ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಟೆರರ್ ಫಂಡಿಂಗ್ ಮತ್ತು ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಈ ಇಡೀ ವಿಷಯಕ್ಕೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯರ ಹಲವಾರು ಸ್ಥಳಗಳ ಮೇಲೆ ಏಜೆನ್ಸಿ ದಾಳಿ ಮಾಡಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ 23 ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದೆ. ಈ ಎಲ್ಲಾ ಸ್ಥಳಗಳಲ್ಲಿ ಏಜೆನ್ಸಿ ತಂಡವು ತನಿಖೆಯಲ್ಲಿ ತೊಡಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಕರಾಟೆ ತರಬೇತಿ ಟ್ರೇನಿಂಗ್ ಹೆಸರಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಸ್ಥೆಯು ತರಬೇತಿ ಶಿಬಿರವನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಎನ್‌ಐಎ ಈ ದಾಳಿ ನಡೆಸಿದೆ. ಎನ್‌ಐಎ ಶಂಕಿತರ ಕರ್ನೂಲ್, ನೆಲ್ಲೂರು, ಕಡಪಾ, ಆಂಧ್ರಪ್ರದೇಶದ ಗುಂಟೂರು ಮತ್ತು ತೆಲಂಗಾಣದ ನಿಜಾಮಾಬಾದ್‌ನಲ್ಲಿನ ವ್ಯಾಪಾರ ಸ್ಥಳಗಳನ್ನು ಸಹ ಶೋಧಿಸಿದೆ. ಈ ಎಲ್ಲಾ ಸ್ಥಳಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತನಿಖಾ ಸಂಸ್ಥೆಗೆ ಮಾಹಿತಿ ಬಂದಿದ್ದು, ಅದರ ಆಧಾರದ ಮೇಲೆ ದಾಳಿ ನಡೆಸಲಾಗಿದೆ.
ನೆಲ್ಲೂರು ಜಿಲ್ಲೆಯ ಬುಚಿ ಎಂಬ ಊರಿನಲ್ಲಿ ಇಲಿಯಾಸ್ ಎಂಬಾತನ ಮನೆ ಮೇಲೆ ಎನ್‌ಐಎ ತಂಡ ದಾಳಿ ನಡೆಸಿತ್ತು. ಕಳೆದ ಮೂರು ತಿಂಗಳಿಂದ ಇಲಿಯಾಸ್ ನಾಪತ್ತೆಯಾಗಿದ್ದ ಎಂದು ಹೇಳಲಾಗುತ್ತಿದೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಈತನ ಮೇಲಿದೆ. ಇಲ್ಲಿನ ಖಾಜಾ ನಗರದಲ್ಲಿ ಆತ ಟಿಫಿನ್ ಅಂಗಡಿ ನಡೆಸುತ್ತಿದ್ದ.
ಕರಾಟೆ ಟ್ರೇನಿಂಗ್ ಕ್ಯಾಂಪ್ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದಕ ತರಬೇತಿ ಶಿಬಿರಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಣ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ವಿದೇಶಿ ನಿಧಿಯ ಬಗ್ಗೆ ಎನ್‌ಐಎಗೆ ಮಾಹಿತಿ ಲಭಿಸಿದೆ. ಖಚಿತ ಮಾಹಿತಿ ದೊರೆತ ನಂತರವೇ NIA ದಾಳಿ ನಡೆದಿದೆ. PFI ನಡೆಸುತ್ತಿರುವ ಈ ಕರಾಟೆ ಟ್ರೇನಿಂಗ್ ಸೆಂಟರ್ ಗಳ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದಕ ತರಬೇತಿ ಶಿಬಿರದಲ್ಲಿ 150ಕ್ಕೂ ಹೆಚ್ಚು ಮಂದಿ ಹಿಂಸಾತ್ಮಕ ಚಟುವಟಿಕೆಗಳಿಗೆ ತರಬೇತಿ ಪಡೆಯುತ್ತಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ದಾಳಿಯಲ್ಲಿ ಕರಾಟೆ ಟೀಚರ್ ಅಬ್ದುಲ್ ಖಾದಿರ್‌ಗೆ ಎನ್‌ಐಎ ಕುಣಿಕೆ ಬಿಗಿಗೊಳಿಸಿದೆ. ಅಬ್ದುಲ್ ಖಾದಿರ್ ಪಿಎಫ್‌ಐ ಜೊತೆಗಿನ ಸಂಬಂಧದಿಂದ ಕರಾಟೆ ಕಲಿಸುವ ನೆಪದಲ್ಲಿ ಮುಸ್ಲಿಂ ಯುವಕರಿಗೆ ಗಲಭೆ ನಡೆಸಲು ತರಬೇತಿ ನೀಡುತ್ತಿದ್ದ ಎನ್ನಲಾಗಿದೆ.
ಈ ದಾಳಿಯಲ್ಲಿ, ಎನ್‌ಐಎ ಕೆಲವು ಡಿಜಿಟಲ್ ಉಪಕರಣಗಳು, ದಾಖಲೆಗಳು, ಎರಡು ಖಂಜರ್‌ಗಳು ಸೇರಿದಂತೆ 8,31,500 ರೂ ನಗದು ಮೊತ್ತ ಮತ್ತು ಕೆಲವು ಆಕ್ಷೇಪಾರ್ಹ ವಸ್ತುಗಳನ್ನೂ ವಶಪಡಿಸಿಕೊಂಡಿದೆ. ಇದರೊಂದಿಗೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಪಿಎಫ್‌ಐನ ಜಿಲ್ಲಾ ಸಂಚಾಲಕನಾದ ಶಾದುಲ್ಲಾ, ಮೊಹಮ್ಮದ್ ಇಮ್ರಾನ್ ಮತ್ತು ಮೊಹಮ್ಮದ್ ಅಬ್ದುಲ್ ಮೊಬಿನ್ ಎಂಬಾತರನ್ನ ಎನ್‌ಐಎ ಈಗಾಗಲೇ ಬಂಧಿಸಿದ್ದು ಅವರನ್ನು ವಿಚಾರಣೆ ನಡೆಸುತ್ತಿದೆ. ಬಂಧಿತರನ್ನು ಎನ್‌ಐಎ ವಿಚಾರಣೆ ನಡೆಸುತ್ತಿದ್ದು, ಕರಾಟೆ ಟ್ರೇನಿಂಗ್ ಸೆಂಟರ್ ಬಗ್ಗೆ ಸಾಧ್ಯವಾದಷ್ಟು ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದೆ.