ಜಾಲಿ (ಮುಸ್ಲಿಂ) ಟೋಪಿ ತೆಗೆದಿಟ್ಟು ಜನಿವಾರ ಧರಿಸಿ ಜೈ ಶ್ರೀರಾಮ್ ಘೋಷಣೆ ಕೂಗುತ್ತ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಘರ್ವಾಪಸಿ ಮಾಡಿದ ಮೊಹಮ್ಮದ್ ಅಬ್ದುಲ್ಲಾ: ಇದಕ್ಕೆ ಆತ ಕೊಟ್ಟ ಕಾರಣಗಳೇನು ನೋಡಿ
ಭಾರತವು ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ದೇಶ. ಇಲ್ಲಿ ವಿವಿಧ ಸಮುದಾಯದ ಜನರು ಒಟ್ಟಿಗೆ ವಾಸಿಸುತ್ತಾರೆ. ಆದರೂ ದೇಶದಲ್ಲಿ ದಿನಂಪ್ರತಿ, ಧಾರ್ಮಿಕ ಮತಾಂತರದ ಪ್ರಕರಣಗಳು ವಿವಿಧ ಪ್ರದೇಶಗಳಿಂದ ಕೇಳಿಬರುತ್ತಲೇ ಇರುತ್ತವೆ. ಒಂದು ಕಾಲದಲ್ಲಿ ಹಿಂದೂ ಸಮುದಾಯದ ಕೆಲವರು ಇಸ್ಲಾಂ, ಕ್ರಿಶ್ಚಿಯನ್ ಮತಕ್ಕೆ ಸೇರುತ್ತಿದ್ದರು. ಆದರೆ ಈಗ ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ. ಬಿಹಾರದ ಸಮಸ್ತಿಪುರದ ಮೊಹಮ್ಮದ್ ಅಬ್ದುಲ್ಲಾ ಇದೀಗ ಮತ್ತೆ ಉಮೇಶ್ ರಾಯ್ ಆಗಿದ್ದಾರೆ. ಮೊಹಮ್ಮದ್ ಅಬ್ದುಲ್ಲಾ 15 ವರ್ಷಗಳ ನಂತರ…