ತನಗೆ ಎಲ್ಲ ಧರ್ಮಗಳ ಸ್ನೇಹಿತೆಯರಿದ್ದಾರೆ ಎಂದು ಹೇಳುವ ಸಿದ್ದೀಖಾ, ಆತ್ಮದ ಕರೆಯಿಂದಾಗಿ ಭ್ರಾತೃತ್ವದ ಸಂದೇಶ ಹಂಚಲು ತಾನಿಲ್ಲಿಗೆ ಬಂದಿರುವುದಾಗಿ ಹೇಳುತ್ತಾರೆ. ಅವರ ಕುಟುಂಬಸ್ಥರಿಂದ ತನಗೆ ಜೀವಭಯವಿದೆ ಹೇಳುವ ಅವರು ಅಯೋಧ್ಯೆಯಲ್ಲಿ ಭ್ರಾತೃತ್ವ, ಸೌಹಾರ್ದತೆ ಮನೆಮಾಡಿವೆ, ಇದೇ ಸಂದೇಶ ತನ್ನ ಕುಟುಂಬದ ಸದಸ್ಯರಿಗೂ ನೀಡುವುದಾಗಿ ಅವರು ಹೇಳುತ್ತಾರೆ.
ಅಯೋಧ್ಯೆ: ರಾಮಲಲ್ಲಾನ (Ram Lalla) ದರ್ಶನಕ್ಕೆ ಜಮ್ಮುನಿಂದ (Jammu) ಬಂದ ಸಿದ್ದಿಖಾ ಖಾನ್ (Siddiqua Khan)! ನಂಬೋದಿಕ್ಕೆ ಕಷ್ಟ ಆಗಬಹುದು ತಾನೇ? ಆದರೆ, ಇದು ಸತ್ಯ ಮತ್ತು ಅ ಮಹಿಳೆಯೇ ಟಿವಿ9 ಕನ್ನಡ ವಾಹಿನಿಯ ದೆಹಲಿ ವರದಿಗಾರನೊಂದಿಗೆ ಮಾತಾಡಿದ್ದಾರೆ. ಇವರು ರಾಮನ ದರ್ಶನಕ್ಕೆ ಸುಮ್ಮನೆ ಬಂದಿಲ್ಲ, ಅದಕ್ಕಾಗಿ 3 ದಿನಗಳ ವ್ರತವನನ್ನೂ ಆಚರಿಸಿದ್ದಾರೆ. ಜಮ್ಮು ನಿವಾಸಿಯಾಗಿರುವ ಸಿದ್ದಿಖಾ ಖಾನ್ ಮೂರು ದಿನಗಳ ಹಿಂದೆ ರಾತ್ರಿ 2 ಗಂಟೆಗೆ ತನಗೆ ರಾಮ ಕನಸಲ್ಲಿ ಕಾಣಿಸಿಕೊಂಡು, ನಾನು ಅಯೋಧ್ಯೆಗೆ ಬಂದಿದ್ದೇನೆ, ನೀನ್ಯಾಕೆ ಇನ್ನೂ ಇಲ್ಲೇ ಇದ್ಧೀಯಾ ಅಂತ ಕೇಳಿದರು ಅನ್ನುತ್ತಾರೆ. ಅವರಿಗೆ ಧಿಗ್ಗನೆ ಎಚ್ಚರವಾಗಿ ರಾಮ ಮತ್ತು ಅಲ್ಲಾಹು ನಾಮ ಜಪಿಸಿ ಕೂಡಲೇ ಅಯೋಧ್ಯೆ ಕಡೆ ಕಾರಲ್ಲಿ ಹೊರಟಿದ್ದಾರೆ. ಮೂರು ದಿನಗಳ ಕಾಲ ಡ್ರೈವ್ ಮಾಡಕೊಂಡು ಬಂದ ಇವರು ನಿನ್ನೆ ಅಯೋಧ್ಯೆಯಲ್ಲಿ ರಾಮನ ದರ್ಶನ ಪಡೆದುಕೊಂಡಿದ್ದಾರೆ. ತನಗೆ ಎಲ್ಲ ಧರ್ಮಗಳ ಸ್ನೇಹಿತೆಯರಿದ್ದಾರೆ ಎಂದು ಹೇಳುವ ಸಿದ್ದೀಖಾ, ಆತ್ಮದ ಕರೆಯಿಂದಾಗಿ ಭ್ರಾತೃತ್ವದ ಸಂದೇಶ ಹಂಚಲು ತಾನಿಲ್ಲಿಗೆ ಬಂದಿರುವುದಾಗಿ ಹೇಳುತ್ತಾರೆ. ಅವರ ಕುಟುಂಬಸ್ಥರಿಂದ ತನಗೆ ಜೀವಭಯವಿದೆ ಹೇಳುವ ಅವರು ಅಯೋಧ್ಯೆಯಲ್ಲಿ ಭ್ರಾತೃತ್ವ, ಸೌಹಾರ್ದತೆ ಮನೆಮಾಡಿವೆ, ಇದೇ ಸಂದೇಶ ತನ್ನ ಕುಟುಂಬದ ಸದಸ್ಯರಿಗೂ ನೀಡುವುದಾಗಿ ಅವರು ಹೇಳುತ್ತಾರೆ.