಂತಹ ಪರಿಸ್ಥಿತಿಯಲ್ಲಿ, 20 ವರ್ಷದ ಚಿಕ್ಕಮ್ಮ ಮಗುವನ್ನು ಉಳಿಸಲು ಟ್ರ್ಯಾಕ್‌ನಿಂದ ಹೊರತರಲು ಪ್ರಯತ್ನಿಸಿದರು ಆದರೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಆಕೆ ವಿಫಲರಾದರು. ಅಂತಹ ಪರಿಸ್ಥಿತಿಯಲ್ಲಿ, ಮಗುವನ್ನು ಉಳಿಸಲು ಅವರು ಯಾವುದೇ ಮಾರ್ಗವು ಕಾಣಲಿಲ್ಲ. ನಂತರ ಮಗುವನ್ನು ಉಳಿಸಲು ಸ್ವತಃ ತಾನೇ ಟ್ರ್ಯಾಕ್ ಮೇಲೆ ಮಲಗುವುದು ಸೂಕ್ತ ಎಂದು ಅವರು ಅಂತಿಮವಾಗಿ ಭಾವಿಸಿದರು. ಹೌದು, ಕೆಲವೇ ಸೆಕೆಂಡುಗಳಲ್ಲಿ ಯುವತಿ-ಸೋದರಳಿಯ ಮೇಲೆ ರೈಲು ಹಾದು ಹೋಗಿದ್ದು, ಯುವತಿಯ ದೇಹ 4 ತುಂಡಾಗಿದೆ. ಅದೇ ವೇಳೆ ಈ ಅಪಘಾತದಲ್ಲಿ ಚಿಕ್ಕಮ್ಮನ ದೇಹ ತುಂಡಾದರೂ ಮಗುವಿನ ಪ್ರಾಣ ಉಳಿಯಿತು.
ಮಾಧ್ಯಮ ವರದಿಗಳ ಪ್ರಕಾರ, 20 ವರ್ಷದ ಶಶಿಬಾಲಾ ಮೊರಾದಾಬಾದ್‌ನ ಕುಂದರ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಸೇನ್‌ಪುರ ಗ್ರಾಮದಲ್ಲಿ ವಾಸಿಸುತ್ತಿದ್ದರು ಮತ್ತು ಮದುವೆಯೊಂದಕ್ಕಾಗಿ ತನ್ನ ಅಜ್ಜಿಯ ಜೊತೆ ಭೈನ್ಸಿಯಾಗೆ ಬಂದಿದ್ದರು. ಹೀಗಿರುವಾಗ ಮದುವೆ ಸಮಾರಂಭ ಮುಗಿಸಿ ಜನರೆಲ್ಲ ವಾಪಸಾಗುತ್ತಿದ್ದಾಗ 3 ವರ್ಷದ ಮಗು ಆರವ್ ನ ಕಾಲು ಸೇತುವೆ ಮೇಲಿನ ರೈಲ್ವೇ ಹಳಿಯಲ್ಲಿ ಸಿಲುಕಿಕೊಂಡಿದ್ದು, ಅತ್ತ ವೇಗವಾಗಿ ಬರುತ್ತಿದ್ದ ರೈಲನ್ನ ಆಕೆ ಕಂಡಳು.
ಆಗ ಇಂತಹ ಪರಿಸ್ಥಿತಿಯಲ್ಲಿ ಮಗುವನ್ನು ರಕ್ಷಿಸಲು ಶಶಿಬಾಲಾ ಅಪಾಯಕಾರಿ ನಿರ್ಧಾರ ಕೈಗೊಂಡು ತನ್ನ ಪ್ರಾಣವನ್ನು ಕೊಟ್ಟು ಮಗುವಿನ ಪ್ರಾಣ ಉಳಿಸುವುದೇ ಸೂಕ್ತ ಎಂದುಕೊಂಡಳು. ಅದೇ ಸಮಯದಲ್ಲಿ ಈ ಅಪಘಾತದ ನಂತರ ಇಡೀ ಕುಟುಂಬ ಅಘಾತಕ್ಕೊಳಗಾಗಿದ್ದು, ಮದುವೆ ಮನೆಯಲ್ಲಿ ಸೂತಕ ವಾತಾವರಣ ಸೃಷ್ಟಿಯಾಗಿದೆ. ಈ ದುಃಖದ ಘಟನೆಯಲ್ಲಿ ಮಗು ಆರವ್ ಗೂ ಕೂಡ ಕೂಡ ಕೆಲವು ಗಾಯಗಳಾಗಿದ್ದು ಮಗು ಚಿಕಿತ್ಸೆ ಪಡೆಯುತ್ತಿದೆ.
ಬಾವಿಗೆ ಪೂಜೆ ಸಲ್ಲಿಸಿದ ನಂತರ ರೇಲ್ವೇ ಹಳಿ ದಾಟುತ್ತಿದ್ದ ಜನ…
ಗುರುವಾರ ಸಂಜೆ ಬಾವಿ ಪೂಜೆ ಕಾರ್ಯಕ್ರಮದಲ್ಲಿ, ಶಶಿಬಾಲಾ ಇಡೀ ಕುಟುಂಬದೊಂದಿಗೆ ಮೊರಾದಾಬಾದ್-ಲಖನೌ ರೈಲು ಮಾರ್ಗದ ಇನ್ನೊಂದು ಬದಿಗೆ ಹೋದರು. ಬಾವಿಗೆ ಪೂಜೆ ಮುಗಿಸಿ ವಾಪಸಾಗುತ್ತಿದ್ದಾಗ ಶಶಿಬಾಲಾ ಅವರ ಮೂರು ವರ್ಷದ ಸೋದರಳಿಯ ಆರವ್‌ನ ಕಾಲುಗಳು ಸೇತುವೆಯ ಮೇಲಿನ ರೈಲು ಮಾರ್ಗದಲ್ಲಿ ಸಿಲುಕಿಕೊಂಡಿವೆ. ಅಷ್ಟರಲ್ಲಿ ರೈಲಿನ ಹಾರ್ನ್ ಸದ್ದು ಕೇಳಿಸಿದ್ದು, ವೇಗವಾಗಿ ರೈಲು ಬರುತ್ತಿರುವುದು ಕಂಡಿತು. ಆಗ ಶಶಿಬಾಲಾ ಮಗುವಿನ ಕಾಲು ತೆಗೆಯಲು ಹರಸಾಹಸ ಮಾಡಿದರೂ ಪ್ರಯೋಜನವಾಗಲಿಲ್ಲ. ನಂತರ ಅವರು ಈ ಅಪಾಯಕಾರಿ ನಿರ್ಧಾರ ಕೈಗೊಂಡು ತಮ್ಮ ಪ್ರಾಣ ಕೊಟ್ಟು ಮಗುವಿನ ಪ್ರಾಣ ಉಳಿಸಿದ್ದಾರೆ.