ನೀವು ಜೀನ್ಸ್ pant ನ್ನ ಧರಿಸಿಯೇ ಇರುತ್ತೀರ. ಜೀನ್ಸ್‌ನಲ್ಲಿ ವಿವಿಧ ಬ್ರ್ಯಾಂಡ್, ವಿಭಿನ್ನ ವಿನ್ಯಾಸದ ಜೀನ್ಸ್ ಗಳಿವೆ. ಕಡಿಮೆ ಮತ್ತು ಹೆಚ್ಚು ಪಾಕೆಟ್ಸ್ ಹೊಂದಿರುವ ಜೀನ್ಸ್ ಗಳೂ ಇವೆ. ದಪ್ಪನೆಯ ಬಟ್ಟೆಯಿಂದ ಮಾಡಿದ ಜೀನ್ಸ್ ಸಾಕಷ್ಟು ಬಾಳಿಕೆ ಬರುತ್ತವೆ. ಅದು ಟೀ ಶರ್ಟ್ ಆಗಿರಲಿ, ಶರ್ಟ್ ಆಗಿರಲಿ, ಕುರ್ತಾ ಆಗಿರಲಿ… ಜೀನ್ಸ್‌ನ ಆವಿಷ್ಕಾರದ ಹಿಂದೆ ಅದರ ಬಾಳಿಕೆ ಕೂಡ ಒಂದು ಕಾರಣವಾಗಿದೆ. ಜೀನ್ಸ್‌ನ ಜೊತೆ ಎಂಥಾ ಶರ್ಟ್ ಗಳೂ ಮ್ಯಾಚ್ ಆಗಿಬಿಡುತ್ತವೆ. ಆರಂಭದಲ್ಲಿ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಜೀನ್ಸ್ ಧರಿಸುತ್ತಿದ್ದರು ಎಂದು ನಿಮಗೆ ತಿಳಿದಿರಬಹುದು.
ಇಂದು ವಿಶ್ವದ ಅತ್ಯಂತ ಹೆಚ್ಚು ಧರಿಸುವ ಬಟ್ಟೆಗಳಲ್ಲಿ ಒಂದಾದ ಜೀನ್ಸ್ ಪ್ರಪಂಚದ ಮೂಲೆ ಮೂಲೆಗಳಲ್ಲಿ ಜನ ಧರಿಸುತ್ತಾರೆ ಮತ್ತು ಜನರು ಜೀನ್ಸ್ ಧರಿಸೋಕೆ ಹಿಂದೆ ಮುಂದೆ ನೋಡಲ್ಲ. ಆದರೆ ಅದನ್ನ ಜನ ಫ್ಯಾಷನ್ ಸ್ಟೇಟಸ್ ಎಂದು ಪರಿಗಣಿಸುತ್ತಾರೆ. ನಿಮಗೆ ಗೊತ್ತಿರಲಿ ಮೊಟ್ಟ ಮೊದಲ ಬಾರಿಗೆ ಜಗತ್ತಿಗೆ ಜೀನ್ಸ್‌ನ್ನ ಪರಿಚಯಿಸಿದ್ದು ಅಮೆರಿಕ.
ಅಂದಹಾಗೆ, ಕೂಲಿ ಅಥವ ಇತರೆ ಕಾರ್ಮಿಕರಿಗಾಗಿ ಜೀನ್ಸ್ ಅನ್ನು ಕಂಡುಹಿಡಿಯಲಾಯಿತು ಏಕೆಂದರೆ ಕೆಲಸ ಮಾಡುವಾಗ ಕಾರ್ಮಿಕರ ಬಟ್ಟೆಗಳು ತುಂಬಾ ಕೊಳಕಾಗುತ್ತವೆ, ಈ ಕಾರಣದಿಂದಾಗಿ ಜೀನ್ಸ್ ಅನ್ನು ಕಂಡುಹಿಡಿಯಲಾಯಿತು. ಆದರೆ ಜೀನ್ಸ್ ಪ್ಯಾಂಟ್‌ನ ಒಳಗೆ ಒಂದು ಸಣ್ಣ ಜೇಬಿರುತ್ತದೆ. ಜೀನ್ಸ್ ನಲ್ಲಿ ಈ ಸಣ್ಣ ಪಾಕೆಟ್ ಯಾಕಿರುತ್ತೆ ಅನ್ನೋದನ್ನ ನಾವು ನಿಮಗೆ ತಿಳಿಸಲಿದ್ದೇವೆ.
ಜೀನ್ಸ್ ನಲ್ಲಿರುವ ಈ ಸಣ್ಣ ಪಾಕೆಟ್‌ನ ಬಳಕೆಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ ಮತ್ತು ಸಣ್ಣ ಕಾಯಿನ್ (ಸಣ್ಣ ನಾಣ್ಯಗಳನ್ನ) ಸಾಮಾನ್ಯವಾಗಿ ಅದರಲ್ಲಿ ಇಡೋಕೆ ಇರಬೇಕು ಎಂದು ಜನ ಅಂದುಕೊಳ್ಳುತ್ತಾರೆ. ಆದರೆ ಇದು ಅವರ ತಪ್ಪು ಗ್ರಹಿಕೆಯಾಗಿದೆ. ಜೀನ್ಸ್ ಪಾಕೆಟ್ ಒಳಗೆ ಮಾಡಿದ ಸಣ್ಣ ಪಾಕೆಟ್ ನಿಜವಾಗಿ ಯಾವುದಕ್ಕಾಗಿ ಬಳಸಲ್ಪಡುತ್ತದೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.
18 ನೇ ಶತಮಾನದಲ್ಲಿ, ಸಣ್ಣ ಗಾತ್ರದ ಕೈಗಡಿಯಾರಗಳನ್ನು ಚೈನ್ ಗಳೊಂದಿಗೆ ನಡೆಸಲಾಗುತ್ತಿತ್ತು ಮತ್ತು ಈ ಕೈಗಡಿಯಾರಗಳನ್ನು ಜೀನ್ಸ್‌ನ ಈ ಸಣ್ಣ ಪಾಕೆಟ್‌ನಲ್ಲಿ ಇರಿಸಲಾಗುತ್ತಿತ್ತು. ಜೀನ್ಸ್‌ನ ಇತಿಹಾಸವು ತುಂಬಾ ಹಳೆಯದು. ಹಿಂದಿನ ಕಾಲದಲ್ಲಿ ಈ ಜೇಬಿನಲ್ಲಿ ಚೈನ್ ಇರುವ ಪುಟ್ಟ ಗಡಿಯಾರವನ್ನು ಇಡುತ್ತಿದ್ದರು, ಆದರೆ ನಂತರ ಈ ಗಡಿಯಾರದ ಟ್ರೆಂಡ್ ಕಡಿಮೆಯಾಯಿತು, ನಂತರ ಜನರು ಇದನ್ನು ನಾಣ್ಯಗಳನ್ನು ಇಡಲು ತಯಾರಿಸಲಾಗುತ್ತದೆ ಎಂದು ಭಾವಿಸಲು ಪ್ರಾರಂಭಿಸಿದರು.
ಜೀನ್ಸ್‌ನ ಪಾಕೆಟ್ ಗಡಿಯಾರಕ್ಕಾಗಿ ಮೊಟ್ಟ ಮೊದಲ ಬಾರಿಗೆ ಜೀನ್ಸ್ ತಯಾರಿಸಿದ ಕಂಪೆನಿ ಯಾವುದು ಗೊತ್ತಾ? ಈ ಕಂಪೆನಿಯ ಜೀನ್ಸ್‌ನ್ನೂ ನೀವು ಧರಿಸಿಯೇ ಇರುತ್ತೀರ. ಈ ಕಂಪೆನಿಯ ಹೆಸರಿ ಲೆವಿ ಸ್ಟ್ರಸ್, ಅದನ್ನ ನಾವು ಲಿವೈಸ್ (Levis) ಹೆಸರಿನಿಂದ ಕರೆಯುತ್ತೇವೆ. ಮೊಟ್ಟ ಮೊದಲ ಬಾರಿಗೆ ಜೀನ್ಸ್ ನಲ್ಲಿ ಚಿಕ್ಕ ಜೇಬುಗಳನ್ನ ಇಟ್ಟಿದ್ದೇ Levis. ಇದರಲ್ಲಿದ್ದ ವಾಚ್ ಪಾಕೆಟ್ ನ್ನ ಜನ ಈಗ ಟಿಕೆಟ್ ಪಾಕೆಟ್, ಕಾಯಿನ್ ಪಾಕೆಟ್, ಪೆನ್ ಪಾಕೆಟ್ ಹೀಗೆ ಇನ್ನೂ ಅನೇಕ ಹೆಸರುಗಳಿಂದ ಕರೆಯುತ್ತಾರೆ.
ಕಾರ್ಮಿಕರ ಅಗತ್ಯ ಮತ್ತು ಬಳಕೆಗೆ ಅನುಗುಣವಾಗಿ ಜೀನ್ಸ್ ಪ್ಯಾಕೆಟ್ ಗಳಿಗೂ ಚಿಕ್ಕ ಚಿಕ್ಕ ಬಟನ್ಸ್ ಗಳನ್ನ ಹಾಕಲಾಗಿತ್ತು. ಕೂಲಿಕಾರ್ಮಿಕರ ದುಡಿಮೆ ಭಾರದ ಕೆಲಸವಾಗಿರುವುದರಿಂದ ಕೆಲಸದ ವೇಳೆ ಜೀನ್ಸ್ ಹೊಲಿಗೆ ಹರಿದು ಹೋಗುವುದಿಲ್ಲವಾದ್ದರಿಂದ ಸ್ಟ್ರೆಚ್ ಮಾಡಿದ ಪರಿಣಾಮ ಬಟ್ಟೆಯ ಮೇಲೆ ಬೀಳದ ಕಾರಣ ಹೊಲಿಗೆಗೆ ಪೂರಕವಾಗಿ ಚಿಕ್ಕ ಚಿಕ್ಕ ಗುಂಡಿಗಳನ್ನು ಹೊಲಿಯಲಾಗಿದೆ. ಈ ಬಟನ್ ಕಾಲಾಂತರದಲ್ಲಿ ಜೀನ್ಸ್‌ನ ವಿನ್ಯಾಸವೂ ಆಯಿತು. ಈಗ ಲೆಕ್ಕವಿಲ್ಲದಷ್ಟು ವಿನ್ಯಾಸದ ಜೀನ್ಸ್ ಬರಲಾರಂಭಿಸಿವೆ.