‘ಬ್ರಹ್ಮಾಸ್ತ್ರ’ ಚಿತ್ರದ ಬಿಡುಗಡೆಗೂ ಮುನ್ನ ನಟಿ ಆಲಿಯಾ ಭಟ್ ಕರೀನಾ ಕಪೂರ್ ನಂತೆಯೇ ತನ್ನ ಧಿಮಾಕಿನ ವರ್ತನೆ ತೋರಿಸಿದ್ದಾರೆ. ಫೆಬ್ರವರಿ 2022 ರಲ್ಲಿ ಬಿಡುಗಡೆಯಾದ ಆಲಿಯಾ ಭಟ್ ಅವರ ‘ಗಂಗೂಬಾಯಿ ಕಥಿಯಾವಾಡಿ’ ವಿಶ್ವದಾದ್ಯಂತ 200 ಕೋಟಿಗೂ ಹೆಚ್ಚು ವ್ಯವಹಾರವನ್ನು ಮಾಡಿದೆ, ಅದರ ನಂತರ ನಟಿ ಫುಲ್ ಜೋಶ್ ನಲ್ಲಿದ್ದಾರೆ. ಇತ್ತೀಚೆಗೆ, ‘ಡಾರ್ಲಿಂಗ್ಸ್’ ಅನ್ನು ನೆಟ್ಫ್ಲಿಕ್ಸ್ ಬಿಡುಗಡೆ ಮಾಡಿದೆ. ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಅವರು ತಮ್ಮ ಪತಿ ರಣಬೀರ್ ಕಪೂರ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಆಕೆ ಗರ್ಭ ಧರಿಸಿರುವ ಬಗ್ಗೆಯೂ ತಿಳಿಸಿದ್ದಾಳೆ.
ಹಾಗೆ ನೋಡಿದರೆ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ, ಬಾಲಿವುಡ್ನಲ್ಲಿ ನೆಪೋಟಿಸಂ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು, ಆದರೆ ಅದಕ್ಕೂ ಮೊದಲಿನಿಂದಲೂ ನೆಪೋಟಿಸಂ ವಿಷಯ ಚರ್ಚೆಗೆ ಗ್ರಾಸವಾಗಿತ್ತು. ಕರಣ್ ಜೋಹರ್ ಅವರು 2011 ರಲ್ಲಿ ಆಲಿಯಾ ಭಟ್ ಅವರನ್ನು ‘ಸ್ಟೂಡೆಂಟ್ಸ್ ಆಫ್ ದಿ ಇಯರ್’ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಡಿಸಿದ್ದರು. ಇದು ಡೇವಿಡ್ ಧವನ್ ಅವರ ಮಗ ವರುಣ್ ಧವನ್ ಅವರ ಚೊಚ್ಚಲ ಚಿತ್ರವೂ ಆಗಿತ್ತು. ಆಲಿಯಾ ಸ್ವತಃ ಚಲನಚಿತ್ರ ನಿರ್ದೇಶಕ ಮಹೇಶ್ ಭಟ್ ಅವರ ಮಗಳು. ಅವರ ತಂದೆ ಅವರೊಂದಿಗೆ ‘ಸಡಕ್ 2 (2020)’ ಕೂಡ ಮಾಡಿದ್ದರು, ಅದು ಅಟ್ಟರ್ಫ್ಲಾಪ್ ಆಗಿತ್ತು.
ಇದೀಗ ಆಲಿಯಾ ಭಟ್ ನೆಪೋಟಿಸಂ ನಿಂದಾಗಿ ಬಾಲಿವುಡ್ ಟಾರ್ಗೆಟ್ ಆಗಿರುವ ಬಗ್ಗೆ ಮಾತನಾಡಿದ್ದು, ಒಂದೇ ಒಂದು ವಿಷಯದ ಮೂಲಕ ನಾವು ಈ ಚರ್ಚೆಯನ್ನು ನಿಲ್ಲಿಸಬಹುದು ಮತ್ತು ಅದು ತನ್ನ ಚಿತ್ರಗಳು ಎಂದು ನಾನು ನಂಬುತ್ತೇನೆ. ಇದರ ಬಗ್ಗೆ ಪ್ರತಿಕ್ರಿಯಿಸದೇ ಇರುವುದಕ್ಕೆ ಬೇಸರವಿಲ್ಲ ಎಂದರು. ‘ಮಿಡ್ ಡೇ’ ಜೊತೆ ಮಾತನಾಡಿದ ಆಲಿಯಾ ಭಟ್, ಜನರ ಟೀಕೆಗಳಿಂದ ನನಗೆ ಬೇಸರವಾಗುತ್ತದೆ, ಆದರೆ ತನಗೆ ಗೌರವ ಮತ್ತು ಪ್ರೀತಿ ಸಿಗುವ ಕೆಲಸಕ್ಕೆ ಇದು ಸಣ್ಣ ಬೆಲೆಯಾಗಿದೆ ಎಂದಿದ್ದಾರೆ.
ಅಲಿಯಾ ಭಟ್ ಮಾತನಾಡುತ್ತ, “ನಾನು ಪದೆ ಪದೆ ಮಾತನಾಡುವ ಮೂಲಕ ನನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ನೀವು ನನ್ನನ್ನು ಇಷ್ಟಪಡದಿದ್ದರೆ, ನನ್ನ ಚಲನಚಿತ್ರಗಳನ್ನು ನೋಡಬೇಡಿ. ಅದರ ಬಗ್ಗೆ ನಾನೇನೂ ಮಾಡಲಾರೆ. ‘ಗಂಗೂಬಾಯಿ’ ಎಂಬ ಹಿಟ್ ಚಿತ್ರ ಕೊಟ್ಟಿದ್ದೆ. ಯಾರು ಗೆದ್ದರು? ನನ್ನ ಚಿತ್ರ. ನನ್ನ ಒಂದು ಚಿತ್ರ ಫ್ಲಾಪ್ ಆಗುವವರೆಗೂ ನೋಡಬೇಡಿ. ನಾನಿರುವ ಜಾಗಕ್ಕೆ ನಾನು ಅರ್ಹ ಎಂಬುದನ್ನು ನನ್ನ ಸಿನಿಮಾಗಳ ಮೂಲಕ ಸಾಬೀತು ಪಡಿಸುತ್ತೇನೆ. ಈ ಮೂರ್ಖ ಚರ್ಚೆ ಎಲ್ಲಿಂದ ಬಂತು? ಇದಕ್ಕೆ ಯಾವುದೇ ಕಾರಣವಿಲ್ಲ’’ ಎಂದರು.
ಕರೀನಾ ಕಪೂರ್ ಕೂಡ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು ಎಂಬುದನ್ನು ನೆನಪಿಸಿಕೊಳ್ಳಿ, ಆದರೆ ‘ಲಾಲ್ ಸಿಂಗ್ ಚಡ್ಡಾ’ ಬಿಡುಗಡೆಯಾದ ನಂತರ, ಚಿತ್ರವು ವಿಫಲವಾಗಲು ಪ್ರಾರಂಭಿಸಿದಾಗ ಅವರ ಧ್ವನಿ ಬದಲಾಯಿತು. ಚಿತ್ರದ ಪ್ರಚಾರದ ವೇಳೆ ಕರೀನಾ ಕಪೂರ್ ಖಾನ್, ಚಿತ್ರ ಚೆನ್ನಾಗಿದ್ದರೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ ಮತ್ತು ಎಲ್ಲಾ ನಿರೀಕ್ಷೆಗಳನ್ನು ಮೀರುತ್ತದೆ ಎಂದು ಹೇಳಿದ್ದರು. ಬಾಯ್ಕಾಟ್ ನಂತಹ ವಿಷಯಗಳು ಒಳ್ಳೆಯ ಚಿತ್ರದ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಅವರು ಹೇಳಿದ್ದರು. ಮತ್ತೊಂದು ಸಂದರ್ಶನದಲ್ಲಿ ಕರೀನಾ ವಿವಾದಗಳ ಬಗ್ಗೆ ಸ್ಪಷ್ಟನೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದರು.