“ಮಂದಿರವನ್ನ ಧ್ವಂಸಗೊಳಿಸಿ ಕಟ್ಟಲಾದ ಮಸೀದಿ ಇಸ್ಲಾಂನಲ್ಲಿ ಸ್ವೀಕಾರಾರ್ಹ ಅಲ್ಲ”: ಮೌಲಾನಾ ಅರ್ಷದ್ ಮದನಿ
ಲಕ್ನೋ: ದೇವಾಲಯವನ್ನು ನೆಲಸಮಗೊಳಿಸಿ ನಿರ್ಮಿಸಲಾದ ಮಸೀದಿ ನಮಗೆ (ಇಸ್ಲಾಂನಲ್ಲಿ) ಸ್ವೀಕಾರಾರ್ಹವಲ್ಲ. ಜಮಿಯತ್ ಉಲೇಮಾ-ಎ-ಹಿಂದ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಈ ಹೇಳಿಕೆ ನೀಡಿದ್ದಾರೆ. ಯುಪಿಯ ರಾಜಧಾನಿ ಲಕ್ಟೋದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಅಯೋಧ್ಯೆಗೆ ಸಂಬಂಧಿಸಿದಂತೆ, ರಾಮ ದೇವಾಲಯವನ್ನು ಮುರಿದು ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ನಂಬಿಲ್ಲ ಎಂದು ಹೇಳಿದರು. ಪೂರ್ವ ಉತ್ತರ ಪ್ರದೇಶದ ಜಮಿಯತ್ನ 37 ಜಿಲ್ಲಾ ಘಟಕಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಬಾಬರ್ ಅವರು ರಾಮ ಮಂದಿರವನ್ನು ನೆಲಸಮಗೊಳಿಸಿ ಬಾಬರಿ ಮಸೀದಿಯನ್ನು ನಿರ್ಮಿಸಿದ್ದಾರೆ…