ಬರೋಬ್ಬರಿ 16 ಬಾರಿ WWE ಚಾಂಪಿಯನ್‌ಶಿಪ್ ಗೆದ್ದ ಜಾನ್ ಸೀನಾ ನಮ್ಮ ಹೆಮ್ಮೆಯ ಕನ್ನಡಿಗ, ಮಾಜಿ ಕ್ರಿಕೆಟ್ ನಾಯಕ ರಾಹುಲ್ ದ್ರಾವಿಡ್ ಬಗ್ಗೆ ಹೇಳಿದ್ದನ್ನ ಕೇಳಿದರೆ ನೀವು ಹೆಮ್ಮೆಪಡ್ತೀರ

in Kannada News/News/ಕ್ರೀಡೆ 226 views

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ರಾಹುಲ್​ ದ್ರಾವಿಡ್​, ಅದೆಷ್ಟೋ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ಇವರನ್ನು ಆದರ್ಶವಾಗಿ ಸ್ವೀಕರಿಸಿರುವ ಆಟಗಾರರಿಗೆ ಲೆಕ್ಕವಿಲ್ಲ. ವೃತ್ತಿಜೀವನಕ್ಕೆ ನಿವೃತ್ತಿ ಹೇಳಿ 9 ವರ್ಷಗಳ ಕಳೆದರೂ ದ್ರಾವಿಡ್​ ಅಭಿಮಾನಿಗಳ ಸಂಖ್ಯೆ ಮಾತ್ರ ಕುಂದಿಲ್ಲ. ಇದೀಗ ಕೋಚಿಂಗ್​ನತ್ತ ಗಮನಹರಿಸಿರುವ ದ್ರಾವಿಡ್​, ಯುವ ಕ್ರಿಕೆಟಿಗರಿಗೆ ತಮ್ಮ ತಂತ್ರಗಳನ್ನು ಹೇಳಿಕೊಡುತ್ತಿದ್ದಾರೆ. ದ್ರಾವಿಡ್​ ಮಾತು ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲ, ಇತರ ಕ್ರೀಡೆಯ ಕ್ರೀಡಾಪಟುಗಳು ಕೂಡ ಸ್ಫೂರ್ತಿಯಾಗಿ ಸ್ವೀಕರಿಸುತ್ತಾರೆ. ಅದೇ ರೀತಿ ವಲ್ಡ್​ ರೆಸ್ಲಿಂಗ್​ ಇಂಟರ್​ಟೈನ್ಮೆಂಟ್​ (WWE) ದಿಗ್ಗಜ ಜಾನ್​ ಸೀನಾಗೆ ದ್ರಾವಿಡ್​ ಅವರೇ ಸ್ಫೂತಿರ್ಯಂತೆ..

Advertisement

ಸೇ ಡಿ ಗಾಗಿ ಆಡಬಾರದು, ಗೌರವ ಹಾಗೂ ಹೆಮ್ಮೆಗಾಗಿ ಆಡಬೇಕು ಎಂದು ದ್ರಾವಿಡ್​ ಹೇಳಿದ ಮಾತೇ ಡಬ್ಲ್ಯುಡಬ್ಲ್ಯುಇ ದಿಗ್ಗಜನಿಗೆ ಸ್ಫೂರ್ತಿಯಾಗಿದೆ. 2017ರಲ್ಲಿ ಜಾನ್​ ಸೆನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದರೂ ಇಂದಿಗೂ ಈ ಪೋಸ್ಟ್​ ಚಾಲ್ತಿಯಲ್ಲಿರುವುದು ವಿಶೇಷ. ದ್ರಾವಿಡ್​ ಫೋಟೋ ಜತೆಗೆ ಕೋಟ್​ ಹಂಚಿಕೊಂಡಿದ್ದರು. ಬಹುತೇಕ ಮಾಧ್ಯಮಗಳಲ್ಲಿ ಈ ಮಾತು ಚರ್ಚೆಯಾಗಿರುವುದು ವಿಶೇಷ. ಇನ್​ಸ್ಟಾಗ್ರಾಂನಲ್ಲಿ ಸುಮಾರು 15.1 ಮಿಲಿಯನ್​ ಹಿಂಬಾಲಕರನ್ನು ಹೊಂದಿರುವ ಸೆನಾ, ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​, ಸ್ಟಾರ್​ ಅಮಿತಾಭ್​ ಬಚ್ಚನ್​, ರಣವೀರ್​ ಸಿಂಗ್​ ಪೋಸ್ಟ್​ಗಳನ್ನು ಶೇರ್​ ಮಾಡಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ ಮುಖ್ಯಸ್ಥರಾಗಿರುವ ಕನ್ನಡಿಗ ರಾಹುಲ್​ ದ್ರಾವಿಡ್​, ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಭಾರತ ಎರಡನೇ ಸ್ಥರದ ತಂಡಕ್ಕೆ ಕೋಚ್​ ಆಗುವ ಸಾಧ್ಯತೆಗಳಿವೆ. ದ್ರಾವಿಡ್​ 2014ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ತಂಡದೊಂದಿಗೆ ಕಾರ್ಯನಿರ್ವಹಿಸಿದ್ದರು.

ಮುಂದಿನ ಸುದ್ದಿ: ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಯಾವುದು? 

ವಿಶ್ವದ ಕ್ರಿಕೆಟ್​ ಲೋಕದ ಶ್ರೀಮಂತ​ ಕ್ರಿಕೆಟ್​ ಮಂಡಳಿ​ ಯಾವುದು? ಯಾವ ಬೋರ್ಡ್​ನ​ ವರ್ಷದ ವಹಿವಾಟು ಹೆಚ್ಚಿದೆ? ಕ್ರಿಕೆಟ್​ ಎಂಬ ಜಂಟಲ್​ಮೆನ್​ ಗೇಮ್​ನಲ್ಲಿ ಯಾವ ಕ್ರಿಕೆಟ್​ ಬೋರ್ಡ್​ ಹೆಚ್ಚು ಆದಾಯ ಗಳಿಸ್ತಿದೆ? ಹೀಗೆ ಸಾಕಷ್ಟು ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳನ್ನ​ ಕಾಡೋದು ಸಹಜ. ಆ ಇಂಟರೆಸ್ಟಿಂಗ್​ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ.

World’s Most Followed ಕ್ರೀಡೆಗಳಲ್ಲಿ ಕ್ರಿಕೆಟ್​ ಕೂಡ ಒಂದು. ಫುಟ್ಬಾಲ್, ರಗ್ಬಿ, ಟೆನಿಸ್, ಬ್ಯಾಡ್ಮಿಂಟನ್ ನಡುವೆಯೇ ಈ ಜಂಟಲ್​ಮೆನ್​ ಗೇಮ್​ ವಿಶ್ವದಾದ್ಯಂತ​ ತನ್ನ ಸ್ಥಾನಮಾನ ವಿಸ್ತರಿಸಿಕೊಂಡಿದೆ. ಕ್ರಿಕೆಟ್​ ಇಷ್ಟರ ಮಟ್ಟಿಗೆ ಫೇಮಸ್​ ಆಗೋದಕ್ಕೆ ಕಾರಣ, ಕ್ರಿಕೆಟ್​ ಮಂಡಳಿಗಳು ಹೂಡುವ ಬಂಡವಾಳ. ಹೀಗಾಗಿ ಪಂದ್ಯ-ಪಂದ್ಯಕ್ಕೂ, ಸರಣಿ-ಸರಣಿಗೂ ಕೋಟಿ ಕೋಟಿ ಸಂಪಾದಿಸುವ ಮಂಡಳಿಗಳು, ಹಣದ ಹೊಳೆಯನ್ನೇ ತನ್ನ ಖಜಾನೆಗೆ ತುಂಬಿಕೊಳ್ತಿವೆ. ಜಾಹೀರಾತು-ಪ್ರಾಯೋಜಕತ್ವ ಸೇರಿದಂತೆ ವಿವಿಧ ಮೂಲಗಳಿಂದ ಮಂಡಳಿಗಳು ವಾರ್ಷಿಕವಾಗಿ ಸಾವಿರಾರು ಕೋಟಿ ಗಳಿಸುತ್ತಿವೆ.

ಜಂಟಲ್​​ಮೆನ್​ ಗೇಮ್​ನಲ್ಲಿ ಬಿಸಿಸಿಐ ಬಿಗ್​​ಬಾಸ್​,
BCCI ವಾರ್ಷಿಕ ವರಮಾನ ಬರೋಬ್ಬರಿ 3,730 ಕೋಟಿ

ಭಾರತ ಕ್ರಿಕೆಟ್​ ನಿಯಂತ್ರಣ ಮಂಡಳಿ ಅಂದರೆ ಬಿಸಿಸಿಐ ವಿಶ್ವದ ಕ್ರಿಕೆಟ್​ ಲೋಕದ ಶ್ರೀಮಂತ ಮಂಡಳಿ. ಅತ್ಯಂತ ಶ್ರೀಮಂತ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಬಿಸಿಸಿಐನ ​ವಾರ್ಷಿಕ ವರಮಾನ, 3,730 ಕೋಟಿ ರೂಪಾಯಿ ಅಂದರೆ ನಂಬಲೇಬೇಕು. ಗಳಿಕೆಯ ವಿಚಾರದಲ್ಲಿ ಯಾವ ಬೋರ್ಡನ್ನೂ ತನ್ನ ಮುಂದಕ್ಕೆ ಬಿಟ್ಟುಕೊಂಡಿರದ BCCI, ರಾಷ್ಟ್ರೀಯ ಸರಣಿಗಳನ್ನಷ್ಟೇ ಅಲ್ಲ, ವಿಶ್ವದ ಶ್ರೀಮಂತ ಲೀಗ್​​ IPL ಅನ್ನು ಆಯೋಜಿಸುವ ಖ್ಯಾತಿ ಕೂಡ ಪಡೆದಿದೆ.

ಹಣಕಾಸು ಗಳಿಕೆಯಲ್ಲಿ ಕ್ರಿಕೆಟ್​ ಆಸ್ಟ್ರೇಲಿಯಾಗೆ 2ನೇ ಸ್ಥಾನ
ಕ್ರಿಕೆಟ್​ ಆಸ್ಟ್ರೇಲಿಯಾದ ವಾರ್ಷಿಕ ವರಮಾನ, ಬಿಸಿಸಿಐಗಿಂತ 887 ಕೋಟಿ ಕಡಿಮೆ. ಕ್ರಿಕೆಟ್​ ಹುಟ್ಟಿದಾಗಿನಿಂದ ಆಸ್ಟ್ರೇಲಿಯಾ ಅದರ ಭಾಗವಾಗಿದೆ. ಅಂದಿನಿಂದ ಈವರೆಗೂ ಕ್ರಿಕೆಟ್​ ಲೋಕದಲ್ಲಿ ದರ್ಬಾರ್​ ನಡೆಸಿದ ಆಸಿಸ್​​ ಬೋರ್ಡ್​​ನ ವಾರ್ಷಿಕ ಆದಾಯ 2,843 ಕೋಟಿ ರೂಪಾಯಿ. ಆಸಿಸ್​ ಮಂಡಳಿ ಕೂಡ ಬಿಬಿಎಲ್​ ಆಯೋಜಿಸಿ, ವರ್ಷದಿಂದ ವರ್ಷಕ್ಕೆ ಇನ್​ಕಮ್​ ಜಾಸ್ತಿ ಮಾಡಿಕೊಳ್ತಿದೆ.

ವಿಶ್ವಕ್ಕೆ ಕ್ರಿಕೆಟ್​ ಪರಿಚಯಿಸಿದ ಸೃಷ್ಟಿಕರ್ತರಿಗೆ ಮೂರನೇ ಸ್ಥಾನ
ಜಗತ್ತಿಗೆ ಕ್ರಿಕೆಟ್​ ಎಂಬ ಜಂಟಲ್​ಮೆನ್​ ಗೇಮ್​ ಪರಿಚಯಿಸಿದ ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​​, 3ನೇ ಸ್ಥಾನದಲ್ಲಿರೋದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕ್ರಿಕೆಟ್​ ಅನ್ನೋ ಕ್ರೀಡೆಯನ್ನ ಸೃಷ್ಟಿಸಿ ಜಗತ್ತನ್ನ ಆಳ್ತಿದ್ದ ಇಂಗ್ಲೆಂಡ್ ಕ್ರಿಕೆಟ್​ ಮಂಡಳಿಯ ವಾರ್ಷಿಕ ಆದಾಯ​ 2,135 ಕೋಟಿ ರೂಪಾಯಿ. ಇದು ಆಸಿಸ್​ ಮಂಡಳಿಗಿಂತಲೂ ₹708 ಕೋಟಿ ಕಡಿಮೆ. ಸದ್ಯ ತನ್ನ ಆದಾಯವನ್ನ ಡಬಲ್​ ಮಾಡ್ಕೊಳ್ಳೋದಕ್ಕೆ ಮುಂದಾಗಿರೋ ಇಂಗ್ಲೆಂಡ್, ಹಂಡ್ರೆಡ್​ ಲೀಗ್ ಟೂರ್ನಿ ಆಯೋಜನೆಗೆ ಮುಂದಾಗಿದೆ.

ಪಾಕ್​ಗೆ ನಾಲ್ಕನೇ ಸ್ಥಾನ​​, ಐದರಲ್ಲಿ ಜಾಗ ಪಡೆದ ಬಾಂಗ್ಲಾ
ಕ್ರಿಕೆಟ್​ನಲ್ಲಿ ಬೆಸ್ಟ್​ ಪರ್ಫಾಮೆನ್ಸ್ ನೀಡ್ತಿರೋ ನ್ಯೂಜಿಲೆಂಡ್-ಸೌತ್​ ಆಫ್ರಿಕಾ ತಂಡಗಳು, ನಂತರದಲ್ಲಿ ಸ್ಥಾನದಲ್ಲಿರುತ್ತವೆ ಅಂದುಕೊಂಡಿದ್ರೆ, ನಿಮ್ಮ ಊಹೆ ತಪ್ಪು.​ ಮುಂದಿನ ಸ್ಥಾನದಲ್ಲಿರೋದು ಪಾಕಿಸ್ತಾನ ಮತ್ತು ಬಾಂಗ್ಲಾದೇಶ. ಭಾರತ, ಆಸಿಸ್​, ಇಂಗ್ಲೆಂಡ್​ ನಾಲ್ಕಂಕಿ ವರಮಾನ ಪಡೀತಿದ್ರೆ, ಈ ಎರಡು ಕ್ರಿಕೆಟ್​ ಮಂಡಳಿಗಳು ಮೂರಂಕಿ ಆದಾಯ ಪಡೀತಿವೆ. 4ನೇ ಸ್ಥಾನದಲ್ಲಿರೋ ಪಾಕ್​​ 811 ಕೋಟಿ ಮತ್ತು 5ನೇ ಸ್ಥಾನದಲ್ಲಿ ಇರುವ ಬಾಂಗ್ಲಾ 802 ಕೋಟಿ ಸಂಪಾದನೆ ಮಾಡ್ತಿವೆ. ಕಿವೀಸ್​, ಹರಿಣಗಳು, ಕೆರಿಬಿಯನ್ನರನ್ನೇ ಹಿಂದಿಕ್ಕಿರುವ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ, ನಿಜಕ್ಕೂ ಆಶ್ಚರ್ಯ ಹುಟ್ಟಿಸಿದೆ.

ಮಂಡಳಿಗಳ ವಾರ್ಷಿಕ ವರಮಾನ       ಮಂಡಳಿ ಆದಾಯ

ಸೌತ್​ ಆಫ್ರಿಕಾ 485 ಕೋಟಿ ರೂಪಾಯಿ, ನ್ಯೂಜಿಲೆಂಡ್​ 201 ಕೋಟಿ ರೂಪಾಯಿ, ವೆಸ್ಟ್​ ಇಂಡೀಸ್​ 116 ಕೋಟಿ ರೂಪಾಯಿ, ಜಿಂಬಾಬ್ವೆ​ 113 ಕೋಟಿ ರೂಪಾಯಿ, ಶ್ರೀಲಂಕಾ 100 ಕೋಟಿ ರೂಪಾಯಿಯಷ್ಟಿದೆ.

ವಾರ್ಷಿಕ ವರಮಾನದಲ್ಲಿ ₹485 ಕೋಟಿ ಪಡೆಯುವ ಸೌತ್​ ಆಫ್ರಿಕಾ ಮಂಡಳಿ 6ನೇ ಸ್ಥಾನದಲ್ಲಿದ್ರೆ, ₹201 ಕೋಟಿ ಆದಾಯ ಸಂಗ್ರಹಿಸುವ ನ್ಯೂಜಿಲೆಂಡ್​​ ಕ್ರಿಕೆಟ್​ ಮಂಡಳಿಗೆ 7ನೇ ಸ್ಥಾನ. ಇನ್ನು ₹116 ಕೋಟಿ ಸಂಪಾದಿಸುವ ವಿಂಡೀಸ್​ ಕ್ರಿಕೆಟ್​ ಮಂಡಳಿಗೆ 8ನೇ ಸ್ಥಾನ ಸಿಕ್ಕಿದ್ರೆ, ವರ್ಷಕ್ಕೆ ₹113 ಕೋಟಿ ದುಡೀತಿರೋ ಜಿಂಬಾಬ್ವೆಗೆ 9ನೇ ಜಾಗ ದಕ್ಕಿದೆ. ಒಂದು ಕಾಲದಲ್ಲಿ ಕ್ರಿಕೆಟ್​ನಲ್ಲಿ ರಾರಾಜಿಸ್ತಿದ್ದ ಶ್ರೀಲಂಕಾ ₹100 ಕೋಟಿಯೊಂದಿಗೆ 10ನೇ ಸ್ಥಾನ ಪಡೆದುಕೊಂಡಿದೆ.

ಇದಿಷ್ಟು ಕ್ರಿಕೆಟ್​ ಮಂಡಳಿಗಳು ವಾರ್ಷಿಕವಾಗಿ ದುಡಿಯುತ್ತಿರೋ ವರಮಾನ. ಸದ್ಯ ಕೋವಿಡ್​ ಎಫೆಕ್ಟ್​ ಕ್ರಿಕೆಟ್​ ಮೇಲೂ ಬಿದ್ದಿದ್ದು ತಕ್ಕಮಟ್ಟಿಗೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಹಾಗಾಗಿ ಈಗಾಗಿರುವ ನಷ್ಟವನ್ನ ತುಂಬಿಕೊಳ್ಳಲು ಎಲ್ಲಾ ಕ್ರಿಕೆಟ್ ಮಂಡಳಿಗಳು, ಕೊರೊನಾ ಮಧ್ಯೆಯೇ ಸುರಕ್ಷತತೆಯಿಂದ ಸರಣಿ ಮತ್ತು ಟೂರ್ನಿಗಳ ಆಯೋಜನೆಗೆ ಮುಂದಾಗಿವೆ.

Advertisement
Share this on...