ನಿಮಗಿದು ಗೊತ್ತೇ? ರಾವಣನ ಜೊತೆಗಿನ ಯುದ್ಧಕ್ಕೂ ಮುನ್ನ ತನ್ನ ಒಂದು ಕಣ್ಣನ್ನ ದಾನ ಮಾಡಿದ್ದ ಶ್ರೀರಾಮ

in Uncategorized 2,052 views

ಪ್ರಭು ಶ್ರೀರಾಮ, ರಾಮಾಯಣ ಹಾಗಿ 14 ವರ್ಷಗಳ ಕಾಲ ಶ್ರೀರಾಮ ವನವಾಸಕ್ಕೆ ಹೋಗಿದ್ದಂತೂ ನಮಗೆಲ್ಲಾ ತಿಳಿದಿದೆ. ವನವಾಸದ ಸಮಯದಲ್ಲೇ ಸೀತಾಮಾತೆಯನ್ನ ರಾವಣ ಅಪಹರಿಸಿ ಲಂಕೆಗೆ ಕರೆಯೊಯ್ದಿದ್ದ. ಅದಾದ ಬಳಿಕ ಶ್ರೀರಾಮನು ಸೀತೆಯ ಹುಡುಕಾಟ ಆರಂಭಿಸಿದ್ದ. ಸೀತಾಮಾತೆ ಲಂಕೆಯಲ್ಲಿದ್ದಾಳೆ ಅಂತ ಗೊತ್ತಾದ ಬಳಿಕ ಶ್ರೀರಾಮ ಲಂಕೆಗೂ ಹೋದ‌. ಆದರೆ ಪ್ರಭು ಶ್ರೀರಾಮ ರಾವಣನ ವ ಧೆಗೂ ಮುನ್ನ ತನ್ನ ಒಂದು ನೇತ್ರವನ್ನ ದಾನ ಮಾಡಿದ್ದ ಅನ್ನೋದು ನಿಮಗೆ ಗೊತ್ತಾ? ಅಷ್ಟಕ್ಕೂ ಆ ನೇತ್ರದಾನದ ಮಹತ್ವವೇನಿತ್ತು? ಬನ್ನಿ ನಿಮಗೆ ಇದರ ಬಗೆಗಿನ ಸಂಪೂರ್ಣ ಮಾಹಿತಿಯನ್ನ ಕೊಡುತ್ತೇವೆ.

Advertisement

ಭಾರತವಷ್ಟೇ ಅಲ್ಲದೆ ಹಿಂದೂ ಧರ್ಮದಲ್ಲಿ ನಂಬಿಕೆಯಿರುವ ಜನರಿರುವ ದೇಶಗಳಲ್ಲೆಲ್ಲಾ ದಸರಾ ಹಬ್ಬವನ್ನು ಇಂದು ಆಚರಿಸಲಾಗುತ್ತಿದೆ. ದಸರಾ ದಿನವನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ. ಶ್ರೀರಾಮನು ಈ ದಿನ ರಾವಣನನ್ನು ವಧಿಸಿದ ದಿನವಾಗಿದೆ. ಶ್ರೀರಾಮನು ರಾವಣನನ್ನು ವಧಿಸಿದ ದಿನದಂದೇ ತನ್ನ ಒಂದು ನೇತ್ರವನ್ನ ದಾನ ಮಾಡಿದ್ದನು. ಶ್ರೀರಾಮ ತನ್ನ ನೇತ್ರವನ್ನ ದಾನ ಮಾಡಿದ ಬಳಿಕವೇ ಲಂಕೆಯ ಮೇಲೆ ವಿಜಯಪ್ರಾಪ್ತಿಯ ಅವಕಾಶ ಸಿಕ್ಕಿತು. ರಾವಣನನ್ನು ವಧಿಸಲು ಶ್ರೀರಾಮನು ದುರ್ಗಾ ಮಾತೆಯ ಪೂಜೆ ಮಾಡಿದ್ದನು ಎಂಬ ಮಾನ್ಯತೆಯಿದೆ.

ಶ್ರೀರಾಮನು ದುರ್ಗಾ ಮಾತೆಯ ಪೂಜೆ ಮಾಡುತ್ತಿದ್ದಾಗ ದುರ್ಗೆಯು ಪ್ರಭು ಶ್ರೀರಾಮನನ್ನ ಪರೀಕ್ಷಿಸಿದ್ದಳು. ಮಾತೆ ದುರ್ಗಾ ಭಗವಾನ್ ಶ್ರೀರಾಮನನ್ನು ಪರೀಕ್ಷಿಸಲು ಪೂಜೆಯಲ್ಲಿ ಇರಿಸಲಾಗಿರುವ ಸಾವಿರಾರು ಹೂವುಗಳಲ್ಲಿ ಕಮಲದ ಹೂವನ್ನು ಬೇರ್ಪಡಿಸಿದಳು. ದುರ್ಗಾ ಮಾತೆ ಕಮಲದ ಹೂವನ್ನು ಪೂಜಾ ಸ್ಥಳದಿಂದ ಬೇರ್ಪಡಿಸಿದ್ದಳು.

ಏಕೆಂದರೆ ದುರ್ಗಾ ಮಾತೆ ಶ್ರೀರಾಮನ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಳು. ಭಗವಾನ್ ಶ್ರೀರಾಮನನ್ನು ಪೂಜಿಸುವಾಗ ತನ್ನ ಧ್ಯಾನವನ್ನ ಬೇರೆಡೆಗೆ ಹರಿಸುತ್ತಿದ್ದಾನೋ ಇಲ್ಲವೋ ಎಂದು ತಿಳಿಯಲು ಬಯಸಿದ್ದಳು. ಅದೇ ಸಮಯದಲ್ಲಿ, ದುರ್ಗಾ ಮಾತೆ ಭಗವಾನ್ ಶ್ರೀರಾಮನು ನಿಜವಾಗಿಯೂ ತನ್ನನ್ನ ಪೂಜಿಸುತ್ತಿದ್ದಾನೆಯೇ ಅಥವಾ ಅವನು ಕೇವಲ ಮುಂದೆ ಕುಳಿತಿದ್ದಾನೆಯೇ ಎಂದು ತಿಳಿಯಲು ಬಯಸಿದಳು.

ಆದರೆ ಪೂಜೆಯ ಸಮಯದಲ್ಲಿ ಪೂಜಾ ಸ್ಥಳದಲ್ಲಿ ಒಂದು ಕಮಲದ ಹೂವು ಕಡಿಮೆಯಿರೋದನ್ನ ಕಂಡ ಶ್ರೀರಾಮನು ತನ್ನ ಒಂದು ನೇತ್ರವನ್ನ ದಾನ ಮಾಡಲು ನಿರ್ಧರಿಸಿದನು. ಇದೇ ಕಾರಣಕ್ಕಾಗಿ ಭಗವಾನ್ ಶ್ರೀರಾಮ ನೇತ್ರಗಳನ್ನ ಕಮಲ ಹೂವುಗಳ ಸಮಾನ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕಾಗಿ ಭಗವಾನ್ ಶ್ರೀರಾಮನು ತನ್ನ ಒಂದು ನೇತ್ರವನ್ನ ದುರ್ಗಾ ಮಾತೆಗೆ ಅರ್ಪಿಸಲು ನಿರ್ಧರಿಸಿದನು. ಪ್ರಭು ಶ್ರೀರಾಮ ತನ್ನ ಒಂದು ನೇತ್ರವನ್ನ ಹೊರತೆಗೆಯಲು ಪ್ರಯತ್ನಿಸುತ್ತಿದ್ದಂತೆ ದುರ್ಗಾ ಮಾತೆಯು ಪ್ರಭು ಶ್ರೀರಾಮನ ಮುಂದೆ ಪ್ರತ್ಯಕ್ಷವಾಗಿ ವಿಜಯೀಭವ ಎಂದು ಆಶೀರ್ವದಿಸುತ್ತಾಳೆ.

Advertisement
Share this on...