ಕಿರುತೆರೆಯ ರಿಯಾಲಿಟಿ ಶೋಗಳ ಅಸಲಿಯತ್ತಿನ ಬಗ್ಗೆ ಪ್ರೇಕ್ಷಕರಿಗೆ ಮೊದಲಿನಿಂದಲೂ ಅನುಮಾನ ಇದೆ. ಅದರಲ್ಲೂ ಹಿಂದಿಯ ‘ಇಂಡಿಯನ್ ಐಡಲ್’ ಸಿಂಗಿಂಗ್ ರಿಯಾಲಿಟಿ ಶೋ ಹಲವು ವಿವಾದಗಳನ್ನು ಮಾಡಿಕೊಂಡಿದೆ. ಪ್ರತಿ ದಿನ ಈ ಕಾರ್ಯಕ್ರಮದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಹತ್ತು ಹಲವು ಕಾರಣಗಳಿಗಾಗಿ ಇದನ್ನು ಟ್ರೋಲ್ ಮಾಡಲಾಗುತ್ತಿದೆ. ಈಗ ‘ಇಂಡಿಯನ್ ಐಡಲ್’ ಜಡ್ಜ್ಗಳ ಹುಸಿ ಕಣ್ಣೀರು ಎಲ್ಲರಿಂದ ಟೀಕೆಗೆ ಒಳಪಡುತ್ತಿದೆ.
ಇತ್ತೀಚೆಗೆ ಫಾದರ್ಸ್ ಡೇ ಪ್ರಯುಕ್ತ ‘ಇಂಡಿಯನ್ ಐಡಲ್’ ಸ್ಪರ್ಧಿಗಳು ವಿಶೇಷ ಹಾಡುಗಳನ್ನು ಹೇಳಿದರು. ಅಲ್ಲದೆ, ತಮ್ಮ ತಂದೆ ಬಗೆಗಿನ ಕಥೆಗಳನ್ನೂ ವೇದಿಕೆ ಮೇಲೆ ಶೇರ್ ಮಾಡಿಕೊಂಡರು. ಅದನ್ನು ಕೇಳಿದ ನಿರ್ಣಾಯಕರಾದ ಹಿಮೇಶ್ ರೇಷಮಿಯಾ ಮತ್ತು ನೇಹಾ ಕಕ್ಕರ್ ಅವರು ಕಣ್ಣೀರು ಹಾಕಿದರು. ಆದರೆ ಅವರು ನಿಜವಾಗಿಯೂ ಅತ್ತಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದು ಹುಸಿ ಕಣ್ಣೀರು ಎಂದು ಟ್ರೋಲ್ ಮಾಡಲಾಗುತ್ತಿದೆ.
ಬರುಬರುತ್ತ ಇದು ದೈನಂದಿನ ಧಾರಾವಾಹಿ ಥರ ಆಗುತ್ತಿದೆ. ಬರೀ ಡ್ರಾಮಾ ಹೆಚ್ಚಾಗುತ್ತಿದೆ. ಜಡ್ಜ್ಗಳು ಓವರ್ ಆ್ಯಕ್ಟಿಂಗ್ ಮಾಡುವುದನ್ನು ನಿಲ್ಲಿಸಬೇಕು ಎಂದು ಜನರು ಟ್ರೋಲ್ ಮಾಡಿದ್ದಾರೆ. ಕೆಲವರು ಈ ಶೋನಿಂದ ನಿರಾಶೆಗೊಂಡಿರುವುದು ಮಾತ್ರವಲ್ಲದೆ ವಿಪರೀತ ಕೋಪವನ್ನೂ ವ್ಯಕ್ತಪಡಿಸಿಕದ್ದಾರೆ. ಒಟ್ಟಾರೆ ಈ ಪ್ರಸಂಗಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಹಲವು ಬಗೆಯ ಮೀಮ್ಗಳು ಹರಿದಾಡುತ್ತಿವೆ.
Contestant: My life ….#IndianIdol
Other Judges to Neha Kakkar pic.twitter.com/TSIK5gpeG6
— ANKUSH (@Unboxhumour) June 13, 2021
Reality of Indian Idol in one picture #IndianIdol pic.twitter.com/YsdNS4S2uX
— ANKUSH (@Unboxhumour) June 19, 2021
https://twitter.com/navyaaa___/status/1404136456629542918?s=19
ಈ ಹಿಂದೆ ಕೂಡ ಇಂಡಿಯನ್ ಐಡಲ್ ಬಗ್ಗೆ ಆಕ್ಷೇಪಗಳು ಕೇಳಿಬಂದಿದ್ದವು. ಸ್ಪರ್ಧಿಗಳನ್ನು ಹೊಗಳುವಂತೆ ಆಯೋಜಕರು ಒತ್ತಾಯ ಹೇರುತ್ತಾರೆ. ಸ್ಪರ್ಧಿಗಳ ನಡುವೆ ಸುಳ್ಳು ಪ್ರೇಮಕಥೆಯನ್ನು ಸೃಷ್ಟಿಸಲಾಗುತ್ತದೆ ಎಂಬಿತ್ಯಾದಿ ಆರೋಪಗಳನ್ನು ಮಾಡಲಾಗಿತ್ತು. ಈ ಶೋಗೆ ಅತಿಥಿಯಾಗಿ ಹೋಗಿದ್ದ ಕಿಶೋರ್ ಕುಮಾರ್ ಪುತ್ರ ಅಮಿತ್ ಕುಮಾರ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.
‘ಸ್ಪರ್ಧಿಗಳು ಹೇಗೆ ಹಾಡಿದರೂ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದು ಮೇಕರ್ಗಳು ನಮಗೆ ಹೇಳುತ್ತಿದ್ದರು. ಅದು ನಿಜಕ್ಕೂ ದೊಡ್ಡ ವಿಚಾರ. ಹೀಗಾಗಿ, ನನಗೆ ಜಡ್ಜ್ ಆಗಿ ಮುಂದುವರಿಯೋಕೆ ಸಾಧ್ಯವಾಗುತ್ತಿಲ್ಲ. ಅವರಿಗೆ ಹೇಗೆ ಬೇಕೋ ಹಾಗೆ ಇರೋಕೆ ಸಾಧ್ಯವಿಲ್ಲ. ಹೀಗಾಗಿ, ನಾನು ಹೊರ ಬಂದೆ. ನಾನು ಯಾವುದೇ ಶೋಗಳಿಗೂ ಈಗ ಜಡ್ಜ್ ಆಗಿ ಹೋಗುತ್ತಿಲ್ಲ’ ಎಂದು ಇಂಡಿಯನ್ ಐಡಲ್ ಐದು ಹಾಗೂ ಆರನೇ ಸೀಸನ್ ಜಡ್ಜ್ ಆಗಿದ್ದ ಸುನಿಧಿ ಚೌಹಾಣ್ ಹೇಳಿದ್ದರು.
ಬಡತನ, ಫೇಕ್ ಲವ್ ಸ್ಟೋರಿಗಳೇ ರಿಯಾಲಿಟಿ ಶೋಗಳ ಬಂಡವಾಳ; ಇಂಡಿಯನ್ ಐಡಲ್ ವಿನ್ನರ್ ಆರೋಪ
Indian Idol 12: ಫೇಕ್ ಲವ್ ಸ್ಟೋರಿಗಳನ್ನು ಸೃಷ್ಟಿಸಿ ಜನರನ್ನು ಸೆಳೆಯುವ ತಂತ್ರ ನಡೆಯುತ್ತಿದೆ. ನಿಜವಾದ ಟ್ಯಾಲೆಂಟ್ಗೆ ಬೆಲೆ ನೀಡುವ ಬದಲು ಇಂಥ ಫೇಕ್ ಲವ್ಸ್ಟೋರಿ ಮತ್ತು ಸ್ಪರ್ಧಿಗಳ ಬಡತನವನ್ನು ಮುಂದಿಟ್ಟುಕೊಂಡು ಶೋ ನಡೆಸುತ್ತಿರುವುದು ಸರಿಯಲ್ಲ ಎಂದು ಅಭಿಜೀತ್ ಸಾವಂತ್ ಟೀಕೆ ಮಾಡಿದ್ದಾರೆ.
ಕಿರುತೆರೆ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಮನರಂಜನಾ ವಾಹಿನಿಗಳು ಎಲ್ಲಿಲ್ಲದ ಕಸರತ್ತು ನಡೆಸುತ್ತವೆ. ಅದರಲ್ಲೂ ರಿಯಾಲಿಟಿ ಶೋಗಳ ಮೂಲಕ ಜನರನ್ನು ಮೋಡಿ ಮಾಡಲು ಹಲವು ಪ್ರಯತ್ನಗಳನ್ನು ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳ ಬಗ್ಗೆ ಪರ-ವಿರೋಧದ ಅನೇಕ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆದಿದೆ. ಹಿಂದಿಯ ‘ಇಂಡಿಯನ್ ಐಡಲ್ 12’ ಸಿಂಗಿಂಗ್ ರಿಯಾಲಿಟಿ ಶೋ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಪರ್ಧಿಗಳನ್ನು, ನಿರೂಪಕರನ್ನು ಹಾಗೂ ಜಡ್ಜ್ಗಳನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿದೆ. ‘ಇಂಡಿಯನ್ ಐಡಲ್ 12’ ಬಗ್ಗೆ ಈಗ ಇಂಡಿಯನ್ ಐಡಲ್ ಮೊದಲ ಸೀಸನ್ನ ವಿನ್ನರ್ ಅಭಿಜೀತ್ ಸಾವಂತ್ ಮಾತನಾಡಿದ್ದಾರೆ.
ಈ ರೀತಿಯ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳ ನಡುವಿನ ಲವ್ಸ್ಟೋರಿಯನ್ನು ತೋರಿಸಲಾಗುತ್ತದೆ. ಆದರೆ ಅದು ನಿಜವಾದ ಪ್ರೇಮಕಥೆ ಆಗಿರುವುದಿಲ್ಲ. ಫೇಕ್ ಲವ್ ಸ್ಟೋರಿಗಳನ್ನು ಸೃಷ್ಟಿಸಿ ಜನರನ್ನು ಸೆಳೆಯುವ ತಂತ್ರ ನಡೆಯುತ್ತಿದೆ. ನಿಜವಾದ ಟ್ಯಾಲೆಂಟ್ಗೆ ಬೆಲೆ ನೀಡುವ ಬದಲು ಇಂಥ ಫೇಕ್ ಲವ್ಸ್ಟೋರಿ ಮತ್ತು ಸ್ಪರ್ಧಿಗಳ ಬಡತನವನ್ನು ಮುಂದಿಟ್ಟುಕೊಂಡು ಶೋ ನಡೆಸುತ್ತಿರುವುದು ಸರಿಯಲ್ಲ ಎಂದು ಅಭಿಜೀತ್ ಸಾವಂತ್ ಟೀಕೆ ಮಾಡಿದ್ದಾರೆ.
ಇಂಡಿಯನ್ ಐಡಲ್ 12’ರ ಸ್ಪರ್ಧಿಗಳಾದ ಪವನ್ ದೀಪ್ ರಾಜನ್ ಅರುಣಿತಾ ನಡುವೆ ಪ್ರೀತಿ ಇದೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಅದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ಈ ಕಾರ್ಯಕ್ರಮದಲ್ಲಿ ಲೆಜೆಂಡರಿ ಗಾಯಕ ಕಿಶೋರ್ ಕುಮಾರ್ ಅವರಿಗೆ ನಮನ ಸಲ್ಲಿಸುವ ಸಲುವಾಗಿ ವಿಶೇಷ ಎಪಿಸೋಡ್ ನಡೆಸಲಾಯಿತು. ಆ ಎಪಿಸೋಡ್ ಸರಿಯಾಗಿ ಮೂಡಿಬಂದಿಲ್ಲ ಹಾಗೂ ಕಿಶೋರ್ ಕುಮಾರ್ಗೆ ಅಗೌರವ ಸೂಚಿಸಿದಂತಾಗಿದೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಈ ವಿಶೇಷ ಎಪಿಸೋಡ್ಗಳಲ್ಲಿ ಮುಖ್ಯ ಅತಿಥಿಯಾಗಿ ಕಿಶೋರ್ ಕುಮಾರ್ ಅವರ ಮಗ ಅಮಿತ್ ಕುಮಾರ್ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ ಬಂದ ಬಳಿಕ ಅವರು ಕೂಡ ‘ಇಂಡಿಯನ್ ಐಡಲ್ 12’ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ‘ನನಗೆ ಆ ಶೋ ಖಂಡಿತಾ ಇಷ್ಟ ಆಗಲಿಲ್ಲ. ಎಲ್ಲ ಸ್ಪರ್ಧಿಗಳನ್ನು ಹೊಗಳಬೇಕು ಎಂದು ಆಯೋಜಕರು ಹೇಳಿದ್ದರು. ಅದರಂತೆ ನಾನು ನಡೆದುಕೊಂಡೆ’ ಎಂದು ಮಾಧ್ಯಮವೊಂದಕ್ಕೆ ಅಮಿತ್ ಕುಮಾರ್ ಪ್ರತಿಕ್ರಿಯೆ ನೀಡಿದ್ದರು. ಹೀಗೆ ಎಲ್ಲ ಕಡೆಗಳಿಂದಲೂ ಇಂಡಿಯನ್ ಐಡಲ್ ಕಾರ್ಯಕ್ರಮದ ಬಗ್ಗೆ ಟೀಕೆ ಕೇಳಿಬರುತ್ತಿದೆ.