Instagram ನಲ್ಲಿ ಒಂದೊಂದು ಪೋಸ್ಟ್ ಗಳಿಂದ ವಿರಾಟ್ ಕೊಹ್ಲಿ, ಪ್ರಿಯಾಂಕಾ ಚೋಪ್ರಾ ಸಮೇತ ನಟ ನಟಿಯರು ಇಷ್ಟು ಕೋಟಿ ಪಡೆಯುತ್ತಾರಂತೆ

in FILM NEWS/Kannada News/News/ಮನರಂಜನೆ/ಸಿನಿಮಾ 172 views

ನ್ಯೂಯಾರ್ಕ್‌:

Advertisement
ಸೆಲೆಬ್ರಿಟಿಗಳಿಗೆ ಸಾಮಾಜಿಕ ಮಾಧ್ಯಮ ಕೂಡ ಆದಾಯದ ಒಂದು ಮೂಲವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಇನ್ಸ್ಟಾಗ್ರಾಮ್ ಅನೇಕ ಸೆಲೆಬ್ರಿಟಿಗಳಿಗೆ ಕೋಟಿ ಕೋಟಿ ಆದಾಯ ತಂದುಕೊಡುತ್ತಿದೆ.

ಸಿನಿ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಪೋಸ್ಟ್ ಗಳು ಎಲ್ಲವೂ ಉಚಿತವಾಗಿರುವುದಿಲ್ಲ. ಕೋಟಿ ಕೋಟಿ ಹಣ ಪಡೆದು ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ ಸೈಲೆಂಟ್ ಆಗುತ್ತಾರೆ. ಆದರೆ ಫಾಲೋವರ್ಸ್ ಕಾಮೆಂಟ್, ಲೈಕ್ಸ್, ಟ್ರೋಲ್ ಮಾಡುವ ಮೂಲಕ ಅವರಿಗೆ ಗೊತ್ತಿಲ್ಲದೆ ಸೆಲೆಬ್ರಿಟಿಗಳ ಮೌಲ್ಯವನ್ನು ಜಾಸ್ತಿ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾ ಕಂಪನಿ ಹಾಪರ್ ಹೆಚ್ ಕ್ಯೂ, ಇನ್ಸ್ಟಾಗ್ರಾಮ್ ನಲ್ಲಿ ಅತೀ ಹೆಚ್ಚು ಹಣ ಸಂಪಾದನೆ ಮಾಡುವ ಬಾಲಿವುಡ್ ಸ್ಟಾರ್ ಯಾರು ಎನ್ನುವುದನ್ನು ರಿವೀಲ್ ಮಾಡಿದೆ. ಇದರ ಅಂಕಿ ಅಂಶ ನೋಡಿದ್ರೆ ನಿಜಕ್ಕೂ ಅಚ್ಚರಿ ಆಗುತ್ತೆ. ಅಂಕಿ ಅಂಶದ ಪ್ರಕಾರ ನಟಿ ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್ ನಿಂದ ಅತೀ ಹೆಚ್ಚು ಹಣವನ್ನು ಪಡೆಯುತ್ತಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಮ್‌ನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ‘ಹೋಪರ್‌ಎಚ್‌ಕ್ಯೂ’ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಸುಮಾರು 29 ಕೋಟಿ ಫಾಲೋವರ್ಸ್‌ ಹೊಂದಿರುವ ಪೋರ್ಚುಗಿಸ್‌ನ ಫುಟ್ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ.

ಅಮೆರಿಕದ ‘ದಿ ರಾಕ್‌’ ಖ್ಯಾತಿಯ ಡಬ್ಳ್ಯುಡಬ್ಳ್ಯುಇ ಸ್ಟಾರ್‌, ಹಾಲಿವುಡ್‌ ನಟ ಡ್ವಾಯ್ನ್‌ ಜಾನ್‌ಸನ್‌ ದ್ವಿತೀಯ ಹಾಗೂ ಅಮೆರಿಕದ ಪಾಪ್‌ ಗಾಯಕಿ ಅರಿನಾ ಗ್ರಾಂಡೆ ತೃತೀಯ ಸ್ಥಾನದಲ್ಲಿದ್ದಾರೆ. ಅಮೆರಿಕದ ಮಾಡೆಲ್‌ ಕೈಲೈ ಜೆನ್ನರ್‌, ಪಾಪ್‌ ತಾರೆ ಸಲೀನಾ ಗೋಮೆಜ್‌ ನಂತರದ ಸ್ಥಾನಗಳಲ್ಲಿದ್ದಾರೆ. ಇವರೆಲ್ಲರು ಪ್ರತಿಯೊಂದು ಪ್ರಾಯೋಜಿತ ಪೋಸ್ಟ್‌ಗೆ 1,450,000 ಡಾಲರ್‌ಗಿಂತ ಹೆಚ್ಚು ಸಂಪಾದಿಸುತ್ತಾರೆ. ಅಂದರೆ ಸುಮಾರು 10 ಕೋಟಿ ರೂಪಾಯಿಗಳಿಂತಲೂ ಹೆಚ್ಚು ಗಳಿಸುತ್ತಾರೆ.

ಟಾಪ್‌ 20ರಲ್ಲಿ ಸ್ಥಾನ ಪಡೆದಿರುವ ವಿರಾಟ್‌ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡುವ ಪ್ರಚಾರದ ಪೋಸ್ಟ್‌ ಒಂದಕ್ಕೆ ಸುಮಾರು 5 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸುತ್ತಾರೆ. 12.5 ಕೋಟಿ ಫಾಲೋವರ್ಸ್‌ ಹೊಂದಿರುವ ಕೊಹ್ಲಿ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ 23ನೇ ಸ್ಥಾನದಲ್ಲಿದ್ದರು.

ಹಾಲಿವುಡ್‌ನಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ 27ನೇ ಸ್ಥಾನದಲ್ಲಿದ್ದು, ಪ್ರತಿ ಜಾಹೀರಾತಿನ ಪೋಸ್ಟ್‌ಗೆ ಸುಮಾರು 3 ಕೋಟಿ ರೂಪಾಯಿ ಗಳಿಸುತ್ತಾರೆ. ಪ್ರಿಯಾಂಕಾ ಇನ್‌ಸ್ಟಾಗ್ರಾಮ್‌ನಲ್ಲಿ 6.4 ಕೋಟಿಗಿಂತ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

ಅಮೆರಿಕದ ಸೆಲೆಬ್ರಿಟಿ ಕಿಮ್‌ ಕರ್ದಿಷನ್‌, ಫುಟ್ಬಾಲ್‌ ತಾರೆ ಲಿಯೋನಲ್‌ ಮೆಸ್ಸಿ, ಬಿಯೊನ್ಸ್‌ ನೋಲ್ಸ್‌, ಜಸ್ಟಿನ್‌ ಬೈಬರ್‌, ಕೆಂಡಲ್‌ ಜೆನ್ನರ್‌ ಟಾಪ್‌ 10ರೊಳಗೆ ಕಾಣಿಸಿಕೊಂಡಿದ್ದಾರೆ.

ಇನ್ನೂ ಹೆಚ್ಚು ಹಣ ಪಡೆಯುವ ಸ್ಟಾರ್ ಗಳಲ್ಲಿ ನಟ ಶಾರುಖ್ ಖಾನ್ ಏನು ಹಿಂದೆ ಬಿದ್ದಿಲ್ಲ. ಬ್ರ್ಯಾಂಡ್ ಪ್ರಮೋಷನ್ ಗೆ ಕಿಂಗ್ ಖಾನ್ ಇನ್ಸ್ಟಾಗ್ರಾಮ್ ನಿಂದ 80 ಲಕ್ಷ ರೂ. ಪಡೆಯುತ್ತಿದ್ದಾರೆ. ಇನ್ನು ಅಮಿತಾಬ್ ಕೂಡ ಇನ್ಸ್ಟಾಗ್ರಾಮ್ ನಿಂದ ಕೋಟಿ ಕೋಟಿ ಹಣ ಸಂಪಾದಿಸುತ್ತಾರೆ. ಅಮಿತಾಬ್ ಕೂಡ ಒಂದು ಪ್ರಮೋಷನಲ್ ಪೋಸ್ಟ್ ಗೆ 50 ಲಕ್ಷ ರೂ. ಪಡೆಯುತ್ತಾರೆ.

ಇನ್ನೂ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿಯರಲ್ಲಿ ಅಲಿಯಾ ಕೂಡ ಒಬ್ಬರು. ಇನ್ಸ್ಟಾಗ್ರಾಮ್ ನಿಂದ ಅತೀ ಹೆಚ್ಚು ಹಣ ಸಂಪಾದಿಸುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಲಿಯಾ ಭಟ್ ಕೂಡ ಇದ್ದಾರೆ. ಅಲಿಯಾ ಬರೋಬ್ಬರಿ 1 ಕೋಟಿ ರೂ. ಪಡೆಯುತ್ತಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಅತೀ ದೊಡ್ಡ ಮಟ್ಟದ ಹಣವನ್ನು ಸಾಮಾಜಿಕ ಜಾಲತಾಣದಿಂದ ಸಂಪಾದನೆ ಮಾಡುತ್ತಾರೆ.

Advertisement
Share this on...