“ಪಾಕಿಸ್ತಾನದ ಬಗ್ಗೆ ಕೆಟ್ಟದಾಗಿ ತೋರಿಸುವ ಚಿತ್ರಗಳನ್ನ ನೋಡದ್ರೆ ಪಿತ್ತ ನೆತ್ತಿಗೇರುತ್ತೆ, ಅಂಥಾ ಚಿತ್ರಗಳು ನನಗಿಷ್ಟ ಇಲ್ಲ”: ಸಲ್ಮಾನ್ ಖಾನ್

in Uncategorized 653 views

ಬಾಲಿವುಡ್ ನಟ ಸಲ್ಮಾನ್ ಖಾನ್ ಕುರಿತ ಮೆಸೇಜ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಮೆಸೇಜ್ ನ ಜೊತೆಗೆ, ಸಲ್ಮಾನ್ ಖಾನ್ ಅವರ ಸಂದರ್ಶನದ ಸ್ಕ್ರೀನ್‌ಶಾಟ್ ಕೂಡ ವೈರಲ್ ಆಗುತ್ತಿದೆ. ಅದರ ಟೈಟಲ್ ಹೀಗಿದೆ – ‘ಪಾಕಿಸ್ತಾನವನ್ನು ಕೆಟ್ಟದಾಗಿ ಕರೆಯುವ ಚಿತ್ರಗಳು ನನಗೆ ಇಷ್ಟವಿಲ್ಲ’. ಈ ಚಿತ್ರ ಒಂದು ಪತ್ರಿಕೆಯ ಕಟಿಂಗ್ ನಂತೆಯೇ ಕಾಣುತ್ತದೆ. ಇದರೊಂದಿಗೆ ಸಲ್ಮಾನ್ ಖಾನ್ ಶರ್ಟ್-ಜೀನ್ಸ್ ಧರಿಸಿ ಮೆಟ್ಟಿಲುಗಳ ಮೇಲೆ ಕುಳಿತಿರುವ ಚಿತ್ರವೂ ಇದೆ.

Advertisement

ಬಾಲಿವುಡ್‌ನಲ್ಲಿ ಹಿಂದಿನಿಂದಲೂ ಹಿಂದೂ ವಿರೋಧಿ ಧೋರಣೆ ಇದ್ದೇ ಇದೆ, ಆದರೆ ಇತ್ತೀಚಿನ ದಿನಗಳಲ್ಲಿ ರಣಬೀರ್ ಕಪೂರ್ ಅವರ ‘ಶಂಶೇರಾ’ ಮತ್ತು ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ದಂತಹ ದೊಡ್ಡ ಚಿತ್ರಗಳು ವಿಫಲವಾದ ನಂತರ, ಈಗ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಮತ್ತು ನಮ್ಮ ದೇವತೆಗಳು ಮತ್ತು ಸಂಸ್ಕೃತಿಯ ಅಪಹಾಸ್ಯವನ್ನು ಸಹಿಸುವುದಿಲ್ಲ ಎಂದು ಹಿಂದುಗಳು ತಮ್ಮ ವಿರೋಧವನ್ನ ವ್ಯಕ್ತಪಡಿಸಲಾರಂಭಿಸಿದ್ದಾರೆ. ಎಲ್ಲಾ ಮೂವರು ಖಾನ್‌ಗಳು ಬಾಯ್‌ಕಾಟ್ ಗುರಿಯಲ್ಲಿದ್ದಾರೆ. ಸಲ್ಮಾನ್ ಖಾನ್ ಸದ್ಯ ‘ಭಾಯಿಜಾನ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಟೈಗರ್ ಸೀರೀಸ್‌ನ ಮೂರನೇ ಚಿತ್ರವೂ ಬರುತ್ತಿದೆ.

ಬನ್ನಿ, ಈಗ ಅದರ ಸತ್ಯಾಸತ್ಯತೆ ಏನೆಂದು ನಿಮಗೆ ತಿಳಿಸುತ್ತೇವೆ. ಅಸಲಿಗೆ, ಈ ವೈರಲ್ ಸುದ್ದಿ ನೋಡಿದ ನಂತರವೇ, ಈ ಇಂಟರ್‌ವ್ಯೂ ಯಾವಾಗಿನದ್ದು ಎಂದು ತಿಳಿಯುತ್ತದೆ. ಇದರಲ್ಲಿ ಸ್ಪಷ್ಟವಾಗಿ ದಿನಾಂಕವನ್ನು ಜುಲೈ 21, 2015 ಎಂದು ಉಲ್ಲೇಖಿಸುತ್ತದೆ. ಆದಾಗ್ಯೂ, ಇದು ಸಣ್ಣ ಅಕ್ಷರಗಳಲ್ಲಿರುವ ಕಾರಣ ಇದು ಗಮನಕ್ಕೆ ಬರುವುದಿಲ್ಲ. ಆದ್ದರಿಂದ, ಈ ಸಂದರ್ಶನವು 7 ವರ್ಷ ಹಳೆಯದು ಎಂದು ಹೇಳಬಹುದು. ನೆನಪಿಡಿ, ಸಲ್ಮಾನ್ ಖಾನ್ ಅವರ ಚಿತ್ರ ‘ಭಜರಂಗಿ ಭಾಯಿಜಾನ್’ ಈ ಸಂದರ್ಶನಕ್ಕೂ 4 ದಿನಗಳ ಮುನ್ನ ಅಂದರೆ ಜುಲೈ 17 ರಂದು ಬಿಡುಗಡೆಯಾಗಿತ್ತು.

ನಮಗೆಲ್ಲಾ ತಿಳಿದಿರುವಂತೆ, ‘ಭಜರಂಗಿ ಭಾಯಿಜಾನ್’ ವಿಶ್ವಾದ್ಯಂತ 969 ಕೋಟಿ ವ್ಯವಹಾರವನ್ನು ಮಾಡಿರಬಹುದು (ಚೀನಾದಲ್ಲಿ ಈ 311 ಕೋಟಿ), ಆದರೆ ಅದರಲ್ಲಿ ಪಾಕಿಸ್ತಾನವನ್ನು ವೈಭವೀಕರಿಸಲಾಗಿತ್ತು. ಆಗ ಚಿತ್ರ ಅಲ್ಲಿ 54 ಕೋಟಿ ಗಳಿಸಿತ್ತು. ಚಿತ್ರದಲ್ಲಿ ಒಬ್ಬ ಪಾಕಿಸ್ತಾನಿ ಮೌಲ್ವಿ ಎಲ್ಲರಿಗೂ ಸಹಾಯ ಮಾಡುವುದನ್ನು ತೋರಿಸಿದ್ದರೆ, ಅಲ್ಲಿನ ಮುಸ್ಲಿಂ ಪತ್ರಕರ್ತನೊಬ್ಬ ತನ್ನ ಜೀವದ ಹಂಗು ತೊರೆದು ಹಿಂದುವಿನ ಜೀವ ಉಳಿಸಲು ಸಹಾಯ ಮಾಡುತ್ತಾನೆ ಮತ್ತು ಅಲ್ಲಿ ಒಬ್ಬ ಹುಡುಗಿಯನ್ನು ತೋರಿಸುವ ಮೂಲಕ ಒಂದು ರೀತಿಯ ಸಹಾನುಭೂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಾನೆ.

ಸಿನಿಮಾ ಪಾಕಿಸ್ತಾನದಲ್ಲೂ ಬಿಡುಗಡೆಯಾಗಿದ್ದರಿಂದ ಸಲ್ಮಾನ್ ಖಾನ್ ಕೂಡ ಪಾಕಿಸ್ತಾನವನ್ನೂ ಹೊಗಳಿದ್ದರು. ‘ನವ್ ಭಾರತ್ ಟೈಮ್ಸ್ (NBT)’ಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದ ವಿರುದ್ಧ ಮಾತನಾಡುವ ಮತ್ತು ಅದರ ಬಗ್ಗೆ ರಾಜಕೀಯ ಮಾಡುವವರ ಬಗ್ಗೆ ನನಗೆ ಬೇಸರವಿದೆ ಎಂದು ಹೇಳಿರುವುದು ವೈರಲ್ ಸುದ್ದಿಯಾಗಿದೆ. ಈ ಹಿಂದೆ ಭಾರತದ ಜನರು ಪಾಕಿಸ್ತಾನಕ್ಕೆ ಹೋಗಿ ಅವರ ಆತಿಥ್ಯವನ್ನು ಮೆಚ್ಚುತ್ತಿದ್ದರು, ಇದರಿಂದಾಗಿ ಸಂಬಂಧಗಳು ಬೆಳೆದವು ಎಂದು ಅವರು ಹೇಳಿದ್ದರು. ಅಂದಹಾಗೆ, ಈ ಸುದ್ದಿ ನಿಜ ಆದರೆ 7 ವರ್ಷ ಹಳೆಯದು.

ಹೋರಾಟದ ಉತ್ಸಾಹವಿದ್ದರೆ ನಾಯಕರೇ ಗುಂಡು ಹಾರಿಸಬೇಕು, ಸೈನಿಕರನ್ನು ಏಕೆ ಮುಂದಕ್ಕೆ ತಳ್ಳುತ್ತಾರೆ? ಪಾಕಿಸ್ತಾನವನ್ನು ಕೆಟ್ಟದಾಗಿ ತೋರಿಸಿರುವ ಇಂತಹ ಚಿತ್ರಗಳು ನನಗೆ ಇಷ್ಟವಿಲ್ಲ ಎಂದು ಸಲ್ಮಾನ್ ಹೇಳಿದ್ದರು. ಇದಕ್ಕೆ ಒಂದು ಉದಾಹರಣೆ ನೀಡಿದ್ದ ಅವರು, ಭಾರತದ ಬಗ್ಗೆ ಯಾರಾದರೂ ಕೆಟ್ಟದಾಗಿ ಹೇಳಿದರೆ ನಾವು ಅದನ್ನ ಸಹಿಸಿಕೊಳ್ಳಬಹುದೇ? ಎಂದಿದ್ದರು. ‘ಭಜರಂಗಿ ಭಾಯಿಜಾನ್’ ನಲ್ಲಿ ಸಲ್ಮಾನ್ ಖಾನ್ ಪಾತ್ರವು ಸಸ್ಯಾಹಾರಿ ಹನುಮಾನ್ ಭಕ್ತ ಬ್ರಾಹ್ಮಣನ ಪಾತ್ರವಾಗಿತ್ತು, ಆದರೆ ಅದರಲ್ಲಿ ಚಿಕನ್ ತಿನ್ನುವುದನ್ನು ಪ್ರಶಂಸಿಸಿ ಹಾಡೊಂದನ್ನ ಚಿತ್ರದಲ್ಲಿ ತುರುಕಲಾಗಿತ್ತು.

Advertisement
Share this on...