Yogi Adityanath viral video says about shahrukh khan: ಈ ಹಿಂದೆ ಕರೋನಾ ವೈರಸ್ ಮಸೀದಿಗಳಿಂದ ಹರಡಿದ್ದರ (ದೆಹಲಿಯ ಮರ್ಕಜ್ ಪ್ರಕರಣ) ಬಗ್ಗೆ ದೇಶಾದ್ಯಂತ ಜನರಲ್ಲಿ ಭಾರೀ ಆಕ್ರೋಶ ಕಂಡುಬಂದಿತ್ತು. ಆ ಸಮಯದಲ್ಲಿ, ಜನರು ತಮ್ಮ ಕೋಪವನ್ನ ಸೋಶಿಯಲ್ ಮೀಡಿಯಾಗಳ ಮೂಲಕ ಹೊರಹಾಕಿದ್ದರು. ಇದೀಗ ಲಾಲ್ ಸಿಂಗ್ ಚಡ್ಡಾ ಚಿತ್ರದ ಬಳಿಕ ಶಾರುಖ್ ಖಾನ್ ಅವರ ಮುಂದಿನ ಚಿತ್ರ ‘ಪಠಾಣ್’ ಬಹಿಷ್ಕರಿಸಲು ಜನ ಕ್ಯಾಂಪೇನ್ ಈಗಿನಿಂದಲೇ ಶುರುಮಾಡಿದ್ದಾರೆ. ಇದೇ ಸಂದ್ರಭದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಹಳೆಯ ವೀಡಿಯೊ ಇಂಟರ್ನೆಟ್ ನಲ್ಲಿ ವೈರಲ್ ಆಗಲು ಬಹುಶಃ ಇದೂ ಕಾರಣವಾಗಿರಬಹುದು. ಆದರೆ ಈ ವಿಡಿಯೋ ಬಾಯ್ಕಾಟ್ ಬಾಲಿವುಡ್ ಅಥವ ಪಠಾಣ್ಗೆ ಸಂಬಂಧಿಸಿದ್ದಾಗಿದೆ ಎಂದು ಅಂದುಕೊಂಡಿದ್ದರೆ, ಆ ರೀತಿಯದ್ದೇನೂ ಇಲ್ಲ, ಈ ವೀಡಿಯೋ ಬಹಳ ಹಳೆಯದು.
ಯೋಗಿ ಆದಿತ್ಯನಾಥ್ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈರಲ್ ವೀಡಿಯೊದಲ್ಲಿ, ಯೋಗಿ ಆದಿತ್ಯನಾಥ್ ಕೆಲ ಜನರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ದೇಶದಲ್ಲಿ ಕೆಲ ವಿಚಾರಧಾರೆಯ ಕೆಲವು ಬರಹಗಾರರು ಮತ್ತು ಕಲಾವಿದರು ಈಗ ಭಾರತ ವಿರೋಧಿ ಧ್ವನಿ ಎತ್ತಲು ಪ್ರಾರಂಭಿಸಿದ್ದಾರೆ. ದುರದೃಷ್ಟವಶಾತ್ ಇಂತಹ ಜನರ ಜೊತೆ ನಟ ಶಾರುಖ್ ಖಾನ್ ಕೂಡ ನಿಂತಿದ್ದಾರೆ. ಶಾರುಖ್ ಖಾನ್ ಈ ರೀತಿ ಮಾಡಿದ್ದು ಮೊದಲೇನಲ್ಲ ಆತ ಈ ಹಿಂದೆಯೂ ಇಂಥಾ ಕೃತ್ಯಗಳನ್ನ ಮಾಡಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳುತ್ತಿದ್ದಾರೆ.
ಯೋಗಿ ಆದಿತ್ಯನಾಥ್ ಮುಂದೆ ಮಾತನಾಡುತ್ತ ಶಾರುಖ್ ಖಾನ್ಗೆ, ದೇಶದಲ್ಲಿ ಬಹುಸಂಖ್ಯಾತ ಜನ ಅವರ ಫಿಲಂ ಬಹಿಷ್ಕಾರ ಮಾಡಿದರೆ ಆತ ಒಬ್ಬ ಸಾಮಾನ್ಯ ಮುಸಲ್ಮಾನನ ರೀತಿಯಲ್ಲಿ ಬೀದಿಯಲ್ಲಿ ತಿರುಗಾಡಬೇಕಾಗುತ್ತದೆ. ಸಮಸ್ಯೆಗಳ ಕುರಿತು, ಫ್ಯಾಕ್ಟ್ಸ್ ಗಳ ಬಗ್ಗೆ ಚರ್ಚೆಯಾಗಬೇಕು ಆದರೆ ಭಾರತವನ್ನ ಅಪಮಾನಗೊಳಿಸಲು ಅಂತರರಾಷ್ಟ್ರೀಯ ಷಡ್ಯಂತ್ರ ನಡೆಯುತ್ತಿದೆ. ಒಂದು ವೇಳೆ ಈ ಷಡ್ಯಂತ್ರ ಯಾವುದಾದರೂ ವ್ಯಕ್ತಿ ಅಥವ ಪಕ್ಷವನ್ನ ಗುರಿಯಾಗಿಸಲು ಅಥವ ಬಹುಸಂಖ್ಯಾತ ಸಮಾಜವನ್ನ ಗುರಿಯಾಗಿಸಲು ನಡೆಸುತ್ತಿದ್ದರೆ ಅದನ್ನ ನಾವು ತೀವ್ರವಾಗಿ ಖಂಡಿಸುತ್ತೇವೆ ಹಾಗು ಹಿಂದುಗಳು ತಕ್ಕ ಉತ್ತರ ಕೊಡಲಿದ್ದಾರೆ ಎಂದಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾ’ರೀ ವೈರಲ್ ಆಗುತ್ತಿದೆ. ವಿಡಿಯೋ ನೋಡಿ
ಬಹುಸಂಖ್ಯಾತ ಸಮಾಜ ಬಹಿಷ್ಕರಿಸಿದರೆ ಶಾರುಖ್ ಖಾನ್ ಬೀದಿಗೆ ಬರ್ತಾನೆ: ಯೋಗಿ ಆದಿತ್ಯನಾಥ್ pic.twitter.com/ffnk0twAvn
— KNI (@KNINewz) October 22, 2020
ಬರ್ಬಾದ್ ಆದ ಖಾನ್ ಗ್ಯಾಂಗ್
ಬಾಲಿವುಡ್ ವಿಷಯ ಬಂದಾಗಲೆಲ್ಲಾ, ಮೊದಲು ಖಾನ್ಗಳ ಹೆಸರು ಮೊದಲು ಬರುತ್ತದೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಈ ಎಲ್ಲ ಹೆಸರುಗಳು ಎಲ್ಲರ ನಾಲಿಗೆಯ ಮೇಲಿರುತ್ತವೆ. ಆದರೆ ಈಗ ಸಮಯ ಬದಲಾಗುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಈ ಖಾನ್ಗಳ ಜನಪ್ರಿಯತೆಯೂ ಕೂಡ ಕಡಿಮೆಯಾಗುತ್ತಿದೆ.
ಈಗ ಬಾಲಿವುಡ್ನ ಯಾವುದೇ ನಿರ್ಮಾಪಕರು ಯಾವ ಖಾನ್ ಗಳಿಗೂ ಆಯ್ಕೆ ಮಾಡುತ್ತಿಲ್ಲ. ಅಷ್ಟೇ ಅಲ್ಲ ಸಲ್ಮಾನ್, ಶಾರುಖ್, ಅಮೀರ್, ಅಕ್ಷಯ್ ಮತ್ತು ಅಜಯ್ ದೇವ್ಗನ್ರಂತಹ ದೊಡ್ಡ ನಾಯಕರಿಗೆ 50% ಸಂಭಾವನೆ ಸಹ ನೀಡಲು ಸಿದ್ಧರಿಲ್ಲ. ಇತ್ತೀಚೆಗೆ, ಬಾಲಿವುಡ್ನ ಹೊಸ ಸುದ್ದಿ ಬೆಳಕಿಗೆ ಬಂದಿದೆ, ಈ ದೊಡ್ಡ ಸೂಪರ್ಸ್ಟಾರ್ಗಳು ಹಿಂದೆ ಪಡೆಯುತ್ತಿದ್ದ ಸಂಭಾವನೆ ಕೂಡ ಈಗ ಅವರಿಗೆ ಸಿಗುವುದಿಲ್ಲ, ಇದರಲ್ಲಿ ಅವರಿಗೆ ಈಗ 50% ಗಿಂತ ಕಡಿಮೆ ಸಂಭಾವನೆ ನೀಡಲಾಗುತ್ತಿದೆ.
ಇದು ಮಾತ್ರವಲ್ಲ, ಯಾವುದೇ ನಿರ್ಮಾಪಕರು ಈಗ ಇವರನ್ನ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲು ಸಿದ್ಧರಿಲ್ಲ, ಆದರೆ ಇವರನ್ನ ಆಯ್ಕೆ ಮಾಡಿಕೊಳ್ಳಬೇಕೆಂದರೆ ಆದರೆ ಇವರನ್ನ ಆಯ್ಕೆ ಮಾಡಿಕೊಂಡರೂ ಕೇವಲ 50% ಕ್ಕೂ ಕಡಿನೆ ಸಂಭಾವನೆಯೊಂದಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾಲಿವುಡ್ ತಾರೆಯರು ಈಗ ತುಂಬಾ ಕೆಟ್ಟ ಸ್ಥಿತಿಯಲ್ಲಿದ್ದಾರೆ.
ಕಳೆದ 6 ತಿಂಗಳಿಂದ ಎಲ್ಲಾ ಚಿತ್ರಮಂದಿರಗಳು ಮುಚ್ಚಲ್ಪಟ್ಟಿರುವುದರಿಂದ ಮತ್ತು ಯಾವುದೇ ಚಿತ್ರಗಳ ನಿರ್ಮಾಣವಾಗದ ಕಾರಣ ಲೋಕ್ಡೌನ್ನಿಂದಾಗಿ ಇಡೀ ಉದ್ಯಮವು 250 ಕೋಟಿ ನಷ್ಟವನ್ನು ಅನುಭವಿಸಿದೆ. ಈ ಮಧ್ಯೆ ಕೆಲವು ಚಲನಚಿತ್ರಗಳು ಬಿಡುಗಡೆಯಾದವು, ಆದರೆ ಅದರ ನಂತರ ಲಾಕ್ಡೌನ್ ನಿಂದಾಗಿ ಈ ಚಿತ್ರವನ್ನು ನಿಲ್ಲಿಸಲಾಯಿತು, ಇದರಿಂದಾಗಿ ಆ ಚಿತ್ರಗಳ ಹಣ ಕೂಡ ಹೋಮವಾಗಿದೆ, ಇದರಿಂದ ಬಾಲಿವುಡ್ ಗೆ ಭಾರೀ ನಷ್ಟವಾಗಿದೆ.
ಇದರ ನಂತರ, ಈಗ ತೆರೆಯಲಿರುವ ಥಿಯೇಟರ್ನಲ್ಲಿ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ ಏಕೆಂದರೆ ಕರೋನಾ ವೈರಸ್ ಇನ್ನೂ ಸಂಪೂರ್ಣವಾಗಿ ಭಾರತದಿಂದ ಹೋಗಿಲ್ಲ, ಆದ್ದರಿಂದ ಈಗ ಚಿತ್ರಮಂದಿರಗಳು ತೆರೆದರೂ ಸಹ ಅವು ಕೇವಲ 50% ಸೀಟುಗಳೊಂದಿಗೆ ಓಪನ್ ಆಗಲಿವೆ.
ಮೊದಲು ಥಿಯೇಟರ್ ಗಳೇ ಟಾರ್ಗೇಟ್ ಆಗಿದ್ದವು, ಮಾರ್ಚ್ ಹಾಗು ಏಪ್ರಿಲ್ ತಿಂಗಳುಗಳಲ್ಲೇ ಕೋಟ್ಯಂತರ ರೂಪಾಯಿ ಗಳಿಸಲಾಗುತ್ತಿತ್ತು. ಒಂದು ಕಾಲದಲ್ಲಿ ಸೂರ್ಯವಂಶಿ ಚಿತ್ರಮಂದಿರವಿತ್ತು ಅದು 83 ಚಿತ್ರಗಳನ್ನ ಬಿಡುಗಡೆ ಮಾಡೋಕು ತಯಾರಿತ್ತು. ಆದರೆ ಲಾಕ್ಡೌನ್ ಕಾರಣದಿಂದಾಗಿ ಚಿತ್ರಗಳು ರಿಲೀಸ್ ಆಗಲೇ ಇಲ್ಲ ಹಾಗು ಎಲ್ಲಾ ಥಿಯೇಟರ್ ಗಳು ತೆರೆಯಲೇ ಇಲ್ಲ. ಅದಾದ ಬಳಿಕ ಕೆಲ ಚಿತ್ರಮಂದಿರಗಳು ಓಪನ್ ಆಗಿ ಎರಡು ತಿಂಗಳಾದ ಬಳಿಕವೂ ಯಾರೂ ತಮ್ಮ ಫಿಲಂ ರಿಲೀಸ್ ಮಾಡುವ ಯೋಚನೆಯೂ ಮಾಡುವುದಿಲ್ಲ ಯಾಕಂದ್ರೆ ಮೊದಲು ಅವರು ಆಡಿಯನ್ಸ್ ರಿಯಾಕ್ಷನ್ ನೋಡುತ್ತಾರೆ ಹಾಹು ಎಂಥಾ ಜನ ಥಿಯೇಟರ್ ಗೆ ಬರುತ್ತಾರೆ ಅಂತ ನೋಡಿ ಎಲ್ಲಾ ಸಾಧಕ ಬಾಧಕಗಳನ್ನ ನೋಡಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ.
ಈಗ ಒಟ್ಟಾರೆಯಾಗಿ ಹೇಳಬೇಕೆಂದರೆ ಥಿಯೇಟರ್ ಗಳು ಓಪನ್ ಆದರೂ ಫಿಲಂ ಮೇಕರ್ಸ್ ಆಗಲಿ ಅಥವ ಸ್ಟಅರ್ ಗಳಾಗಲಿ ಇವರಿಗೆಲ್ಲಾ ಕೊರೋನಾದಿಂದ ಭಾರೀ ನಷ್ಟ ಉಂಟಾಗಿದೆ. ಈ ಸ್ಥಿತಿ ಈಗ ಮೊದಲಿನಂತಾಗಬೇಕಾದರೆ ಫಿಲಂ ಪ್ರೊಡ್ಯೂಸರ್ ಗಳು ಸ್ಟಾರ್ ಗಳ ಸಂಭಾವನೆ ಕಡಿಮೆ ಮಾಡಲೇಬೇಕಾಗಿದೆ. ಕಾರಣ ಈ ಸ್ಟಾರ್ಗಳ ಸಂಭಾವನೆಯೇ ಒಂದು ಚಿತ್ರದ ಅತಿ ದೊಡ್ಡ ಇನ್ವೆಸ್ಟಮೆಂಟ್ ಆಗಿರುತ್ತದೆ.