ಇಸ್ರೇಲ್ ಮಾಜಿ ಪ್ರಧಾನಿ ಬೆಂಜಮಿನ್ ನೇತನ್ಯಾಹುಗೆ ಭಗವದ್ಗೀತೆ ಗಿಫ್ಟ್ ಮಾಡಿದ ಖ್ಯಾತ ಬಾಲಿವುಡ್ ನಟಿ

in FILM NEWS/Kannada News/News 228 views

ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಇತ್ತೀಚೆಗೆ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಅವರು ಇಸ್ರೇಲ್‌ನ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿದರು ಮತ್ತು ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ಭಾರತದಿಂದ ಸ್ಮರಣೀಯ ಉಡುಗೊರೆಯಾಗಿ ನೀಡಿದರು. ಈ ಕ್ಷಣದ ಚಿತ್ರಗಳನ್ನು ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ತನ್ನನ್ನು ಕುಟುಂಬದೊಂದಿಗೆ ಆಹ್ವಾನಿಸಿದ್ದಕ್ಕಾಗಿ ನಟಿ ನೆತನ್ಯಾಹು ಅವರಿಗೆ ಧನ್ಯವಾದ ಅರ್ಪಿಸಿದರು.

Advertisement

ಚಿತ್ರವನ್ನು ಹಂಚಿಕೊಂಡ ನಟಿ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ “ನನ್ನನ್ನು ಮತ್ತು ನನ್ನ ಕುಟುಂಬವನ್ನು ಆಹ್ವಾನಿಸಿದ್ದಕ್ಕಾಗಿ ಇಸ್ರೇಲ್ನ ಮಾಜಿ ಪ್ರಧಾನಿಗೆ ಧನ್ಯವಾದಗಳು” ಎಂದು ಬರೆದಿದ್ದಾರೆ. ನಟಿ ಮತ್ತಷ್ಟು ಬರೆಯುತ್ತ, “ನನ್ನ ಭಗವದ್ಗೀತೆ: ಸರಿಯಾದ ವ್ಯಕ್ತಿಗೆ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಉಡುಗೊರೆಯನ್ನು ನೀಡಿದಾಗ ಮತ್ತು ಪ್ರತಿಯಾಗಿ ಏನನ್ನೂ ಪಡೆಯುವ ಆಕಾಂಕ್ಷೆ ಇಲ್ಲದಿದ್ದಾಗ, ಆ ಉಡುಗೊರೆ ಪವಿತ್ರವಾಗಿರುತ್ತದೆ” ಎಂದು ಬರೆದಿದ್ದಾರೆ.

ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಾದ ಮಿಸ್ ಯೂನಿವರ್ಸ್ 2021 ಗಾಗಿ ಬಾಲಿವುಡ್ ನಟಿ ಇಸ್ರೇಲ್ ಪ್ರವಾಸಕ್ಕೆ ತೆರಳಿದ್ದರು ಎಂಬುದು ಗಮನಾರ್ಹ. ಅಲ್ಲಿ ಊರ್ವಶಿಯನ್ನು ಜಡ್ಜ್ ಆಗಿ ಆಹ್ವಾನಿಸಲಾಗಿತ್ತು. ಹರ್ನಾಜ್ ಸಂಧು ಈ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಮಿಸ್ ಯೂನಿವರ್ಸ್ 2015 ರಲ್ಲಿ ಊರ್ವಶಿ ಭಾರತವನ್ನು ಪ್ರತಿನಿಧಿಸಿದ್ದರು. ಎಂಬುದು ಗಮನಿಸಬೇಕಾದ ಸಂಗತಿ.

ಇಬ್ಬರೂ ತಮ್ಮ ತಮ್ಮ ರಾಷ್ಟ್ರೀಯ ಭಾಷೆಗಳನ್ನು ಪರಸ್ಪರ ಕಲಿಸಿದರು

ನಟಿ ಊರ್ವಶಿ ರೌಟೇಲಾ ತಮ್ಮ ಭೇಟಿಯ ಸಮಯದಲ್ಲಿ ಇಸ್ರೇಲ್‌ನ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದರು, ಬಳಿಕ ಇಬ್ಬರೂ ತಮ್ಮ ತಮ್ಮ ದೇಶಗಳ ರಾಷ್ಟ್ರೀಯ ಭಾಷೆಯಲ್ಲಿ ಪರಸ್ಪರ ಪರಿಚಯಿಸಿಕೊಂಡರು. ಭಾರತದ ರಾಷ್ಟ್ರೀಯ ಭಾಷೆ ಹಿಂದಿ ಎಂದು ಪರಿಗಣಿಸಿದರೆ, ಇಸ್ರೇಲ್‌ನ ರಾಷ್ಟ್ರೀಯ ಭಾಷೆ ಹೀಬ್ರೂ ಆಗಿದೆ.

ನಾವು ನಟಿಯ ಚಿತ್ರಗಳ ಬಗ್ಗೆ ಮಾತನಾಡುವುದಾದರೆ, ಅವರು ಕೊನೆಯದಾಗಿ ‘ವರ್ಜಿನ್ ಭಾನುಪ್ರಿಯಾ’ದಲ್ಲಿ ಕಾಣಿಸಿಕೊಂಡರು. ರೌಟೇಲಾ ಅವರು ‘ಸಿಂಗ್ ಸಾಹಬ್ ದಿ ಗ್ರೇಟ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಇದರಲ್ಲಿ ಅವರ ಎದುರು ನಟ ಸನ್ನಿ ಡಿಯೋಲ್ ಆಗಿದ್ದರು. ಇದಲ್ಲದೆ, ಅವರು ಭಾಗ್ ಜಾನಿ, ಸನಮ್ ರೇ, ಕಾಬಿಲ್, ಹೇಟ್ ಸ್ಟೋರಿ 4 ಮತ್ತು ಪಾಗಲ್ಪಂತಿ ಯಂತಹ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಅನೇಕ ಸೌತ್ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ.

Advertisement
Share this on...