ಅಚ್ಚರಿಯಾದರೂ ನಂಬಲೇಬೇಕು, ಈ ಪಂಗಡದ ಯುವತಿಯರು ತಮ್ಮ‌ ತಂದೆಯನ್ನೇ ಮದುವೆಯಾಗುತ್ತಾರೆ: ಕಾರಣ ತಿಳಿದರೆ ಬೆಚ್ಚಿಬೀಳ್ತೀರ

in Kannada News/News/ಕನ್ನಡ ಮಾಹಿತಿ 2,426 views

“ಒಂದು ವೇಳೆ ಯುವತಿ ಮದುವೆಯಾದ ಬಳಿಕ ತಂದೆ ಸಾವನ್ನಪ್ಪಿದರೆ ತಾಯಿ ಜೊತೆಗೆ ಮಗಳೂ ವಿಧವೆಯಾಗುತ್ತಾಳೆ. ಆಗ ತಾಯಿ 2ನೇ ಮದುವೆಯಾದರೆ, ಮಗಳು ಸಹ ಮಲತಂದೆಯನ್ನು ಗಂಡನೆಂದು ಭಾವಿಸುತ್ತಾಳೆ”

Advertisement

ಮದುವೆ.. ಮೂರಕ್ಷರದ ಈ ಪದಕ್ಕೆ ನೂರು ಅರ್ಥವಿದೆ. ಸಂಬಂಧವನ್ನು ಬೆಸೆಯುವ ಕೊಂಡಿ ಮದುವೆ. ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ವಿಶೇಷ ಸ್ಥಾನವಿದೆ. ಮದುವೆ ವಿಧಿ-ವಿಧಾನದಲ್ಲೂ ಹಲವು ಬಗೆಗಳಿವೆ. ಅನೇಕ ಸಮುದಾಯಗಳು ತಮ್ಮದೇ ಆದ ವಿಶಿಷ್ಟ ಶೈಲಿಯ ವಿಧಾನಗಳನ್ನು ಅನುಸರಿಸುತ್ತವೆ. ವಿಶ್ವದ ಯಾವುದೇ ಭಾಗದಲ್ಲೂ ಮದುವೆಗೆ ತನ್ನದೇ ಸ್ಥಾನ, ರೀತಿ-ನೀತಿಗಳಿವೆ. ಕೆಲವೊಂದಿಷ್ಟು ಮೂಢನಂಬಿಕೆಯಿಂದ ಕೂಡಿದ್ದರೆ, ಮತ್ತೊಂದಿಷ್ಟು ತಮಾಷೆಯಾಗೂ ಇರುತ್ತೆ. ಗಂಡು-ಹೆಣ್ಣು ಕೂಡಿಕೊಂಡು ಸುಖವಾಗಿ ಬದುಕುವುದೇ ಎಲ್ಲಾ ಮದುವೆಗಳ ಮೂಲ ಆಶಯ. ಆದರೆ ಮದುವೆಗೆ ಕೆಲವೊಂದು ನಿಷಿದ್ಧಗಳೂ ಇವೆ.

ತಮ್ಮದೇ ಜಾತಿಯಲ್ಲಿ, ತಮ್ಮದೇ ಧರ್ಮದಲ್ಲಿ ಮದುವೆಯಾಗಬೇಕು ಎನ್ನುವುದರಿಂದ ಹಿಡಿದು ವರ-ವಧು ಹೀಗೆ ಇರಬೇಕು ಎಂಬುವವರೆಗೂ ದೊಡ್ಡ ಲೀಸ್ಟೇ ಇರುತ್ತೆ. ಜೊತೆಗೆ ಯಾರನ್ನು ಮದುವೆಯಾಗಬಾರದು ಎಂಬುವುದನ್ನು ಹೇಳಲಾಗುತ್ತೆ. ಮುಖ್ಯವಾಗಿ ಕುಟುಂಬದಲ್ಲೇ ಅಂದರೆ ಸೋದರರನ್ನು, ಕೆಲ ಸಂಬಂಧಿಕರನ್ನು ಮದುವೆಯಾಗಬಾರದು ಎಂಬ ನಿಯಮವಿದೆ. ಆದರೆ ಬಾಂಗ್ಲಾ ದೇಶದಲ್ಲಿ ಮಾತ್ರ ಊಹಿಸಲು ಸಾಧ್ಯವಾಗದ ಪದ್ಧತಿಯೊಂದಿದೆ. ಮಂಡಿ ಎಂದು ಕರೆಯಲ್ಪಡುವ ಜನಾಂಗದಲ್ಲಿನ ಮದುವೆಗಳು ಪ್ರಪಂಚವೇ ಅವರತ್ತ ಅಚ್ಚರಿಯಿಂದ ನೋಡುವಂತೆ ಮಾಡಿದೆ.

ಮಂಡಿ ಜನಾಂಗದಲ್ಲಿ ಹುಟ್ಟುವ ಪ್ರತಿ ಯುವತಿಯೂ ತನ್ನ ತಂದೆಯನ್ನೇ ಮದುವೆಯಾಗುತ್ತಾಳೆ. ವಯಸ್ಕರಾಗುತ್ತಿದಂತೆ ತಂದೆಯನ್ನು ಬಯಸಿ ವಿವಾಹವಾಗುತ್ತಾರೆ. ತಂದೆಯನ್ನು ಗಂಡನನ್ನಾಗಿ ಸ್ವೀಕರಿಸಿ ಮಕ್ಕಳನ್ನು ಪಡೆಯುತ್ತಾರೆ. ಸಾಮಾನ್ಯ ಜನರಿಗೆ ಕ್ಷಣಕಾಲವೂ ಊಹಿಸಲು ಸಾಧ್ಯವಿಲ್ಲದ ಸಂಗತಿಯೊಂದಿಗೆ ಇವರು ಇಡೀ ಜೀವನವನ್ನು ಕಳೆಯುತ್ತಾರೆ. ಇವರ ಈ ಅಸಂಬದ್ಧ ಸಂಪ್ರಾದಯ ಇಷ್ಟಕ್ಕೆ ನಿಲ್ಲುವುದಿಲ್ಲ.

ಒಂದು ವೇಳೆ ಯುವತಿ ಮದುವೆಯಾದ ಬಳಿಕ ತಂದೆ ಸಾವನ್ನಪ್ಪಿದರೆ ತಾಯಿ ಜೊತೆಗೆ ಮಗಳೂ ವಿಧವೆಯಾಗುತ್ತಾಳೆ. ಆಗ ತಾಯಿ 2ನೇ ಮದುವೆಯಾದರೆ, ಮಗಳು ಸಹ ಮಲತಂದೆಯನ್ನು ಗಂಡನೆಂದು ಭಾವಿಸುತ್ತಾಳೆ. ಆಗ ತಾಯಿ-ಮಗಳಿಬ್ಬರಿಗೂ ಒಬ್ಬನೇ ಗಂಡ. ತಾಯಿ ಕೂಡ ಮಕ್ಕಳನ್ನು ಹೆತ್ತರೆ, ಇತ್ತ ಮಗಳು ಕೂಡ ತಂದೆಯಿಂದ ಮಕ್ಕಳನ್ನು ಪಡೆಯುತ್ತಾಳೆ. ಯುವತಿಗೆ ತಂದೆಯಾದವನು ಅವಳ ಮಕ್ಕಳಿಗೂ ತಂದೆಯಾಗಿರುತ್ತಾನೆ. ಹುಟ್ಟುವ ಮಕ್ಕಳಿಗೆ ತಂದೆಯೂ ಅವನೇ ಅಜ್ಜನೂ ಅವನೇ. ತಲೆ ಸುತ್ತು ಬರುವ ಈ ಪದ್ಧತಿಯನ್ನು ಮಂಡಿ ಜನಾಂಗ ಇಂದಿಗೂ ತಪ್ಪದೇ ಪಾಲಿಸಿಕೊಂಡು ಬರುತ್ತಿದೆಯಂತೆ.

ಗಾರ್ಗ್​ ಅಂತಲೂ ಕರೆಯುವ ಈ ಮಂಡಿ ಸಮುದಾಯದಲ್ಲಿ 2 ಲಕ್ಷ ಜನರು ಇದ್ದಾರೆ. ಈ ಸಮುದಾಯದ ಎಲ್ಲಾ ಹೆಣ್ಣು ಮಕ್ಕಳು ತಂದೆಯನ್ನೇ ವರಿಸಿದ್ದಾರೆ. ಸಾಮಾಜಿಕವಾಗಿ ನಿಶಿದ್ಧವಿರುವ ಸಂಬಂಧದಿಂದಲೇ ಮಕ್ಕಳನ್ನು ಪಡೆದು ಜೀವನ ನಡೆಸುತ್ತಿದ್ದಾರೆ. ಬೇರೆ ಸಮುದಾಯಗಳು ಇವರನ್ನು, ಇವರ ಪದ್ಧತಿಯನ್ನು ಕೀಳಾಗಿ ನೋಡಿದರೂ ಮಂಡಿ ಜನ ಬದಲಾಗುವ ಮನಸ್ಸಿನವರಾಗಿಲ್ಲ.

ವೈದ್ಯಕೀಯ ಲೋಕವೂ ಹೀಗೆ ರಕ್ತಸಂಬಂಧದಲ್ಲೇ, ಕುಟುಂಬದಲ್ಲೇ ಮದುವೆಯಾಗುವುದನ್ನು ಬೆಂಬಲಿಸುವುದಿಲ್ಲ. ತುಂಬಾ ಹತ್ತಿರ ಸಂಬಂಧಗಳ ಮಧ್ಯೆ ಲೈಂ#ಗಿ-ಕ-ತೆ ವೈಜ್ಞಾನಿಕವಾಗಿ ಅಪಾಯಕಾರಿ. ಜೊತೆಗೆ ಇವರಿಂದ ಹುಟ್ಟುವ ಮಕ್ಕಳಲ್ಲಿ ಅನುವಂಶಿಕ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಜೀನ್ಸ್​​ ಸಮಸ್ಯೆ ಉಂಟಾಗಿ ಹುಟ್ಟುವ ಮಕ್ಕಳು ಬುದ್ಧಿಮಾಂದ್ಯರಾಗಿಯೂ, ಅಂಗವೈಕಲ್ಯರಾಗಿಯೂ ಜನಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಇನ್ನು ಸಾಮಾಜಿಕವಾಗಿಯೂ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಹುಟ್ಟುವ ಮಗುವಿಗೆ ತಂದೆ, ಅಜ್ಜ ಒಬ್ಬನೇ ಆದರೆ ಸಂಬಂಧಗಳ ಮೌಲ್ಯ ಕಳೆದುಕೊಳ್ಳುತ್ತದೆ. ತಂದೆ, ಅಜ್ಜ ಎಂಬ ಭಾವನಾತ್ಮ ಸಂಬಂಧಗಳಿಂದ ಮಗು ವಂಚಿತವಾಗಬಹುದು. ಕೌಟುಂಬಿಕ ಮೌಲ್ಯಗಳು ಕುಸಿಯಬಹುದು. ಇನ್ನಾದರೂ ಮಂಡಿ ಜನ ಹಳೆ ಸಂಪ್ರದಾಯವನ್ನು ಬಿಟ್ಟು ಹೊಸ ಸಂಬಂಧಗಳತ್ತ ಮುಖ ಮಾಡಬೇಕಿದೆ. ಇಲ್ಲಿನ ಯುವತಿಯರನ್ನು ತಂದೆಯೇ ಮದುವೆಯಾಗುವ ಬದಲು ಹೊರಗಿನವರಿಗೆ ಮದುವೆ ಮಾಡಿಕೊಡಬೇಕಿದೆ. ಯುವತಿಯರೂ ತಂದೆಯನ್ನೇ ವರಿಸುವ ಬದಲು ಪ್ರೀತಿಸಿ ಬೇರೆ ಯುವಕರನ್ನು ಜೀವನ ಸಂಗಾತಿಯಾಗಿ ಪಡೆಯುವುದು ಉತ್ತಮ.

Advertisement
Share this on...