ನವದೆಹಲಿ: ಕಳೆದ ಕೆಲವು ದಿನಗಳಿಂದ ಹಿಂದುತ್ವದ ಸಿದ್ಧಾಂತವನ್ನು ಪ್ರತಿಪಾದಿಸುವ ಜನರ ಜೀವಕ್ಕೆ ನಿರಂತರವಾಗಿ ಜಿಹಾದಿಗಳು ಬೆದರಿಕೆ ಹಾಕುತ್ತಿದ್ದಾರೆ. ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಉದಯಪುರದಲ್ಲಿ ಟೈಲರ್ ಕನ್ಹಯ್ಯಾಲಾಲ್ ಅವರನ್ನು ಹ-ತ್ಯೆ ಮಾಡಿದ ರೀತಿ, ಅಂದಿನಿಂದ ದೇಶದ ಇತರ ಹಲವು ರಾಜ್ಯಗಳಲ್ಲಿ ಹಿಂದುತ್ವದ ಪ್ರತಿಪಾದಕರಿಗೆ ಹಾಗು ಹಿಂದೂ ನಾಯಕರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಈ ಮಧ್ಯೆ, ಹಿಂದೂವಾದಿ ದಿವಂಗತ ಕಮಲೇಶ್ ತಿವಾರಿ ಅವರ ಪತ್ನಿ ಕಿರಣ್ ತಿವಾರಿ ಅವರಿಗೂ ಕೊಲೆ ಬೆದರಿಕೆ ಇದೆ ಎಂಬ ಸುದ್ದಿ ಕಾನ್ಪುರದಿಂದ ವರದಿಯಾಗಿದೆ. ಬಳಿಕ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಕಿರಣ್ ತಿವಾರಿಯವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ನೂಪುರ್ ಶರ್ಮಾ ಅವರ ಹೇಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಇತ್ತೀಚೆಗೆ ಕನ್ಹಯ್ಯಾಲಾಲ್ ಅವರನ್ನು ಬರ್ಬರವಾಗಿ ಹ-ತ್ಯೆ ಮಾಡಿದ ಸಮಯದಲ್ಲೇ ದಿವಂಗತ ಕಮಲೇಶ್ ತಿವಾರಿ ಅವರ ಪತ್ನಿಗೂ ಕೊಲೆ ಬೆದರಿಕೆಗಳು ಬಂದಿವೆ. ಬನ್ನಿ, ಮುಂದಿನ ವರದಿಯಲ್ಲಿ ಈ ಸಂಪೂರ್ಣ ಘಟನೆಯ ಬಗ್ಗೆ ವಿವರವಾಗಿ ನಿಮಗೆ ತಿಳಿಸುತ್ತೇವೆ.
ವಾಸ್ತವವಾಗಿ, ದಿವಂಗತ ಹಿಂದುತ್ವವಾದಿ ಕಮಲೇಶ್ ತಿವಾರಿ ಅವರ ಪತ್ನಿ ತಮ್ಮ ಮನೆಗೆ ಉರ್ದು ಭಾಷೆಯಲ್ಲಿ ಬರೆದ ಪತ್ರ ಬಂದಿದ್ದು ಅದರಲ್ಲಿ ನಿನ್ನ ಗಂಡನನ್ನ ಎಲ್ಲಿಗೆ ಕಳುಹಿಸಿದ್ದೇವೋ ನಿನ್ನನ್ನೂ ಅಲ್ಲಿಗೇ ಕಳುಹಿಸುತ್ತಾರೆ ಎಂದು ಬರೆಯಲಾಗಿದೆ ಎಂದಿದ್ದಾರೆ. ಮತ್ತೊಂದೆಡೆ, ಕಿರಣ್ ಈ ಪತ್ರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸರ ಪ್ರಕಾರ, ಪೊಲೀಸರು ಈ ಪತ್ರವನ್ನು ಸೋಶಿಯಲ್ ಮೀಡಿಯಾಗಳ ಮೂಲಕ ಪಡೆದಿದ್ದು ಅದರಲ್ಲಿ ಕಿರಣ್‌ಗೆ ಜೀವ ಬೆದರಿಕೆ ಹಾಕಲಾಗಿದೆ. ಕೊ-ಲೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಕಿರಣ್ ಕುಟುಂಬ ಆತಂಕಕ್ಕೆ ಒಳಗಾಗಿದೆ. ಮನೆಯ ಸದಸ್ಯರು ಹೊರಗಡೆ ಹೋಗಲೂ ಭಯಪಡುತ್ತಿದ್ದಾರೆ ಎಂಬ ಅವರ ಮಾತನ್ನ ಕೇಳಿದರೇ ನೀವು ಅವರ ಹೆಂಡತಿ ಹಾಗು ಕುಟುಂಬ ಎಷ್ಟು ಭಯದಲ್ಲಿ ಬದುಕುತ್ತಿದೆ ಎಂಬುದನ್ನ ನೀವು ಊಹಿಸಬಹುದು. ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಪತ್ರ ಬಂದಿದೆ ಎಂದು ಪಶ್ಚಿಮ ಎಡಿಸಿಪಿ ಚಿರಂಜೀವ್ ನಾಥ್ ಸಿನ್ಹಾ ತಿಳಿಸಿದ್ದಾರೆ.
ಇದೇ ವೇಳೆ ಈ ಪತ್ರ ಪತ್ತೆಯಾದ ನಂತೆ ಪೊಲೀಸರು ಕಿರಣ್‌ರನ್ನು ವಿಚಾರಣೆಗೊಳಪಡಿಸಿದ್ದಾರೆ. ಜೂನ್ 22 ರಂದು ತನ್ನ ಕೊಠಡಿಯಲ್ಲಿ ಈ ಪತ್ರ ಸಿಕ್ಕಿತು ಎಂದು ಕಿರಣ್ ವಿಚಾರಣೆ ವೇಳೆ ತಿಳಿಸಿದ್ದಾರೆ. ಈ ಪತ್ರದಲ್ಲಿ ಯಾವುದೇ ರೀತಿಯ ಅಂಚೆ ಚೀಟಿ ಇಲ್ಲ ಎಂಬುದನ್ನು ಗಮನಿಸಬೇಕಾದ ಸಂಗತಿ, ಇದರಿಂದ ಈ ಪತ್ರವನ್ನು ಯಾರು ಕಳುಹಿಸಿದ್ದಾರೆ ಎಂಬುದು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಪ್ರತಿಯೊಂದು ಅಂಶವನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸುವುದು ಅನಿವಾರ್ಯವಾಗಲಿದೆ. ಅಕ್ಟೋಬರ್ 18, 2019 ರಂದು, ಹಿಂದೂವಾದಿ ನಾಯಕ ಕಮಲೇಶ್ ತಿವಾರಿ ಅವರನ್ನು ಅವರ ಮನೆಗೆ ನು-ಗ್ಗಿ ಬರ್ಬರವಾಗಿ ಹ-ತ್ಯೆ ಮಾಡಲಾಗಿತ್ತು, ಈ ಕಾರಣದಿಂದಾಗಿ ಇಡೀ ರಾಜ್ಯದಲ್ಲಿ ಆ ಸಮಯದಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು.
ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರನ್ನೂ ಟಾರ್ಗೆಟ್ ಮಾಡಲಾಗಿತ್ತು
ಕಿರಣ್ ತಿವಾರಿ ಅವರ ಮನೆಯಲ್ಲಿ ಸಿಕ್ಕ ಬೆದರಿಕೆ ಪತ್ರದಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರನ್ನೂ ಟಾರ್ಗೇಟ್ ಮಾಡಲಾಗಿದೆ, ಇದರಿಂದ ಭ-ಯೋ-ತ್ಪಾದಕರ ದುಷ್ಟ ಉದ್ದೇಶಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಪೊಲೀಸರು ಮತ್ತು ಇತರ ಕೇಂದ್ರ ತನಿಖಾ ಸಂಸ್ಥೆಗಳು ಈ ಸಂಪೂರ್ಣ ವಿಷಯವನ್ನು ಹಲವು ಆಯಾಮಗಳಿಂದ ತನಿಖೆ ಮಾಡಬೇಕಾಗಿದೆ.
ಇದಕ್ಕೂ ಮುನ್ನ ಉದಯ್‌ಪುರ ಕೊ-ಲೆ ಪ್ರಕರಣದಲ್ಲೂ ಕನ್ಹಯ್ಯಾಲಾಲ್ ಹಂತಕರು ನಗುತ್ತಲೇ ವಿಡಿಯೋ ಮಾಡಿ ಪ್ರಧಾನಿ ಮೋದಿಯವರನ್ನೂ ಕೊ-ಲ್ಲು-ವುದಾಗಿ ಬೆದರಿಕೆ ಹಾಕಿದ್ದರು. ಇದೀಗ ಮತ್ತೊಮ್ಮೆ ಬೆದರಿಕೆ ಪತ್ರ ಬಂದಿದ್ದು, ಅದರಲ್ಲಿ ಪ್ರಧಾನಿ ಮೋದಿ ಹಾಗೂ ಸಿಎಂ ಯೋಗಿ ಉ-ಗ್ರ-ರ ಟಾರ್ಗೇಟ್ ಆಗಿದ್ದಾರೆ.
ಮತ್ತೊಂದೆಡೆ, ಕನ್ಹಯ್ಯಾಲಾಲ್ ದಾರುಣ ಹ-ತ್ಯೆ ಪ್ರಕರಣದಲ್ಲಿ ಪೊಲೀಸ್ ಕ್ರಮದ ಬಗ್ಗೆ ಮಾತನಾಡಿದರೆ, ಹಂತಕರಾದ ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಮೊಹಮ್ಮದ್ ಇಬ್ಬರನ್ನೂ ಬಂಧಿಸಲಾಗಿದೆ. ಇದೀಗ ಈ ಸಂಪೂರ್ಣ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆ ಎನ್‌ಐಎ ನಡೆಸುತ್ತಿದೆ.
ಈ ಇಡೀ ಪ್ರಕರಣದ ನಂತರ ಇಡೀ ದೇಶದ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ. ಮತ್ತೊಂದೆಡೆ, ಈ ಸಂಪೂರ್ಣ ವಿಷಯಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರದ ಕಾರ್ಯಶೈಲಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.