“ಸೈಫ್ ಅಲಿ ಖಾನ್‌ನ 5 ಸಾವಿರ ಕೋಟಿ ಆಸ್ತಿಯಲ್ಲಿ ಮಕ್ಕಳಿಗಾಗಲಿ ಕರೀನಾಗಾಗಲಿ‌ ಬಿಡಿಗಾಸೂ ಸಿಗಲ್ಲ” ಕಂಗಾಲಾದ ಕರೀನಾ ಖಾನ್

in Kannada News/News/ಸಿನಿಮಾ 40,046 views

ಸೈಫ್ ಅಲಿಖಾನ್(Saif Ali Khan) ನನ್ನು ಪಟೌಡಿಯ ನವಾಬ್(Nawab of Pataudi) ಎಂದು ಕರೆಯುವುದಿಲ್ಲ. ನವಾಬರ ವರ್ಗ ಮತ್ತು ಶೈಲಿಯ ಹೊರತಾಗಿ, ಸೈಫ್ ಅಲಿ ಖಾನ್ ಅಪಾರ ಪ್ರಮಾಣದ ಸಂಪತ್ತು, ಆಸ್ತಿಯನ್ನು ಹೊಂದಿದ್ದಾರೆ.

Advertisement

ಸೈಫ್ ಅಲಿ ಖಾನ್ ದೇಶದ ಶ್ರೀಮಂತ ನಟರಲ್ಲಿ ಒಬ್ಬರು. ರಾಜವಂಶದಿಂದ ಬಂದವರು. ಆದರೂ ಸೈಫ್ ತನ್ನ ನಾಲ್ಕು ಮಕ್ಕಳಿಗೆ ಒಂದು ಪೈಸೆ ನೀಡಲು ಸಾಧ್ಯವಾಗದಿರಬಹುದು. ಕಾರಣ ಇಲ್ಲಿದೆ.

ಕಾಯಿದೆಯನ್ನು ಪ್ರಶ್ನಿಸಲು ಬಯಸಿದರೆ ಸೈಫ್ ಮೊದಲು ಹೈಕೋರ್ಟ್‌ಗೆ ಹೋಗಬೇಕಾಗುತ್ತದೆ. ಅಲ್ಲಿಯೂ ಅವರು ಪ್ರಕರಣದಲ್ಲಿ ಸೋತರೆ, ಅವರು ಸುಪ್ರೀಂ ಕೋರ್ಟ್‌ಗೆ(Supreme Court) ಹೋಗಬೇಕಾಗುತ್ತದೆ. ಅಂತಹ ಕಾಯಿದೆಯಡಿಯಲ್ಲಿ ಕೊನೆಯದಾಗಿ ದೇಶದ ರಾಷ್ಟ್ರಪತಿ ನಿರ್ಧಾರ ತೆಗೆದುಕೊಳ್ಳಬಹುದು.

ಬ್ರಿಟಿಷ್ ಆಡಳಿತದಲ್ಲಿ ನವಾಬರಾಗಿದ್ದ ಸೈಫ್ ಅಲಿ ಖಾನ್ ಅವರ ಮುತ್ತಜ್ಜ ಹಮೀದುಲ್ಲಾ ಖಾನ್ ಅವರು ವಿಲ್ ಅಥವಾ ಉಯಿಲು ಬರೆದಿಲ್ಲ ಎನ್ನಲಾಗಿದೆ.

ಆಕಾರಣದಿಂದಾಗಿ ಪಾಕಿಸ್ತಾನದ(Pakistan) ಸೈಫ್ ಅಲಿ ಖಾನ್ ಅವರ ನಿಕಟ ಸಂಬಂಧಿಗಳು ಆಸ್ತಿಯ್ನನು ಪ್ರಶ್ನೆ ಮಾಡಬಹುದು. ಆದ್ದರಿಂದ, ಅವನ ಮಕ್ಕಳು ಯಾವುದೇ ಆಸ್ತಿ ಅಥವಾ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುವ ಸಾಧ್ಯತೆಗಳು ತೀರಾ ಕಡಿಮೆ.

ಪಟೌಡಿ ಅರಮನೆಯ ಗುತ್ತಿಗೆಯನ್ನು ಸೈಫ್ ತೆರವುಗೊಳಿಸುತ್ತಿದ್ದಾರೆ: ಸೈಫ್ ಅಲಿ ಖಾನ್ ಅವರು ಪಟೌಡಿ ಅರಮನೆಯ ಗುತ್ತಿಗೆಯನ್ನು ಹೇಗೆ ತೆರವುಗೊಳಿಸಿದರು ಎಂಬುದರ ಕುರಿತು ಸುದೀರ್ಘವಾಗಿ ಮಾತನಾಡಿದ್ದರು.

ಇದು ನಿಜವಾಗಿಯೂ ಮರು-ಖರೀದಿಯಾಗಿರಲಿಲ್ಲ, ಅದು ಗುತ್ತಿಗೆಯನ್ನು ತೆರವುಗೊಳಿಸುವುದಾಗಿತ್ತು. ಹಣವೂ ಸುಲಭವಾಗಿ ಬಂದಿಲ್ಲ. ಕೆಟ್ಟ ಸ್ಥಿತಿಯಲ್ಲಿರುವ ಜನರಿಗಿಂತ ನಾವು ಹೆಚ್ಚು ಸವಲತ್ತುಗಳನ್ನು ಹೊಂದಿದ್ದೇವೆ ಎಂದು ನಟ ಹೇಳಿದ್ದರು.

ಇದನ್ನೂ ಓದಿ: ಮಗ ತೈಮೂರ್‌ನನ್ನೇ ಮಾರಲು ಹೊರಟಿದ್ದನಂತೆ ಸೈಫ್ ಅಲಿ ಖಾನ್: ಗದರಿಸಿ ಕೂರಿಸಿದ್ದಾಳಂತೆ ಕರೀನಾ

Kareena Kapoor – Saif Ali Khan: ತೈಮೂರ್ ಹೊರಗೆ ಕಾಲಿಟ್ಟರೆ ಸಾಕು ಅದೊಂದು ಸುದ್ದಿ ಆಗುತ್ತಿತ್ತು. ತುಂಬಾ ಕೀವ್ಟ್ ಆಗಿ ಕಾಣಿಸುವಂತಹ ತೈಮೂರ್ ಗೆ ತುಂಬಾ ಜನ ನಿರ್ಮಾಪಕರು ಸೈಫ್ ಅಲಿ ಖಾನ್ ಗೆ ತಮ್ಮ ಸಿನೆಮಾ ಪ್ರಮೋಷನ್ ಗೆ ಕರೆದು ಕೊಂಡು ಬರಲು ಹೇಳಿದ್ದರಂತೆ.

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಯಾವುದಾದರೂ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಕರೀನಾ ಮತ್ತು ಸೈಫ್ ಅಲಿ ಖಾನ್ ಅವರ ಮೊದಲನೇ ಮಗನಾದ ತೈಮೂರ್ ಚಿಕ್ಕ ಮಗುವಾಗಿದ್ದಾಗಿನಿಂದಲೂ ಅವನ ವಿಡಿಯೋ ಮತ್ತು ಬಾಲ್ಯದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ವೈರಲ್ ಆಗಿದ್ದವು. ಕರೀನಾ ಮತ್ತು ಸೈಫ್ ಸಹ ತೈಮೂರ್ ನ ಅನೇಕ ತುಂಟಾಟದ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದರು.

ತೈಮೂರ್ ಹೊರಗೆ ಕಾಲಿಟ್ಟರೆ ಸಾಕು ಅದೊಂದು ಸುದ್ದಿ ಆಗುತ್ತಿತ್ತು. ತುಂಬಾ ಕೀವ್ಟ್ ಆಗಿ ಕಾಣಿಸುವಂತಹ ತೈಮೂರ್ ಗೆ ತುಂಬಾ ಜನ ನಿರ್ಮಾಪಕರು ಸೈಫ್ ಅಲಿ ಖಾನ್ ಗೆ ತಮ್ಮ ಸಿನೆಮಾ ಪ್ರಮೋಷನ್ ಗೆ ಕರೆದು ಕೊಂಡು ಬರಲು ಹೇಳಿದ್ದರಂತೆ. ಆದರೆ ಅವರ ತಾಯಿ ಕರೀನಾ ಬಿಡಬೇಕಲ್ಲ. ಕರೀನಾ ಇದಕೆಲ್ಲಾ ಒಪ್ಪುವುದಿಲ್ಲ ಎಂದು ತಿಳಿದು ಬಂದಿದೆ.

ಒಮ್ಮೆ 2018 ರಲ್ಲಿ ಸೈಫ್ ಅಲಿ ಖಾನ್ ಅವರು ರೇಡಿಯೋ ಜಾಕಿ ಸಿದ್ದಾರ್ಥ್ ಕಣ್ಣನ್ ಅವರೊಂದಿಗೆ ಬಾಝಾರ್ ಸಿನೆಮಾ ಪ್ರೊಮೋಷನ್ ಮಾಡುತ್ತಿರುವಾಗ ಮಾತನಾಡುತ್ತ “ತೈಮೂರ್ ಅನ್ನು ನಾನು ನ್ಯಾಪಿ ಜಾಹಿರಾತಿಗೆ ಕಳುಹಿಸಲು ಒಮ್ಮೆ ಕರೀನಾ ಗೆ ಕೇಳಿದ್ದೆ, ಆದರೆ ಆಕೆ ತುಂಬಾ ‘ಚೀಪ್’ ಆಗಬೇಡಿ” ಎಂದು ಹೇಳಿ ತೈಮೂರ್ ಅನ್ನು ಯಾವುದೇ ಜಾಹಿರಾತಿಗಾಗಲಿ ಫಿಲ್ಮ್ ಪ್ರಮೋಷನ್ ಗೆ ಆಗಲಿ ಕಳಿಸಿರಲಿಲ್ಲ ಎಂದು ಹೇಳಿದ್ದರು.

ತೈಮೂರ್ ಹುಟ್ಟಿದ ನಂತರ ಅನೇಕ ನಿರ್ಮಾಪಕರು ನನಗೆ ತೈಮೂರ್ ಅನ್ನು ಫಿಲ್ಮ್ ಅಲ್ಲಿ ಒಂದು ಚಿಕ್ಕ ಮಗುವಿನ ಪಾತ್ರಕ್ಕೆ ಹಾಕೋಣ ಮತ್ತು ಆಗಾಗ ಪ್ರೊಮೋಷನ್ ಗೆ ಕರೆದುಕೊಂಡು ಬನ್ನಿ ಅಂತಾ ತುಂಬಾ ಜನ ನಿರ್ಮಾಪಕರು ಕೇಳಿದುಂಟು, ಆದರೆ ಕರೀನಾ ಒಪ್ಪಲಿಲ್ಲ ಎಂದು ಸೈಫ್ ಹೇಳಿದ್ದರು. ನಿರ್ಮಾಪಕರು ತೈಮೂರ್ ಅನ್ನು ಬಾಝಾರ್, ಕಾಲಾಕಾಂಡಿ ಮತ್ತು ಹಂಟರ್ ಚಿತ್ರಗಳಲ್ಲಿ ತೈಮೂರ್ ಅನ್ನು ಹಾಕಿಕೊಳ್ಳೋಣ ಎಂದು ಕೇಳಿದ್ದರು ಆದರೆ ನಾವೆ ಒಪ್ಪಲಿಲ್ಲ ಎಂದು ಸೈಫ್ ಹೇಳಿದರು.

ಈ ವಿಷಯದಲ್ಲಿ ಕರೀನಾ ಮತ್ತು ಸೈಫ್ ಇಬ್ಬರೂ ಬೇರೆ ಬೇರೆ ಆದಂತಹ ಅಭಿಪ್ರಾಯವನ್ನು ಹೊಂದಿದ್ದಾರೆ. ತೈಮೂರ್ ನ ಜನಪ್ರಿಯತೆಯನ್ನು ಬಳಸಿಕೊಳ್ಳೋಣ ಅವನಿಗೆ ಯಾವುದಾದರೂ ಒಂದು ನ್ಯಾಪಿ ಜಾಹಿರಾತಿನಲ್ಲಿ ಹಾಕೋಣ ಎಂದಾಗ ಕರೀನಾ ಚೀಪ್ ಆಗಬೇಡಿ ನಾನು ನನ್ನ ಮಗನನ್ನು ಮಾರಿಕೊಳ್ಳಲು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದನ್ನು ಸೈಫ್ ಬಿಚ್ಚಿಟ್ಟಿದ್ದಾರೆ.

ನಾನು ನನ್ನ ಚಿಕ್ಕ ಮಗನಿಗೆ ದುಡ್ಡು ಕೊಡುವುದಿಲ್ಲ ಬರಿ ಅವನ ವಿದ್ಯಾಭ್ಯಾಸಕ್ಕೆ ಮಾತ್ರ ಹಣವನ್ನು ನೀಡುತ್ತೇನೆ ಎಂದು ಸೈಫ್ ಹಾಸ್ಯಮಾಡಿದ್ದಾರೆ. ನಾನು ಅವರನ್ನು ಸ್ವಿಟ್ಜರ್ಲ್ಯಾಂಡ್ ಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಹಣ ಖರ್ಚು ಮಾಡುತ್ತೇನೆ ಎಂದು ಹೇಳಿದರು.

ತೈಮೂರ್ ಗೆ ತುಂಬಾ ಮಾಧ್ಯಮಗಳ ಜನಪ್ರಿಯತೆಯು ದೊರಕಿದ್ದು, ಕರೀನಾ ಮತ್ತು ಸೈಫ್ ಇಬ್ಬರು ತಮ್ಮ ಎರಡನೇ ಮಗು ಜೆಹ್ ನನ್ನ ಈ ತರಹದ ಜನಪ್ರಿಯತೆಯಿಂದ ದೂರವಿಡಲು ಬಯಸಿದ್ದಾರಂತೆ.

Advertisement
Share this on...