ಕೊನೆಗೂ ಭಾರತೀಯ ಮಕ್ಕಳು ಕಲಿಯಲಿದ್ದಾರೆ ಭಾರತದ ಸಂಸ್ಕೃತಿ: ದೇಶಾದ್ಯಂತ ಶಾಲಾ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗಲಿವೆ ರಾಮಾಯಣ, ಮಹಾಭಾರತ ಹಾಗು ರಾಷ್ಟ್ರಪುರುಷರ ಸೇರ್ಪಡೆ
ಸಿಖ್, ಮರಾಠಾ, ಜಾಟ್, ಆದಿವಾಸಿಗಳ ಇತಿಹಾಸ ಸೇರ್ಪಡೆಯಾಗಲಿ ಶಾಲಾ ಪುಸ್ತಕಗಳಲ್ಲಿನ ತಪ್ಪು ಮತ್ತು ಅರೆ-ಸಂಪೂರ್ಣ ಮಾಹಿತಿಯಿಂದಾಗಿ, ದೇಶದ ಮಕ್ಕಳಿಗೆ ಭಾರತದ ಭವ್ಯ ಇತಿಹಾಸದ ಬಗ್ಗೆ ಸರಿಯಾದ ಮತ್ತು ನಿಖರವಾದ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಪ್ರಧಾನಿ ಮೋದಿ ಸರ್ಕಾರ ಬಿಜೆಪಿ ಸಂಸದ ಡಾ.ವಿನಯ್ ಸಹಸ್ರಬುದ್ಧೆ ನೇತೃತ್ವದಲ್ಲಿ 31 ಸದಸ್ಯರ ಸಂಸದೀಯ ಸಮಿತಿಯನ್ನು ರಚಿಸಿದ್ದು, ಅದು ಚಾಲ್ತಿಯಲ್ಲಿರುವ ಪಠ್ಯಪುಸ್ತಕಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದಲ್ಲದೆ, ದೇಶಾದ್ಯಂತ ಸಲಹೆಗಳನ್ನು ಕೇಳಿದೆ. ಈ ಸಮಿತಿಯು ದೇಶಾದ್ಯಂತ 20 ಸಾವಿರಕ್ಕೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಿದ್ದು,…