ಭವ್ಯವಾದ ರಾಮ ಮಂದಿರ ಉದ್ಘಾಟನೆ ನಿನ್ನೆ ಬಹಳ ವಿಜೃಂಭಣೆಯಿಂದ ನಡೆದಿದೆ. ರಾಮ ಮಂದಿರ ನಿರ್ಮಾಣ ಹಾಗೂ ಅದರ ಉದ್ಘಾಟನೆಯ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಮೆಚ್ಚುಗೆಯ ಮಾತುಗಳ ಜೊತೆಗೆ ಒಂದಷ್ಟು ಅಸಮಾಧಾನದ ಟೀಕೆಗಳು ಸಹಾ ಕೇಳಿ ಬಂದಿರುವುದು ವಾಸ್ತವದ ವಿಚಾರವಾಗಿದೆ.
ಕನ್ನಡ ಸಿನಿಮಾ ನಟ ಹಾಗೂ ಸಾಮಾಜಿಕ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ಚೇತನ್ (Actor Chethan) ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹಲವು ವಿಚಾರಗಳಲ್ಲಿ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡು ಚರ್ಚೆಗಳಿಗೆ ಕಾರಣವಾಗುತ್ತಾರೆ. ಈಗ ಅಯೋಧ್ಯೆಯು ಒಂದು ಬೌಧ್ಧ ನಗರವಾಗಿತ್ತು ಎಂದು ಬರೆದುಕೊಂಡ ಪೋಸ್ಟ್ ಚರ್ಚೆಗೆ ಕಾರಣವಾಗಿದೆ.
ಚೇತನ್ ಅವರು ತಮ್ಮ ಪೋಸ್ಟ್ ನಲ್ಲಿ, ಅಯೋಧ್ಯೆಯು (Ayodhya) ಮೂಲತಃ ಸಾಕೇತ್ ಎಂಬ ಬೌದ್ಧ ನಗರವಾಗಿತ್ತು ಎಂದು ಪುರಾತತ್ವ ಮೂಲಗಳು ಬಹಿರಂಗಪಡಿಸುತ್ತವೆ. ಬುದ್ಧನ ಜನಪ್ರಿಯತೆಯನ್ನು ಎದುರಿಸಲು ಬ್ರಾಹ್ಮಣ್ಯ ಶಕ್ತಿಗಳು ಅಯೋಧ್ಯೆಯಲ್ಲಿ ರಾಮನ ದಂತಕಥೆಯನ್ನು ರೂಪಿಸಿದವು
7 ನೇ ಶತಮಾನದಲ್ಲಿ ಅಯೋಧ್ಯೆಯು 100+ ಬೌದ್ಧ ಮಠಗಳನ್ನು ಮತ್ತು 10 ಬ್ರಾಹ್ಮಣ್ಯ ಕಟ್ಟಡಗಳನ್ನು ಹೊಂದಿತ್ತು (ಇತಿಹಾಸಕಾರ ಡಿಎನ್ ಝಾ) ರಾಮ ಮಂದಿರ ಮೂಲತಃ ಬೌದ್ಧ ವಿಹಾರವೇ? ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ನಟನ ಪೋಸ್ಟ್ ಗೆ ಸಾಕಷ್ಟು ಕಾಮೆಂಟ್ ಗಳು ಹರಿದು ಬರುತ್ತಿದ್ದು, ನೆಟ್ಟಿಗರು ಕಾಮೆಂಟ್ ಗಳಲ್ಲಿ ಅಸಮಾಧಾನ ಹೊರ ಹಾಕುತ್ತಿದ್ದಾರೆ.